ಓರ್ವನ ಸಾವಿಗೆ ಕಾರಣವಾದ ನಕಲಿ ವಾಟ್ಸ್‌ಆಪ್ ವೀಡಿಯೊ..! ಸುಮ್ಮನೇ ಶೇರ್ ಮಾಡುವ ಮುನ್ನ ಎಚ್ಚರ..!
ಸದ್ಯ ರಾಜ್ಯದಲ್ಲಿ ಮಕ್ಕಳು ಕಳ್ಳರು ಬರುತ್ತಿದ್ದಾರೆ ಮತ್ತು ಮನುಷ್ಯರನ್ನು ತಿನ್ನುವವರು ಬರುತ್ತಿದ್ದ ಎಚ್ಚರ. ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಿ ಎನ್ನುವ ವಾಟ್ಸ್‌ಆಪ್ ಸಂದೇಶಗಳು ಹರಿದಾಡುತ್ತಿದೆ. ಇದೇ ಮಾದರಿಯಲ್ಲಿ ವಾಟ್ಸ್ಆಪ್ ನಲ್ಲಿ ಹರಿದಾಡುತ್ತಿರುವ ನಕಲಿ ವೀಡಿಯೊವೊಂದು ನಗರದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದೆ.

ಓದಿರಿ: ರೂ.10,500 ನೀಡಿ ಐಫೋನ್ 8 ತೆಗೆದುಕೊಂಡು ಹೋಗಿ: ಏರ್‌ಟೆಲ್ ಕೊಟ್ಟ ಹೊಸ ಆಫರ್..!
ಮಕ್ಕಳ ಕಳ್ಳ ಎಂದು ಭಾವಿಸಿ ಯುವಕನನ್ನು ನಗರದ ಚಾಮರಾಜಪೇಟೆ ಗುಂಪೊಂದು ಹೊಡದೆ ಸಾಯಿಸಿರುವ ಘಟನೆ ವರದಿಯಾಗಿದ್ದು, ಇದಕ್ಕೆ ಕಾರಣವಾಗಿರುವುದು ವಾಟ್ಸ್‌ಆಪ್ ವೀಡಿಯೊ ಎನ್ನಲಾಗಿದೆ. ಈ ವೀಡಿಯೊದಲ್ಲಿರುವ ಮಾದರಿಯಲ್ಲಿಯೇ ಇರುವ ಎನ್ನುವ ಕಾರಣಕ್ಕೆ ಒಬ್ಬನೇ ಓಡಾಡುತ್ತಿದ್ದ ಎಂದು ಗುಂಪಿನ ಜನರು ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ.

ಟೈಮ್ಸ್ ವರದಿ:
ಈ ಕುರಿತು ಟೈಮ್ ಆಫ್ ಇಂಡಿಯಾ ವರದಿ ಮಾಡಿದ್ದು, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮಟಮಟ ಮಧ್ಯಾಹ್ನದಲ್ಲಿ ರಾಜಸ್ಥಾನ ಮೂಲದ ಕಾಲುರಾಮ್ (26) ಎಂಬಾತನನ್ನು ಮಕ್ಕಳ ಕಳ್ಳ ಎಂದು ಶಂಕಿಸಿ ಸಾರ್ವಜನಿಕರು ಕೊಂದು ಹಾಕಿದ್ದಾರೆ ಎಂದು ವರದಿ ಮಾಡಿದೆ.

ಕಾಟನ್‌ಪೇಟೆಯಲ್ಲಿ ಘಟನೆ:
ಕಾಟನ್‌ಪೇಟೆ ಪೆನ್ಷೆನ್ ಮೊಹಲ್ಲಾ ರಂಗನಾಥ ಟಾಕೀಸ್ ಬಳಿ ಮಧ್ಯಾಹ್ನ ಸಾರ್ವಜನಿಕರು ಸೇರಿ ಮಕ್ಕಳ ಕಳ್ಳ ಇರಬಹುದು ಎಂದು ಮಾತನಾಡಿಕೊಂಡಿದ್ದಾರೆ. ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ನೂರಾರು ಜನ ಸ್ಥಳದಲ್ಲೇ ಬ್ಯಾಟ್, ಮರದ ದೊಣ್ಣೆ ಹಾಗೂ ಕೈಗಳಿಂದ ಆತನಿಗೆ ಥಳಿಸಿ ಹತ್ಯೆ ಮಾಡಿದ್ದಾರೆ.

ಘಟನೆಗೆ ವಾಟ್ಸ್‌ಆಪ್ ವೀಡಿಯೊ ಕಾರಣ:
ಇದೇ ಕೆಲವು ದಿನಗಳ ಹಿಂದೆ ರಾಜ್ಯದ ಜಿಲ್ಲೆಯೊಂದರಲ್ಲಿ ಮಕ್ಕಳನ್ನು ಕದ್ದು ಹೋಗಿದ್ದಾರೆ ಎಂಬ ವೀಡಿಯೊವೊಂದು ಹರಿದಾಡಿದ್ದು, ಇದನ್ನು ನೋಡಿದ ಮಂದಿ ಎಲ್ಲರ ಮೇಲೆಯೂ ಅನುಮಾನ ವ್ಯಕ್ತಪಡಿಸುತ್ತಿದ್ದು, ಈ ವೀಡಿಯೊದಲ್ಲಿದ್ದ ಮಾದರಿಯ ವ್ಯಕ್ತಿ ಎನ್ನುವುದೇ ಘಟನೆಗೆ ಕಾರಣವಾಗಿದೆ.

ಸುಮ್ಮನೇ ಶೇರ್ ಮಾಡಬೇಡಿ:
ಇತ್ತಿಚೇಗೆ ವಾಟ್ಸ್‌ಆಪ್‌ನಲ್ಲಿ ಈ ಮಾದರಿಯ ನಕಲಿ ವೀಡಿಯೊಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಸುಮ್ಮನೆ ಬಂದ ಎಲ್ಲಾ ವೀಡಿಯೊವನ್ನು ಶೇರ್ ಮಾಡುವ ಬದಲು ಅದರ ಸತ್ಯಾಸತ್ಯತೆ ಬಗ್ಗೆ ವಿಚಾರ ನಡೆಸಿ, ಸುಮ್ಮನೆ ಬೇರೆಯೊಬ್ಬರ ಜೀವಕ್ಕೆ ತೊಂದರೆಯನ್ನು ನೀಡಬೇಡಿ.


Click it and Unblock the Notifications








