ವಾಹನ ಮಾಲೀಕರೇ ಗಮನಿಸಿ!..ಫಾಸ್ಟ್‌ಟ್ಯಾಗ್ KYC ಅಪ್‌ಡೇಟ್‌ಗೆ ಇಂದೇ ಕೊನೆಯ ದಿನ!
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕೃತವಾಗಿ ಫಾಸ್ಟ್‌ಟ್ಯಾಗ್ (FASTag) KYC ಮಾಹಿತಿಯನ್ನು 31 ಜನವರಿ 2024 ರೊಳಗೆ ಅಪ್‌ಡೇಟ್ ಮಾಡಬೇಕು ಎಂದು ತಿಳಿಸಿದೆ. ನಿಗದಿತ ದಿನಾಂಕದೊಳಗೆ ಕೆವೈಸಿ ಮಾಹಿತಿ ಅಪ್‌ಡೇಟ್ ಮಾಡದಿದ್ದರೆ, ಫಾಸ್ಟ್‌ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇರುವ ಸಂದರ್ಭಗಳಲ್ಲಿಯೂ ಸಹ, ಬ್ಯಾಂಕ್‌ಗಳು ಎಲ್ಲಾ ಫಾಸ್ಟ್‌ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ ಎಂದು ವರದಿಯಾಗಿದೆ.
ಹೌದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಕೆವೈಸಿಗೆ ಜನವರಿ 31 ರ ಡೆಡ್‌ಲೈನ್ ನಿಗದಿ ಮಾಡಿದೆ. ಹೀಗಾಗಿ ತಮ್ಮ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಹೊಂದಿರುವ ಬಳಕೆದಾರರು ಇಂದು (ಜನೆವರಿ 31) ರ ಒಳಗಾಗಿ KYC ಅಪ್‌ಡೇಟ್ ಮಾಡುವುದು ಅಗತ್ಯ ಆಗಿದೆ.

ಅಂದಹಾಗೆ ಫಾಸ್ಟ್‌ಟ್ಯಾಗ್ ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ಸಂಗ್ರಹಿಸುವ ಎಲೆಕ್ಟ್ರಾನಿಕ್ ವ್ಯವಸ್ಥೆಯಾಗಿದ್ದು ಅದು ಟೋಲ್ ಪ್ಲಾಜಾಗಳಲ್ಲಿ ಟೋಲ್ ತೆರಿಗೆಗಳನ್ನು ಪಾವತಿಸುವ ಪ್ರಕ್ರಿಯೆಯನ್ನು ಅತ್ಯಂತ ಸುಲಭಗೊಳಿಸುತ್ತದೆ. ಹಾಗಾದರೇ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ ಹಾಗೂ ಬೇಕಾಗುವ ದಾಖಲೆಗಳ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಲು ಈ ಕ್ರಮ ಅನುಸರಿಸಿ
ಹಂತ 1 : ಮೊದಲಿಗೆ ಫಾಸ್ಟ್‌ಟ್ಯಾಗ್ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದು
ಹಂತ 2 : ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ನಂಬರ್‌ಗೆ ಬರುವ OTP ಮೂಲಕ ಲಾಗ್ ಇನ್ ಮಾಡುವುದು.
ಹಂತ 3 : ಬಳಿಕ ಮೇನ್‌ಪೇಜ್‌ನಲ್ಲಿ, ಮೈ ಪ್ರೋಫೈಲ್ ಆಯ್ಕೆಯನ್ನು ಗಮನಿಸಿ ಮತ್ತು ಅಲ್ಲಿ KYC ಟ್ಯಾಬ್ ಅನ್ನು ಸೆಲೆಕ್ಟ್ ಮಾಡಿ.
ಹಂತ 4 : ಅಲ್ಲಿ ನೀಡಿರುವ ಜಾಗದಲ್ಲಿ ಅಗತ್ಯವಿರುವ ಮಾಹಿತಿಗಳನ್ನು ಎಂಟ್ರಿ ಮಾಡಿರಿ, ಪರಿಶೀಲಿಸಿ ಮತ್ತು ಸಬ್‌ಮೀಟ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.
ಹಂತ 5 : ನಂತರ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಪೂರ್ಣವಾಗುತ್ತದೆ.

ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್‌ಗೆ ಬೇಕಾಗುವ ದಾಖಲೆಗಳು
- ವಾಹನ ನೋಂದಣಿ ಪ್ರಮಾಣಪತ್ರ (RC ಕಾರ್ಡ್)
- ಗುರುತಿನ ಪುರಾವೆ (ಐಡೆಟಿಂಟಿ ಪ್ರೂಫ್)
- ವಿಳಾಸ ಪುರಾವೆ
- ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ
ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಹಿತಿ
ಬಳಕೆದಾರರು ಆನ್‌ಲೈನ್ ಮೂಲಕ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು. ಬ್ಯಾಂಕ್ ಪೋರ್ಟಲ್‌ಗಳು, ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ UPI ಆಪ್‌ಗಳ ಮೂಲಕ ಹಾಗೂ NHAI ಆಪ್ ಮೂಲಕ ಕೂಡಾ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು.
ಹಂತ 1 : ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಓಪೆನ್ ಮಾಡಿರಿ. ಬಳಿಕ 'My FASTag' ಆಪ್ ಸರ್ಚ್ ಮಾಡಿರಿ.
ಹಂತ 2 : ಆ ಬಳಿಕ ಆಪ್ ಅನ್ನು ಡೌನ್‌ಲೋಡ್ ಮಾಡಿ ಹಾಗೂ ಇನ್‌ಸ್ಟಾಲ್ ಸಹ ಮಾಡಿರಿ.
ಹಂತ 3 : ನಿಮ್ಮ ಖಾತೆಯನ್ನು ನಿಮಗೆ ಲಾಗ್ ಇನ್ ಮಾಡಿ. ಒಂದು ವೇಳೆ ನೀವು ಮೊದಲ ಬಾರಿಗೆ ಆಪ್ ಬಳಸುತ್ತಿದ್ದರೆ, ರಿಜಿಸ್ಟರ್ ಮಾಡಬೇಕಿರುತ್ತದೆ.
ಹಂತ 4 : ಆ ನಂತರ ಲಾಗಿನ್ ಯಶಸ್ವಿಯಾದ ನಂತರ, ನೀವು ಲಭ್ಯವಿರುವ ಬ್ಯಾಲೆನ್ಸ್ ಅನ್ನು ನೋಡಬಹುದಾಗಿದೆ.
ಪೇಟಿಎಮ್‌ನಲ್ಲಿ ಹೀಗೆ ಚೆಕ್ ಮಾಡಬಹುದು
- ಸ್ಮಾರ್ಟ್‌ಫೋನ್‌ನಲ್ಲಿ ಪೇಟಿಎಮ್ ಆಪ್ ತೆರೆಯಿರಿ.
- ಬ್ಯಾಲೆನ್ಸ್ ಮತ್ತು ಹಿಸ್ಟರಿ ಆಯ್ಕೆಗೆ ಹೋಗಿ.
- ಪೇಟಿಎಂ ಬ್ಯಾಲೆನ್ಸ್ ಪಕ್ಕದಲ್ಲಿರುವ ಕೆಳಗಿರುವ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ.
- ಆ ನಂತರ ಲಭ್ಯ ಇರುವ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ನೋಡಬಹುದಾಗಿದೆ.


Click it and Unblock the Notifications








