iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
ಐಫೋನ್ ಸ್ಮಾರ್ಟ್‌ಫೋನ್‌ಗಳು ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನ ಎನಿಸಿಕೊಳ್ಳಲು ಸಾಕಷ್ಟು ಕಾರಣಗಳು ಇವೆ. ಈ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡಲಾಗುತ್ತಿದೆ. ಈ ಬೆಳವಣಿಗೆ ನಡುವೆ ಹಳೆಯ ಆವೃತ್ತಿ ಫೋನ್‌ಗಳು ಅಂದರೆ ಐಫೋನ್ 12 (iPhone 12) ಅನ್ನು ಯಾರೆಲ್ಲಾ ಬಳಕೆ ಮಾಡುತ್ತಿದ್ದಾರೋ ಅವರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಹೌದು, ಆಪಲ್ ತನ್ನ ಇತ್ತೀಚಿನ ಅಪ್‌ಡೇಟ್‌ನೊಂದಿಗೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಈ ಮೂಲಕ ಆಪಲ್ ಬಳಕೆದಾರರು ಹೊಸ ಹೊಸ ಪ್ರಯೋಜನ ಪಡೆಯುವಂತೆ ಆಗಿದೆ. ಅದರಲ್ಲೂ ಈಗ ನೀಡಲಾಗಿರುವ ಸೌಲಭ್ಯಗಕ್ಕೆ ಐಫೋನ್ 12 ಗ್ರಾಹಕರು ವರ್ಷಗಳಿಂದ ಕಾದು ಕುಳಿತಿದ್ದರು. ಹಾಗಿದ್ರೆ ಏನದು ಹೊಸ ಸೌಲಭ್ಯ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 12ನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ: ಐಒಎಸ್ 17.4 ಅಪ್‌ಡೇಟ್‌ನೊಂದಿಗೆ ಐಫೋನ್ 12 ಬಳಕೆದಾರರಿಗೆ ಫಾಸ್ಟ್ ವೈರ್‌ಲೆಸ್ ಚಾರ್ಜಿಂಗ್ (Fast wireless charging) ಅನ್ನು ಸದ್ದಿಲ್ಲದೆ ಪರಿಚಯಿಸಲಾಗಿದೆ. ಈ ಸಂಬಂಧ ಆಪಲ್ ಅಧಿಕೃತವಾಗಿ ಈ ಮಾಹಿತಿ ನೀಡಿಲ್ಲದಿದ್ದರೂ ಇತ್ತೀಚಿನ ಐಒಎಸ್ 17.4 ಅಪ್‌ಡೇಟ್ ಮುಂದಿನ ಪೀಳಿಗೆಯ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವಾದ ಕ್ಯೂಐ2 ಗೆ ಸೈಲೆಂಟ್ ಆಗಿ ಬೆಂಬಲವನ್ನು ಅನ್‌ಲಾಕ್ ಮಾಡಿದೆ.
ಈ ಮೂಲಕ ಇನ್ಮುಂದೆ ಐಫೋನ್ 12 ಈಗ ಹೊಂದಾಣಿಕೆಯ ಕ್ಯೂಐ2 ಚಾರ್ಜರ್‌ಗಳೊಂದಿಗೆ 15W ಚಾರ್ಜಿಂಗ್ ವೇಗವನ್ನು ಪಡೆಯಬಹುದಾಗಿದೆ. ಅಲ್ಲದೆ ಈ ಬಗ್ಗೆ ಮ್ಯಾಕ್ವರ್ಲ್ಡ್ ವರದಿ ಸಹ ಮಾಡಿದ್ದು, ಇತ್ತೀಚಿನ ಐಒಎಸ್ 17.4 ಬಿಡುಗಡೆಯೊಂದಿಗೆ, ಆಪಲ್ ಅಂತಿಮವಾಗಿ ಕ್ಯೂಐ2 ನೊಂದಿಗೆ 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಸಂಯೋಜಿಸಿದೆ.

ಇನ್ನು ಇದನ್ನು ವೈರ್‌ಲೆಸ್ ಪವರ್ ಕನ್ಸೋರ್ಟಿಯಂ ನಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಯೂಐ2 ಪ್ರಸ್ತುತ ಕ್ಯೂಐ ವೈರ್‌ಲೆಸ್ ಚಾರ್ಜಿಂಗ್ ಮಾನದಂಡದ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸುಧಾರಿತ ದಕ್ಷತೆ ಮತ್ತು ಕಾಂತೀಯ ಜೋಡಣೆ ಫೀಚರ್ಸ್ ಅನ್ನು ಹೊಂದಿದ್ದು, ಆಪಲ್‌ನ ಮ್ಯಾಗ್‌ಸೇಫ್ ತಂತ್ರಜ್ಞಾನದಿಂದ ಸ್ಫೂರ್ತಿ ಪಡೆಯುತ್ತದೆ.
ಈ ಹೊಸ ಸೌಲಭ್ಯ ಬಳಕೆದಾರರಿಗೆ ಹೇಗೆ ಪ್ರಯೋಜನ?: ಐಫೋನ್ 12 ಬಳಕೆದಾರರಿಗೆ ಪ್ರಮಾಣಿತ ಕ್ಯೂಐ ಚಾರ್ಜರ್‌ಗಳೊಂದಿಗೆ 7.5W ಚಾರ್ಜಿಂಗ್ ವೇಗಕ್ಕೆ ಮತ್ತು ಆಪಲ್ ಪ್ರಮಾಣೀಕೃತ ಮ್ಯಾಗ್‌ಸೇಫ್ ಚಾರ್ಜರ್‌ಗಳೊಂದಿಗೆ 15W ವರೆಗೆ ಸೀಮಿತಗೊಳಿಸಲಾಗಿತ್ತು. ಆದರೆ ಮ್ಯಾಕ್‌ವರ್ಲ್ಡ್ ನಡೆಸಿದ ಪರೀಕ್ಷೆಯಲ್ಲಿ ಕಂಡುಬಂದ ಮಾಹಿತಿಯಂತೆ ಐಒಎಸ್ 17.4 ಪೂರ್ಣ 15W ವೇಗದಲ್ಲಿ ಮ್ಯಾಗ್‌ಸೇಫ್ ಅಲ್ಲದ ಕ್ಯೂಐ2 ಚಾರ್ಜರ್‌ಗಳೊಂದಿಗೆ ಕಾರ್ಯನಿರ್ವಹಿಸಲು ಐಫೋನ್ 12 ಅನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ನಡುವೆ ಐಒಎಸ್ 17.4 ನಲ್ಲಿನ ಇತರ ಸೌಲಭ್ಯಗಳನ್ನೂ ಸಹ ಬಳಕೆದಾರರು ಪಡೆಯಬಹುದಾಗಿದೆ. ಆಪಲ್ ಸೆಟ್ಟಿಂಗ್‌ಗಳ ಆಪ್‌ನಲ್ಲಿ ಸಮಗ್ರ ಬ್ಯಾಟರಿ ಆರೋಗ್ಯ ವಿಭಾಗವನ್ನು ಪರಿಚಯಿಸಲಾಗಿದೆ. ನಿಮ್ಮ ಫೋನ್‌ನ ಬ್ಯಾಟರಿ ಅವಧಿಯ ಬಗ್ಗೆ ವಿವರವಾದ ಒಳನೋಟಗಳನ್ನು ಇದು ನೀಡಲಿದೆ. ಅಲ್ಲದೆ ಎಮೋಜಿ ಕೀಬೋರ್ಡ್ ಅನ್ನು ಸಹ ವಿಸ್ತರಿಸಲಾಗಿದೆ. ತಾಜಾ ಎಮೋಜಿಗಳಾದ ಮಶ್ರೂಮ್, ಫೀನಿಕ್ಸ್ ಮತ್ತು ಹೌದು ಮತ್ತು ಇಲ್ಲ ಎಂದು ಸೂಚಿಸಲು ಅಲುಗಾಡುವ ಎಮೋಜಿಗಳು ಲಭ್ಯ ಇರಲಿವೆ.

ಇದರೊಂದಿಗೆ ಆಪಲ್ ಪಾಡ್‌ಕಾಸ್ಟ್‌ಗಳನ್ನು ಬಹು ಭಾಷೆಗಳಲ್ಲಿ ಅಂದರೆ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜರ್ಮನ್ ನಲ್ಲಿನ ಪ್ರತಿಗಳ ಸೇರ್ಪಡೆಯೊಂದಿಗೆ ಅಪ್‌ಡೇಟ್ ಮಾಡಲಾಗಿದೆ. ಬಳಕೆದಾರರು ಆಡಿಯೊ ಜೊತೆಗೆ ಈ ಮೂಲಕ ಓದಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್ ಫುಲ್ ಟೆಕ್ಸ್ಟ್ ಓದುವಿಕೆ, ಸರ್ಚ್ ಕಾರ್ಯಗಳು ಮತ್ತು ಟೆಕ್ಸ್ಟ್ ಗಾತ್ರ ಹಾಗೂ ವಾಯ್ಸ್‌ಓವರ್‌ನಂತಹ ವಿಶೇಷ ಆಯ್ಕೆಗಳೊಂದಿಗೆ ಹೊಂದಾಣಿಕೆಯನ್ನು ಪಡೆದಿದೆ.
ಇಷ್ಟೇ ಅಲ್ಲದೆ ಬಳಕೆದಾರರು ಪಾಡ್‌ಕಾಸ್ಟ್‌ಗಳಲ್ಲಿ ಇಷ್ಟ ಆಗುವ ಹಾಡುಗಳನ್ನು ತಮ್ಮ ಆಪಲ್ ಮ್ಯೂಸಿಕ್ ಪ್ಲೇಪಟ್ಟಿಗೆ ಸೇರಿಸಬಹುದು. ವಿವಿಧ ಭಾಷೆಗಳಲ್ಲಿ ಮೆಸೆಜ್‌ಗಳನ್ನು ಪ್ರಕಟಿಸಲು ಸಿರಿಯನ್ನು ಅಪ್‌ಗ್ರೇಡ್ ಮಾಡಲಾಗಿದೆ. ಹಾಗೆಯೇ ವರ್ಧಿತ ಭದ್ರತೆಗಾಗಿ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಅನ್ನು ಸಹ ಬಲಪಡಿಸಲಾಗಿದೆ.


Click it and Unblock the Notifications








