Home
ಸುದ್ದಿಜಾಲ

ಮೈಸೂರಿನಲ್ಲಿ ಐಫೋನ್‌ ಬೆಲೆ ಕೇವಲ 700ರೂ.ಅಂತೆ! ಖರೀದಿ ಮಾಡಲು ಮುಂದಾಗಿದ್ರೆ ಈ ಸುದ್ದಿ ಓದಿ!

ಆಪಲ್‌ ಈಗಷ್ಟೇ ಐಫೋನ್ 15 ಸರಣಿ (iPhone 15 series) ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಈ ನಡುವೆ ಐಫೋನ್‌ನ ಇತರೆ ಹಿಂದಿನ ಆವೃತ್ತಿಗಳಿಗೆ ಆಪಲ್‌ ಡಿಸ್ಕೌಂಟ್‌ ಸಹ ಘೋಷಣೆ ಮಾಡಿದೆ. ಆದರೆ, ಐಫೋನ್ (iPhone)‌ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ವಿಶೇಷವಾದ ಘಟನೆಯೊಂದು ವರದಿಯಾಗಿದೆ.

ಹೌದು, ಮೈಸೂರಿನಲ್ಲಿ ನೀವು ಐಫೋನ್‌ ಅನ್ನು ಕೇವಲ 700ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಿಷಯ ಕೇಳಿ ನೀವು ಇಎಮ್‌ಐನಲ್ಲೋ ಅಥವಾ ಲೋನ್‌ನಲ್ಲೋ ಮಾರುತ್ತಿದ್ದಾರೆ ಅಂದುಕೊಳ್ಳಬೇಡಿ. ಈ ಫೋನ್‌ನ ಬೆಲೆ ಕೆವಲ 700ರೂ.ಗಳು ಅಷ್ಟೇ. ಅಷ್ಟೇ ಅಲ್ಲದೆ ಇತರೆ ಡಿವೈಸ್‌ಗಳು ಸಹ ನೂರು ಇನ್ನೂರು ರೂ.ಗಳ ಬೆಲೆಗೆ ಲಭ್ಯ ಇವೆ. ಹಾಗಿದ್ರೆ, ಏನಿದು ವಿಚಿತ್ರವಾದ ವಿಷಯ?, ಅಷ್ಟಕ್ಕೂ ಯಾಕೆ ಇಷ್ಟೊಂದು ಕಡಿಮೆ ಬೆಲೆಗೆ ಈ ಫೋನ್‌ ಅನ್ನು ಮಾರಾಟ ಮಾಡಲಾಗುತ್ತಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೈಸೂರಿನಲ್ಲಿ ಐಫೋನ್‌ ಬೆಲೆ ಕೇವಲ 700ರೂ.ಅಂತೆ!...

700ರೂ.ಗಳಿಗೆ ಆಪಲ್‌ ಐಫೋನ್‌: ಐಪೋನ್‌ಗಳು ಸಾಮಾನ್ಯವಾಗಿ ಅರವತ್ತು ಸಾವಿರದ ಬೆಲೆಯಿಂದ ಆರಂಭ ಆಗಿ ಒಂದೂವರೆ ಲಕ್ಷದ ವರೆಗೂ ಬೆಲೆ ಹೊಂದಿರುತ್ತವೆ. ಆದರೆ ಒಂದು ಸಿಮ್‌ನ ರೀಚಾರ್ಜ್‌ ಬೆಲೆಯಲ್ಲಿ ಐಫೋನ್‌ ಮಾರಾಟ ಮಾಡಲಾಗುತ್ತಿರುವುದು ಮಾತ್ರ ಅಚ್ಚರಿ ಸಂಗತಿ. ಮೈಸೂರಿನ ಬೋಗಾದಿ ರಸ್ತೆಯಲ್ಲಿ ಈ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ನೀವು ಸಮಾಧಾನ ಆಗುವ ವಿಷಯ ಏನೆಂದರೆ ಇವೆಲ್ಲವೂ ನಕಲಿ ಐಫೋನ್‌ಗಳು.

ನಕಲಿ ಐಫೋನ್‌ ಮಾರಾಟದ ಜಾಲ ಈಗ ಮೈಸೂರಿನ ಬೋಗಾದಿ ರೋಡ್‌ನಲ್ಲಿ ಕಂಡುಬಂದಿದೆ. ಇದೇನು ಕದ್ದು ಮುಚ್ಚಿ ಮಾಡುತ್ತಿರುವ ವ್ಯವಹಾರವಲ್ಲ. ಬದಲಾಗಿ ರಾಜಾರೋಷವಾಗಿ ದಾರಿ ಬದಿಯಲ್ಲಿ ನಿಂತು ಕೆಲವು ಯುವಕರು ಈ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಆ ಯುವಕರೇ ಇವು ಅಸಲಿ ಫೋನ್‌ಗಳಲ್ಲ. ಬದಲಾಗಿ ಇವು ನಕಲಿ ಫೋನ್‌ಗಳಾಗಿವೆ, ಐಫೋನ್‌ ಬ್ಯಾಡ್ಜ್‌(iPhone logo) ಬಳಕೆ ಮಾಡಲಾಗಿದೆ ಅಷ್ಟೇ ಎಂದು ಹೇಳುತ್ತಿದ್ದಾರೆ.

ಐಫೋನ್‌ ಮಾತ್ರವಲ್ಲದೆ ಇತರೆ ಜನಪ್ರಿಯ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ಜನಪ್ರಿಯ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲಿ ಡಿವೈಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ವೇಳೆ ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ವಾಚ್‌ಗಳನ್ನು ಕೇವಲ ನೂರು ಇನ್ನೂರರ ಆಸುಪಾಸಿನಲ್ಲಿ ಖರೀದಿ ಮಾಡಬಹುದಾಗಿದೆ. ಅಷ್ಟಕ್ಕೂ ನಿಮಗೆ ಈ ಸಂಬಂಧ ಒಂದು ಪ್ರಶ್ನೆ ಮೂಡಿರಬಹುದು. ಆ ಫೋನ್‌ಗಳನ್ನು ಮಾರುವವರು ಯಾರು ಎಂದು.

ಈ ಫೋನ್‌ಗಳನ್ನು ಮಾರಾಟ ಮಾಡುತ್ತಿರುವವರು ಉತ್ತರ ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ. ಅದರಲ್ಲೂ ಹುಬ್ಬಳ್ಳಿ ಮೂಲದವರು ಎಂದು ಹೇಳಲಾಗುತ್ತಿದೆ. ಸುಮಾರು 10 ಕ್ಕೂ ಹೆಚ್ಚು ಮಂದಿ ಇದ್ದು, ಗುಂಪು ಗುಂಪಾಗಿ ಈ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಗಿಜ್‌ಬಾಟ್‌ನೊಂದಿಗೆ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಜನರೇ ಎಚ್ಚರ...: ಕೆಲವರು ಆಪಲ್‌ ಐಫೋನ್‌ ಸೇರಿದಂತೆ ಅನೇಕ ಪ್ರೀಮಿಯಂ ಫೋನ್‌ಗಳನ್ನು ಖರೀದಿ ಮಾಡಲು ಇಚ್ಚಿಸುತ್ತಾರೆ. ಆದರೆ ಖಂಡಿತಾ ಇಷ್ಟೊಂದು ಹಣ ಕೊಟ್ಟು ಕೆಲವರಿಗೆ ಈ ಫೋನ್‌ಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಆದರೂ ಸಹ ಐಫೋನ್‌ ಮೇಲೆ ಇರುವ ವ್ಯಾಮೋಹ ಮಾತ್ರ ಕಡಿಮೆ ಆಗುವುದಿಲ್ಲ ಎಂದು ಹೇಳಿದರೆ ತಪ್ಪೇನಿಲ್ಲ. ಈ ರೀತಿಯ ಮನಸ್ಥಿತಿಯುಳ್ಳ ಹಲವಾರು ಜನರು ಈ ಫೋನ್‌ಗಳನ್ನು ಖರೀದಿ ಮಾಡಲು ಮುಗಿಬೀಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಕಲಿ ಫೋನ್‌ಗಳನ್ನು ಖರೀದಿ ಮಾಡುವ ಮುನ್ನ ಎಚ್ಚರ: ಸಾಮಾನ್ಯ ಅತ್ಯುತ್ತಮ ಬ್ರ್ಯಾಂಡ್‌ನ ಫೋನ್‌ಗಳನ್ನೇ ಸುಲಭವಾಗಿ ಹ್ಯಾಕ್‌ ಮಾಡುವ ಅಥವಾ ಮಾಲ್‌ವೇರ್‌ ಮೂಲಕ ದಾಳಿ ಮಾಡುವ ಈ ಕಾಲದಲ್ಲಿ ಈ ರೀತಿಯ ಫೋನ್‌ಗಳು ಇವರಿಗೆ ಯಾವ ಲೆಕ್ಕ. ಹೀಗಾಗಿ ಈ ರೀತಿಯ ನಕಲಿ ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡುವುದರಿಂದ ದೂರು ಇರುವುದೇ ಉತ್ತಮ. ಅದಾಗ್ಯೂ ನೀವು ಅದನ್ನು ಖರೀದಿ ಮಾಡಿದ್ದೇ ಆದರೆ ಬ್ಯಾಂಕಿಂಗ್‌ ವ್ಯವಹಾರ ಅಥವಾ ಖಾಸಗಿ ವ್ಯವಹಾರಗಳನ್ನು ಆ ಫೋನ್‌ನಲ್ಲಿ ಇರಿಸಿಕೊಳ್ಳಬೇಡಿ.

ನಕಲಿ ಫೋನ್ ಬಳಕೆ ಮಾಡುವುದರಿಂದ ಏನಾಗುತ್ತದೆ? : ನಕಲಿ ಅಥವಾ ಕ್ಲೋನ್ ಮಾಡಿದ ಫೋನ್ ಎಂದೂ ಕರೆಯಲ್ಪಡುವ ನಕಲಿ ಫೋನ್ ಅನ್ನು ಬಳಕೆ ಮಾಡುವುದು ಹಲವಾರು ಭದ್ರತಾ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದರಲ್ಲೂ ನಕಲಿ ಫೋನ್ ಬಳಸುವುದು ಕಾನೂನುಬಾಹಿರವಾಗಿದೆ. ಇದನ್ನು ವಂಚನೆ, ಗುರುತಿನ ಕಳ್ಳತನ ಅಥವಾ ದೂರಸಂಪರ್ಕ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ನಕಲಿ ಫೋನ್‌ಗಳು ಸಾಮಾನ್ಯವಾಗಿ ಪೂರ್ಣ ಕಾರ್ಯನಿರ್ವಹಣೆಗೆ ಅಗತ್ಯವಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಘಟಕಗಳನ್ನು ಹೊಂದಿರುವುದಿಲ್ಲ. ಅದರಲ್ಲೂ ಜಿಪಿಎಸ್, ಬ್ಲೂಟೂತ್ ಅಥವಾ ಕೆಲವು ಅಗತ್ಯ ಆಪ್‌ಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಅಷ್ಟೇ ಅಲ್ಲದೆ ನಕಲಿ ಫೋನ್‌ಗಳು ನಿಜವಾದ ಡಿವೈಸ್‌ಗಳಲ್ಲಿ ಕಂಡುಬರುವ ಭದ್ರತಾ ಫೀಚರ್ಸ್‌ ಅನ್ನು ಹೊಂದಿರುವುದಿಲ್ಲ. ಮಾಲ್ವೇರ್, ಹ್ಯಾಕಿಂಗ್ ಮತ್ತು ಇತರ ಭದ್ರತಾ ಬೆದರಿಕೆಗಳಿಗೆ ಇವು ಹೆಚ್ಚು ಒಗ್ಗಿಕೊಳ್ಳುತ್ತವೆ.

ಇದರೊಂದಿಗೆ ನಕಲಿ ಫೋನ್‌ಗಳು ಅಧಿಕೃತ ಸೆಲ್ಯುಲಾರ್ ನೆಟ್‌ವರ್ಕ್‌ಗಳಿಗೆ ಹೊಂದಿಕೆಯಾಗದಿರಬಹುದು ಅಥವಾ ಈ ನೆಟ್‌ವರ್ಕ್‌ಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೆಯೂ ಇರಬಹುದು. ಇದು ಕಳಪೆ ಕರೆ ಗುಣಮಟ್ಟವನ್ನು ನೀಡುತ್ತದೆ. ಅಷ್ಟೇ ತಯಾರಕರು ಮತ್ತು ಅಧಿಕೃತ ಸೇವಾ ಪೂರೈಕೆದಾರರು ಸಾಮಾನ್ಯವಾಗಿ ನಕಲಿ ಫೋನ್‌ಗಳನ್ನು ಬೆಂಬಲಿಸುವುದಿಲ್ಲ. ನೀವು ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರೆ ಅನ್ನು ಬಿಸಾಡಬೇಕೋ ಹೊರತು ಮತ್ತೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ಮೈಸೂರಿನಲ್ಲಿ ಐಫೋನ್‌ ಬೆಲೆ ಕೇವಲ 700ರೂ.ಅಂತೆ!...

ಮೊದಲೇ ತಿಳಿಸಿದಂತೆ ನಕಲಿ ಫೋನ್‌ಗಳು ದೃಢವಾದ ಭದ್ರತಾ ಫೀಚರ್ಸ್‌ ಅನ್ನು ಹೊಂದಿಲ್ಲದಿರಬಹುದು. ಪರಿಣಾಮ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರವೇಶಿಸುವ ಅಥವಾ ಕದಿಯುವ ಹೆಚ್ಚಿನ ಅಪಾಯವಿದೆ. ಈ ಮೂಲಕ ನಿಮ್ಮ ಖಾಸಗಿತನಕ್ಕೆ ನೀವೇ ಧಕ್ಕೆ ತಂದುಕೊಂಡಂತೆ ಆಗುತ್ತದೆ. ಪರಿಣಾಮ ಈ ರೀತಿಯ ನಕಲಿ ಫೋನ್‌ಗಳನ್ನು ಖರೀದಿ ಮಾಡುವ ಮುನ್ನ ಸಾಕಷ್ಟು ಬಾರಿ ಆಲೋಚನೆ ಮಾಡಿ.

Best Mobiles in India

English summary
You can buy an iPhone in Mysore for just Rs.700. These are all fake iPhones and a smartwatch is also being sold along with these phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+