Home
ಸುದ್ದಿಜಾಲ

ಅಧಿಕ ಸೌಲಭ್ಯ ಬಯಸುವ ಗ್ರಾಹಕರಿಗೆ ಏರ್‌ಟೆಲ್‌ನ ಈ ಪ್ಲ್ಯಾನ್‌ಗಳು ಖಂಡಿತಾ ಇಷ್ಟ!

ದೇಶದ ಟೆಲಿಕಾಂ ವಿಭಾಗದಲ್ಲಿ ದ್ವಿತೀಯ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿರುವ ಏರ್‌ಟೆಲ್‌ ತನ್ನ ಚಂದಾದಾರರಿಗೆ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳ ಪೈಕಿ ಕೆಲವು ರೀಚಾರ್ಜ್‌ ಯೋಜನೆಗಳು ಆಕರ್ಷಕ ಡೇಟಾ ಪ್ರಯೋಜನ ಪಡೆದಿದ್ದು, ಇನ್ನು ಕೆಲವು ರೀಚಾರ್ಜ್‌ ಯೋಜನೆಗಳು ದೀರ್ಘ ಅವಧಿಯ ವ್ಯಾಲಿಡಿಟಿಯ ಸೌಲಭ್ಯ ಹೊಂದಿವೆ. ಹಾಗೆಯೇ ಮತ್ತಷ್ಟು ರೀಚಾರ್ಜ್‌ ಯೋಜನೆಗಳು ಅಧಿಕ ಡೇಟಾ ಹಾಗೂ ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿವೆ.

ಹೌದು, ಏರ್‌ಟೆಲ್ (Airtel) ಟೆಲಿಕಾಂ ಅಧಿಕ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳನ್ನು ಹೊಂದಿದೆ. ಅದಾಗ್ಯೂ, ನಿತ್ಯ ಡೇಟಾ ಪ್ರಯೋಜನದ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿರುವ ರೀಚಾರ್ಜ್‌ ಪ್ಲ್ಯಾನ್‌ಗಳು ಚಂದಾದಾರರ ಗಮನ ಸೆಳೆದಿವೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಉಚಿತ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿವೆ. ಹಾಗಾದರೇ ಅಧಿಕ ವ್ಯಾಲಿಡಿಟಿ ಸೌಲಭ್ಯದ ಕೆಲವು ಅತ್ಯುತ್ತಮ ಏರ್‌ಟೆಲ್‌ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅಧಿಕ ಸೌಲಭ್ಯ ಬಯಸುವ ಗ್ರಾಹಕರಿಗೆ ಏರ್‌ಟೆಲ್‌ನ ಈ ಪ್ಲ್ಯಾನ್‌ಗಳು ಖಂಡಿತಾ ಇಷ್ಟ!

ಏರ್‌ಟೆಲ್‌ 929ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಮಾಹಿತಿ

ಏರ್‌ಟೆಲ್‌ ಟೆಲಿಕಾಂನ ಈ 929 ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಪ್ರತಿದಿನ 1.5 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ, ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಗಳನ್ನು ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆ ಸೌಲಭ್ಯ, Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ಲೇ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

ಏರ್‌ಟೆಲ್‌ 799ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಮಾಹಿತಿ

ಏರ್‌ಟೆಲ್‌ ಟೆಲಿಕಾಂನ ಈ 799 ರೂ. ಪ್ಲ್ಯಾನ್‌ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಪ್ರತಿದಿನ 1.5 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ, ಅನಿಯಮಿತ ವಾಯಿಸ್‌ ಕರೆ ಪ್ರಯೋಜನಗಳನ್ನು ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ Wynk ಮ್ಯೂಸಿಕ್ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

ಏರ್‌ಟೆಲ್‌ 489ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಮಾಹಿತಿ

ಏರ್‌ಟೆಲ್‌ ಟೆಲಿಕಾಂನ ಈ 489 ರೂ. ರೀಚಾರ್ಜ್‌ ಯೋಜನೆ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಒಟ್ಟು 6 GB ಡೇಟಾ ಪ್ರಯೋಜನ ಪಡೆದಿದ್ದು, ಅನಿಯಮಿತ ವಾಯಿಸ್‌ ಕರೆ ಪ್ರಯೋಜನಗಳನ್ನು ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ Wynk ಮ್ಯೂಸಿಕ್ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

ಏರ್‌ಟೆಲ್‌ 619ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಮಾಹಿತಿ

ಏರ್‌ಟೆಲ್‌ ಟೆಲಿಕಾಂನ 619 ರೂ. ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಪ್ರತಿದಿನ 1.5 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ ಆಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನಗಳನ್ನು ಸಿಗಲಿವೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಕೂಡಾ ದೊರೆಯುತ್ತದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ Wynk ಮ್ಯೂಸಿಕ್ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

Best Mobiles in India

English summary
Few best Airtel prepaid plans with attractive validity. check plans benefits and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+