Home
ಸುದ್ದಿಜಾಲ

ಎಚ್ಚರ.. ಯಾವುದೇ ಕಾರಣಕ್ಕೂ ಚಾಟ್‌ಜಿಪಿಟಿ ಆಪ್‌ ಬಳಸಬೇಡಿ!

ಚಾಟ್‌ಜಿಟಿಪಿ ಇಂದು ಇಡೀ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಇದನ್ನು ಎಲ್ಲಾ ವಯೋಮಾನದವರು ಬಳಕೆ ಮಾಡುತ್ತಿದ್ದಾರೆ. ಹಾಗೆಯೇ ಕೆಲವು ಶಾಲಾ - ಕಾಲೇಜುಗಳಲ್ಲಿ ಬ್ಯಾನ್‌ಸಹ ಮಾಡಲಾಗಿದೆ. ಇದೆಲ್ಲದರ ನಡುವೆ ಈ ಚಾಟ್‌ ಜಿಪಿಟಿ ವಿಷಯದಲ್ಲಿ ಶಾಕಿಂಗ್ ಮಾಹಿತಿಯೊಂದನ್ನು ನೀವು ತಿಳಿಯಲೇಬೇಕು.

ಹೌದು, ಚಾಟ್‌ಜಿಪಿಟಿ ಮೂಲಕ ಪರೀಕ್ಷೆ ಬರೆಯಬಹುದು, ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಅಷ್ಟೇ ಏಕೆ ನಿಮ್ಮ ಸಂಗಾತಿಗೆ ಲವ್‌ ಲೆಟರ್‌ ಸಹ ಬರೆಯಬಹುದು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಿಡಿಕೇಡಿಗಳು ಈ ಚಾಟ್‌ಜಿಪಿಟಿ ಹೆಸರಿನ ಮೂಲಕ ಬಳಕೆದಾರರ ಡಾಟಾ ಕಡಿಯಲು ಮುಂದಾಗಿದ್ದಾರೆ. ಹಾಗಿದ್ರೆ ಈ ಚಾಟ್‌ಜಿಪಿಟಿ ಆಪ್‌ ಬಳಕೆಯಿಂದ ಸಮಸ್ಯೆ ಇದೆಯಾ?, ಇದರಿಂದ ಎಚ್ಚರ ವಹಿಸೋದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿ.

ಎಚ್ಚರ.. ಯಾವುದೇ ಕಾರಣಕ್ಕೂ ಚಾಟ್‌ಜಿಪಿಟಿ ಆಪ್‌ ಬಳಸಬೇಡಿ!

ಹೊಸ ಮಾಲ್‌ವೇರ್‌ನೊಂದಿಗೆ ನಕಲಿ ಚಾಟ್‌ಜಿಪಿಟಿ ಆಪ್‌

ಚಾಟ್‌ಜಿಪಿಟಿ ಬಳಕೆ ಹೆಚ್ಚಾದಂತೆ ನಕಲಿ ಚಾಟ್‌ಜಿಪಿಟಿ ಆರ್ಭಟ ಸಹ ಹೆಚ್ಚಾಗಿದೆ. ಅದರಂತೆ ಕ್ಯಾಸ್ಪರ್ಸ್ಕಿ ಸಂಶೋಧಕರು ಹೊಸ ಮಾಲ್ವೇರ್ ಅನ್ನು ಫೋಬೋ (Fobo) ಎಂದು ಗುರುತಿಸಿದ್ದು, ಚಾಟ್‌ಜಿಪಿಟಿ ಆಪ್‌ನ ನೆಪದಲ್ಲಿ ಈ ಹೊಸ ಮಾಲ್‌ವೇರ್ ಮೂಲಕ ದಾಳಿ ಮಾಡುತ್ತಿರುವುದನ್ನು ಕಂಡುಕೊಳ್ಳಲಾಗಿದೆ. ಈ ಮೂಲಕ ಹ್ಯಾಕರ್ಸ್‌ ತಮಗೆ ಬೇಕಾದದ್ದನ್ನು ಪಡೆದುಕೊಳ್ಳುತ್ತಿದ್ದಾರೆ.

ನಕಲಿ ಚಾಟ್‌ಜಿಪಿಟಿ ವೆಬ್‌ಸೈಟ್‌ ಆಪ್‌ ಲಿಂಕ್ ಅನ್ನು ಹೊಂದಿದೆ

ಈ ಸಂಬಂಧ ಸಂಶೋಧಕರು ಮಾಹಿತಿ ನೀಡಿದ್ದು, ನಕಲಿ ಡೆಸ್ಕ್‌ಟಾಪ್ ಆಪ್‌ಗಳ ಲಿಂಕ್‌ಗಳು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಆಗುತ್ತಿವೆ. ಈ ಲಿಂಕ್ ಹೊಂದಿರುವ ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕಂಡುಬಂದಂತೆ ಈ ಆಪ್‌ ಅನ್ನು ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆಗೆ $50 (4,136ರೂ.) ಕ್ರೆಡಿಟ್ ಆಗುತ್ತದೆ ಎಂದು ಬಳಕೆದಾರರಿಗೆ ಮಾಹಿತಿ ನೀಡಿದೆ. ಇದನ್ನು ನಂಬಿ ಲಿಂಕ್ ಕ್ಲಿಕ್‌ ಮಾಡಿದ್ರೆ ನಿಮ್ಮ ಡೇಟಾ ಅವರ ವಶಕ್ಕೆ ಹೋದಂತೆ.

ಮಾಲ್ವೇರ್ ಅನ್ನು ಸಿಸ್ಟಮ್‌ಗೆ ಇನ್‌ಸ್ಟಾಲ್‌ ಮಾಡಲಾಗುತ್ತದೆ

ಈ ಹೊಸ ಮಾಲ್‌ವೇರ್ ಅನ್ನು ಫೋಬೋ (Trojan-PSW.Win64.Fobo) ಎಂದು ಹೆಸರಿಸಲಾಗಿದ್ದು, ಹ್ಯಾಕರ್‌ಗಳು ನಕಲಿ ಚಾಟ್‌ಜಿಪಿಟಿ ವೆಬ್‌ಸೈಟ್ ಅನ್ನು ರಚಿಸುವ ಮೂಲಕ ಮೋಸ ಮಾಡುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅದರಲ್ಲೂ ಈ ನಕಲಿ ಸೈಟ್‌ ನೈಜ ವೆಬ್‌ಸೈಟ್‌ಗೆ ಹೋಲುತ್ತದೆ. ಇನ್ನು ಬಳಕೆದಾರರು ಲಿಂಕ್ ಕ್ಲಿಕ್ ಮಾಡಿದರೆ ಅವರನ್ನು ನಕಲಿ ವೆಬ್‌ಸೈಟ್‌ಗೆ ನಿರ್ದೇಶಿಸಲಾಗುತ್ತದೆ. ಈ ವೇಳೆ ಆಪ್‌ ಡೌನ್‌ಲೋಡ್ ಮಾಡಲು ಮುಂದಾದ್ರೆ ಕೆಲವು ದೋಷ ಸಂಬಂಧಿ ಮೆಸೆಜ್‌ಮೂಲಕ ಇನ್‌ಸ್ಟಾಲ್‌ ಪ್ರಕ್ರಿಯೆ ಥಟ್ಟನೆ ನಿಲ್ಲುತ್ತದೆ.

ಇನ್‌ಸ್ಟಾಲ್‌ ಪ್ರಕ್ರಿಯೆ ಸ್ಟಾಪ್‌ ಅಗಿರುವುದು ನಿಮಗೆ ಕಂಡುಬರುತ್ತದೆಯಾದರೂ ನಿಮ್ಮ ಡಿವೈಸ್‌ನಲ್ಲಿ ಫೋಬೋ ನಿಮಗೆ ಅರಿವಿಲ್ಲದೆ ಇನ್‌ಸ್ಟಾಲ್ ಆಗುತ್ತಿರುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಈ ಮೂಲಕ ಮಾಲ್ವೇರ್‌ ನಿಮ್ಮ ಲಾಗಿನ್ ಇರುವ ಕುಕೀಗಳನ್ನು ಕದಿಯಲು ಮುಂದಾಗುತ್ತವೆ. ಈ ಮಾಲ್ವೇರ್‌ ಟ್ರೋಜನ್ ಕ್ರೋಮ್, ಎಡ್ಜ್, ಫೈರ್‌ಫಾಕ್ಸ್ ಮತ್ತು ಬ್ರೇವ್ ಸೇರಿದಂತೆ ವಿವಿಧ ಬ್ರೌಸರ್‌ಗಳ ಮೇಲೆ ಪರಿಣಾಮ ಬೀರಲಿದ್ದು, ಹ್ಯಾಕರ್‌ಗಳು ಫೇಸ್‌ಬುಕ್, ಟಿಕ್‌ಟಾಕ್ ಮತ್ತು ಗೂಗಲ್ ಲಾಗಿನ್ ವಿವರಗಳನ್ನು ಈ ಮೂಲಕ ಸುಲಭವಾಗಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಎಚ್ಚರ.. ಯಾವುದೇ ಕಾರಣಕ್ಕೂ ಚಾಟ್‌ಜಿಪಿಟಿ ಆಪ್‌ ಬಳಸಬೇಡಿ!

ಹ್ಯಾಕರ್ಸ್‌ಗಳಿಗೆ ಜಾಗತಿಕ ಮಟ್ಟದ ಗುರಿ

ಹ್ಯಾಕರ್ಸ್‌ಗಳು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದು, ಡೆಸ್ಕ್‌ಟಾಪ್ ಕ್ಲೈಂಟ್ ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಅಮೆರಿಕದ ಬಳಕೆದಾರರ ಮೇಲೆ ಈ ದಾಳಿ ನಡೆಯುತ್ತಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ನಡೆಸಿದ ಆರ್ಥಿಕ ವ್ಯವಹಾರಗಳು, ಅಂದರೆ ಜಾಹೀರಾತಿಗೆ ಮಾಡಿ ಖರ್ಚು ವೆಚ್ಚಗಳನ್ನು ಹ್ಯಾಕರ್ಸ್‌ಗಳು ತಿಳಿದುಕೊಳ್ಳುತ್ತಿದ್ದಾರೆ.

ಚಾಟ್‌ಜಿಪಿಟಿ ಅಧಿಕೃತ ಆಪ್‌ ಹೊಂದಿಲ್ಲ..

ಚಾಟ್‌ಜಿಪಿಟಿ ಈವರೆಗೂ ಯಾವುದೇ ಅಧಿಕೃತ ಆಪ್‌ ಅನ್ನು ಹೊಂದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಎಐ ಚಾಲಿತ ಚಾಟ್‌ಬಾಟ್ ಬಳಕೆ ಉಚಿತವಾಗಿದ್ದು, ಈ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಬಳಕೆದಾರರು ನೋಂದಣಿ ಮಾಡಬೇಕಿದೆ. ಜೊತೆಗೆ ಓಪನ್‌ ಎಐ ನಲ್ಲಿ ಇತ್ತೀಚೆಗೆ ಪಾವತಿಸಿದ ಆವೃತ್ತಿಯನ್ನು ಸಹ ಪ್ರಾರಂಭಿಸಿದೆ. ಇದರ ನಡುವೆ ನೀವು ಈ ಸೇವೆ ಪಡೆಯಬೇಕು ಎಂದರೆ ಮೈಕ್ರೋಸಾಫ್ಟ್ ಬಿಂಗ್ ಸರ್ಚ್ ಮತ್ತು ಎಡ್ಜ್ ಬ್ರೌಸರ್‌ ಬಳಸಬಹುದು.

Best Mobiles in India

English summary
Researchers have identified the new malware as Fobo. new malware is getting distributed under the guise of a ChatGPT app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+