Home
ಸುದ್ದಿಜಾಲ

ಫಾಸ್ಟ್ರಾಕ್‌ನ ಈ ಸ್ಮಾರ್ಟ್‌ವಾಚ್‌ಗೆ 71% ಡಿಸ್ಕೌಂಟ್‌: ಅಗ್ಗದ ಬೆಲೆಗೆ ಉತ್ತಮ ವಾಚ್‌!

ಫಾಸ್ಟ್ರಾಕ್ ಸ್ಮಾರ್ಟ್‌ವಾಚ್‌ಗಳಿಗೆ ಭಾರೀ ಬೇಡಿಕೆ ಇದ್ದು, ಈ ನಡುವೆ ನೆನ್ನೆಯಷ್ಟೇ ಫಾಸ್ಟ್ರಾಕ್‌ ಲಿಮಿಟ್‌ಲೆಸ್‌ FS1 ವಾಚ್‌ ಅನ್ನು ಅನಾವರಣ ಮಾಡಲಾಗಿದೆ. ಈ ಮೂಲಕ ಫಾಸ್ಟ್ರಾಕ್‌ ಪ್ರಿಯರು ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌ ಆಯ್ತು ಎನ್ನುವ ಖುಷಿಯಲ್ಲಿದ್ದರೆ ಈ ಕಡೆ ಮತ್ತೊಂದು ವಾಚ್‌ 71% ರಿಯಾಯಿತಿ ಪಡೆದುಕೊಂಡಿರುವುದು ಗ್ರಾಹಕರಿಗೆ ಇನ್ನಷ್ಟು ಸಂತಸ ತಂದಿದೆ.

ಹೌದು, ಫಾಸ್ಟ್ರಾಕ್ ರಿಫ್ಲೆಕ್ಸ್ ವೋಕ್ಸ್ ಸ್ಮಾರ್ಟ್‌ವಾಚ್ (Fastrack Reflex Vox Smartwatch ) ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದು, ಈ ನಡುವೆ 71% ಡಿಸ್ಕೌಂಟ್‌ನಲ್ಲಿ ಮಾರಾಟ ಆಗುತ್ತಿದೆ. ಈ ವಾಚ್‌ 100 ಕ್ಲೌಡ್ ಆಧಾರಿತ ವಾಚ್‌ ಫೇಸ್‌ಗಳನ್ನು ಹೊಂದಿದ್ದು, ಫೈಂಡ್‌ ಮೈ ಫೋನ್‌ ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ವಿವರ ಹಾಗೂ ಭಾರತದಲ್ಲಿ ಇದರ ಆಫರ್‌ ಬೆಲೆ ಎಷ್ಟೆಂದು ತಿಳಿಯೋಣ ಬನ್ನಿ.

ಫಾಸ್ಟ್ರಾಕ್‌ನ ಈ ಸ್ಮಾರ್ಟ್‌ವಾಚ್‌ಗೆ 71% ಡಿಸ್ಕೌಂಟ್‌:ಅಗ್ಗದ ಬೆಲೆಗೆ ಉತ್ತಮ ವಾಚ್

ಫಾಸ್ಟ್ರಾಕ್ ರಿಫ್ಲೆಕ್ಸ್ ವೋಕ್ಸ್ ಸ್ಮಾರ್ಟ್‌ವಾಚ್ ವಿನ್ಯಾಸ: ಈ ಸ್ಮಾರ್ಟ್‌ವಾಚ್ ಆಯತಾಕಾರದ ಡಯಲ್‌ನಲ್ಲಿ 1.69 ಇಂಚಿನ ಫ್ಲಾಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, HD ರೆಸಲ್ಯೂಶನ್‌ನೊಂದಿಗೆ ಉತ್ತಮ ಎನಿಸಿಕೊಂಡಿದೆ. ಈ ಡಿಸ್‌ಪ್ಲೇ ಅತ್ಯುತ್ತಮ ಗುಣಮಟ್ಟವನ್ನು ಚಿತ್ರಗಳನ್ನು ನೀಡಲಿದ್ದು, ವಿವಿಧ ವಿನ್ಯಾಸಗಳಲ್ಲಿ 100 ಕ್ಲೌಡ್-ಆಧಾರಿತ ವಾಚ್‌ ಫೇಸ್‌ಗಳನ್ನು ಹೊಂದಿದೆ.

ಫಾಸ್ಟ್ರಾಕ್ ರಿಫ್ಲೆಕ್ಸ್ ವೋಕ್ಸ್ ಸ್ಮಾರ್ಟ್‌ವಾಚ್ ಫೀಚರ್ಸ್‌: ಈ ಜನಪ್ರಿಯ ಸ್ಮಾರ್ಟ್‌ವಾಚ್ ಆಧುನಿಕ ಫೀಚರ್ಸ್‌ಗಳಾದ ಮ್ಯೂಸಿಕ್‌ ಪ್ಲೇಬ್ಯಾಕ್ ಕಂಟ್ರೋಲ್, ಒಳಬರುವ ಕರೆಗಳಿಗೆ ಸ್ಮಾರ್ಟ್ ನೋಟಿಫಿಕೇಶನ್‌ ಹಾಗೂ ಮೆಸೆಜ್‌ಗಳು ಮತ್ತು ವಾಟ್ಸಾಪ್‌, ಫೇಸ್‌ಬುಕ್‌ ಮತ್ತು ಇತರ ಸಾಮಾಜಿಕ ಆಪ್‌ಗಳಿಂದ ಬರುವ ನೋಟಿಫಿಕೇಶನ್‌ಗಳನ್ನು ನೀಡಲಿದೆ. ಅದೆಲ್ಲಕ್ಕೂ ಮಿಗಿಲಾಗಿ ಫೈಂಡ್‌ ಐ ಫೋನ್‌ ಸೌಲಭ್ಯ ಹೊಂದಿದ್ದು, ನಿಮ್ಮ ಫೋನ್‌ ಅನ್ನು ಎಲ್ಲಾದರು ಮರೆತು ಇಟ್ಟಿದ್ದರೆ ಸುಲಭವಾಗಿ ಹುಡುಕಬಹುದು.

ಇದರೊಂದಿಗೆ ಸ್ಟಾಪ್‌ವಾಚ್, ಎಚ್ಚರಿಕೆ ಮತ್ತು ಹವಾಮಾನ ನವೀಕರಣಗಳ ಫೀಚರ್ಸ್‌ ಅನ್ನು ಸಹ ನೀಡಲಿದ್ದು, ಇದರಿಂದ ಬಳಕೆದಾರರಿಗೆ ಹಲವಾರು ಪ್ರಯೋಜನ ಸಿಗಲಿದೆ. ಜೊತೆಗೆ ಅಲೆಕ್ಸಾ ಫೀಚರ್ಸ್‌ ಸಹ ಇದ್ದು, ನಿಮ್ಮ ಆಜ್ಞೆಯ ಮೇರೆಗೆ ಶಾಪಿಂಗ್ ಪಟ್ಟಿಗೆ ವಸ್ತುಗಳನ್ನು ಸೇರಿಸಲು ಇದು ಸಹಾಯ ಮಾಡಲಿದೆ.

ಫಾಸ್ಟ್ರಾಕ್‌ನ ಈ ಸ್ಮಾರ್ಟ್‌ವಾಚ್‌ಗೆ 71% ಡಿಸ್ಕೌಂಟ್‌:ಅಗ್ಗದ ಬೆಲೆಗೆ ಉತ್ತಮ ವಾಚ್

ಹಾಗೆಯೇ 24 X7 ಹೃದಯ ಬಡಿತ ಮಾನಿಟರ್, SPO2 (ರಕ್ತ ಆಮ್ಲಜನಕದ ಮಟ್ಟ) ಟ್ರ್ಯಾಕರ್ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿ ಟ್ರ್ಯಾಕರ್ ಫೀಚರ್ಸ್ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರರು ತಮ್ಮ ದೈನಂದಿನ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬಹುದಾಗಿದೆ. ಇದರೊಂದಿಗೆ ನಿಮ್ಮ ಒತ್ತಡದ ಮಟ್ಟವನ್ನು ಮತ್ತು ನಿದ್ರೆಯ ಆರೋಗ್ಯವನ್ನು ಇದು ಪರಿಶೀಲಿಸಿ ನಿಮಗೆ ಮಾಹಿತಿ ನೀಡುತ್ತದೆ.

ಇನ್ನು 10+ಸ್ಪೋರ್ಟ್ಸ್ ಮೋಡ್ ಜೊತೆಗೆ 5 ATM ವಾಟರ್‌ ರೆಸಿಸ್ಟೆಂಟ್‌ ಫೀಚರ್ಸ್‌ ಪಡೆದುಕೊಂಡಿರುವ ಈ ವಾಚ್‌ ನಿಮ್ಮ ಎಲ್ಲಾ ಚಟುವಟಿಕೆ ಸಮಯದಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಲು ಅನುಕೂಲಕರವಾಗಿದೆ ಹಾಗೂ ಬಳಸಲು ಸುಲಭವಾದ UI ನೊಂದಿಗೆ ಫಾಸ್ಟ್ರಾಕ್ ವೋಕ್ಸ್ ಆಪ್‌ಗೆ ಇದು ಬೆಂಬಲ ನೀಡಲಿದೆ.

ಫಾಸ್ಟ್ರಾಕ್‌ನ ಈ ಸ್ಮಾರ್ಟ್‌ವಾಚ್‌ಗೆ 71% ಡಿಸ್ಕೌಂಟ್‌:ಅಗ್ಗದ ಬೆಲೆಗೆ ಉತ್ತಮ ವಾಚ್

ಹಾಗೆಯೇ ಇದರ ಬ್ಯಾಟರಿ ಸಾಮರ್ಥ್ಯದ ವಿಚಾರಕ್ಕೆ ಬರುವುದಾದರೆ ಈ ಫಾಸ್ಟ್ರಾಕ್ ರಿಫ್ಲೆಕ್ಸ್ ವೋಕ್ಸ್ ಸ್ಮಾರ್ಟ್‌ವಾಚ್ ಸಾಮಾನ್ಯ ಬಳಕೆಯ ಸಂದರ್ಭದಲ್ಲಿ ಹತ್ತು ದಿನಗಳವರೆಗೆ ಬ್ಯಾಕಪ್‌ ನೀಡಲಿದೆ. ಹಾಗೂ ವಾಚ್ ಡಾಕ್ ಚಾರ್ಜರ್‌ನೊಂದಿಗೆ ಪ್ಯಾಕ್‌ ಆಗಿದ್ದು, ಪೂರ್ಣವಾಗಿ ಚಾರ್ಜಿಂಗ್‌ ಆಗಲು 2 ಗಂಟೆಗಳ ಸಮಯ ಬೇಕಿದೆ.

ಫಾಸ್ಟ್ರಾಕ್ ರಿಫ್ಲೆಕ್ಸ್ ವೋಕ್ಸ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ವಿಶೇಷ ಸ್ಮಾರ್ಟ್‌ವಾಚ್‌ 6,991ರೂ. ಗಳ ಸಾಮಾನ್ಯ ದರ ಹೊಂದಿದ್ದು, 71% ರಿಯಾಯಿತಿಯೊಂದಿಗೆ 1,994 ರೂ. ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಕಪ್ಪು, ನೀಲಿ, ಗುಲಾಬಿ ಮತ್ತು ಕೆಂಪು ಬಣ್ಣಗಳಲ್ಲಿ ಈ ವಾಚ್‌ ಲಭ್ಯ ಇದೆ. ಇದನ್ನು ನೀವು ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದು.

Best Mobiles in India

English summary
Fastrack Reflex Vox smartwatch is one of the most popular smartwatches in the market and is being sold at a 71% discount on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+