ರಿಲಾಯನ್ಸ್ ಜಿಯೋ ಸ್ಕ್ಯಾಮ್: ರೂ.27,000 ಪಾವತಿಸಲು ಹೇಳಿದ ನಕಲಿ ಬಿಲ್..!

By Suneel
|

ಜಿಯೋ ಸಿಮ್‌ ವೆಲ್ಕಮ್‌ ಆಫರ್‌ಗಾಗಿ ಹಲವರು 4G ಸ್ಮಾರ್ಟ್‌ಫೋನ್ ಇಲ್ಲದಿದ್ದರೂ ಹೊಸ ಫೋನ್‌ ಖರೀದಿಸಿ ಸಿಮ್ ಪಡೆಯುತ್ತಿದ್ದಾರೆ. ಈ ಕಾರಣದಿಂದಲೇ ರಿಲಯನ್ಸ್ ಜಿಯೋ ಇಂದಿಗೂ ಸಹ ಆನ್‌ಲೈನ್‌ನಲ್ಲಿ ಸುದ್ದಿಗಳ ಹೆಡ್‌ಲೈನ್‌ ಪಡೆಯುತ್ತಲೇ ಇದೆ.

ರಿಲಾಯನ್ಸ್ ಜಿಯೋ ಸ್ಕ್ಯಾಮ್: ರೂ.27,000 ಪಾವತಿಸಲು ಹೇಳಿದ ನಕಲಿ ಬಿಲ್..!

ರಿಲಾಯನ್ಸ್ ಜಿಯೋ 2016 ಡಿಸೆಂಬರ್ 28 ಕ್ಕೆ ಬಹುದೊಡ್ಡ ವಿಶೇಷ ಮಾಹಿತಿಯೊಂದನ್ನು ಪ್ರಕಟಣೆ ಮಾಡಲಿದೆಯಂತೆ ಅದೇನು ಎಂದು ಇನ್ನೂ ಸಹ ಅಧಿಕೃತವಾಗಿ ಪ್ರಕಟವಾಗಿಲ್ಲ. ಆದರೆ ಅಂತೆ ಕಂತೆ ಮಾಹಿತಿಗಳು ಆನ್‌ಲೈನ್‌ ತುಂಬ ಹರಿದಾಡುತ್ತಿರುವುದಂತು ನಿಜ. ಇದೆಲ್ಲಾ ಬಿಡಿ. ಇನ್ನೊಂದು ಶಾಕ್‌ ನ್ಯೂಸ್ ಇದೆ ಓದಿ .ಎಲ್ಲರೂ ಸಿಮ್‌ ವೆಲ್ಕಮ್ ಆಫರ್'ನಲ್ಲಿ ಎಲ್ಲವೂ ಉಚಿತ ಎಂದು ಪಡೆಯುತ್ತಿದ್ದಾರೆ. ಆದರೆ ಈ ಸುದ್ದಿ ನೋಡಿದ್ರೆ ಸಿಮ್‌ ಖರೀದಿ ಮಾಡುತ್ತಾರೋ ಇಲ್ಲೋ ಗೊತ್ತಿಲ್ಲ.

ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

ಈಗೊಂದು ಶಾಕಿಂಗ್ ನ್ಯೂಸ್ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಪುರಾವೆ ಇಲ್ಲದ ರಿಲಾಯನ್ಸ್ ಜಿಯೋ ಬಿಲ್‌ ಒಂದು ವೆಬ್‌ ಪೂರ್ಣ ಚಲಿಸುತ್ತಿದೆ. ಇದು ವೈರಲ್ ಆಗುವುದರಲ್ಲಿ ಸಂಶಯವೇ ಇಲ್ಲ. ಆ ಬಿಲ್‌ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ರೂ.27,718 ಜಿಯೋ ಬಿಲ್

ರೂ.27,718 ಜಿಯೋ ಬಿಲ್

ಕೊಲ್ಕತ್ತದ ಅಯುನುದ್ದೀನ್ ಮೊಂಡಲ್ ಎಂಬ ವ್ಯಕ್ತಿ +91700334437 ರಿಲಯನ್ಸ್ ಜಿಯೋ ನಂಬರ್ ಅನ್ನು ಬಳಸುತ್ತಿದ್ದು, ಅವರು ಈ ಮೇಲೆ ಇರುವ ಬಿಲ್‌ ಅನ್ನು ಪಡೆದಿದ್ದಾರೆ. ಈ ಬಿಲ್‌ನಲ್ಲಿ ರೂ.27,718 ಹಣ ತೋರಿಸಲಾಗುತ್ತಿದೆ. ಯಾಕೆ ಗೊತ್ತಾ? ಮುಂದೆ ಓದಿ..

ದಂಡ ರೂ.1,100 ?

ದಂಡ ರೂ.1,100 ?

ಬಿಲ್‌ನಲ್ಲಿ ರೂ.27,718.5 ನೀಡಲಾಗಿದ್ದು, ಈ ಹಣ ಪಾವತಿಸಲು ನವೆಂಬರ್ 20, 2016 ರ ವರೆಗೂ ಅಂತಿಮ ಅವಕಾಶವಿತ್ತು. ಈ ಬಿಲ್‌ನಲ್ಲಿ ಹಣ ಪಾವತಿಸುವ ದಿನಾಂಕ ಅಂತಿಮವಾದ ನಂತರ 28,818.5 ಇದೆ. ಅಂದರೆ ಅಂತಿಮ ದಿನಾಂಕ ಮುಗಿದರೂ ಹಣ ಪಾವತಿಸದ ಕಾರಣ ದಂಡವಾಗಿ ರೂ.1,100 ಹೆಚ್ಚಿಸಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಲ್ಕಮ್ ಆಫರ್ ಎಲ್ಲರಿಗೂ ಉಚಿತ ಎಂದು ನೀವು ತಿಳಿದಿದ್ದೀರಿ..! ಆದರೆ?

ವೆಲ್ಕಮ್ ಆಫರ್ ಎಲ್ಲರಿಗೂ ಉಚಿತ ಎಂದು ನೀವು ತಿಳಿದಿದ್ದೀರಿ..! ಆದರೆ?

ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್ ಎಲ್ಲರಿಗೂ ಉಚಿತವಾಗಿದ್ದು, ಆಫರ್'ನಿಂದ ಉಚಿತ ಡಾಟಾ, ಉಚಿತ ಕರೆ ಮತ್ತು ಉಚಿತ ಮೆಸೇಜ್‌ ಸೇವೆಯನ್ನು ಡಿಸೆಂಬರ್ 31 ರವರೆಗೆ ಪಡೆಯಬಹುದು ಎಂದು ಹೇಳಲಾಗಿದೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರೂ.27,718 ರ ಬಿಲ್ ಜಿಯೋ ಗ್ರಾಹಕರ ನಡುವೆ ಗೊಂದಲ ಉಂಟುಮಾಡಲು ಕ್ರಿಯೇಟ್ ಮಾಡಿದ ಬಿಲ್ ಇದಾಗಿದೆ. ಈ ಬಿಲ್ ಇಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಲು ಕಾರಣ ಬಿಲ್ ಫೋಟೋ ಅಪ್‌ಲೋಡ್ ಮಾಡಿರುವ ಫೇಸ್‌ಬುಕ್‌ ಪೇಜ್‌ ಹೆಸರು "Reliance Jio LYF Thodupuzha' ಎಂದು ಇದೆ.

ಕಂಪ್ಲೀಟ್ ಫೇಕ್

ಕಂಪ್ಲೀಟ್ ಫೇಕ್

ವೆಲ್ಕಮ್‌ ಆಫರ್ ಪಡೆದಿರುವವರೆಲ್ಲರೂ ಉಚಿತವಾಗಿ ಜಿಯೋ ಸೇವೆ ಪಡೆಯುತ್ತಿದ್ದಾರೆ. ಆದರೆ ಇತ್ತ ಸಾಮಾಜಿಕ ತಾಣದಲ್ಲಿ ರಿಲಾಯನ್ಸ್ ಜಿಯೋ ಬಿಲ್‌ ಒಂದು ಹರಿದಾಡುತ್ತಿದೆ. ಈ ಬಿಲ್ ಸಂಪೂರ್ಣ ಫೇಕ್ ಆಗಿದೆ. ಅಲ್ಲದೇ ಈ ಬಿಲ್ ಅನ್ನು ಸರ್ವೀಸ್ ಪ್ರೊವೈಡರ್‌ಗಳು ಕಳುಹಿಸಿಲ್ಲ. . ಆದ್ದರಿಂದ ಜಿಯೋ ಗ್ರಾಹಕರು ಗೊಂದಲಗೊಂಡು, ಉಚಿತ ಇಂಟರ್ನೆಟ್ ಬಳಸುತ್ತಿದ್ದಲ್ಲಿ ಭಯಪಡುವ ಅವಕಾಶವಿಲ್ಲ.

ಜಿಯೋದಿಂದ ಅಧಿಕೃತ ಮಾಹಿತಿ ಬಂದಿಲ್ಲ

ಜಿಯೋದಿಂದ ಅಧಿಕೃತ ಮಾಹಿತಿ ಬಂದಿಲ್ಲ

ರಿಲಾಯನ್ಸ್ ಜಿಯೋ ಈ ಫೇಕ್‌ ಬಿಲ್ ಬಗ್ಗೆ ಎಲ್ಲಿಯೂ ಸಹ ಹೇಳಿಲ್ಲ. ಬಿಲ್ ಕೇವಲ ಫೇಸ್‌ಬುಕ್ ಪೇಜ್‌ ಒಂದರಲ್ಲಿ ಕಾಣಿಸಿಕೊಂಡಿದ್ದು, ಫೇಜ್‌ ಸಹ ಅಧಿಕೃತವಾಗಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Reliance Jio Scam: FAKE Bill Urges User to Pay Rs. 27,000 During Welcome Offer. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X