ಫಾಸ್ಟ್ರಾಕ್ ಲಿಮಿಟ್‌ಲೆಸ್ FS1 ವಾಚ್ ಅನಾವರಣ: ಬೆಲೆ ಎಷ್ಟು?
ವಾಚ್ ವಿಭಾಗದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿರುವ ಕಂಪೆನಿಗಳ ಸಾಲಿನಲ್ಲಿ ಫಾಸ್ಟ್ರಾಕ್ ಕಂಪೆನಿ ಸಹ ಇದೆ. ಈ ಕಂಪೆನಿಯ ಈ ವಾಚ್‌ಗಳು ಕೈಗೆಟಕುವ ದರದಿಂದ ಹಿಡಿದು ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡಲು ಹಲವು ಆಯ್ಕೆಗಳಿಗೆ. ಅದರಂತೆ ಫಾಸ್ಟ್ರಾಕ್ ಈಗ ಹೊಸ ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ.
ಹೌದು, ಫಾಸ್ಟ್ರಾಕ್ ತನ್ನ ಇದೀಗ ಲಿಮಿಟ್‌ಲೆಸ್ FS1 (Fastrack Limitless FS1) ವಾಚ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಲಾಂಚ್ ಮಾಡುವ ಒಂದು ತಿಂಗಳ ಹಿಂದೆ ಫಾಸ್ಟ್ರಾಕ್ ರಿವೋಲ್ಟ್ FS1 ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಲಾಗಿತ್ತು. ಇನ್ನು ಈ ಹೊಸ ಸ್ಮಾರ್ಟ್‌ವಾಚ್ ATS ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ವಿವಿಧ ಅಗತ್ಯ ಆರೋಗ್ಯ ಸಂಬಂಧಿ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.

ಫಾಸ್ಟ್ರಾಕ್ ಲಿಮಿಟ್‌ಲೆಸ್ FS1 ವಿನ್ಯಾಸ: ಫಾಸ್ಟ್ರಾಕ್ ಸ್ಮಾರ್ಟ್‌ನ ಹೊಸ ಸರಣಿಯ ಐದು ಸ್ಮಾರ್ಟ್‌ವಾಚ್‌ಗಳಲ್ಲಿ ಲಿಮಿಟ್‌ಲೆಸ್ FS1 ಮೊದಲ ಸ್ಮಾರ್ಟ್‌ವಾಚ್ ಆಗಿದ್ದು, ಇದು ಇದು 1.95 ಇಂಚಿನ ಹಾರಿಜಾನ್ ಕರ್ವ್ ಡಿಸ್‌ಪ್ಲೇ ಜೊತೆಗೆ 240×296 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು, 500ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ.
ಫಾಸ್ಟ್ರಾಕ್ ಲಿಮಿಟ್‌ಲೆಸ್ FS1 ಪ್ರಮುಖ ಫೀಚರ್ಸ್: ಈವರೆಗೂ ಲಾಂಚ್ ಆಗಿರುವ ಎಲ್ಲಾ ಸ್ಮಾರ್ಟ್‌ವಾಚ್‌ಗಳಿಗಿಂತ ದೊಡ್ಡ ಡಿಸ್‌ಪ್ಲೇ ಗಾತ್ರ ಪಡೆದುಕೊಂಡಿರುವ ಈ ವಾಚ್ ನೆಕ್ಸ್ಟ್ ಜನ್ ATS ಚಿಪ್‌ಸೆಟ್ ಕಾರ್ಯನಿರ್ವಹಿಸಲಿದ್ದು, ಸಿಗ್ನಲ್ ಸಿಂಕ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಪಡೆದುಕೊಂಡಿದೆ. ಇದಕ್ಕಾಗಿ ಈ ವಾಚ್ ಇತ್ತೀಚಿನ ಬ್ಲೂಟೂತ್ ಆವೃತ್ತಿ v5.3 ನಲ್ಲಿ ಕೆಲಸ ಮಾಡಲಿದೆ.

ಹಾಗೆಯೇ ನಿರಂತರ ಒತ್ತಡದ ಟ್ರ್ಯಾಕಿಂಗ್, ಸ್ವಯಂ ನಿದ್ರೆ ಟ್ರ್ಯಾಕಿಂಗ್ ಮತ್ತು 24×7 ಹೃದಯ ಬಡಿತ ಟ್ರ್ಯಾಕಿಂಗ್‌ನಂತಹ ಸುಧಾರಿತ ಆರೋಗ್ಯ ಮೇಲ್ವಿಚಾರಣಾ ಫೀಚರ್ಸ್‌ಗಳನ್ನು ಇದು ಪಡೆದುಕೊಂಡಿದ್ದು, 150 ಕ್ಕೂ ಹೆಚ್ಚಿನ ವಾಚ್ ಫೇಸ್‌ಗಳ ಆಯ್ಕೆ ಹಾಗೂ 100+ ಸ್ಪೋರ್ಟ್ಸ್ ಮೋಡ್ ನೊಂದಿಗೆ ಬಳಕೆದಾರರಿಗೆ ಸಾಕಷ್ಟು ಪ್ರಯೋಜನ ನೀಡಲಿದೆ .
ಇನ್ನುಳಿದಂತೆ ಈ ಸ್ಮಾರ್ಟ್ ವಾಚ್ ನಿಮ್ಮ ನೋಟವನ್ನು ಕಸ್ಟಮೈಸ್ ಮಾಡಲು ಹಾಗೂ ನಿಮ್ಮ ಯಾವುದೇ ಕ್ರಿಯೆಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ವಿಶೇಷ ತಂತ್ರಜ್ಞಾನ ಹೊಂದಿದ್ದು, ರನ್ನಿಂಗ್, ಸ್ಪ್ರಿಂಟಿಂಗ್ ಮತ್ತು ವಾಕಿಂಗ್ ಅನ್ನು ಆಟೋಮ್ಯಾಟಿಕ್ ಆಗಿ ಗುರುತಿಸಿ ಈ ಮೂಲಕ ಅಗತ್ಯ ಮಾಹಿತಿಗಳನ್ನು ಬಳಕೆದಾರರಿಗೆ ನೀಡುತ್ತದೆ.
ಹಾಗೆಯೇ ಇನ್‌ಬಿಲ್ಟ್ ಅಲೆಕ್ಸಾ ಬೆಂಬಲ ಪಡೆದುಕೊಂಡಿರುವ ಈ ಸ್ಮಾರ್ಟ್‌ವಾಚ್ ಫಾಸ್ಟ್ರಾಕ್ ರಿಫ್ಲೆಕ್ಸ್ ವರ್ಲ್ಡ್ ಅಪ್ಲಿಕೇಶನ್‌ಗೂ ಬೆಂಬಲ ನೀಡಲಿದೆ. ಇದರಿಂದ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ಆಪ್ ಮೂಲಕ ಕಂಡುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಈ ವಾಚ್ ಅನ್ನು ಒಂದು ಉತ್ತಮ ಸಂಪೂರ್ಣ ಆರೋಗ್ಯ ಸೂಟ್ ಎಂದೇ ಹೇಳಬಹುದು.

ಇದರ ಬ್ಯಾಟರಿ ಸಾಮರ್ಥ್ಯದ ವಿಚಾರಕ್ಕೆ ಬರುವುದಾದರೆ ಈ ವಾಚ್ 300mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ನೀವು ಬರೋಬ್ಬರಿ 10 ದಿನಗಳವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಸ್ಮಾರ್ಟ್‌ನೋಟಿಪಿಕೇಶನ್ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಹೊಂದುವ ಮೂಲಕ ಈ ವಾಚ್ ಬಹಳ ವಿಶಿಷ್ಟ ಎನಿಸಿಕೊಳ್ಳಲಿದೆ.
ಫಾಸ್ಟ್ರಾಕ್ ಲಿಮಿಟ್‌ಲೆಸ್ FS1 ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ಗೆ 1,995ರೂ. ಗಳ ಆಫರ್ ಬೆಲೆ ನಿಗದಿ ಮಾಡಲಾಗಿದ್ದು, ನೀವು ಇದನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಮೂಲಕ ಏಪ್ರಿಲ್ 11 ರಿಂದ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ವಾಚ್ ಕಪ್ಪು, ನೀಲಿ ಮತ್ತು ಗುಲಾಬಿ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ .


Click it and Unblock the Notifications








