ರೈತರ ಅಭಿವೃದ್ದಿಗೆ 'ಫಾರ್ಮಿಲಿ' ವೆಬ್‌ಸೈಟ್‌, ಆಫ್‌: ಆನ್‌ಲೈನ್‌ ಮಾರುಕಟ್ಟೆ

By Suneel
|

ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ರೈತರ ಏಳಿಗೆಗೆ ರೈತರ ಕುಟುಂಬದವರೇ ಮುಂದಾಗಬೇಕು ಎಂಬುದಕ್ಕೆ ಸಾಕ್ಷಿಯಾಗಿ ಬೆಂಗಳೂರಿನ ರೈತ ಕುಟುಂಬದ ಕಾರ್ತಿಕ್‌ ನಾಗರಾಜು ಎಂಬುವವರು ಸಾಧನೆ ಒಂದನ್ನು ಮಾಡಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯು ಆದ ಇವರು ತಮ್ಮ ಸ್ನೇಹಿತರ ಸಹಭಾಗಿತ್ವದೊಂದಿಗೆ "ಫಾರ್ಮಿಲಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌" ಫಾರ್ಮಿಲಿ ಎಂಬ ವೆಟ್‌ಸೈಟ್‌ ರೂಪಿಸಿದ್ದಾರೆ. ಅಯ್ಯೋ ಇದೇನ್‌ ಸಾಧನೆ ಅಂತಿರಾ ? ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಮಧ್ಯವರ್ತಿಗಳನ್ನು ಸಹಿಸಿ ಅವರ ಮುಖಾಂತರ ಮಾರಾಟ ಮಾಡಿ ಬರುತ್ತಿದ್ದ ಹಣವನ್ನು ಮಾತ್ರ ಸ್ವೀಕರಿಸುತ್ತಿದ್ದರು. ಆದರೆ ಈಗ ಮಧ್ಯವರ್ತಿಗಳಿಂದ ಬಚಾವಾಗಿ ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇವರು "ಫಾರ್ಮಿಲಿ" ಎಂಬ ವೆಬ್‌ಸೈಟ್‌ ಒಂದನ್ನು ರೂಪಿಸಿದ್ದಾರೆ. ಈಗಾಗಲೇ ಹಲವು ದಿನಗಳಿಂದ ಚಾಲ್ತಿಯಲ್ಲಿದೆ.

ಓದಿರಿ: ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌

ಆನ್‌ಲೈನ್‌ ವ್ಯಾಪಾರ ಅಭಿವೃದ್ದಿಗೊಂಡು ಎಲ್ಲಾ ಪ್ರಾಡಕ್ಟ್‌ಗಳನ್ನು ಇಂದು ಜನರು ಕೇವಲ ಒಂದು ಮೊಬೈಲ್‌ ಆಪ್‌ಗಳ ಮೂಲಕ ಕೊಳ್ಳುತ್ತಿದ್ದಾರೆ. ಅಂದ್ರೆ ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌, ಇ-ಬೇ ನಂತಹ ಆನ್‌ಲೈನ್‌ ಮಾರಾಟ ವೆಬ್‌ಸೈಟ್‌ಗಳ ಆಪ್‌ನಿಂದ ಪ್ರಾಡಕ್ಟ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅಂತೆಯೇ ಈಗ ಫಾರ್ಮಿಲಿ ವೆಬ್‌ಸೈಟ್‌ ಮೂಲಕ ರೈತರು ಬೆಳೆದ ಬೆಳೆಯನ್ನು ರೈತರಿಂದ ಗ್ರಾಹಕರು ನೇರವಾಗಿ ಕೊಳ್ಳಬಹುದಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದಲ್ಲಿ ಓದಿ.

ಕಾರ್ತಿಕ್‌ ನಾಗರಾಜ್‌- ಸಾಫ್ಟ್‌ವೇರ್‌ ಉದ್ಯಮಿ

ಕಾರ್ತಿಕ್‌ ನಾಗರಾಜ್‌- ಸಾಫ್ಟ್‌ವೇರ್‌ ಉದ್ಯಮಿ

ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯಮಿಯೂ ಹಾಗೂ ರೈತ ಕುಟಂಬದವರು ಆದ ಕಾರ್ತಿಕ್‌ ನಾಗರಾಜು ಎಂಬುವವರು ರೈತರ ಏಳಿಗೆಗಾಗಿ , ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಒದಗಿಸಿ ಕೊಡಲೆಂದು ಇತ್ತೀಚೆಗೆ ತಾನೆ www.farmily.com (ಫಾರ್ಮಿಲಿ.ಕಾಂ) ಎಂಬ ವೈಬ್‌ಸೈಟ್‌ ರೂಪಿಸಿದ್ದಾರೆ.

 ಏನಿದು ಫಾರ್ಮಿಲಿ  ?

ಏನಿದು ಫಾರ್ಮಿಲಿ ?

ಆನ್‌ಲೈನ್‌ ಮಾರಾಟ ಹಾಗೂ ಖರೀದಿ ಎಂಬುದು ಇಂದು ಶೀಘ್ರ ಬೆಳವಣಿಗೆ ಹೊಂದಿರುವುದನ್ನು ಗಮನಿಸಿದ 'ಕಾರ್ತಿಕ್‌ ನಾಗರಾಜು' ರವರು ರೈತರು ತಮ್ಮ ಬೆಳೆಗಳನ್ನು ಹೀಗೆ ಮಾರಾಟಮಾಡಿದಲ್ಲಿ ಮಧ್ಯವರ್ತಿಗಳಿಂದ ತಪ್ಪಿಸಿಕೊಂಡು ಹೆಚ್ಚು ಹಣ ಗಳಿಸಬಹುದು ಎಂದು ಚಿಂತಿಸಿ "ಫಾರ್ಮಿಲಿ" ವೆಬ್‌ ಸೈಟ್‌ ರೂಪಿಸಿದ್ದಾರೆ. ಈ ವೆಬ್‌ಸೈಟ್‌ ಮೂಲಕ ರೈತರು ತಮ್ಮ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಬಹುದಾಗಿದೆ.

ಫಾರ್ಮಿಲಿ ಮೊಬೈಲ್‌ ಅಪ್ಲಿಕೇಶನ್‌

ಫಾರ್ಮಿಲಿ ಮೊಬೈಲ್‌ ಅಪ್ಲಿಕೇಶನ್‌

ಫಾರ್ಮಿಲಿ ವೆಬ್‌ಸೈಟ್‌ ಜೊತೆಗೆ ಮಾರಾಟ/ಖರೀದಿಯ ಸಹಯೋಗಕ್ಕಾಗಿ "ಫಾರ್ಮಿಲ" ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸಹ ಅಭಿವೃದ್ದಿಪಡಿಸಲಾಗಿದೆ. ಈ ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು ಮೊಬೈಲ್‌ ಆಪರೇಟ್‌ ಮಾಡುವ ಕನಿಷ್ಠ ತಿಳುವಳಿಕೆ ಯುಳ್ಳವರು ಇದನ್ನು ಇನ್ಸ್ಟಾಲ್‌ ಮಾಡಿ ನಿರ್ವಹಿಸಬಹುದಾದಷ್ಟು ಸರಳ ರೀತಿಯಲ್ಲಿದೆ.

ಫಾರ್ಮಿಲಿ ಮತ್ತು ರೈತರ ನಡುವೆ ಕಾರ್ಯನಿರ್ವಹಣೆ ಹೇಗೆ ?

ಫಾರ್ಮಿಲಿ ಮತ್ತು ರೈತರ ನಡುವೆ ಕಾರ್ಯನಿರ್ವಹಣೆ ಹೇಗೆ ?

"ಫಾರ್ಮಿಲಿ" ವೆಬ್‌ಸೈಟ್‌ನಲ್ಲಿ (ಇಮೇಲ್‌ ಖಾತೆ ತೆರೆದಂತೆ) ಮೊಬೈಲ್‌ ನಂಬರ್‌ ಮತ್ತು ವಯಕ್ತಿಕ ಮಾಹಿತಿಯನ್ನು ನೀಡಿ ರೈತರು ಖಾತೆ ತೆರೆಯಬೇಕು. ನಂತರದಲ್ಲಿ ರೈತರು ತಮ್ಮ ಬೆಳೆ, ಬೆಳೆ ದರ, ಬೆಳೆ ಎಷ್ಟಿದೆ (ಸ್ಟಾಕ್‌) ಎಂಬುದನ್ನು ವೆಬ್‌ಸೈಟ್‌ಗೆ ಫೋಟೋ ಸಹಿತ ಅಪ್‌ಲೋಡ್‌ ಮಾಡಬಹುದು.

ಫಾರ್ಮಿಲಿ ಮತ್ತು ಗ್ರಾಹಕರ ನಡುವೆ ಕಾರ್ಯನಿರ್ವಹಣೆ ಹೇಗೆ ?

ಫಾರ್ಮಿಲಿ ಮತ್ತು ಗ್ರಾಹಕರ ನಡುವೆ ಕಾರ್ಯನಿರ್ವಹಣೆ ಹೇಗೆ ?

ರೈತರಂತೆ ಬೆಳೆ ಖರೀದಿಸುವ ಗ್ರಾಹಕರಿಗೂ ಫಾರ್ಮಿಲಿ ಖಾತೆ ಅಗತ್ಯ. ಗ್ರಾಹಕರು 'ಫಾರ್ಮಿಲಿ'ಯಲ್ಲಿ ತನಗೆ ಬೇಕಾದ ಬೆಳೆ ಹೆಸರನ್ನು ಆಯ್ಕೆ ಮಾಡಿದಾಗ ಆ ಬೆಳೆ ಬೆಳೆದ ರೈತರು ಅಂದರೆ ಫಾರ್ಮಿಲಿ ಸದಸ್ಯ ರೈತರ ಗುರುತುಗಳು ಜಿಪಿಎಸ್ ಮ್ಯಾಪ್‌ನಲ್ಲಿ ತೋರಿಸುತ್ತದೆ.

ಫಾರ್ಮಿಲಿ ಮತ್ತು ಗ್ರಾಹಕರ ನಡುವೆ ಕಾರ್ಯನಿರ್ವಹಣೆ ಹೇಗೆ ?

ಫಾರ್ಮಿಲಿ ಮತ್ತು ಗ್ರಾಹಕರ ನಡುವೆ ಕಾರ್ಯನಿರ್ವಹಣೆ ಹೇಗೆ ?

ಜಿಪಿಎಸ್‌ ಮ್ಯಾಪ್‌ನಲ್ಲಿ ರೈತರ ಬೆಳೆ ಮಾಹಿತಿ ಆಧಾರದಲ್ಲಿ ಬಣ್ಣದ ಗರುತು ನಿಗದಿಯಾಗುತ್ತದೆ. ಅಂದರೆ ವೆಬ್‌ಸೈಟ್‌ನಲ್ಲಿ ನೋಂದಣಿಯಾದ ರೈತನಿಗೆ 'ನೀಲಿ' ಬಣ್ಣದ ಗುರುತು, ಬೆಳೆಯ ವಿವರ ಹಾಕಿದ್ದರೆ 'ಹಸಿರು' ಬಣ್ಣ, ನಿರ್ದಿಷ್ಟ ಬೆಳೆಗೆ ಹೆಚ್ಚು ಬೇಡಿಕೆ ಸಲ್ಲಿಸಿದ್ದರೆ 'ಕೆಂಪು' ಬಣ್ಣ ಇರುತ್ತದೆ. ಗ್ರಾಹಕರು ಬೇಕಾದ ಬಣ್ಣದ ಗರುತಿನ ಮೇಲೆ ಕ್ಲಿಕ್‌ ಮಾಡಬೇಕು. ಆಯ್ಕೆ ಮಾಡಿದ ಬೆಳೆಗೆ ರೈತ ನಿಗದಿಪಡಿಸಿರುವ ಬೆಲೆ ಮತ್ತು ಆತನಲ್ಲಿರುವ ಆ ಬೆಳೆಯ ಸ್ಟಾಕ್‌ ಮಾಹಿತಿ ನೋಡಬಹುದು.

ಬೆಳೆ ಖರೀದಿ ಮತ್ತು ಮಾರಾಟ ಹೇಗೆ ?

ಬೆಳೆ ಖರೀದಿ ಮತ್ತು ಮಾರಾಟ ಹೇಗೆ ?

ಮೇಲಿನ ಅಂಶಗಳಿಂದ ಮುಂದುವರೆದಂತೆ ಸ್ಟಾಕ್‌ ವೀಕ್ಷಿಸಿದ ಗ್ರಾಹಕರು ತನಗೆ ಬೇಕಾದ ಬೆಳೆ ಪ್ರಮಾಣ ಮತ್ತು ಆತ ನೀಡುವ ದರವನ್ನು ನೀಡಿ "Send" ಬಟನ್‌ ಒತ್ತಿದಾಗ ಗ್ರಾಹಕನ ಮೊಬೈಲ್‌ ಸಂಖ್ಯೆ ಸಹಿತ ರೈತನನ ಮೊಬೈಲ್‌ಗೆ ಮಾಹಿತಿ ಸಹಿತ ಮೇಸೇಜ್‌(ಸಂದೇಶ) ಹೊಗುತ್ತದೆ. ನಂತರದಲ್ಲಿ ರೈತ ಗ್ರಾಹಕರಿಗೆ ಕರೆ ಮಾಡಿ ವ್ಯಾಪಾರ ಮಾಡಿಕೊಳ್ಳಬಹುದಾಗಿದೆ.

ಫಾರ್ಮಿಲಿ ಉಪಯೋಗ ಹಾಗೂ ಉದ್ದೇಶ

ಫಾರ್ಮಿಲಿ ಉಪಯೋಗ ಹಾಗೂ ಉದ್ದೇಶ

ರೈತರು ಮತ್ತು ಗ್ರಾಹಕರ ನಡುವೆ ಯಾವುದೇ ಮಧ್ಯವರ್ತಿ ಇಲ್ಲದೇ ನೇರ ಸಂಪರ್ಕ ಕಲ್ಪಿಸುವುದು ವೆಬ್‌ಸೈಟ್‌ನ ಉದ್ದೇಶವಾಗಿದೆ. ಫಾರ್ಮಿಲಿ ರೈತನ ಬೆಳೆ ಹಾನಿಗೊಳಗಾದಾಗ ನಷ್ಟ ತುಂಬಿಸಲು ಸಾಲ ಕೊಡಿಸುವ ಯೋಜನೆ ಹೊಂದಿದ್ದು ಅನೇಕ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ ಫಾರ್ಮಿಲಿ ಬೆಳೆಗೆ ಉತ್ತಮ ಬೆಲೆ ದೊರೆಯದಿದ್ದಲ್ಲಿ ಅದನ್ನು ಸಂಗ್ರಹಿಸಿಡಲು ಸಂಗ್ರಹಾಗಾರ ಪೂರೈಸಯವ ಏಜೆನ್ಸಿಹೊಂದಿಗೂ ಸಹ ಒಪ್ಪಂದ ಮಾಡಿಕೊಂಡಿದೆ. ಆದರೆ ಫಾರ್ಮಿಲಿ ಮೂಲಕ ಈ ಏಜೆನ್ಸಿಯನ್ನು ಸಂಪರ್ಕಿಸಬೇಕಿದೆ.

ಫಾರ್ಮಿಲಿ ವೆಬ್‌ಸೈಟ್‌

ಫಾರ್ಮಿಲಿ ವೆಬ್‌ಸೈಟ್‌

ಫಾರ್ಮಿಲಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆಯಲು ಕ್ಲಿಕ್ ಮಾಡಿ
ಫಾರ್ಮಿಲಿ ಮೊಬೈಲ್ ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ ಗೂಗಲ್‌ ಪ್ಲೇ ಸ್ಟೋರ್‌

ಫಾರ್ಮಿಲಿ ವೆಬ್‌ಸೈಟ್‌

ಫಾರ್ಮಿಲಿ ವೆಬ್‌ಸೈಟ್‌ ಕನ್ನಡ ಭಾಷೆ ಸೇರಿದಂತೆ 13 ಭಾಷೆಗಳಲ್ಲಿ ಪ್ರಸ್ತುತದಲ್ಲಿ ಲಭ್ಯವಿದೆ. ಭಾರತದಲ್ಲಿ ಒಟ್ಟಾರೆ 30 ಸಾವಿರಕ್ಕೂ ಹೆಚ್ಚು ರೈತರು ಖಾತೆ ರಚಿಸಿದ್ದು, ಕರ್ನಾಟಕದಲ್ಲಿ ಸುಮಾರು 8 ಸಾವಿರ ಜನ ಫಾರ್ಮಿಲಿ ಸೇರಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆನ್‌ಲೈನ್ ಶಾಪಿಂಗ್ - ಮೈಯೆಲ್ಲಾ ಕಣ್ಣಾಗಿರಲಿ!</a></strong><br /><strong><a href=ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು
ಸುಭಾಷ್ ಚಂದ್ರ ಬೋಸ್‌ ಸಾವಿನ ಮಾಹಿತಿ ಬಯಲು ಮಾಡಲಿರುವ ವೆಬ್‌ಸೈಟ್‌
ಸಮಸ್ಯೆಗಳಿಗೆ ಮುಂದಾದ ಆನ್‌ಲೈನ್ ಸೈಟ್‌ಗಳು" title="ಆನ್‌ಲೈನ್ ಶಾಪಿಂಗ್ - ಮೈಯೆಲ್ಲಾ ಕಣ್ಣಾಗಿರಲಿ!
ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು
ಸುಭಾಷ್ ಚಂದ್ರ ಬೋಸ್‌ ಸಾವಿನ ಮಾಹಿತಿ ಬಯಲು ಮಾಡಲಿರುವ ವೆಬ್‌ಸೈಟ್‌
ಸಮಸ್ಯೆಗಳಿಗೆ ಮುಂದಾದ ಆನ್‌ಲೈನ್ ಸೈಟ್‌ಗಳು" loading="lazy" width="100" height="56" />ಆನ್‌ಲೈನ್ ಶಾಪಿಂಗ್ - ಮೈಯೆಲ್ಲಾ ಕಣ್ಣಾಗಿರಲಿ!
ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು
ಸುಭಾಷ್ ಚಂದ್ರ ಬೋಸ್‌ ಸಾವಿನ ಮಾಹಿತಿ ಬಯಲು ಮಾಡಲಿರುವ ವೆಬ್‌ಸೈಟ್‌
ಸಮಸ್ಯೆಗಳಿಗೆ ಮುಂದಾದ ಆನ್‌ಲೈನ್ ಸೈಟ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Farmily website and app : Bringing Farmers, Markets Closer. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X