AMOLED display: 20 ಸಾವಿರಕ್ಕಿಂತಲೂ ಕಡಿಮೆಗೆ ಲಭ್ಯ ಇರುವ ಅಮೋಲೆಡ್ ಡಿಸ್‌ಪ್ಲೇ ಆಯ್ಕೆಯ ಸ್ಮಾರ್ಟ್‌ಫೋನ್‌ಗಳಿವು!
ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ಇತ್ತೀಚಿಗೆ ಡಿಸ್‌ಪ್ಲೇಗಳು ಸಹ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಅದರಲ್ಲೂ ಡಿಸ್‌ಪ್ಲೇ ಆಧಾರದ ಮೇಲೆಯೇ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಗ್ರಾಹಕರು ಇದ್ದು, ಈ ನಡುವೆ ಬೆಲೆಗೆ ತಕ್ಕ ಡಿಸ್‌ಪ್ಲೇಗಳನ್ನು ಫೋನ್‌ಗಳಲ್ಲಿ ಕಾಣಬಹುದು. ಅದಾಗ್ಯೂ ನೀವು ಈ ಲೇಖನದಲ್ಲಿ ಕಡಿಮೆ ಬೆಲೆ ಇರುವ ಫೋನ್‌ಗಳಲ್ಲೂ ಅಮೋಲೆಡ್ ಡಿಸ್ಪ್ಲೇ ಇರುವ ಫೋನ್‌ಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಹೌದು, ಅಮೋಲೆಡ್ ಡಿಸ್‌ಪ್ಲೇಗಳು (AMOLED display) ಇಂದು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಈ ಡಿಸ್‌ಪ್ಲೇನಲ್ಲಿ ಯಾವುದೇ ವಿಡಿಯೋಗಳನ್ನು ನೋಡುವಾಗಲೂ ಅದ್ಭುತ ಅನುಭವ ಸಿಗಲಿದ್ದು, ಗೇಮಿಂಗ್ ವಿಚಾರದಲ್ಲಂತೂ ಒಂದು ಹೆಜ್ಜೆ ಮುಂದೆಯೇ ಇದೆ. ಈ ಬೆಳವಣಿಗೆ ನಡುವೆ ರಿಯಲ್‌ಮಿ, ರೆಡ್ಮಿ, ವಿವೋ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಇಪ್ಪತ್ತು ಸಾವಿರದ ಒಳಗೆ ಲಭ್ಯವಾಗುವಂತೆ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿವೆ. ಹಾಗಿದ್ರೆ, ಈ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಇರುವ ಫೋನ್‌ಗಳ ವಿವರ ತಿಳಿಯೋಣ ಬನ್ನಿ.

ಅಮೋಲೆಡ್ ಡಿಸ್‌ಪ್ಲೇ ವಿಶೇಷತೆ ಏನು? : ಹಲವಾರು ಜನರು ಈ ಡಿಸ್‌ಪ್ಲೇ ಕೇವಲ ಉತ್ತಮ ವೀಕ್ಷಣೆ ಅನುಭವ ಮಾತ್ರ ನೀಡುತ್ತದೆ ಎಂದಷ್ಟೇ ತಿಳಿದುಕೊಂಡಿದ್ದಾರೆ. ಆದರೆ, ಇದರ ಆಚೆಗೂ ಮೀರಿದ ಸೌಲಭ್ಯವನ್ನು ಈ ಡಿಸ್‌ಪ್ಲೇ ಮೂಲಕ ಪಡೆದುಕೊಳ್ಳಬಹುದಾಗಿದೆ. ಅಂದರೆ ಪ್ಯಾನೆಲ್‌ಗಳು ಉತ್ತಮವಾದ ಬಣ್ಣ ಪುನರುತ್ಪಾದನೆಯನ್ನು ನೀಡುವುದು ಮಾತ್ರವಲ್ಲದೆ ಹೆಚ್ಚಿದ ವಿದ್ಯುತ್ ದಕ್ಷತೆ ಮತ್ತು ವರ್ಧಿತ ರಿಫ್ರೆಶ್ ರೇಟ್ ಅನ್ನೂ ಸಹ ನೀಡುತ್ತದೆ. ತಡ ಯಾಕೆ ಬನ್ನಿ ಈ ವಿಶೇಷ ಫೀಚರ್ಸ್ ಇರುವ ಫೋನ್‌ಗಳ ಬಗ್ಗೆ ಮಾಹಿತಿ ತಿಳಿಯೋಣ.
ವಿವೋ T2 5G: ಈ ಸ್ಮಾರ್ಟ್‌ಫೋನ್ (Vivo T2 5G) 6.38 ಇಂಚಿನ 90Hz ರಿಫ್ರರರ್ಶ ರೇಟ್ ಆಯ್ಕೆಯೊಂದಿಗೆ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲ ಹಾಗೂ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಉತ್ತಮ ಎನಿಸಿದೆ. ಅಷ್ಟೇ ಅಲ್ಲದೆ ಈ ಫೋನ್ 64MP OIS ಪ್ರಾಥಮಿಕ ಕ್ಯಾಮೆರಾ + 2MP ಬೊಕೆ ಕ್ಯಾಮೆರಾ ಹೊಂದಿದ್ದು, 16MP ಸೆಲ್ಫಿ ಕ್ಯಾಮೆರಾ ಮೂಲಕ ಉತ್ತಮ ಫೋಟೊ ಸೆರೆಹಿಡಿಯಲು ಸಹಕಾರಿ.

ರಿಯಲ್‌ಮಿ ನಾರ್ಜೋ 60 5G: ಈ ಫೋನ್ (Realme Narzo 60 5G) 6.43 ಇಂಚಿನ 90Hz ರಿಫ್ರೆಶ್ ರೇಟ್ ಆಯ್ಕೆ ಇರುವ FHD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6020 5G SoC ಪ್ರೊಸೆಸರ್, 8GB RAM ಮತ್ತು 256GB ಇಂಟರ್ ಸ್ಟೋರೇಜ್‌ನ ಶಕ್ತಿಯೊಂದಿಗೆ ಲಾಂಚ್ ಆಗಿದೆ. ಈ ಫೋನ್ ಸಹ 64MP ಪ್ರಾಥಮಿಕ ಕ್ಯಾಮೆರಾ + 2MP ಪೋರ್ಟ್ರೇಟ್ ಲೆನ್ಸ್, 16MP AI ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ.
ಲಾವಾ ಅಗ್ನಿ 2 5G : ಈ ಫೋನ್ (Lava agni 2 5G) 6.78 ಇಂಚಿನ 120Hz ರಿಫ್ರೆಶ್ ರೇಟ್ ಆಯ್ಕೆಯ FHD+ ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 50MP ಪ್ರಾಥಮಿಕ ಕ್ಯಾಮೆರಾ + 8MP ಅಲ್ಟ್ರಾವೈಡ್ ಲೆನ್ಸ್ + 2MP ಮ್ಯಾಕ್ರೋ ಲೆನ್ಸ್ + 2MP ಡೆಪ್ತ್ ಕ್ಯಾಮೆರಾ ಮೂಲಕ ಉತ್ತಮ ಕ್ಯಾಮೆರಾ ಫೋನ್ ಎನಿಸಿಕೊಂಡಿದೆ. ಇದರೊಂದಿಗೆ 66W ಫಾಸ್ಟ್ ಚಾರ್ಜ್ ತಂತ್ರಜ್ಞಾನದೊಂದಿಗೆ 4,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ.

ಐಕ್ಯೂ Z7 5G : ಈ ಫೋನ್ (IQOO Z7 5G) 6.38 ಇಂಚಿನ 90Hz ರಿಫ್ರೆಶ್ ರೇಟ್ ಆಯ್ಕೆಯ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 920 5G ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಈ ಫೋನ್‌ನಲ್ಲಿದ್ದು, 64MP OIS ಮುಖ್ಯ ಕ್ಯಾಮೆರಾ
16MP ಸೆಲ್ಫಿ ಕ್ಯಾಮೆರಾ ಮೂಲಕ ಈ ಫೋನ್ ಲಭ್ಯ ಇದೆ. ಹಾಗೆಯೇ 4,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ 44W ಪ್ಲ್ಯಾಶ್ ಚಾರ್ಜ್ ತಂತ್ರಜ್ಞಾನ ಪಡೆದಿದೆ.

ಟೆಕ್ನೋ ಕಾಮನ್ 20 ಪ್ರೊ 5G: ಈ ಸ್ಮಾರ್ಟ್‌ಫೋನ್ (Tecno Camon 20 Pro 5G) 6.67 ಇಂಚಿನ 120Hz ರಿಫ್ರೆಶ್ ರೇಟ್ ಆಯ್ಕೆಯ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್ ಬಲ ಹಾಗೂ 8GB RAM ಮತ್ತು 256GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಹಾಗೆಯೇ 64MP OIS ಮುಖ್ಯ ಕ್ಯಾಮೆರಾ + 2MP ಮ್ಯಾಕ್ರೋ ಲೆನ್ಸ್ + 2MP ಬೊಕೆ ಲೆನ್ಸ್ ನೊಂದಿಗೆ 32MP AI ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.


Click it and Unblock the Notifications








