PUBGಗೆ ಬದಲಾಗಿ ಬರಲಿದೆ ಸ್ವದೇಶಿ ನಿರ್ಮಿತ FAUG ಗೇಮ್‌!

|

ಕೇಂದ್ರ ಸರ್ಕಾರ ಇತ್ತೀಚಿಗಷ್ಟೆ ಚೀನಾ ಮೂಲದ 118 ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿದ್ದು, ಆ ಲಿಸ್ಟ್‌ನಲ್ಲಿ ಯುವ ಜನರ ಹಾಟ್‌ ಫೇವರೇಟ್ ಮೊಬೈಲ್ ಗೇಮ್ ಆಗಿದ್ದ ಪಬ್‌ಜಿ ಸಹ ಸೇರಿದೆ. ಪಬ್‌ಜಿ ಬ್ಯಾನ್ ಆದ ಬಳಿಕ ಸಾಮಾಜಿಕ ತಾಣಗಳ ಟ್ರೋಲ್‌ಗಳು ಹರಿದಾಡಿವೆ. ಅದರ ಬೆನ್ನಲೇ ನಟ ಅಕ್ಷಯಕುಮಾರ ಆತ್ಮನಿರ್ಭರ ಅಡಿಯಲ್ಲಿ ಸ್ವದೇಶಿ ನಿರ್ಮಿತ ಫೌಜಿ (FAU-G) ಗೇಮ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಅಕ್ಷಯ್ ಕುಮಾರ್

ಹೌದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯು PUBG ಗೇಮ್‌ಗೆ ಬದಲಾಗಿ ಟಾಂಗ್ ಕೊಡುವಂತಹ FAUG ಅಭಿವೃದ್ಧಿಪಡಿಸಲು ಸಜ್ಜಾಗಿದೆ. FAUG-ಫಿಯರ್ಲೆಸ್ ಮತ್ತು ಯುನೈಟೆಡ್: ಗಾರ್ಡ್ಸ್ ಈ ಗೇಮ್ ನಲ್ಲಿ ಚೀನಾ ಗಡಿ ಭಾಗ ಗಲ್ವಾನ್ ಕಣಿವೆಯ ಗ್ರಾಫಿಕ್ ಡಿಸೈನ್​ಗಳನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಈ ಗೇಮ್ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ.

ಸೈನಿಕ

FAU-G ಎಂದರೇ ಸೈನಿಕ ಎಂದರ್ಥ. ಹಾಗೆಯೇ ಈ ಗೇಮ್ ಸೈನಿಕರ ತ್ಯಾಗ, ಬಲಿದಾನದ ಅರಿವನ್ನು ಸಾರಲಿದೆ. ಈ ಗೇಮ್‌ನಿಂದ ಬರುವ ಒಟ್ಟು ಆದಾಯದಲ್ಲಿ ಶೇ.20 ಪ್ರತಿಶತವನ್ನು ರಾಜ್ಯ ಬೆಂಬಲಿತ ಟ್ರಸ್ಟ್‌ಗೆ ನೀಡಲಾಗುವುದು ಎಂದು ಸಂಸ್ಥೆಯು ಹೇಳಿದೆ. ಈ ವರ್ಷದ ಅಂತ್ಯದ ವೇಳಗೆ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದುವ ಗುರಿಯನ್ನು ಸಂಸ್ಥೆ ಹೊಂದಿದೆ. ಇನ್ನು FAUG ಗೇಮಿಂಗ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಪ್ಲೇ ಸ್ಟೋರ್ ಎರಡರಲ್ಲೂ ಲಭ್ಯವಿರಲಿದೆ.

ಆಫ್‌ಲೈನ್‌ನಲ್ಲಿ ಆಡಬಹುದಾದ ರೋಚಕ ಗೇಮ್ಸ್‌

ಆಫ್‌ಲೈನ್‌ನಲ್ಲಿ ಆಡಬಹುದಾದ ರೋಚಕ ಗೇಮ್ಸ್‌

Sekiro: Shadows Die Twice
ಸೆಕಿರೊ ಶ್ಯಾಡೋಸ್ ಡೈ ಟ್ವೈಸ್‌ ಗೇಮ್ ರೋಚಕ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ. ಈ ಆಟವು ಹೆಚ್ಚು ಚಲನಶೀಲತೆ ಉಳ್ಳದ್ದಾಗಿದ್ದು, ಆಟವು ಪ್ರತಿ ತಿರುವಿನಲ್ಲಿಯೂ ನಿಮ್ಮನ್ನು ಪರೀಕ್ಷಿಸುತ್ತದೆ. ಆದರೆ ಕಳೆದ ಏಳು ಪ್ರಯತ್ನಗಳಲ್ಲಿ ನಿಮ್ಮ ಮೇಲೆ ಪ್ರಾಬಲ್ಯ ಹೊಂದಿರುವ ಒಬ್ಬ ಬಾಸ್‌ನನ್ನು ಅಂತಿಮವಾಗಿ ಕೊಲ್ಲುವ ಅಂತಿಮ ಪ್ರತಿಫಲವು ಇತರ ಆಟಗಳಿಗೆ ಹೊಂದಿಕೆಯಾಗುವುದಿಲ್ಲ.

Death stranding

Death stranding

ಡೆತ್ ಸ್ಟ್ಯಾಂಡಿಂಗ್ ಆಟವು ಆನ್‌ಲೈನ್ ಆಟದ ಕೆಲವು ಅಂಶಗಳೊಂದಿಗೆ ಸಿಂಗಲ್ ಪ್ಲೇಯರ್ ಅನುಭವವಾಗಿದ್ದು, ಆಟಗಾರನು ಆಟದ ಜಗತ್ತಿನಲ್ಲಿ ಇತರ ಜನರ ರಚನೆಗಳನ್ನು ಬಳಸಲು ಮತ್ತು ನೋಡಲು ಸಾಧ್ಯವಾಗುತ್ತದೆ. ಆದಾಗ್ಯೂ, ಆಟಗಾರನು ಆಫ್‌ಲೈನ್‌ನಲ್ಲಿ ಆಡಲು ಆಯ್ಕೆ ಮಾಡಬಹುದು, ಮತ್ತು ಇದು ಆಟವನ್ನು ಸ್ವಲ್ಪ ಕಷ್ಟಕರವಾಗಿಸುತ್ತದೆ.

Halo: The Master Chief Collection

Halo: The Master Chief Collection

ಹ್ಯಾಲೊ ಕಥೆಯ ಸಂಪೂರ್ಣ ಅನುಭವವನ್ನು ಪಿಸಿ ಪ್ಲಾಟ್‌ಫಾರ್ಮ್‌ಗೆ ತರುವುದು, ಹ್ಯಾಲೊ: ಮಾಸ್ಟರ್ ಚೀಫ್ ಕಲೆಕ್ಷನ್ ಸ್ಟೀಮ್‌ನಲ್ಲಿ ಹಣಕ್ಕಾಗಿ ಹೆಚ್ಚು ಮೌಲ್ಯದ ಆಟದ ಸಂಗ್ರಹಗಳಲ್ಲಿ ಒಂದಾಗಿದೆ.

Best Mobiles in India

Read more about:
English summary
An Indian firm is set to launch a battle royale mobile video game in partnership with Bollywood star Akshay Kumar.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X