ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌

  By Suneel
  |

  ಟೆಕ್‌ ಎಲ್ಲಾ ಕ್ಷೇತ್ರಕ್ಕೂ ಪ್ರಮುಖವಾಗಿ ಇಂದು ಅತ್ಯಾವಶ್ಯಕವಾಗಿದೆ. ಇಂದು ಕುಳಿತ ಜಾಗಕ್ಕೆ ಬೇಕಾದಂತಹ ಆಹಾರವನ್ನು ಕೇವಲ ಒಂದು ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ನಿಂದ ತರಿಸಬಹುದಾಗಿದೆ. ಜನರು ಇನ್ನೇನಪ್ಪಾ ಬಾಕಿ ಇರೋದು ಎಂದು ಯೋಚಿಸುವಷ್ಟರಲ್ಲೇ ಕೇಂದ್ರ ಸರ್ಕಾರ ಮೊಬೈಲ್‌ ಅಪ್ಲಿಕೇಶನ್‌ ಒಂದನ್ನು ಬಿಡುಗಡೆ ಮಾಡಿದೆ.

  ಓದಿರಿ: ಪ್ರಪಂಚವನ್ನೇ ಬದಲಿಸುವ ಹೈಟೆಕ್‌ ತಂತ್ರಜ್ಞಾನಗಳು: ಅತೀ ಶೀಘ್ರದಲ್ಲಿ

  ಕೇಂದ್ರ ಸರ್ಕಾರ ಲಾಂಚ್‌ ಮಾಡಿರುವ ಅಪ್ಲಿಕೇಶನ್‌ ಅನ್ನು 'CPGRAMS' ಎಂದು ಹೆಸರಿಸಿದ್ದು, ಇದರಲ್ಲಿ ಸರ್ಕಾರಿ ಸಂಬಂಧಿತ ದೂರುಗಳನ್ನು ಈ ಮೊಬೈಲ್‌ ಅಪ್ಲಿಕೇಶನ್‌ನಿಂದ ಸಲ್ಲಿಸಬಹುದಾಗಿದೆ. ಹಾಗಾದರೇ ಇದರ ಕಾರ್ಯಚಟುವಟಿಕೆ ಹೇಗೆ ಎಂಬುದನ್ನು ತಿಳಿಯಬೇಕೆ, ಗಿಜ್‌ಬಾಟ್‌ ನ ಈ ಲೇಖನ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮೊಬೈಲ್‌ನಲ್ಲಿ ದೂರು ಸಲ್ಲಿಕೆ

  ಜನರು ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರಕ್ಕಾಗಿ ಮೊಬೈಲ್‌ನಲ್ಲಿ ದೂರು ಸಲ್ಲಿಸಬಹುದಾಗಿದೆ.

  CPGRAMS

  ಸೆಂಟ್ರಲೈಜ್ಡ್‌ ಪಬ್ಲಿಕ್‌ ಗ್ರೀವ್ಯಾನ್ಸೆಸ್ ರಿಡ್ರೆಸ್ ಅಂಡ್‌ ಮಾನಿಟರಿಂಗ್ ಸಿಸ್ಟಮ್‌ (CPGRAMS) ಪೋರ್ಟಲ್ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸಾರ್ವಜನಿಕ ಸಿಬ್ಬಂದಿ ಕುಂದು ಕೊರತೆ ಹಾಗೂ ಪಿಂಚಣಿ ಸಚಿವ ಜಿತೇಂದ್ರ ಸಿಂಗ್‌ ಲಾಂಚ್‌ ಮಾಡಿದ್ದಾರೆ.

  CPGRAMS

  (CPGRAMS) ಪೋರ್ಟಲ್ ಕೇಂದ್ರ ಸರ್ಕಾರದ ಉದ್ದೇಶಿತ ಮೊಬೈಲ್‌ ಅಪ್ಲಿಕೇಶನ್‌ ಆಗಿದ್ದು, ಇದು ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ದೂರು ಸಲ್ಲಿಸಲು ವೇದಿಕೆಯನ್ನು ಕಲ್ಪಿಸಿದೆ.

  ಪರಿಹಾರ

  ಈ ಅಪ್ಲಿಕೇಶನ್‌ನಲ್ಲಿ ಸ್ವೀಕರಿಸಿದ ದೂರುಗಳಿಗೆ ಸಂಬಂಧಿಸಿದ ಸಚಿವಾಲಯವು ಪರಿಹಾರ ನೀಡುತ್ತದೆ.

  ಜಿತೇಂದ್ರ ಸಿಂಗ್‌

  ಸಾಮಾನ್ಯ ಜನರು ಸಹ ಇಂದು ಸಂವಹನಕ್ಕಾಗಿ ಮೊಬೈಲ್‌ ಬಳಕೆ ಮಾಡುತ್ತಿರುವುದರಿಂದ, ಈ ಮೊಬೈಲ್‌ ಅಪ್ಲಿಕೇಶನ್‌ ಗರಿಷ್ಟ ಮಟ್ಟದಲ್ಲಿ ಸುಲಭವಾಗಿ ಎಲ್ಲರಿಂದ ಉಪಯೋಗಿಸಲ್ಪಡುತ್ತದೆ ಎಂದು ಜಿತೇಂದ್ರ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

  ಪೋರ್ಟಲ್‌ನಲ್ಲಿ ಕ್ವಿಕ್‌ ರೆಸ್ಪಾನ್ಸ್‌

  ಪೋರ್ಟಲ್‌ನಲ್ಲಿ ಕ್ವಿಕ್‌ ರೆಸ್ಪಾನ್ಸ್‌ ಕೋಡ್‌ ಅನ್ನು ನೀಡಲಾಗಿದೆ. ದೂರು ಮೊಬೈಲ್‌ ಮೂಲಕ ನೇರವಾಗಿ CPGRAMS ಗೆ ತಲುಪಿದ ನಂತರ ಇದು ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ಯಾನ್‌ ಆಗುತ್ತದೆ ಎಂದು ಸಿಂಗ್‌ ಹೇಳಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ತಲುಪಲಿದೆ ದೂರು

  ಸ್ಮಾರ್ಟ್‌ಫೋನ್‌ ಮೂಲಕ ಸ್ಕ್ಯಾನ್‌ ಆಗುವುದರಿಂದ ಭಾಷಾಂತರಗೊಂಡು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ತಲುಪಲಿದೆ.

  ದೇವೇಂದ್ರ ಚೌಧರಿ

  ಡಿಪಾರ್ಟ್‌ಮೆಂಟ್‌ ಆಫ್‌ ಅಡ್ಮಿನಿಸ್ಟ್ರೇಟಿವ್‌ ರಿಫಾರ್ಮ್ಸ್‌ ಮತ್ತು ಪಬ್ಲಿಕ್‌ ಗ್ರಿವೀಯನ್ಸ್‌(DARPG) ನಿರ್ಧೇಶಕ ದೇವೇಂದ್ರ ಚೌಧರಿ. 'ಮೊಬೈಲ್‌ ಅಪ್ಲಿಕೇಶನ್‌ ಕೇವಲ ದೂರುಗಳನ್ನು ಮಾತ್ರ ಸ್ವೀಕರಿಸುವುದಲ್ಲದೇ, ದೂರಿನ ಪ್ರಕರಣದ ಚಟುವಟಿಕೆ ಹಂತ ಹೇಗಿದೆ ಎಂಬುದನ್ನು ಜನರು ತಿಳಿಯಬಹುದಾಗಿದೆ' ಎಂದಿದ್ದಾರೆ.

  DARPG

  DARPG ಸಾರ್ವಜನಿಕ ಸೇವೆಯನ್ನು ಚುರುಕುಗೊಳಿಸಿ, ದೂರುಗಳನ್ನು ಅರ್ಥಗರ್ಭಿತವಾಗಿ ನಿಭಾಯಿಸಲು ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

  2007 ರಲ್ಲೇ ಲಾಂಚ್‌

  CPGRAMS ಯು 2007 ರಲ್ಲಿ DARPG ಇಂದ ಲಾಂಚ್‌ ಆಗಿದೆ. 16 ಲಕ್ಷಕ್ಕಿಂತ ಹೆಚ್ಚು ದೂರುಗಳನ್ನು ಇದರಲ್ಲಿ 2012 ರ ಜನವರಿ 1 ರವರೆಗೂ ಸ್ವೀಕರಿಸಲಾಗಿದೆ.

  6.47 ಲಕ್ಷ ದೂರು ವಿಲೇವಾರಿ

  ಕಳೆದ 12 ತಿಂಗಳಲ್ಲಿ 9 ಲಕ್ಷ ದೂರುಗಳನ್ನು ಸ್ವೀಕರಿಸಿದೆ ಮತ್ತು ಇದರಲ್ಲಿ 6.47 ಲಕ್ಷ ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  People can now register their governance-related grievances through mobile phones.The mobile application for Centralised Public Grievances Redress and Monitoring System (CPGRAMS) portal was launched by minister of state for personnel, public grievances and pensions, Jitendra Singh.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more