ಹೊಸ ಖಾತೆದಾರರಿಗೆ ಭರ್ಜರಿ ಕೊಡುಗೆ ಘೋಷಿಸಿದ ಜಿಯೋ ಪೇಮೆಂಟ್ಸ್ ಬ್ಯಾಂಕ್!
ದೇಶದ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ರಿಲಯನ್ಸ್ ಜಿಯೋ ಈಗಾಗಲೇ ಹಲವು ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸದ್ಯ ಜಿಯೋ ಪೇಮೆಂಟ್ಸ್ ಬ್ಯಾಂಕ್ ನಿಂದ (Jio Payments Bank) ಹಬ್ಬದ ವಿಶೇಷ ಕೊಡುಗೆ ಅನ್ನು ಘೋಷಣೆ ಮಾಡಿದೆ. ಇದೇ ಡಿಸೆಂಬರ್ 25 ರಿಂದ ಮತ್ತು ಡಿಸೆಂಬರ್ 31 ನೇ ತಾರೀಕಿನ ಮಧ್ಯೆ ಹೊಸದಾಗಿ ಉಳಿತಾಯ ಖಾತೆಯನ್ನು ತೆರೆಯುವ ಗ್ರಾಹಕರಿಗೆ 5,000 ರೂ. ಗಳ ಮೌಲ್ಯದ ರಿವಾರ್ಡ್ಸ್ ನೀಡಲಿದೆ.
ಹೌದು, ಜಿಯೋ ಹೊಸದಾಗಿ ಉಳಿತಾಯ ಖಾತೆಯನ್ನು ತೆರೆಯುವ ಗ್ರಾಹಕರಿಗೆ ರಿವಾರ್ಡ್ ತಿಳಿಸಿದೆ. ಈ ರಿವಾರ್ಡ್ಸ್ ನಲ್ಲಿ ಮೆಕ್ ಡೊನಾಲ್ಡ್ಸ್ (McDonald's), ಈಸ್ ಮೈಟ್ರಿಪ್ (EaseMyTrip) ಹಾಗೂ ಮ್ಯಾಕ್ಸ್ ಫ್ಯಾಷನ್ (Max Fashion) ಗಳಂತಹ ಜನಪ್ರಿಯ ಬ್ರ್ಯಾಂಡ್‌ಗಳ ಕೂಪನ್‌ಗಳು ಸಹ ಸೇರಿವೆ. ಜಿಯೋ ಪೇಮೆಂಟ್ಸ್ ಬ್ಯಾಂಕ್ ತನ್ನ ಡಿಜಿಟಲ್ - ಫಸ್ಟ್ ವಿಧಾನಕ್ಕೆ ಖ್ಯಾತಿ ಪಡೆದಿದ್ದು, ಬರೀ ಐದೇ ನಿಮಿಷಗಳಲ್ಲಿ ಗ್ರಾಹಕರಿಗೆ ಹೊಸ ಉಳಿತಾಯ ಖಾತೆಯನ್ನು ತೆರೆಯುತ್ತದೆ.

ಜಿಯೋ ಪೇಮೆಂಟ್ಸ್ ಬ್ಯಾಂಕ್‌ನ (Jio Payments Bank) ಪ್ರಮುಖ ಫೀಚರ್ಸ್‌ಗಳಲ್ಲಿ ಬಯೋಮೆಟ್ರಿಕ್ ಆಧಾರಿತ ದೃಢೀಕರಣ, ವರ್ಚುವಲ್ ಮತ್ತು ಭೌತಿಕ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳು ಹಾಗೂ ತಡೆರಹಿತ ಬ್ಯಾಂಕಿಂಗ್ ಅನುಭವ ಒಳಗೊಂಡಿವೆ. ಈ ಹಬ್ಬದ ಸೀಸನ್‌ನಲ್ಲಿ, ಜಿಯೋ ಪೇಮೆಂಟ್ಸ್ ಬ್ಯಾಂಕ್ (Jio Payments Bank) ತನ್ನ ಅತ್ಯಾಕರ್ಷಕ ರಿವಾರ್ಡ್ಸ್ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು ಹೊಂದಿದೆ.
ಜಿಯೋ ಟೆಲಿಕಾಂನ ಕೆಲವು ಜನಪ್ರಿಯ ಪ್ಲ್ಯಾನ್‌ಗಳು
ಜಿಯೋ 666ರೂ. ಪ್ರೀಪೇಯ್ಡ್ ಯೋಜನೆ - ಜಿಯೋ ಸಂಸ್ಥೆಯ 666ರೂ. ರೀಚಾರ್ಜ್ ಯೋಜನೆ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ, ಅನಿಯಮಿತ ವಾಯಿಸ್ ಕರೆ ಪ್ರಯೋಜನ ಗಳನ್ನು ಪಡೆದಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ. ಇನ್ನು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 112 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇವೆ ಸಹ ಲಭ್ಯ.
ಜಿಯೋ 799ರೂ. ಪ್ರೀಪೇಯ್ಡ್ ಯೋಜನೆ - ಜಿಯೋ ಸಂಸ್ಥೆಯ 799ರೂ. ರೀಚಾರ್ಜ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ, ಅನಿಯಮಿತ ವಾಯಿಸ್ ಕರೆ ಪ್ರಯೋಜನ ಗಳನ್ನು ಪಡೆದಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ. ಇನ್ನು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 112 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇವೆ ಸಹ ಲಭ್ಯ.


Click it and Unblock the Notifications








