Home
ಸುದ್ದಿಜಾಲ

FeaturePrint App: ಇನ್ಮುಂದೆ ಯಾವುದೇ ಪ್ರೊಡಕ್ಟ್‌ನ ನಕಲಿ-ಅಸಲಿ ಬಗ್ಗೆ ಫೋನ್‌ ಮೂಲಕವೇ ತಿಳಿಯಬಹುದು!

ಇತ್ತೀಚೆಗೆ ಯಾವುದೇ ಸ್ಮಾರ್ಟ್‌ ಡಿವೈಸ್‌ ಭಾರೀ ಜನಪ್ರಿಯತೆ ಗಳಿಸಿಕೊಂಡಿದೆ ಅಂದ್ರೆ ಕೆಲವೇ ದಿನಗಳಲ್ಲಿ ಅದನ್ನೇ ಹೋಲುವ ನಕಲಿ ಪ್ರೊಡಕ್ಟ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ. ಈ ಮೂಲಕ ಅದು ನಕಲಿ ಎಂದು ತಿಳಿಯುವ ಹೊತ್ತಿಗೆ ಗ್ರಾಹಕರು ಅದನ್ನು ಖರೀದಿ ಮಾಡಿಬಿಟ್ಟಿರುತ್ತಾರೆ. ಇದರಿಂದಾಗಿ ಸಾಕಷ್ಟು ಜನರು ಮೋಸ ಹೋಗುತ್ತಿದ್ದು, ಇನ್ಮುಂದೆ ಈ ರೀತಿಯ ಸಮಸ್ಯೆ ನಿರ್ಮಾಣ ಆಗುವುದಿಲ್ಲ.

ಹೌದು, ಇನ್ಮುಂದೆ ನೀವು ಯಾವುದೇ ಸ್ಮಾರ್ಟ್‌ ಡಿವೈಸ್‌ನ ಅಸಲಿ ಹಾಗೂ ನಕಲಿ ಬಗ್ಗೆ ಮಾಹಿತಿಯನ್ನು ತಕ್ಷಣವೇ ತಿಳಿದುಕೊಳ್ಳಬಹುದು. ಇದಕ್ಕಾಗಿ ಎಐ ಆಧಾರಿತ ಆಪ್‌ ಅನ್ನು ಪರಿಚಯಿಸಲಾಗಿದೆ. ಇದು ಯಾವುದೇ ವಸ್ತು ಸರಿಯಾಗಿದೆಯೇ ಅಥವಾ ಎಲ್ಲಾದರೂ ಡ್ಯಾಮೆಜ್‌ ಆಗಿದೆಯೇ ಎಂದೂ ಸಹ ಮಾಹಿತಿ ನೀಡುತ್ತದೆ. ಹಾಗಿದ್ರೆ, ಏನಿದು ಹೊಸ ಆಪ್‌?, ಇದನ್ನು ಬಳಕೆ ಮಾಡುವುದು ಹೇಗೆ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ಇನ್ಮುಂದೆ ಯಾವುದೇ ಪ್ರೊಡಕ್ಟ್‌ನ ನಕಲಿ-ಅಸಲಿ ಬಗ್ಗೆ ಫೋನ್‌ ಮೂಲಕವೇ ತಿಳಿಯಬಹುದು!

ಒಂದೇ ರೀತಿಯ ವಸ್ತುಗಳು ಹಲವಾರಿದ್ದು, ಅವುಗಳಲ್ಲಿ ಅಸಲಿಯಾವುದು ಎಂದು ಬಹುಪಾಲು ಜನರಿಗೆ ತಿಳಿಯುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ ಹೊಸ ಪ್ರೋಗ್ರಾಂ ಸ್ಮಾರ್ಟ್‌ಫೋನ್ ಮೂಲಕ ಕೆಲಸ ಮಾಡಲಿದ್ದು, ಇದು ಉತ್ಪನ್ನದ ದೃಢೀಕರಣವನ್ನು ನಿರ್ಧರಿಸುತ್ತದೆ. ಇದಕ್ಕೆ ಫೀಚರ್‌ಪ್ರಿಂಟ್ ಎಂದು ಹೆಸರಿಡಲಾಗಿದೆ. ಇದರಿಂದಾಗಿ ವಂಚನೆಗೆ ಒಳಗಾಗುವುದು ತಪ್ಪಿದಂತೆ ಆಗುತ್ತದೆ.

ಫೀಚರ್‌ಪ್ರಿಂಟ್ ಆಪ್‌ ಅನ್ನು (FeaturePrint App) ವಾಷಿಂಗ್ಟನ್-ಆಧಾರಿತ ಅಲಿಥಿಯಾನ್‌ನಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ನಿಮ್ಮ ಸ್ಮಾರ್ಟ್‌ಫೋನ್‌ಮೂಲಕವೇ ಬಳಕೆ ಮಾಡಬಹುದಾಗಿದ್ದು, ಇದು ಅತ್ಯಂತ ಸರಳವಾಗಿ ಉತ್ಪನ್ನವನ್ನು ಗುರುತಿಸುತ್ತದೆ ಮತ್ತು ದೃಢೀಕರಣ ಮಾಡುತ್ತದೆ. ಇದು ಕೇವಲ ಸ್ಮಾರ್ಟ್‌ ಡಿವೈಸ್‌ಗಳನ್ನು ಮಾತ್ರ ದೃಢೀಕರಣ ಮಾಡುವುದಲ್ಲದೆ ಚಿನ್ನದ ಬಾರ್‌ಗಳು ಮತ್ತು ಐಷಾರಾಮಿ ಸರಕುಗಳಂತಹ ದುಬಾರಿ ವಸ್ತುಗಳನ್ನೂ ಇದರಿಂದ ದೃಢೀಕರಣ ಮಾಡಬಹುದು.ಅಂದರೆ ನಕಲಿಯೋ ಅಸಲಿಯೋ ಎಂದು ತಿಳಿದುಕೊಳ್ಳಬಹುದು.

ಈ ಆಪ್‌ಅನ್ನು ಡೌನ್‌‌ಲೋಡ್‌ ಮಾಡಿದ ನಂತರ ಬಳಕೆದಾರರು ಯಾವ ವಸ್ತುವನ್ನು ದೃಢೀಕರಣ ಮಾಡಬೇಕೋ ಆ ವಸ್ತುವಿನ ಮೇಲೆ ಇರಿಸಿ ಆಪ್‌ ವಿಭಾಗದಲ್ಲಿ ಫೋಟೋ ತೆಗೆದುಕೊಂಡರೆ ಸಾಕು. ಆ ಫೋಟೋವನ್ನು ಪರಿಶೀಲನೆ ನಡೆಸುವ ಆಪ್ ಅದರ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಅದು ಕಾನೂನುಬದ್ಧವಾಗಿದೆಯೇ ಎಂದು ತಿಳಿಸುತ್ತದೆ .ಈ ವೇಳೆ ಈ ನಕಲಿ ಅಥವಾ ಅಸಲಿ ಸರಬರಾಜು ಸರಪಳಿಗಳನ್ನು ಟ್ರ್ಯಾಕ್ ಸಹ ಮಾಡಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?: ಇನ್ನು ಈ ಆಪ್‌ ವಸ್ತುವನ್ನು ಗುರುತಿಸಲು ಬಾರ್‌ಕೋಡ್‌ಗಳು, ಹೊಲೊಗ್ರಾಮ್‌ಗಳು, ಮಾರ್ಕರ್‌ಗಳು, RFID ತಂತ್ರಜ್ಞಾನಗಳು, ಸ್ಟಿಕ್ಕರ್‌ಗಳು ಅಥವಾ ಕೆತ್ತಿದ ಗುರುತುಗಳನ್ನು ಬಳಕೆ ಮಾಡುವ ಬದಲಾಗಿ ಸಾಫ್ಟ್‌ವೇರ್ ಆಪ್ಟಿಕಲ್ ಎಐ ಅನ್ನು ಬಳಕೆ ಮಾಡುತ್ತದೆ. ಅದರಲ್ಲೂ ಅಲಿಥಿಯಾನ್‌ ವೆಬ್‌ಸೈಟ್‌ನ ಪ್ರಕಾರ ಯಾವುದೇ ಭೌತಿಕ ವಸ್ತುವಿನ ಸೂಕ್ಷ್ಮ ಮೇಲ್ಮೈ ಫೀಚರ್ಸ್‌ ಅನ್ನು ಪ್ರತ್ಯೇಕಿಸುತ್ತದೆ. ಬಳಿಕ ಆ ಗುಣಲಕ್ಷಣಗಳನ್ನು ಗಣಿತದ ಸಂಖ್ಯೆಗಳ ಗುಂಪಿಗೆ ಅನುವಾದಿಸುತ್ತದೆ.

ಇನ್ನು ಫೀಚರ್‌ಪ್ರಿಂಟ್ ಸಿಸ್ಟಮ್‌ನೊಂದಿಗೆ ನಿರ್ದಿಷ್ಟವಾಗಿ ಸಂಯೋಜಿತವಾಗಿರುವ ವಸ್ತುವನ್ನು ಅಂದರೆ ನೀವು ಸೆರೆಹಿಡಿದ ಫೋಟೋದಲ್ಲಿರುವ ವಸ್ತುವಿನ ಅಸಲಿಯತ್ತನ್ನು ಪತ್ತೆ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆದಾಗ್ಯೂ ಈ ಕೆಲವು ಗುರುತುಗಳು ಭಾರಿ ಮಸುಕಾಗಬಹುದು ಅಥವಾ ಕಾಣದೆ ಇರಬಹುದು ಎಂದು ಅಲಿಥಿಯಾನ್ ಹೇಳಿದೆ. ಅದರಲ್ಲೂ ಈ ವಿಧಾನದ ಮೂಲಕ ಹಾನಿಗೊಳಗಾದ ಅಥವಾ ಮುರಿದ ವಸ್ತುಗಳನ್ನು ಸಹ ಗುರುತಿಸಬಹುದು ಎಂದು ಉಲ್ಲೇಖಿಸಿದೆ.

ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ನಿರ್ಧಿಷ್ಟವಾಗಿ ಇದೇ ರೀತಿಯಲ್ಲಿ ಫೋಟೋವನ್ನು ಸೆರೆಹಿಡಿಯಬೇಕು ಎಂದೇನಿಲ್ಲ. ಬದಲಾಗಿ ನೀವು ಯಾವ ರೀತಿಯಲ್ಲಾದರೂ ವಸ್ತುವನ್ನು ಇರಿಸಿ ಅದರ ನೈಜತೆ ಪತ್ತೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದ್ದು, ಫೀಚರ್‌ಪ್ರಿಂಟ್ ಸಿಸ್ಟಮ್‌ಗೆ ಉತ್ಪನ್ನಗಳನ್ನು ಹೇಗೆ ಸೇರಿಸಲಾಗುತ್ತದೆ ಅಥವಾ ಉತ್ಪನ್ನವು ನಿಜವಾಗಿದೆಯೇ ಎಂದು ಬಳಕೆದಾರರು ಇದನ್ನು ನಂಬಿ ಹೇಗೆ ತಿಳಿದುಕೊಳ್ಳಬಹುದು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ನೀಡಿಲ್ಲ.

ಇನ್ಮುಂದೆ ಯಾವುದೇ ಪ್ರೊಡಕ್ಟ್‌ನ ನಕಲಿ-ಅಸಲಿ ಬಗ್ಗೆ ಫೋನ್‌ ಮೂಲಕವೇ ತಿಳಿಯಬಹುದು!

ಇದು ಯಾರ್ಯಾರಿಗೆ ಲಭ್ಯ? : ಲಿಥಿಯಾನ್‌ನ ಪ್ರಾಕ್ಸಿ ದೃಢೀಕರಣ ವ್ಯವಸ್ಥೆ ಯನ್ನು ಸಾಮಾನ್ಯ ಜನರು ಬಳಕೆ ಮಾಡಲು ಮುಕ್ತಗೊಳಿಸಿಲ್ಲ. ಬದಲಾಗಿ ಇದನ್ನು ಕಾರ್ಪೊರೇಟ್ ಕ್ಲೈಂಟ್‌ಗಳು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಇದರಿಂದಾಗಿ ದೊಡ್ಡ ಮಟ್ಟದ ಸರಕು ಸೇವೆಗಳನ್ನು ಬಳಕೆ ಮಾಡುವ ಅವರಿಗೆ ಭಾರೀ ದೊಡ್ಡ ಮಟ್ಟದಲ್ಲಿಯೇ ಅನುಕೂಲ ಆಗುತ್ತದೆ.

Best Mobiles in India

English summary
Henceforth you can instantly know the information about genuine and fake of any smart device. The FeaturePrint software for this was developed by Washington-based Alitheon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+