ಚುನಾವಣಾ ಆಯೋಗಕ್ಕೆ ಅತೀ ಹೆಚ್ಚು ದೂರು ಸಲ್ಲಿಸಿದ ರಾಜ್ಯ ಕರ್ನಾಟಕ.!

|

ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ಹೆಚ್ಚಾಗಿದ್ದು, ಈಗಾಗಲೇ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಗೊಳಿಸಿದೆ. ಯಾವುದೇ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ನಾಗರಿಕರು ಆಯೋಗಕ್ಕೆ ನೇರವಾಗಿ ಮಾಹಿತಿ ನೀಡಬಹುದಾಗಿದ್ದು, ಅದಕ್ಕಾಗಿ ಚುನಾವಣಾ ಆಯೋಗ cVIGIL ಆಪ್‌ ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ ಮೂಲಕ ಸಾಕಷ್ಟು ದೂರುಗಳು ದಾಖಲಾಗಿದ್ದು, ಅದರಲ್ಲಿ ಕರ್ನಾಟಕದಿಂದಲೇ ಅತೀ ಹೆಚ್ಚು ದೂರುಗಳು ದಾಖಲಾಗಿವೆ.

ಚುನಾವಣಾ ಆಯೋಗಕ್ಕೆ ಅತೀ ಹೆಚ್ಚು ದೂರು ಸಲ್ಲಿಸಿದ ರಾಜ್ಯ ಕರ್ನಾಟಕ.!

ಹೌದು, ಕಳೆದ ಹತ್ತು ದಿನಗಳಲ್ಲಿ ಕರ್ನಾಟಕ ರಾಜ್ಯದಿಂದಲೇ ಒಟ್ಟು 487 ದೂರುಗಳು cVIGIL ಆಪ್‌ ಮೂಲಕ ದಾಖಲಾಗಿವೆ. ಅದರಲ್ಲಿ 368 ದೂರುಗಳು ನಕಲಿ ದೂರುಗಳಾಗಿದ್ದು, 88 ದೂರುಗಳು ನಿಖರವಾದ ದೂರುಗಳಾಗಿವೆ. ಅವುಗಳ ವಿರುದ್ಧ ಆಯೋಗವು ಈಗಾಗಲೇ ಕ್ರಮ ಕೈಗೊಂಡಿದ್ದು, ಉಳಿದ 21 ದೂರುಗಳು ಇನ್ನು ತನಿಖೆಯಲ್ಲಿವೆ. ಈ ನಕಲಿ ದೂರುಗಳು ಆಯೋಗದ ಸಮಯವನ್ನು ವ್ಯರ್ಥಗೊಳಿಸುತ್ತಿವೆ.

ಚುನಾವಣಾ ಆಯೋಗಕ್ಕೆ ಅತೀ ಹೆಚ್ಚು ದೂರು ಸಲ್ಲಿಸಿದ ರಾಜ್ಯ ಕರ್ನಾಟಕ.!

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಕಂಡುಬಂದರೆ ಆ ಕುರಿತು ನಾಗರಿಕರು ಸ್ವಯಂಪ್ರೇರಿತರಾಗಿ ದೂರು ನೀಡಲು cVIGIL ಆಪ್‌ ಇದ್ದು, ನಕಲಿ ದೂರುಗಳು ಮತ್ತು ನಕಲಿ ಹಾಗೂ ವಿಡಿಯೋಗಳನ್ನು ಸಲ್ಲಿಸಬೇಡಿ. ಈ ಆಪ್‌ ಅನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಆಪ್‌ನಲ್ಲಿ ದೂರು ನೀಡುವಾಗ ನಿಖರ ಫೋಟೋ ಮತ್ತು ವಿಡಿಯೋಗಳನ್ನು ಮಾತ್ರ ಸಲ್ಲಿಸಿ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ ಹೇಳಿದ್ದಾರೆ. ಹಾಗಾದರೇ ಆಯೋಗಕ್ಕೆ ದೂರು ದಾಖಲಿಸುವ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಹಣ ಹಂಚಿದರೆ ದೂರು ನೀಡಿ

ಹಣ ಹಂಚಿದರೆ ದೂರು ನೀಡಿ

ಪೋಸ್ಟರ್ ಹಚ್ಚುವುದು, ಬ್ಯಾನರ್‌ ಕಟ್ಟುವುದು, ಪ್ರಚೋದನಕಾರಿ ಭಾಷಣಗಳನ್ನು ಮಾಡುವುದು, ಓಟಿಗಾಗಿ ಹಣ ಮತ್ತು ಮದ್ಯ ಹಂಚುವುದು, ರಾತ್ರಿ 10ಗಂಟೆಯ ನಂತರ ಪ್ರಚಾರಕ್ಕಾಗಿ ಧ್ವನಿವರ್ಧಕಗಳನ್ನು ಬಳಸುವುದು ಇಂಥ ಯಾವುದೇ ಅಕ್ರಮ ಘಟನೆಗಳು ಕಂಡುಬಂದರೇ ಆ ಸ್ಥಳವನ್ನು ಟ್ಯಾಗ್‌ ಮಾಡುವ ಮೂಲಕ ಆಪ್‌ನಲ್ಲಿ ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸುವ ನಾಗರಿಕರ ಹೆಸರುಗಳನ್ನು ಆಯೋಗವು ಗೌಪ್ಯವಾಗಿಡಲಿದೆ.

ಬೆಂಗಳೂರು ನಗರದ ದೂರುಗಳೇ ಹೆಚ್ಚು

ಬೆಂಗಳೂರು ನಗರದ ದೂರುಗಳೇ ಹೆಚ್ಚು

ಬೆಂಗಳೂರಿನ ದಕ್ಷಿಣ, ಉತ್ತರ, ಸೆಂಟ್ರಲ್ ಮತ್ತು ನಗರ ಪ್ರದೇಶ ವ್ಯಾಪ್ತಿಯಿಂದ 87 ದೂರುಗಳು ಆಯೋಗಕ್ಕೆ ಸಲ್ಲಿಕೆ ಆಗಿವೆ. ಆದರೆ ಅವುಗಳಲ್ಲಿ ಕೇವಲ 16 ದೂರುಗಳು ಮಾತ್ರ ನಿಖರವಾಗಿವೆ. ಬೆಂಗಳೂರು ನಗರ ವ್ಯಾಪ್ತಿಯಿಂದ 54 ದೂರುಗಳು ದಾಖಲಾಗಿವೆ. ಹಾಗೆಯೇ ರಾಯಚೂರಿನಿಂದ 48, ಹಾಸನದಿಂದ 42 ಮತ್ತು ಉಡಪಿಯಿಂದ 32 ದೂರುಗಳು ದಾಖಲಾಗಿವೆ.

ನಿಖರ ಜಿಯೋ ಟ್ಯಾಗಿಂಗ್ ಮಾಡಿ

ನಿಖರ ಜಿಯೋ ಟ್ಯಾಗಿಂಗ್ ಮಾಡಿ

ಆಪ್‌ನಲ್ಲಿ ದಾಖಲಾಗುವ ದೂರುಗಳ ಸ್ಥಳಗಳನ್ನು ಆದರಿಸಿ ಅಲ್ಲಿಗೆ ಭೇಟಿ ನೀಡಿದರೇ ಅದು ಬೇರೆಯೇ ಆಗಿರುತ್ತದೆ. ಹೀಗಾಗಿ ನಿಖರ ಸ್ಥಳ ಮಾಹಿತಿಯ ಗೊಂದಲ ಆಗುತ್ತಿದ್ದು, ನಾಗರಿಕರು ದೂರು ಸಲ್ಲಿಸುವಾಗ ಅಕ್ರಮ ನಡೆದಿರುವ ಅದೇ ಸ್ಥಳದಿಂದ ಆಪ್‌ನಲ್ಲಿ ಸ್ಥಳದ ಜಿಯೋ ಟ್ಯಾಗಿಂಗ್ ಮಾಡಬೇಕು. ನಿಖರ ಮಾಹಿತಿ ಅಧಿಕಾರಿಗಳಿಗೆ ಸರಿಯಾದ ಸ್ಥಳಕ್ಕೆ ಬರಲು ನೆರವಾಗುತ್ತದೆ.

Best Mobiles in India

English summary
A majority of complaints filed from Karnataka on the Election Commission of India’s cVIGIL app has turned out to be fake.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X