ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಟೋಲ್‌ ಗೇಟ್‌ನಲ್ಲಿ ಹಣ ಕಟ್ಟದೆ ಪ್ರಯಾಣಿಸಬಹುದು..!

|

ದಿನೇ ದಿನೇ ತಂತ್ರಜ್ಞಾನವು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿದೆ ಮತ್ತು ಸುಧಾರಿಸುತ್ತಿದೆ. ದೇಶದಲ್ಲಿ ರಸ್ತೆ ಸಾರಿಗೆ ವ್ಯವಸ್ಥೆ ಉತ್ತಮವಾಗಿದ್ದು, ದೇಶಾದ್ಯಂತ ಉತ್ತಮ ರಸ್ತೆಗಳು ನಿರ್ಮಾಣಗೊಂಡಿವೆ. ಅಲ್ಲದೇ ಟೋಲ್ ರಸ್ತೆಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಟೋಲ್ ರಸ್ತೆಗಳಲ್ಲಿ ಸಂಚರಿಸುವ ಮೊದಲು ಟೋಲ್ ಪಾವತಿಸುವುದೇ ದೊಡ್ಡ ತಲೆ ನೋವಿನ ಕೆಲಸವಾಗಿದೆ. ಇದಕ್ಕಾಗಿಯೇ ಹೊಸದೊಂದು ತಂತ್ರಜ್ಞಾನ ಜನ್ಮತಾಳಿದೆ.

ಟೋಲ್‌ ಗೇಟ್‌ನಲ್ಲಿ ಹಣ ಕಟ್ಟದೆ ಪ್ರಯಾಣಿಸಬಹುದು..!

ಓದಿರಿ: ನಷ್ಟದ ಹಾದಿಯಲ್ಲಿ ಏರ್‌ಟೆಲ್-ವೊಡಾ: ಜಿಯೋ ಸೆಪ್ಟೆಂಬರ್ ತಿಂಗಳ ಆದಾಯ ಎಷ್ಟು ಗೊತ್ತಾ..?

ಫಾಸ್ಟ್ಯಾಗ್(FASTag), ಟೋಲ್ ರಸ್ತೆಯಲ್ಲಿ ಹಣ ಕಟ್ಟಲು ಟೋಲ್ ಬೂತ್ ವರೆಗೂ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಇದಕ್ಕಾಗಿ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್(ಆರ್‍ಎಫ್‍ಐಡಿ) ತಂತ್ರಜ್ಞಾನವು ಅಭಿವೃದ್ಧಿಯಾಗಿದ್ದು, ಇದು ಫಾಸ್ಟ್ಯಾಗ್ ಮಾದರಿಯಲ್ಲಿದೆ. ಕಾರಿನಲ್ಲಿ ಇಲ್ಲವೇ ನಾಲ್ಕು ಚಕ್ರದ ಮುಂಭಾಗದಲ್ಲಿ ಇದನ್ನು ಅಳವಡಿಸಿಕೊಂಡರೆ ಟೋಲ್ ನಲ್ಲಿ ಈ ಫಾಸ್ಟ್ಯಾಗ್ ಸ್ಕ್ಯಾನ್ ಆಗುವ ಮೂಲಕ ನಿಮ್ಮ ಕಾರಿಗೆ ಟೋಲ್ ಗೇಟ್ ತೆರೆದುಕೊಂಡು ಹಾದಿ ಮಾಡಿಕೊಡಲಿದೆ.

ಟೋಲ್ ಪಾವತಿಗೆ ಹೊಸ ತಂತ್ರ:

ಟೋಲ್ ಪಾವತಿಗೆ ಹೊಸ ತಂತ್ರ:

ವಾಹನದ ಮುಂಭಾಗದ ಗಾಜಿನ ಮೇಲೆ ಅಂಟಿಸುವ ಫಾಸ್ಟ್ಯಾಗ್ ಬಿಲ್ಲೆಗಳ ಮೂಲಕ ಎಲೆಕ್ಟ್ರಾನಿಕ್ ಟೋಲ್‍ಗಳಲ್ಲಿ ಕ್ಷಣ ಮಾತ್ರದಲ್ಲಿ ಟೋಲ್ ಶುಲ್ಕ ಪಾವತಿ ಸಾಧ್ಯವಾಗಿದೆ. ಟ್ಯಾಗ್ ಕೋಡ್ ಗಳನ್ನು ಟೋಲ್ ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಹೇಗೆ ಕಾರ್ಯನಿರ್ವಹಿಸಲಿದೆ..?

ಹೇಗೆ ಕಾರ್ಯನಿರ್ವಹಿಸಲಿದೆ..?

ಟೋಲ್ ಪ್ರವೇಶದಲ್ಲಿ ಅಳವಡಿಸಿರುವ ಆರ್‍ಎಫ್‍ಐಡಿ ಸಿಗ್ನಲ್ ಸ್ಕ್ಯಾನರ್ ವಾಹನದ ಮುಂಭಾಗದ ಗಾಜಿನ ಮೇಲಿನ ಅಂಟಿಸಿರುವ ಫಾಸ್ಟ್ಯಾಗ್ ನ ನಿರ್ದಿಷ್ಟ ಸಂಖ್ಯೆಯನ್ನು ಗ್ರಹಿಸಿಕೊಳ್ಳುತ್ತದೆ. ಇದರಿಂದಾಗಿ ಹಣ ಪಾವತಿಯಾಗಿ ಗೇಟ್ ತಾನಾಗಿ ತೆರೆದುಕೊಳ್ಳುತ್ತದೆ. ಇದರಿಂದಾಗಿ ಟೋಲ್ ಗೇಟ್ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ.

ನೀವೇ ರಿಚಾರ್ಜ್ ಮಾಡಿಕೊಳ್ಳಬಹುದು:

ನೀವೇ ರಿಚಾರ್ಜ್ ಮಾಡಿಕೊಳ್ಳಬಹುದು:

ಹಲವು ಬ್ಯಾಂಕ್ ಹಾಗೂ ಪೇಟಿಎಂನಿಂದಲೂ ಫಾಸ್ಟ್ಯಾಗ್ ಪಡೆದು ಟೋಲ್ ಶುಲ್ಕ ಪಾವತಿಗೆ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಟ್ಯಾಗ್‍ ವಿಶಿಷ್ಟ ಗುರುತು ಸಂಖ್ಯೆಯೊಂದಿಗೆ ಖಾತೆಯ ಮಾಹಿತಿ ಸಂಪರ್ಕಿಸುವುದರಿಂದ ಟೋಲ್‍ಗಳಲ್ಲಿ ತಾನಾಗಿಯೇ ನಿಗದಿತ ಮೊತ್ತ ಕಡಿತಗೊಂಡು ಸಂಚಾರಕ್ಕೆ ಅವಕಾಶ ಸಿಗುತ್ತದೆ. ಈ ಮೂಲಕ ಟೋಲ್ ಶುಲ್ಕ ಪಾವತಿಸಿದರೆ ಶೇ 7.5ರಷ್ಟು ಹಣ ಮರುಪಾವತಿಯನ್ನು ಪಡೆಯಬಹುದಾಗಿದೆ.

ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯ:

ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯ:

ಡಿಸೆಂಬರ್ 1ರಿಂದ ಮಾರಾಟವಾಗುವ ಎಲ್ಲ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸುವುದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಡ್ಡಾಯಗೊಳಿಸಿದೆ. ಇದರಿಂದ ಟೋಲ್ ಗೇಟ್ ಗಳಲ್ಲಿ ವಾಹನಗಳು ಸಾಲುಗಟ್ಟಿ ಕಾಯುವುದನ್ನು ಫಾಸ್ಟ್ಯಾಗ್‍ನಿಂದ ತಪ್ಪಿಸಬಹುದಾಗಿದೆ.

Best Mobiles in India

English summary
FASTag mandatory for all new 4-wheelers from December 1. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X