ಟೀ ಕುಡಿಯುತ್ತ ಕುಳಿತಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಫೀಚರ್ ಫೋನ್ ಸ್ಫೋಟ! ತಪ್ಪಿದ ಅನಾಹುತ
ಕೇರಳ ರಾಜ್ಯ ಇತ್ತೀಚೆಗೆ ಮೊಬೈಲ್ ಸ್ಫೋಟಕ್ಕೆ ಹೆಚ್ಚು ಹೆಸರಾಗುತ್ತಿದೆ. ಯಾಕೆಂದರೆ ಒಂದಾದ ಮೇಲೊಂದರಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಫೀಚರ್ ಫೋನ್‌ಗಳಲ್ಲೂ ಈ ಸಮಸ್ಯೆ ನಿರ್ಮಾಣ ಆಗಿದೆ. ಇದಕ್ಕೆ ನಿದರ್ಶನ ಎಂಬಂತೆ ವ್ಯಕ್ತಿಯೊಬ್ಬರ ಜೇಬಿನಲ್ಲಿ ಇರಿಸಲಾಗಿದ್ದ ಫೋನ್ ದಿಢೀರನೆ ಬೆಂಕಿಗೆ ಆಹುತಿಯಾಗಿದೆ.
ಹೌದು, ವ್ಯಕ್ತಿಯೋರ್ವರು ತಮ್ಮ ಅಂಗಿಯ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಈ ವೇಳೆ ಭಾರೀ ಆತಂಕ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಯಾವ ಜಾಗದಲ್ಲಿ ?, ಫೋನ್ ಸ್ಫೋಟವಾಗಲು ಕಾರಣ ಏನು?, ಫೋನ್‌ನ ಬೆಲೆ ಎಷ್ಟು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಘಟನೆ ನಡೆದಿದ್ದು ಎಲ್ಲಿ?: ಈ ಮೊದಲೆಲ್ಲಾ ಸ್ಮಾರ್ಟ್‌ಫೋನ್‌ಗಳು ಸ್ಫೋಟ ಸಂಭವಿಸುತ್ತಿದ್ದವು. ಆದರೆ, ಈಗ ಫೀಚರ್ ಫೋನ್ ಸಹ ಸ್ಫೋಟ ಆಗಿದ್ದು, ಈ ರೀತಿಯ ಫೋನ್ ಬಳಕೆ ಮಾಡುವವರಿಗೆ ಆತಂಕ ಮನೆ ಮಾಡಿದೆ. ಕೇರಳದ ಮರೋಟ್ಟಿಚಲ್ ನಿವಾಸಿ 76 ವರ್ಷದ ಇಲಿಯಾಸ್ ಎಂಬುವರು ಹೋಟೆಲ್ ಒಂದರಲ್ಲಿ ಚಹಾ ಕುಡಿಯುತ್ತ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಜೇಬಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಮ್ಮ ಅಂಗಿಯ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಅಲ್ಲಿನ ಮನೋರಮಾ ನ್ಯೂಸ್ ವರದಿ ಮಾಡಿದಂತೆ ಮೊಬೈಲ್ ಫೋನ್‌ನ ಬ್ಯಾಟರಿ ಬಿಸಿಯಾಗಿ ಈ ರೀತಿ ಅನಾಹುತ ಸಂಭವಿಸಿದೆ ಎಂದು ಉಲ್ಲೇಖಿಸಿದೆ.
ಈ ಫೋನ್ ಬೆಲೆ 1000 ರೂ.ಗಳು: ಫೀಚರ್ ಫೋನ್‌ಗಳು ಸಾಮಾನ್ಯವಾಗಿ ಅಗ್ಗದ ಬೆಲೆ ಹೊಂದಿರುತ್ತವೆ. ಅದರಂತೆ ಈ ಫೋನ್ 1000ರೂ.ಗಳ ಮೌಲ್ಯದ್ದಾಗಿದ್ದು, ಇದು ಯಾವುದೇ ಸ್ಥಳೀಯ ಬ್ರ್ಯಾಂಡ್‌ನ ಫೋನ್ ಎಂದು ಊಹಿಸಲಾಗಿದೆ. ಯಾಕೆಂದರೆ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಫೋನ್‌ಗಳು ಸರಿಸುಮಾರು 4,000ರೂ.ಗಳಲ್ಲಿ ಲಭ್ಯ ಇರುತ್ತವೆ. ಆದರೆ, ಈ ವ್ಯಕ್ತಿ ಕೇವಲ 1000ರೂ.ಗಳಿಗೆ ಖರೀದಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ

ಈ ಸಂಬಂಧ ಎಲಿಯಾಸ್ ಪ್ರತಿಕ್ರಿಯೆ ನೀಡಿದ್ದು, ಪೋನ್ ಪಟಾಕಿಯಂತೆ ಸ್ಫೋಟಗೊಂಡಿದೆ. ಆದರೆ, ದೇವರ ದಯೆಯಿಂದ ನನ್ನ ಜೀವ ಉಳಿದಿದೆ. ಆ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಸದ್ಯಕ್ಕೆ ನಾನು ಈ ಬಗ್ಗೆ ಯಾವುದೇ ದೂರನ್ನು ದಾಖಲು ಮಾಡಲು ಮುಂದಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿನ ಲಿಥಿಯಂ-ಐಯಾನ್ ಬ್ಯಾಟರಿ ಸಂಭಾವ್ಯ ಸ್ಫೋಟಗಳ ಹಿಂದಿನ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಫೋನ್‌ಗಳನ್ನು ಚಾರ್ಜಿಂಗ್‌ನಲ್ಲಿ ಇರಿಸಿದ್ದಾಗ ಅದನ್ನು ಬಳಕೆ ಮಾಡದಂತೆ ಈಗಾಗಲೇ ಸೂಚಿಸಲಾಗಿದೆ. ಬಳಕೆ ಮಾಡುವ ಅಗತ್ಯ ಇದೆ ಎಂದಾದರೆ ಅದನ್ನು ಚಾರ್ಜಿಂಗ್‌ನಿಂದ ಕಡಿತಗೊಳಿಸಿ ಬಳಕೆ ಮಾಡಬಹುದು. ಈ ರೀತಿ ಮಾಡುವುದರಿಂದ ಫೋನ್‌ಗಳು ಸ್ಫೋಟ ಆಗುವುದನ್ನು ತಪ್ಪಿಸಿದಂತೆ ಆಗುತ್ತದೆ. ಈ ನಡುವೆ ನಾವು ಕೇರಳದಲ್ಲಿ ಇಂತಹುದೇ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದರ ಬಗ್ಗೆ ನೆನಪು ಮಾಡಿಕೊಳ್ಳಬಹುದು.
8 ವರ್ಷದ ಬಾಲಕಿ ಸಾವು: ಕೇರಳದಲ್ಲಿ ಮೊಬೈಲ್ ಸ್ಫೋಟಗೊಂಡಿರುವುದು ಇದೇ ಮೊದಲಲ್ಲ ಎಂದು ನಾವು ಮೊದಲೇ ತಿಳಿಸಿದ್ದೇವೆ. ಯಾಕೆಂದರೆ ತಿರುವಿಲ್ವಾಮಲದ ಆದಿತ್ಯಶ್ರೀ ಎಂಬ ಎಂಟು ವರ್ಷದ ಬಾಲಕಿ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಳು. ಮಾಧ್ಯಮ ವರದಿಗಳ ಪ್ರಕಾರ ಆಕೆ ಬಳಕೆ ಮಾಡುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದ್ದು, ಘಟನೆಯ ನಂತರ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡವು ಫೋರೆನ್ಸಿಕ್ ತಂಡದ ನೆರವಿನೊಂದಿಗೆ ತನಿಖೆ ಆರಂಭಿಸಿತ್ತು.

ಆಗಾಗ್ಗೆ ಮಳೆಯಾಗುತ್ತಿದ್ದರೂ ಸಹ ಅಲ್ಲಲ್ಲಿ ಬಿರುಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಅತಿಯಾದ ಬಿಸಿಲಿನ ತಾಪಕ್ಕೆ ಜನರು ಮಾತ್ರವಲ್ಲದೆ ಸ್ಮಾರ್ಟ್ ಡಿವೈಸ್‌ಗಳು ಕೂಡ ತೊಂದರೆಗೆ ಒಳಗಾಗುತ್ತಿವೆ. ಅಂದರೆ ಹೆಚ್ಚು ಬಿಸಿಲಿಗೆ ಒಗ್ಗಿಕೊಂಡಂತೆ ಬ್ಯಾಟರಿಗಳು ಬಿಸಿಯಾಗಲಿದ್ದು, ಈ ಮೂಲಕ ಸ್ಫೋಟದಂತಹ ಘಟನೆ ಜರುಗಲು ಕಾರಣ ಆಗುತ್ತಿದೆ. ಪರಿಣಾಮ ನೀವು ಆದಷ್ಟು ಜಾಗ್ರತೆಯಿಂದ ನಿಮ್ಮ ಫೋನ್‌ಗಳನ್ನು ಬಳಕೆ ಮಾಡಿ.


Click it and Unblock the Notifications








