ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಸಿಹಿಸುದ್ದಿ: ಆದ್ರೆ, ತಡ ಮಾಡದೇ ಈ ಕೆಲಸ ಮಾಡಿ!
ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇದೀಗ ಸಿಹಿಸುದ್ದಿ ನೀಡಿದೆ. ಸಂಸ್ಥೆಯು ಫಾಸ್ಟ್‌ಟ್ಯಾಗ್ (FASTag) KYC ಅಪ್‌ಡೇಟ್‌ಗೆ ನೀಡಿದ್ದ, 31 ಜನವರಿ 2024 ಡೆಡ್‌ಲೈನ್ ಅನ್ನು ಈಗ ಫೆಬ್ರವರಿ 29, 2024 ರ ವರೆಗೆ ವಿಸ್ತರಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಗಡುವನ್ನು ವಿಸ್ತರಿಸಿದ್ದು, ಈ ಮೂಲಕ ಬಳಕೆದಾರರಿಗೆ ಕೆವೈಸಿ ಅಪ್‌ಡೇಟ್ ಮಾಡಲು ಮತ್ತಷ್ಟು ಕಾಲಾವಕಾಶ ನೀಡಿದೆ. ಇನ್ನು ಬಳಕೆದಾರರು ಆನ್‌ಲೈನ್ ಮೂಲಕ ಸುಲಭವಾಗಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಬಹುದಾಗಿದೆ.

ಹಾಗಾದರೇ ಆನ್‌ಲೈನ್ ಮೂಲಕ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ ಹಾಗೂ ಅದಕ್ಕೆ ಅಗತ್ಯವಾಗಿ ಬೇಕಾಗುವ ದಾಖಲೆಗಳ ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಏನಿದು ಫಾಸ್ಟ್‌ಟ್ಯಾಗ್?
ಫಾಸ್ಟ್‌ಟ್ಯಾಗ್ ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ಸಂಗ್ರಹಿಸುವ ಎಲೆಕ್ಟ್ರಾನಿಕ್ ವ್ಯವಸ್ಥೆ ಆಗಿದ್ದು, ಅದು ಟೋಲ್ ಪ್ಲಾಜಾಗಳಲ್ಲಿ ಟೋಲ್ ತೆರಿಗೆಗಳನ್ನು ಪಾವತಿಸುವ ಪ್ರಕ್ರಿಯೆ ಅನ್ನು ಅತ್ಯಂತ ಸುಲಭ ಮಾಡುತ್ತದೆ.

ಫಾಸ್ಟ್‌ಟ್ಯಾಗ್ KYC ಅಪ್‌ಡೇಟ್ ಮಾಡಲು ಈ ಹಂತ ಫಾಲೋ ಮಾಡಿರಿ
ಹಂತ 1 : ಬಳಕೆದಾರರೇ ಮೊದಲಿಗೆ ಫಾಸ್ಟ್‌ಟ್ಯಾಗ್ ನ ಅಧಿಕೃತ ವೆಬ್‌ಸೈಟ್ ತೆರೆಯಿರಿ
ಹಂತ 2 : ಆ ನಂತರ ರಿಜಿಸ್ಟರ್ ಮಾಡಿರುವ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. ಆ ನಂಬರ್‌ಗೆ ಬರುವ OTP ನಮೂದಿಸುವ ಮೂಲಕ ಲಾಗ್ ಇನ್ ಮಾಡಿರಿ.
ಹಂತ 3 : ತದ ನಂತರ ವೆಬ್‌ಸೈಟ್‌ನ ಮೇನ್‌ಪೇಜ್‌ನಲ್ಲಿ, ಮೈ ಪ್ರೋಫೈಲ್ ಆಯ್ಕೆಯಲ್ಲಿ, KYC ಟ್ಯಾಬ್ ಅನ್ನು ಕ್ಲಿಕ್ ಮಾಡುವುದು
ಹಂತ 4 : ಬಳಿಕ ಅಲ್ಲಿ ಕೇಳಿರುವ /ಅಗತ್ಯವಿರುವ ಮಾಹಿತಿಗಳನ್ನು ನಮೂದಿಸಿರಿ, ಪರಿಶೀಲಿಸಿ ಮತ್ತು ಸಬ್‌ಮೀಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
ಹಂತ 5 : ಆ ಬಳಿಕ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಪೂರ್ಣ ಆಗಲಿದೆ.

ಫಾಸ್ಟ್‌ಟ್ಯಾಗ್ KYC ಅಪ್‌ಡೇಟ್‌ಗೆ ಈ ದಾಖಲೆಗಳು ಅಗತ್ಯ
* ವಾಹನ ನೋಂದಣಿ ಪ್ರಮಾಣಪತ್ರ (RC ಕಾರ್ಡ್) ದಾಖಲೆ
* ಗುರುತಿನ ಪುರಾವೆಯ (ಐಡೆಟಿಂಟಿ ಪ್ರೂಫ್) ದಾಖಲೆ
* ವಿಳಾಸ ಪುರಾವೆ ದಾಖಲೆ
* ಪಾಸ್‌ಪೋರ್ಟ್ ಸೈಜ್ ಫೋಟೋ ಬೇಕು
ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ
ಫಾಸ್ಟ್‌ಟ್ಯಾಗ್ ಬಳಕೆದಾರರು ಆನ್‌ಲೈನ್ ಮೂಲಕ ಅವರ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿನೆ ಮಾಡಲು ಅವಕಾಶ ಇದೆ. ಇನ್ನು ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಮೊಬೈಲ್ UPI ಆಪ್‌ಗಳ ಮೂಲಕ ಅಲ್ಲದೇ ಅಧಿಕೃತ NHAI ಆಪ್ ಮೂಲಕ ಕೂಡಾ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ತಿಳಿಯಬಹುದಾಗಿದೆ.
- ಗೂಗಲ್ ಪ್ಲೇ ಸ್ಟೋರ್‌ನಲ್ಲಿ 'My FASTag' ಆಪ್ ಸರ್ಚ್ ಮಾಡಿರಿ.
- ಆಪ್ ಅನ್ನು ಡೌನ್‌ಲೋಡ್ ಮಾಡಿ ಹಾಗೂ ಇನ್‌ಸ್ಟಾಲ್ ಸಹ ಮಾಡಿರಿ.
- ಖಾತೆಯನ್ನು ನಿಮಗೆ ಲಾಗ್ ಇನ್ ಮಾಡಿ.
- ಆ ನಂತರ ಲಾಗಿನ್ ಯಶಸ್ವಿಯಾದ ನಂತರ, ನೀವು ಲಭ್ಯವಿರುವ ಬ್ಯಾಲೆನ್ಸ್ ಅನ್ನು ತಿಳಿಯಬಹುದು.
ಪೇಟಿಎಮ್ ಅಪ್ಲಿಕೇಶನ್‌ಲ್ಲಿ ಈ ಕ್ರಮ ಅನುಸರಿಸಿ
* ಪೇಟಿಎಮ್ ಆಪ್ ಓಪೆನ್ ಮಾಡಿ.
* ಬ್ಯಾಲೆನ್ಸ್ ಮತ್ತು ಹಿಸ್ಟರಿ ಸೆಲೆಕ್ಟ್ ಮಾಡಿರಿ.
* ಪೇಟಿಎಂ ಬ್ಯಾಲೆನ್ಸ್ ಪಕ್ಕದ ಕೆಳಗಿರುವ ಎರೋ ಮಾರ್ಕ್ ಮೇಲೆ ಕ್ಲಿಕ್ ಮಾಡಿ.
* ಬಳಿಕ ಲಭ್ಯ ಇರುವ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ನೋಡಬಹುದಾಗಿದೆ.


Click it and Unblock the Notifications








