Home
ಸುದ್ದಿಜಾಲ

ಹೊಸ ಐಕ್ಯೂ Z7 ಪ್ರೊ ಫೋನ್‌ ಖರೀದಿಗೆ ನಾಲ್ಕು ಕಾರಣ, ಬೇಡ ಎನ್ನಲು ಒಂದು ಕಾರಣ!

ಗ್ರಾಹಕರು ಬಹಳ ಕುತೂಹಲದಿಂದ ಕಾಯುತ್ತಿದ್ದ ಐಕ್ಯೂ ಸ್ಮಾರ್ಟ್‌ಫೋನ್‌ (iQOO smartphone) ಅನ್ನು ಕೊನೆಗೂ ಲಾಂಚ್‌ ಮಾಡಲಾಗಿದೆ. ಅದಾಗ್ಯೂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಅಗಾಗ್ಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಎಂಟ್ರಿ ನೀಡುವುದು ಸಾಮಾನ್ಯ, ಆದರೆ ಗ್ರಾಹಕರು ಮಾತ್ರ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಹೌದು, ನೀವು ಯಾವುದೇ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡರೂ ಸಹ ಅದನ್ನು ಹಲವಾರು ರೀತಿಯಲ್ಲಿ ಪರಿಶೀಲನೆಗೆ ಒಳಪಡಿಸಬೇಕು. ಆಗ ಮಾತ್ರ ನಿಮ್ಮ ಅಗತ್ಯಕ್ಕೆ ತಕ್ಕಂತಹ ಫೋನ್‌ ಅನ್ನು ಖರೀದಿ ಮಾಡಲು ಸಾಧ್ಯ. ಅದರಂತೆ ನೀವು ಹೊಸ ಫೋನ್‌ ಖರೀದಿ ಮಾಡುವವರಿದ್ದರೆ, ಅದರಲ್ಲೂ ನಿನ್ನೆ ಲಾಂಚ್‌ ಆದ ಐಕ್ಯೂ Z7 ಪ್ರೊ (iQOO Z7 Pro) ಫೋನ್‌ ಅನ್ನು ಕೊಂಡುಕೊಳ್ಳಲು ಇಚ್ಚಿಸಿದ್ದರೆ ಇಲ್ಲಿವೆ ನೀಡಿ ಖರೀದಿ ಮಾಡಬಹುದು ಅನ್ನೋದಕ್ಕೆ ನಾಲ್ಕು ಕಾರಣ ಹಾಗೂ ಬೇಡ ಅನ್ನೋದಕ್ಕೆ ಒಂದು ಕಾರಣ.

ಹೊಸ ಐಕ್ಯೂ Z7 ಪ್ರೊ ಫೋನ್‌ ಖರೀದಿಗೆ ನಾಲ್ಕು ಕಾರಣ, ಬೇಡ ಎನ್ನಲು ಒಂದು ಕಾರಣ!

ಹಗುರ,ಆಕರ್ಷಕ ಶೈಲಿ: ಫೋನ್‌ಗಳು ಇತ್ತೀಚಿಗೆ ಸಾಮಾನ್ಯವಾಗಿ ಹರಗುರವಾಗಿಯೇ ಕಾಣಿಸಿಕೊಳ್ಳುತ್ತವೆ. ಅದರಂತೆ ಈ ಫೋನ್‌ ಸಹ ತುಂಬಾ ಹರುವಾಗಿದ್ದು, ವಿಶೇಷವಾದ ಶೈಲಿ ಪಡೆದುಕೊಂಡಿದೆ. ಅಂದರೆ IP52 ರೇಟಿಂಗ್ ಸೌಲಭ್ಯಗಳೊಂದಿಗೆ 2 ಲೆನ್ಸ್‌ ಆಯ್ಕೆ ನೀಡಲಾಗಿದ್ದು, ರಿಂಗ್ ಫ್ಲ್ಯಾಶ್‌ ಸೌಲಭ್ಯ ಫೋನ್‌ನ ಅಂದವನ್ನು ಇನ್ನಷ್ಟು ಹೆಚ್ಚಿಗೆ ಮಾಡಿದೆ. ಇದರೊಂದಿಗೆ ಈ ಫೋನ್ ಐಕ್ಯೂ Z6 ಪ್ರೊ ಗಿಂತ ಗಾತ್ರದಲ್ಲಿ ಕೊಂಚ ದೊಡ್ಡದಿದೆ. ಈ ಮೂಲಕ 25,000ರೂ. ಬೆಲೆಯ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾಣುವ ಸ್ಮಾರ್ಟ್‌ಫೋನ್ ಎನಿಸಿಕೊಳ್ಳಲಿದೆ.

ಇದಿಷ್ಟು ಮಾತ್ರವಲ್ಲದೆ ಐಕ್ಯೂ Z6 ಪ್ರೊ ನ ರಿಯಲ್‌ ಪ್ಯಾನಲ್‌ ಪ್ಲಾಸ್ಟಿಕ್ ಆಗಿತ್ತು, ಜೊತೆಗೆ ಮುಂಭಾಗವು ಚಪ್ಪಟೆಯಾಗಿತ್ತು. ಆದರೆ ಐಕ್ಯೂ Z7 ಪ್ರೊ ಸ್ಕಾಟ್ ಕ್ಸೆನ್ಸೇಶನ್ ಪ್ರೊಟೆಕ್ಟ್‌ನೊಂದಿಗೆ ಡ್ಯುಯಲ್-ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, ಹಿಂಭಾಗವು ಮ್ಯಾಟ್ ಗ್ಲಾಸ್ ಫಿನಿಶ್ ಆಯ್ಕೆ ಮೂಲ ಆಕರ್ಷಕವಾಗಿದೆ. ಈ ಮೂಲಕ ಹಿಂದಿನ ಆವೃತ್ತಿಗಿಂತ ಭಿನ್ನ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ.

ಅಮೋಲೆಡ್ ಡಿಸ್‌ಪ್ಲೇ: ಐಕ್ಯೂ Z7 ಪ್ರೊ ಅದರ ಪೂರ್ವವರ್ತಿಯಾದ ಐಕ್ಯೂ Z6 ಪ್ರೊ ಗಿಂತ ಡಿಸ್‌ಪ್ಲೇ ವಿಭಾಗದಲ್ಲಿ ಹೆಚ್ಚಿನ ನವೀಕರಣ ಪಡೆದುಕೊಂಡಿದೆ. ಈ ಫೋನ್‌ನಲ್ಲಿ 6.78 ಇಂಚಿನ ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಬಳಕೆ ಮಾಡಬಹುದು. ಅಷ್ಟೇ ಅಲ್ಲದೆ ಇದು 1300 ಗರಿಷ್ಠ ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಮಾತ್ರ ಇನ್ನಷ್ಟು ರೋಮಾಂಚನ ನೀಡಲಿದೆ. ಉಳಿದಂತೆ 120Hz ರಿಫ್ರೆಶ್ ರೇಟ್‌, HDR10 ವಿಡಿಯೋ ಪ್ಲೇಬ್ಯಾಕ್‌ಗೆ ಬೆಂಬಲ ಇದ್ದು, ಸಿನಿಮಾ ವೀಕ್ಷಕರಿಗೆ ಹಾಗೂ ಗೇಮರ್‌ಗಳಿಗೆ ಅತ್ಯುತ್ತಮ ಅನುಭವ ಸಿಗಲಿದೆ.

ಉತ್ತಮ ಕಾರ್ಯಕ್ಷಮತೆ: ಈ ಹೊಸ ಸ್ಮಾರ್ಟ್‌ಫೋನ್‌ ಹೊಸ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದೆ. ಜೊತೆಗೆ 8GB LPDDR4X RAM ಮತ್ತು 256GB UFS 2.2 ಇಂಟರ್‌ ಸ್ಟೋರೇಜ್‌ ಆಯ್ಕೆ ಇದ್ದು, ಅತ್ಯುತ್ತಮವಾಗಿ ಫೋನ್‌ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ವಿಷಯ ಏನೆಂದರೆ ನಾರ್ಡ್‌ CE 3 ನಲ್ಲಿ UFS 3.1 ಸ್ಟೋರೇಜ್‌ ಆಯ್ಕೆ ಬಳಕೆ ಮಾಡಲಾಗಿದೆ. ಅದಾಗ್ಯೂ ಐಕ್ಯೂ Z7 ಪ್ರೊ ನಾರ್ಡ್ CE 3 ಗಿಂತ ಒಂದೇ ರೀತಿಯ ಅಥವಾ ಕೆಲವೊಮ್ಮೆ ಉತ್ತಮ ಬೆಂಚ್‌ಮಾರ್ಕ್ ಸ್ಕೋರ್‌ಗಳನ್ನು ಸಹ ನೀಡಲಿದೆ. ಇದರೊಂದಿಗೆ 4,600mAh ಸಾಮರ್ಥ್ಯದ ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ.

ಅತ್ಯುತ್ತಮ ಕ್ಯಾಮೆರಾ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಹೆಚ್ಚಿನ ಕ್ಯಾಮೆರಾ ಸೆನ್ಸರ್‌ಗಳನ್ನು ಪಡೆಯದೇ ಇದ್ದರೂ 64MP ಪ್ರಾಥಮಿಕ ರಿಯರ್‌ ಕ್ಯಾಮೆರಾ ಮತ್ತು ಅದರ 16MP ಸೆಲ್ಫಿ ಕ್ಯಾಮೆರಾ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯುವಾಗ ಖಂಡಿತಾ ನಿಮ್ಮನ್ನು ರೋಮಾಂಚನಗೊಳಿಸುತ್ತವೆ. ಅದರಲ್ಲೂ ಯಾವುದೇ ಬೆಳಕಿನ ಪ್ರಕಾರದಲ್ಲೂ ಸಹ ಈ ಫೋನ್‌ನಲ್ಲಿ ಸ್ಪಷ್ಟ ಚಿತ್ರವನ್ನು ಸೆರೆಹಿಡಿಯಬಹುದು.

ಬೇಡ ಎನ್ನಲು ಕಾರಣ ಏನು? : ಯಾವುದೇ ಫೋನ್‌ ಅನ್ನು ಖರೀದಿ ಮಾಡುವುದು, ಬಿಡುವುದು ಗ್ರಾಹಕರಿಗೆ ಬಿಟ್ಟ ವಿಚಾರವಾದರೂ ಕೆಲವು ಫೋನ್‌ ಅನ್ನು ಯಾಕೆ ಖರೀದಿ ಮಾಡಬೇಕು ಅಥವಾ ಮಾಡಬಾರದು ಎಂದು ತಿಳಿದುಕೊಂಡರೆ ಉತ್ತಮ. ಮೇಲೆ ತಿಳಿಸಿದ ಕಾರಣಗಳು ಈ ಫೋನ್‌ ಖರೀದಿಗೆ ನ್ಯಾಯಸಮ್ಮತವಾಗಿವೆ. ಆದರೆ, ಈ ಕಾರಣ ಮಾತ್ರ ಕೆಲವರನ್ನು ಈ ಫೋನ್‌ ಬಳಿಯಿಂದ ದೂರಕ್ಕೆ ಸರಿಸಬಹುದು.

ಹೊಸ ಐಕ್ಯೂ Z7 ಪ್ರೊ ಫೋನ್‌ ಖರೀದಿಗೆ ನಾಲ್ಕು ಕಾರಣ, ಬೇಡ ಎನ್ನಲು ಒಂದು ಕಾರಣ!

ಅಂದರೆ ಈ ಬೆಲೆಯಲ್ಲಿ ಲಭ್ಯವಾಗುವ ಈ ಫೋನ್‌ಗಳಲ್ಲಿ ಅಷ್ಟೇನು ನಿರೀಕ್ಷೆ ಮಾಡಲು ಸಾಧ್ಯ ಇಲ್ಲದಿದ್ದರೂ ಇದರಲ್ಲಿ ಡ್ಯುಯಲ್ ಸ್ಪೀಕರ್ ಆಯ್ಕೆ ಇಲ್ಲ. ಈ ಮೂಲಕ ಸಿಂಗಲ್-ಬಾಟಮ್ ಫೈರಿಂಗ್ ಸ್ಪೀಕರ್ ಆಯ್ಕೆ ಪಡೆದಿದೆ. ನೀಡಲಾದ ಸಿಂಗಲ್‌ ಸ್ಪೀಕರ್‌ಕೂಡ ಅತ್ಯುತ್ತಮವಾಗಿ ಸೌಂಡ್‌ ಮಾಡುತ್ತದೆ ಎನ್ನಲಾಗಿದೆ. ಇದರೊಂದಿಗೆ ಮತ್ತೊಂದು ವಿಷಯ ಏನೆಂದರೆ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ರಚನೆ ವಿಚಾರ.

Best Mobiles in India

English summary
If you want to buy iQOO Z7 Pro smartphone which was launched yesterday, here are four reasons to buy .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+