Home
ಸುದ್ದಿಜಾಲ

ಕೀಪ್ಯಾಡ್‌ ಫೋನ್‌ಗಳಿಗೆ ಮತ್ತೆ ಹೆಚ್ಚಾಯ್ತಾ ಬೇಡಿಕೆ?; ಸ್ಮಾರ್ಟ್‌ಫೋನ್‌ಗಳ ಗತಿಯೇನು!?

ಸ್ಮಾರ್ಟ್‌ಫೋನ್‌ಗಳು ಎಷ್ಟೇ ಜನಪ್ರಿಯತೆ ಪಡೆದುಕೊಂಡರೂ ಸಹ ಆಗಾಗ್ಗೆ ಹೊಸ ಶೈಲಿಯ ಫೀಚರ್‌ ಅಥವಾ ಕೀಪ್ಯಾಡ್‌ ಫೋನ್‌ಗಳು ಅನಾವರಣ ಆಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಜನರು ಇನ್ನೂ ಸಹ ಈ ಫೀಚರ್‌ ಫೋನ್‌ಗಳನ್ನು ಬಿಟ್ಟುಕೊಟ್ಟಿಲ್ಲ. ಬಹುಪಾಲು ಕಡೆ ಈ ಫೋನ್‌ಗಳು ಜನರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತಿವೆ.

ಹೌದು, ಭಾರತ ಸೇರಿದಂತೆ ಇನ್ನೂ ಅನೇಕ ಕಡೆ ಎಲ್ಲರೂ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಸಾಧ್ಯವಿಲ್ಲ, ಖರೀದಿ ಮಾಡಿದರೂ ಸಹ ಕೆಲವರಿಗೆ ಇದರ ಬಳಕೆ ಬಗ್ಗೆ ತಿಳಿಯುವುದಿಲ್ಲ. ಅದರಲ್ಲೂ Z ತಲೆಮಾರಿನ ಜನರು ಇಂದಿಗೂ ಇದೇ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಹಾಗಿದ್ರೆ, ಈ ಫೀಚರ್‌ ಫೋನ್‌ಗಳು ಮತ್ತೆ ಮಾರುಕಟ್ಟೆಯಲ್ಲಿ ಯಾಕೆ ಜನಪ್ರಿಯತೆ ಪಡೆದುಕೊಳ್ಳುತ್ತಿವೆ?, ಅಂತಹ ಫೀಚರ್ಸ್‌ ಈ ಫೋನ್‌ಗಳಲ್ಲಿ ಏನಿದೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕೀಪ್ಯಾಡ್‌ ಫೋನ್‌ಗಳಿಗೆ ಮತ್ತೆ ಹೆಚ್ಚಾಯ್ತಾ ಬೇಡಿಕೆ?ಸ್ಮಾರ್ಟ್‌ಫೋನ್‌ಗಳ ಗತಿಯೇನು?

ಕೆಲವು ವರ್ಷಗಳಿಂದೀಚೆಗೆ ಫೀಚರ್ ಫೋನ್‌ಗಳು ಎಂದು ಕರೆಯಲ್ಪಡುವ ಈ ಕೀಪ್ಯಾಡ್‌ ಫೋನ್‌ಗಳ ಜನಪ್ರಿಯತೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಬರೋಬ್ಬರಿ ಒಂದು ದಶಕದಿಂದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದರೂ ಸಹ ಹೆಚ್ಚಿನ ಸಂಖ್ಯೆಯ ಜನರು ಅದರಲ್ಲೂ Z ಜನರೇಶನ್‌ನ ಜನರು (1990 ರ ದಶಕದ ಉತ್ತರಾರ್ಧದಲ್ಲಿ ಅಥವಾ 21 ನೇ ಶತಮಾನದ ಆರಂಭದಲ್ಲಿ ಜನಿಸಿದ ಪೀಳಿಗೆ) ಹೆಚ್ಚಾಗಿ ಈ ಫೋನ್ ಬಳಕೆ ಮಾಡುತ್ತಿದ್ದಾರೆ.

ಅದೆಲ್ಲಕ್ಕೂ ಮಿಗಿಲಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟವು ಇಳಿಮುಖವಾಗಿದ್ದು, 2022 ರಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಸುಮಾರು 20% ರಷ್ಟು ಕಡಿಮೆಯಾಗಿದೆ. ಇದು ಸತತ ಮೂರನೇ ವರ್ಷದ ಕುಸಿತವನ್ನು ಕಂಡಿದೆ. ಜೊತೆಗೆ ಬಾಂಗ್ಲಾದೇಶದಲ್ಲಿ 2022 ರಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗಳು 23.5% ಕುಸಿತವನ್ನು ಕಂಡಿವೆ.

ಕೀಪ್ಯಾಡ್‌ ಫೋನ್‌ಗಳಿಗೆ ಮತ್ತೆ ಹೆಚ್ಚಾಯ್ತಾ ಬೇಡಿಕೆ?ಸ್ಮಾರ್ಟ್‌ಫೋನ್‌ಗಳ ಗತಿಯೇನು?

ಸ್ಮಾರ್ಟ್‌ಫೋನ್‌ ಕ್ರೇಜ್‌ ಕಡಿಮೆಯಾಗಲು ಕಾರಣ : ಇದಕ್ಕೆ ಪ್ರಮುಖ ಕಾರಣ ಸ್ಮಾರ್ಟ್‌ಫೋನ್‌ಗಳಿಗೆ ಏರುತ್ತಿರುವ ಬೆಲೆ ಸೇರಿದಂತೆ ಹಲವು ವಿಷಯಗಳು ಪ್ರಾಧಾನ್ಯತೆ ವಹಿಸುತ್ತವೆ. ಹೆಚ್ಚಿನ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಜನರು ಪರ್ಯಾಯ ಮಾರ್ಗವಾಗಿ ಈ ಫೀಚರ್‌ ಫೋನ್‌ಗಳ ಕಡೆ ವಾಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಫೀಚರ್ಸ್‌ ಫೋನ್‌ಗಳ ಫೀಚರ್ಸ್‌ ಏನು?: ಈ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳಿಗಿಂತ ಚಿಕ್ಕದಾಗಿದ್ದು, ಹೆಚ್ಚು ಕೈಗೆಟುಕುವ ಡಿವೈಸ್‌ಗಳಾಗಿವೆ. ಪಠ್ಯ ಸಂದೇಶ ಕಳುಹಿಸುವಿಕೆ, ಕರೆ ಮಾಡುವಿಕೆ ಮತ್ತು ಇಂಟರ್ನೆಟ್ ಸಂಪರ್ಕ ಬಳಕೆ ಮಾಡಿಕೊಂಡು ಕೊಂಚ ಮಟ್ಟಿಗೆ ಆನ್‌ಲೈನ್‌ ಸೇವೆ ಪಡೆದುಕೊಳ್ಳಬಹುದಾಗಿದೆ. ಈಗಂತೂ ಕೆಲವು ಫೋನ್‌ಗಳಲ್ಲಿ ವಾಟ್ಸಾಪ್‌, ಫೇಸ್‌ಬುಕ್‌ ಸಹ ಲಭ್ಯ.

ಇದೆಲ್ಲದಕ್ಕೂ ಇಗಿಲಾಗಿ ಬ್ಯಾಟರಿ ಬ್ಯಾಕಪ್‌. ನೀವು ಈ ಫೋನ್‌ಅನ್ನು ಒಮ್ಮೆ ಪೂರ್ಣವಾಗಿ ಚಾರ್ಜಿಂಗ್ ಮಾಡಿದ್ದೀರಿ ಎಂದಾದರೆ ಒಂದು ವಾರವಾದರೂ ಬಳಕೆ ಮಾಡಬಹುದು. ಅಷ್ಟರಮಟ್ಟಿಗೆ ಇವು ಬ್ಯಾಟರಿ ಬ್ಯಾಕಪ್‌ ನೀಡಲಿವೆ. ಅದರಲ್ಲೂ ವಿದ್ಯುತ್‌ ಸಮಸ್ಯೆ ಎದುರಿಸುವ ಹಳ್ಳಿಗಾಡಿನ ಜನರು ಈ ಫೋನ್‌ಗಳನ್ನು ಖರೀದಿ ಮಾಡಲು ಹೆಚ್ಚು ಹೆಚ್ಚಾಗಿ ಮುಂದಾಗುತ್ತಾರೆ.

ಫೀಚರ್ ಫೋನ್‌ಗಳು ಈಗ ಯಾಕೆ ಏಕೆ ಜನಪ್ರಿಯವಾಗುತ್ತಿವೆ? : ಸಮಾಜ ಇಂದು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಸ್ಮಾರ್ಟ್‌ಫೋನ್ ಚಟದ ಋಣಾತ್ಮಕ ಪರಿಣಾಮಗಳಾದ ಆತಂಕ, ಒತ್ತಡ ಮತ್ತು ಸಾಮಾಜಿಕ ಪ್ರತ್ಯೇಕತೆಯ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ. ಫೀಚರ್ ಫೋನ್‌ಗಳು ಜನರಿಗೆ ನಿರಂತರ ನೋಟಿಫಿಕೇಶನ್‌ ಅನ್ನು ನೀಡುವುದಿಲ್ಲ. ಹಾಗೆಯೇ ಬಳಕೆ ಮಾಡಲು ಪ್ರೇರೇಪಿಸುವುದಿಲ್ಲ.

ಎಲ್ಲೆಲ್ಲಿ ಈ ಫೀಚರ್ಸ್‌ ಫೋನ್‌ಗಳ ಕ್ರೇಜ್‌ ಹೆಚ್ಚಾಗುತ್ತಿದೆ?: ಜಪಾನ್‌ನಿಂದ ಬ್ರೆಜಿಲ್‌ವರೆಗೆ ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಫೀಚರ್ ಫೋನ್‌ಗಳ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಕೆಲವು ಕಂಪನಿಗಳು ಬೇಡಿಕೆಯನ್ನು ಪೂರೈಸಲು ಈ ಡಿವೈಸ್‌ಗಳ ಹೊಸ ಮಾದರಿಗಳನ್ನು ಸಹ ಲಾಂಚ್‌ ಮಾಡುತ್ತಿವೆ. 2020 ರಿಂದ 2021 ರವರೆಗೆ 150% ಮಾರಾಟದೊಂದಿಗೆ, ಅಮೇರಿಕನ್ ಫೀಚರ್ ಫೋನ್ ತಯಾರಕ ಲೈಟ್ ಫೋನ್ ಇತ್ತೀಚೆಗೆ ತನ್ನ ಪ್ರಬಲ ಆರ್ಥಿಕ ವರ್ಷವನ್ನು ವರದಿ ಮಾಡಿದೆ.

ಕೀಪ್ಯಾಡ್‌ ಫೋನ್‌ಗಳಿಗೆ ಮತ್ತೆ ಹೆಚ್ಚಾಯ್ತಾ ಬೇಡಿಕೆ?ಸ್ಮಾರ್ಟ್‌ಫೋನ್‌ಗಳ ಗತಿಯೇನು?

ಸ್ಮಾರ್ಟ್‌ಫೋನ್‌ಗಳಿಗೆ ಹೊಡೆತ ಬೀಳಲಿದೆಯೇ?: ಫೀಚರ್ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಖಂಡಿತಾ ಬರುವುದಿಲ್ಲ. ಯಾಕೆಂದರೆ, ಇಂದು ಜಿಪಿಎಸ್ ನ್ಯಾವಿಗೇಷನ್‌ನಿಂದ ಮೊಬೈಲ್ ಬ್ಯಾಂಕಿಂಗ್‌ವರೆಗೆ ಸ್ಮಾರ್ಟ್‌ಫೋನ್‌ ಅತ್ಯಾವಶ್ಯಕ. ಆದರೆ, ಅನಗತ್ಯ ತೊಂದರೆ ಬೇಡ ಎನ್ನುವವರು ಫೀಚರ್‌ ಫೋನ್‌ಗಳನ್ನ ಖರೀದಿ ಮಾಡಿ ಬಳಕೆ ಮಾಡಬಹುದು.
Best Mobiles in India

English summary
Demand for feature phones is increasing now and users are buying these feature phones more and more. There are also some important reasons for this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+