Home
ಸುದ್ದಿಜಾಲ

Rashmika Mandanna: ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್! ಏನಿದು ಎಐ ಡೀಪ್‌ಫೇಕ್? ಸುರಕ್ಷಿತವಾಗಿರುವುದೇಗೆ?

ತಂತ್ರಜ್ಞಾನ ಬೆಳವಣಿಗೆ ಆದಂತೆ ಹೊಸ ಹೊಸ ಸೌಲಭ್ಯಗಳು ಜನರಿಗೆ ಲಭ್ಯ ಆಗುತ್ತಿವೆ. ಅದರಲ್ಲೂ ಇತ್ತೀಚಿನ ಎಐ ಬೆಳವಣಿಗೆ ಜಾಗತಿಕವಾಗಿ ದೊಡ್ಡ ಅಲೆಯನ್ನೇ ಉಂಟು ಮಾಡಿದೆ. ಇದರಿಂದಾಗಿ ಅದೆಷ್ಟೋ ಜನರು ಸಂಕಷ್ಟಕ್ಕೆ ಸಿಲುಕಿದರೆ ಇನ್ನೂ ಹಲವರು ಲಾಭ ಪಡೆಯುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ವಿಡಿಯೋ ವೈರಲ್ ಭಾರೀ ಚರ್ಚೆಯಾಗುತ್ತಿದೆ.

ಹೌದು, ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋವೊಂದು (Actress Rashmika Mandanna video) ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿದ ಅದೆಷ್ಟೋ ಜನರು ಮಂದಣ್ಣರ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡರೆ ಇನ್ನೂ ಕೆಲವರು ಇದರ ಅತ್ಯಾಸತ್ಯತೆ ಬಗ್ಗೆ ಚರ್ಚೆಗೆ ಇಳಿದಿದ್ದಾರೆ. ಆದರೆ, ಇದೆಲ್ಲದಕ್ಕೂ ಕಾರಣವಾಗಿರುವುದು ಎಐ ಡೀಪ್‌ಫೇಕ್ (AI Deepfake) ಎಂಬುದು ನಿಮಗೆ ತಿಳಿದಿರಲಿ‌. ಹಾಗಿದ್ರೆ, ಯಾವುದು ಈ ವಿಡಿಯೋ?, ನಿಜಕ್ಕೂ ಇಲ್ಲಿ ಆಗಿದ್ದೇನು? ಎಐ ಡೀಪ್‌ಫೇಕ್ ಎಷ್ಟು ಸುರಕ್ಷಿತ? ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್! ಏನಿದು ಎಐ ಡೀಪ್‌ಫೇಕ್? ಸುರಕ್ಷಿತವಾಗಿರುವುದೇಗೆ?

ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್: ಎಐ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾದ ವಿಷಯ ಏನೆಂದರೆ ರಶ್ಮಿಕಾ ಮಂದಣ್ಣ ಅವರ ಮುಖ ಇರುವ ನಕಲಿ ವಿಡಿಯೋ. ಈ ವಿಡಿಯೋ ನೋಡಿದ ಸಾಕಷ್ಟು ಜನರು ಇವರು ರಶ್ಮಿಕಾ ಮಂದಣ್ಣ ಅವರೇ ಎಂದು ಹೇಳುವುದುಂಟು. ಆದರೆ, ವಿಚಾರವೇ ಬೇರೆ. ಎಐ ಡೀಪ್‌ಫೇಕ್‌ ಬಳಕೆ ಮಾಡಿಕೊಂಡು ಈ ವಿಡಿಯೋ ಎಡಿಟ್‌ ಮಾಡಲಾಗಿದೆ. ಅಂದರೆ ಬೇರೆ ಯಾರದೋ ವಿಡಿಯೋಗೆ ಮಂದಣ್ಣ ಅವರ ಫೋಟೋ ಹಾಕಿ ವೈರಲ್‌ ಮಾಡಲಾಗಿದೆ.

ಎಐ ಡೀಪ್‌ಫೇಕ್ ಎಂದರೇನು?: ಎಐ ಡೀಪ್‌ಫೇಕ್‌ಗಳು ಡಿಜಿಟಲ್ ಮ್ಯಾನಿಪ್ಯುಲೇಷನ್‌ನ ಒಂದು ರೂಪವಾಗಿದ್ದು, ಇದು ಹೆಚ್ಚು ಮನವೊಪ್ಪಿಸುವ ನಕಲಿ ಕಂಟೆಂಟ್‌ ಅನ್ನು ರಚಿಸಲು ಕೃತಕ ಬುದ್ಧಿಮತ್ತೆ (AI) ಅಲ್ಗಾರಿದಮ್‌ಗಳನ್ನು ಬಳಕೆ ಮಾಡುತ್ತದೆ. ಈ ಮೂಲಕ ಚಿತ್ರಗಳು, ವಿಡಿಯೋಗಳು ಅಥವಾ ಆಡಿಯೊ ರೆಕಾರ್ಡಿಂಗ್‌ಗಳನ್ನು ನಿರ್ಮಾಣ ಮಾಡಬಹುದು.
ಈ ನಕಲಿ ಮೀಡಿಯಾಗಳು ನೈಜ ಕಂಟೆಂಟ್‌ ರೀತಿಯಲ್ಲೇ ಕಾಣಿಸಿಕೊಳ್ಳುತ್ತವೆ.

ಡೀಪ್‌ಫೇಕ್ ರಚನೆಕಾರರು ಸಾಮಾಜಿಕ ಮಾಧ್ಯಮ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳ ಮೂಲಕ ಗುರಿಪಡಿಸಿದ ವ್ಯಕ್ತಿಯ ಬಗ್ಗೆ ಗಣನೀಯ ಪ್ರಮಾಣದ ಡೇಟಾವನ್ನು ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಇದಾದ ಬಳಿಕ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಲು ಎಐ ತಂತ್ರಜ್ಞಾನವನ್ನು ಬಳಕೆ ಮಾಡುತ್ತಾರೆ. ಅವರು ಉದ್ದೇಶಿತ ವ್ಯಕ್ತಿಗೆ ನಿರ್ದಿಷ್ಟವಾದ ಮುಖದ ಲಕ್ಷಣಗಳು, ಅಭಿವ್ಯಕ್ತಿಗಳು, ಧ್ವನಿ ಮಾದರಿಗಳು ಸೇರಿದಂತೆ ಇತರ ಗುಣಲಕ್ಷಣಗಳನ್ನು ಫೈಂಡ್‌ ಮಾಡಿ ಆಡ್‌ ಮಾಡುತ್ತಾರೆ. ಇದಾದ ನಂತರ ಆ ಕಂಟೆಂಟ್‌ ಅನ್ನು ವಿಡಿಯೋ, ಆಡಿಯೋ ಅಥವಾ ಫೋಟೋ ರೂಪದಲ್ಲಿ ಪಡೆಯುತ್ತಾರೆ.

ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್! ಏನಿದು ಎಐ ಡೀಪ್‌ಫೇಕ್? ಸುರಕ್ಷಿತವಾಗಿರುವುದೇಗೆ?

ಎಐ ಡೀಪ್‌ಫೇಕ್ ನಿಂದ ಸುರಕ್ಷಿತವಾಗಿರುವುದು ಹೇಗೆ?: ಎಐ ಡೀಪ್‌ಫೇಕ್‌ಗಳನ್ನು ರಚಿಸಲು ಮೋಸಗಾರರು ಡೇಟಾವನ್ನು ಎಲ್ಲಾ ಮೂಲಗಳಿಂದ ಕಲೆಕ್ಟ್‌ ಮಾಡಲು ಮುಂದಾಗುತ್ತಾರೆ. ಪರಿಣಾಮ ಸಾಮಾನ್ಯ ಜನರು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ವೈಯಕ್ತಿಕ ಡೇಟಾದ ಪ್ರಮಾಣವನ್ನು ಮಿತಿಗೊಳಿಸಬೇಕು. ವೈಯಕ್ತಿಕ ಭದ್ರತೆಯನ್ನು ಹೆಚ್ಚಿಸಲು, ಡೀಪ್‌ಫೇಕ್‌ಗಳನ್ನು ಉತ್ಪಾದಿಸಲು ಬಳಸಬಹುದಾದ ನಿಮ್ಮ ಫೋಟೋಗಳು ಅಥವಾ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದನ್ನು ಈ ಮೂಲಕ ನಿಲ್ಲಿಸಬೇಕಿದೆ.

ಎಲ್ಲಕ್ಕಿಂತ ಮಿಗಿಲಾಗಿ ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ (Instagram, Facebook) ಅನ್ನು ಖಾಸಗಿಯಾಗಿ ಇಟ್ಟುಕೊಂಡರೆ ಇನ್ನೂ ಉತ್ತಮ. ನಿಮ್ಮದು ಬ್ಯುಸಿನೆಸ್‌ ಖಾತೆಯಾಗಿದ್ದರೆ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ವೈಯಕ್ತಿಕ ಚಿತ್ರಗಳು ಅಥವಾ ವಿಡಿಯೋಗಳನ್ನು ಆರ್ಕೈವ್ ಮಾಡಬಹುದು. ಹೆಚ್ಚುವರಿಯಾಗಿ ನಿಮ್ಮ ಆನ್‌ಲೈನ್ ಖಾತೆಗಳನ್ನು ಬಲವಾದ ಮತ್ತು ಕಷ್ಟಕರವಾದ ಪಾಸ್‌ವರ್ಡ್‌ಗಳೊಂದಿಗೆ ರಕ್ಷಿಸುವುದು ಉತ್ತಮ ಆಯ್ಕೆಯಾಗಿದೆ.

ನಟಿ ರಶ್ಮಿಕಾ ಮಂದಣ್ಣ ಮಾತ್ರವಲ್ಲದೆ ಸಾಕಷ್ಟು ಜನರು ಸಮಸ್ಯೆ ಎದುರಿಸಿದ್ದಾರೆ: ಈಗಾಗಲೇ ಸಾಕಷ್ಟು ಜನರು ಈ ಡೀಪ್‌ಫೇಕ್‌ ಮೋಸಕ್ಕೆ ಬಲಿಯಾಗಿದ್ದಾರೆ. ಆದರೆ ಹಲವಾರು ಪ್ರಕರಣಗಳು ಮುನ್ನೆಲೆಗೆ ಬಂದಿರಲಿಲ್ಲ. ರಶ್ಮಿಕ ಮಂದಣ್ಣ ನಟಿ ಆಗಿರುವ ಕಾರಣಕ್ಕೆ ಈ ವಿಷಯ ಈಗ ಹೆಚ್ಚು ಮುನ್ನೆಲೆಯಲ್ಲಿದೆ. ಮಂದಣ್ಣ ಅವರ ಈ ನಕಲಿ ವಿಡಿಯೋ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿತ್ತು.

ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್! ಏನಿದು ಎಐ ಡೀಪ್‌ಫೇಕ್? ಸುರಕ್ಷಿತವಾಗಿರುವುದೇಗೆ?

ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಡೀಪ್‌ಫೇಕ್‌ಗಳ ವಿರುದ್ಧ ಕಾನೂನು ಕ್ರಮದ ತುರ್ತುಸ್ಥಿತಿಯನ್ನು ಈ ವೇಳೆ ಒತ್ತಿ ಹೇಳಿದ್ದಾರೆ. ಈ ಎಐ ರಚಿತವಾದ ವಂಚನೆಯಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸಲು ಕ್ರಮ ಅತ್ಯಗತ್ಯ ಎಂದು ತಿಳಿಸಿದ್ದು, ಈ ಸಂಬಂಧ ಸರ್ಕಾರ ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Best Mobiles in India

English summary
A fake video of actress Rashmika Mandanna has been heavily discussed on social media. It is created using AI deepfake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+