Home
ಸುದ್ದಿಜಾಲ

ಹೊಸ 'ಐಫೋನ್‌ 15 ಪ್ರೊ'ನಲ್ಲಿರುವ ಈ ವಿಶೇಷ ಫೀಚರ್ಸ್‌ಗೆ ಗ್ರಾಹಕರು ಫಿದಾ!

ಟೆಕ್ ದೈತ್ಯ ಆಪಲ್ ಸಂಸ್ಥೆಯು ತನ್ನ ಐಫೋನ್‌ 15 ಸರಣಿಯನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ರೂಪಿಸಿದೆ. ಈ ನೂತನ ಐಫೋನ್‌ ಸರಣಿಯು ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಹೊಸ ಐಫೋನ್‌ಗಳು ಕೆಲವು ಅಪ್‌ಗ್ರೇಡ್‌ ಫೀಚರ್ಸ್‌ಗಳಿಂದ ಭರ್ತಿ ಆಗಿವೆ.

ಹೌದು, ಆಪಲ್‌ ಸಂಸ್ಥೆಯ ಐಫೋನ್ 15 ಸರಣಿಯ ಫೋನ್‌ಗಳು ರಚನೆ, ಫೀಚರ್ಸ್‌ ಹಾಗೂ ಕೆಲವೊಂದು ಹೊಸ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿವೆ. ಅದರಲ್ಲಿಯೂ ಮುಖ್ಯವಾಗಿ ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಮಾಡೆಲ್‌ಗಳು ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳ ಜೊತೆಗೆ ಕೆಲವು ಸುರಕ್ಷತಾ ಆಯ್ಕೆಗಳಿಂದ ಗ್ರಾಹಕರು ಹುಬ್ಬೇರಿಸುವಂತೆ ಮಾಡಿವೆ.

ಹೊಸ 'ಐಫೋನ್‌ 15 ಪ್ರೊ'ನಲ್ಲಿರುವ ಈ ವಿಶೇಷ ಫೀಚರ್ಸ್‌ಗೆ ಗ್ರಾಹಕರು ಫಿದಾ!

ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಹೊಸದಾಗಿ ಆಕ್ಷನ್‌ ಬಟನ್‌ ಆಯ್ಕೆಯನ್ನು ಪಡೆದಿವೆ. ಅಲ್ಲದೇ ಸುಧಾರಿತ ವೈರ್‌ಲೆಸ್‌ ತಂತ್ರಜ್ಞಾನ, ನೂತನ ಐಓಎಸ್‌ 17 ಆಯ್ಕೆಗಳನ್ನು ಪಡೆದಿವೆ. ಹಾಗಾದರೆ ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ಇತರೆ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಆಪಲ್‌ A17 ಪ್ರೊ ಚಿಪ್‌ಸೆಟ್‌ :
ಆಪಲ್‌ ಬಿಡುಗಡೆ ಮಾಡಿರುವ ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಫೋನ್‌ಗಳು ಆಪಲ್‌ A17 ಪ್ರೊ ಚಿಪ್‌ಸೆಟ್‌ ಅನ್ನು ಒಳಗೊಂಡಿವೆ. ಇದು ವಿಶ್ವದ ಮೊದಲ ಸಾಮೂಹಿಕ-ಉತ್ಪಾದಿತ 3nm ಪ್ರೊಸೆಸರ್ ಆಗಿದ್ದು, ಅಧಿಕ ಕಾರ್ಯಕ್ಷಮತೆ ಮತ್ತು ದಕ್ಷತೆಯ ನಿರೀಕ್ಷಿಸಬಹುದು.

ಟೈಟಾನಿಯಂ ಫ್ರೇಮ್‌ ರಚನೆ :
ಆಪಲ್‌ ಬಿಡುಗಡೆ ಮಾಡಿರುವ ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಮಾಡೆಲ್‌ಗಳು ಟೈಟಾನಿಯಂ ಫ್ರೇಮ್‌ ರಚನೆ ಪಡೆದಿವೆ. ಆಪಲ್ ತನ್ನ ಐಫೋನ್‌ನಲ್ಲಿ ಟೈಟಾನಿಯಂ ಮಿಶ್ರಲೋಹವನ್ನು ಬಳಸುತ್ತಿರುವುದು ಇದೇ ಮೊದಲು. ಅಂದಹಾಗೆ ಮಿಶ್ರಲೋಹವನ್ನು ಬಾಹ್ಯಾಕಾಶ ನೌಕೆಯಲ್ಲಿ ಬಳಸಲಾಗುತ್ತದೆ. ಈ ಫೋನ್‌ಗಳು ಗಟ್ಟಿಮುಟ್ಟಾದವು, ಹಿಂಭಾಗದಲ್ಲಿ ಗಟ್ಟಿಯಾದ ಗಾಜು, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಮತ್ತು ಟೈಟಾನಿಯಂ ಚಾಸಿಸ್‌ ಕಾಣಬಹುದು.

ಆಕ್ಷನ್‌ ಬಟನ್‌ ಫೀಚರ್‌ :
ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಗಳು ನೂತನ ಆಕ್ಷನ್ ಬಟನ್‌ ಆಯ್ಕೆಯನ್ನು ಪಡೆದಿವೆ. ಕ್ಯಾಮೆರಾವನ್ನು ತೆರೆಯಲು, ಫ್ಲ್ಯಾಶ್‌ಲೈಟ್ ಅನ್ನು ಟಾಗಲ್ ಮಾಡಲು, ವಾಯಿಸ್‌ ಮೆಮೊಗಳನ್ನು ಆಕ್ಟಿವ್ ಮಾಡಲು, ಫೋಕಸ್ ಮೋಡ್‌ಗಳನ್ನು ಟಾಗಲ್ ಮಾಡಲು ಹೀಗೆ ಇತರೆ ಕೆಲಸಗಳಿಗೆ ಬಳಕೆದಾರರು ಆಕ್ಷನ್ ಬಟನ್ ಅನ್ನು ಕಾನ್ಫಿಗರ್ ಮಾಡಬಹುದು.

ಯುಎಸ್‌ಬಿ - ಸಿ ಟೈಪ್‌ :
ಆಪಲ್‌ ಬಿಡುಗಡೆ ಮಾಡಿರುವ ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ USB-C ಪೋರ್ಟ್ ಪಡೆದಿದೆ. ಇದು ಈ ನೂತನ ಐಫೋನ್‌ ಸರಣಿಯಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದೆ.

ಸುಧಾರಿತ ವೈರ್‌ಲೆಸ್‌ ಕನೆಕ್ಟಿವಿಟಿ :
ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಗಳಲ್ಲಿ ಸುಧಾರಿತ ವೈರ್‌ಲೆಸ್‌ ಕನೆಕ್ಟಿವಿಟಿ ಸೇರಿವೆ. ಇವು ವರ್ಧಿತ ಸ್ಥಳ ಟ್ರ್ಯಾಕಿಂಗ್‌ಗಾಗಿ ಇತ್ತೀಚಿನ U2 ಅಲ್ಟ್ರಾ ವೈಡ್‌ಬ್ಯಾಂಡ್ ಚಿಪ್‌ಸೆಟ್‌ ಪಡೆದಿವೆ. ಅಲ್ಲದೇ ಇತ್ತೀಚಿನ Wi-Fi 6E ವೈರ್‌ಲೆಸ್ ಸ್ಟ್ಯಾಂಡರ್ಡ್‌ನೊಂದಿಗೆ 2x ವೇಗದ ವೇಗವನ್ನು ಪಡೆದಿವೆ. ಇತರ ವೈರ್‌ಲೆಸ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ Qi2 ವೈರ್‌ಲೆಸ್ ಚಾರ್ಜಿಂಗ್, 295 ಕ್ಕೂ ಹೆಚ್ಚು ಕ್ಯಾರಿಯರ್‌ಗಳಿಂದ eSIM ಬೆಂಬಲ ಇದೆ.

Best Mobiles in India

English summary
Apple recently launched iPhone 15 Pro and iPhone 15 Pro Max. these iphones comes with few new features. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+