ಮಿಲಿಯನ್ ಮಂದಿ ಬಳಸುತ್ತಿರುವುದು ನಕಲಿ ವಾಟ್ಸ್‌ಆಪ್: ನಿಮ್ಮ ಆಪ್ ಒರ್ಜಿನಲ್ ಹೌದ ನೋಡಿಕೊಳ್ಳಿ..!
ಆಂಡ್ರಾಯ್ಡ್ ಬಳಕೆದಾರರನ್ನು ಟಾರ್ಗೇಟ್ ಮಾಡಿಕೊಂಡು ನಕಲಿ ವಾಟ್ಸ್‌ಆಪ್ ಹರಿ ಬಿಡಲಾಗಿದ್ದು, ವಾಟ್ಸ್‌ಆಪ್ ಖ್ಯಾತಿಗೆ ಚ್ಯುತಿ ತರುವಂತಹ ಕಾರ್ಯ ಇದಾಗಿದೆ. ಈ ಮೂಲಕ ವಾಟ್ಸ್‌ಆಪ್ ಬಳಕೆದಾರರನ್ನು ಯಾಮಾರಿಸಿ ಮಾಹಿತಿಗಳನ್ನು ಲಾಪಟಾಯಿಸುವ ಯೋಜನೆ.
ವಾಟ್ಸ್‌ಆಪ್ ಹೊಸದಾಗಿ ಬಿಸ್ನೆಸ್ ಆಪ್ ಬಿಡುಗಡೆ ಮಾಡುವುದಾಗಿ ತಿಳಿಸಿದನ್ನು ಬಂಡವಾಳ ಮಾಡಿಕೊಂಡ ಹ್ಯಾಕರ್ಸ್ ನಕಲಿ ವಾಟ್ಸ್‌ಆಪ್ ಅನ್ನು ಪ್ಲೇ ಸ್ಟೋರಿನಲ್ಲಿ ಹರಿಬಿಟ್ಟಿದ್ದಾರೆ. ಈಗಾಗಲೇ ಸುಮಾರು ಒಂದು ಮಿಲಿಯನ್ ಮಂದಿ ಪ್ಲೇ ಸ್ಟೋರಿನಲ್ಲಿ ಈ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಓದಿರಿ: ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗೆ ಡೆಡ್‌ಲೈನ್ ಫಿಕ್ಸ್: ಯಾವಾಗ.?
ಆಂಡ್ರಾಯ್ಡ್ ಬಳಕೆದಾರರನ್ನು ಟಾರ್ಗೇಟ್ ಮಾಡಿಕೊಂಡು ನಕಲಿ ವಾಟ್ಸ್‌ಆಪ್ ಹರಿ ಬಿಡಲಾಗಿದ್ದು, ವಾಟ್ಸ್‌ಆಪ್ ಖ್ಯಾತಿಗೆ ಚ್ಯುತಿ ತರುವಂತಹ ಕಾರ್ಯ ಇದಾಗಿದೆ. ಈ ಮೂಲಕ ವಾಟ್ಸ್‌ಆಪ್ ಬಳಕೆದಾರರನ್ನು ಯಾಮಾರಿಸಿ ಮಾಹಿತಿಗಳನ್ನು ಲಾಪಟಾಯಿಸುವ ಯೋಜನೆಯೊಂದು ರೂಪಿತವಾಗಿದೆ ಎನ್ನಲಾಗಿದೆ.

ನಕಲಿ ವಾಟ್ಸ್‌ಆಪ್:
ಈಗಾಗಲೇ ಪ್ಲೇ ಸ್ಟೋರಿನಲ್ಲಿ ವಾಟ್ಸ್‌ಆಪ್ ಹೆಸರಿನಲ್ಲಿ ಹಲವಾರು ಆಪ್ ಗಳು ಕಾಣಿಸಿಕೊಂಡಿದೆ. ಅವುಗಳಲ್ಲಿ ವಾಟ್ಸ್‌ಆಪ್ ಆಪ್‌ಡೇಟ್ ಮತ್ತು ವಾಟ್ಸ್‌ಆಪ್ ಮೇಸೆಂಜರ್ ಎನ್ನುವ ಎರಡು ಆಪ್‌ಗಳು ಹೆಚ್ಚು ಡೌನ್‌ಲೋಡ್ ಆಗಿವೆ.

ವಾಟ್ಸ್‌ಆಪ್ ಡೌನ್‌ಲೋಡ್ ಮಾಡುವಾಗ ಎಚ್ಚರ:
ಪ್ಲೇ ಸ್ಟೋರಿನಲ್ಲಿ ವಾಟ್ಸ್ಆಪ್ ಎಂದು ಸರ್ಚ್ ಮಾಡುವ ಸಂದರ್ಭದಲ್ಲಿ ಹಲವಾರು ಆಯ್ಕೆಗಳು ದೊರೆಯಲಿದ್ದು, ಅಲ್ಲಿ ವಾಟ್ಸ್‌ಆಪ್ ಡೆವಲಪರ್ ಹೆಸರಿನ ಬಳಿ ಬ್ಲೂ ಡಾಟ್ಸ್ ಇದ್ದರೇ ಮಾತ್ರವೇ ಡೌನ್ ಲೋಡ್ ಮಾಡಿಕೊಳ್ಳಿ.

ನಕಲಿ ಜಾಲ:
ಈಗಾಗಲೇ ವಾಟ್ಸ್‌ಆಪ್ ಹೆಸರಿನಲ್ಲಿ ನಕಲಿ ಜಾಲವು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೀವು ಎಚ್ಚರವಾಗಿರುವ ಅಗತ್ಯವಿದೆ. ಒಮ್ಮೆ ಈ ನಕಲಿ ಆಪ್‌ಗಳಿಗೆ ಲಾಗ್ ಆದರೆ ನಿಮ್ಮ ಮಾಹಿತಿಗಳು ಲೀಕ್ ಆಗಲಿದೆ. ಇದರಿಂದ ಭವಿಷ್ಯದಲ್ಲಿ ತೊಂದರೆಯನ್ನು ಎದುರಿಸಬೇಕಾಗಲಿದೆ.

ಒಂದು ಮಿಲಿಯನ್ ಡೌನ್‌ಲೋಡ್:
ಈ ನಕಲಿ ವಾಟ್ಸ್‌ಆಪ್ ಅನ್ನು ಸುಮಾರು ಒಂದು ಮಿಲಿಯನ್ ಮಂದಿ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರೇಲ್ಲರು ಅದನ್ನೇ ಒರ್ಜಿನಲ್ ವಾಟ್ಸ್‌ಆಪ್ ಎಂದು ಕೊಂಡಿದ್ದಾರೆ. ಇದರಿಂದಾಗಿ ಹೆಚ್ಚಿನ ಸಮಸ್ಯೆಯೂ ಎದುರಾಗಿದೆ ಎನ್ನಲಾಗಿದೆ.


Click it and Unblock the Notifications








