ಒನ್‌ಪ್ಲಸ್ 12 ಖರೀದಿಸಲು ಇಷ್ಟವಿಲ್ಲವೇ?..ಹಾಗಿದ್ರೆ..ಈ ಫೋನ್‌ಗಳನ್ನು ನೋಡಿ!
ಜನಪ್ರಿಯ ಮೊಬೈಲ್ ಸಂಸ್ಥೆ ಒನ್‌ಪ್ಲಸ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಫೋನ್ ಪ್ರಿಯರನ್ನು ಸೆಳೆದಿದೆ. ಅನೇಕ ಆಂಡ್ರಾಯ್ಡ್ ಫೋನ್ ಪ್ರಿಯರು ಈ ಹೊಸ ಮೊಬೈಲ್ ಖರೀದಿಸಲು ಇಷ್ಟಪಡುತ್ತಾರೆ. ಅದಾಗ್ಯೂ, ಹೊಸ ಒನ್‌ಪ್ಲಸ್ 12 ಖರೀದಿಸಲು ಇಷ್ಟ ಇರದ ಗ್ರಾಹಕರು ಇದ್ದಾರೆ. ಹೀಗೆ ನಿಮಗೂ ಒನ್‌ಪ್ಲಸ್ 12 ಖರೀದಿಸಲು ಇಷ್ಟವಿಲ್ಲದಿದ್ದರೆ, ಇಲ್ಲಿದೆ ನೋಡಿ ಪರ್ಯಾಯ ಆಯ್ಕೆ.
ಹೌದು, ಒನ್‌ಪ್ಲಸ್ 12 ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ. ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 3 SoC, 16GB RAM ಮತ್ತು 512GB ಸ್ಟೋರೇಜ್, ಅಲ್ಲದೇ 50ಎಂಪಿ ಕ್ಯಾಮೆರಾಗಳಂತಹ ಫೀಚರ್ಸ್ ಒಳಗೊಂಡಿದೆ. ಅದಾಗ್ಯೂ ಒನ್‌ಪ್ಲಸ್ 12 ಫೋನ್ ನಿಮಗೆ ಸೂಕ್ತ ಸ್ಮಾರ್ಟ್‌ಫೋನ್ ಅಲ್ಲ ಎನಿಸಿದರೇ, ನಿಮಗೆ ಕೆಲವು ಪರ್ಯಾಯ ಆಯ್ಕೆಗಳು ಲಭ್ಯ. ಹಾಗದರೆ, ಈ ಲೇಖನದಲ್ಲಿ ತಿಳಿಸಲಾದ ಕೆಲವು ಅತ್ಯುತ್ತಮ ಪರ್ಯಾಯ ಫೋನ್‌ಗಳ ಬಗ್ಗೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಫೋನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಮೊಬೈಲ್ 6.2 ಇಂಚಿನ ಡೈನಾಮಿಕ್ AMOLED FHD+ 2X ಮಾದರಿಯ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಸಂಸ್ಥೆಯ Exynos 2400 SoC ಚಿಪ್ಸೆಟ್ ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಅಲ್ಲದೇ ಇದು 8GB RAM + 128GB ಮತ್ತು 256GB ಸ್ಟೋರೇಜ್ ಪಡೆದಿದೆ.

ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, 4000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೊನ್ ಅಂಬರ ಯಲ್ಲೋ, ಕೋಬಾಲ್ಟ್ ವೈಲೇಟ್, ಮಾರ್ಬಲ್ ಗ್ರೇ ಮತ್ತು ಓನಿಕ್ಸ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
ಐಫೋನ್ 15 ಫೋನ್
ಐಫೋನ್ 15 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್ ಬೆಂಬಲ ಸಹ ಪಡೆದಿದೆ. ಅಲ್ಲದೇ ಇದು A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಪೂರಕವಾಗಿ ios 17 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಅಲ್ಲದೇ ಇದು 128GB, 256GB, 512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಹಾಗೆಯೇ ನೂತನ ಐಫೋನ್ 15 ಮೊಬೈಲ್ ಎರಡು ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ದ್ವಿತೀಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದ್ದು, ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಪಡೆದಿದೆ.

ಐಕ್ಯೂ 12 ಫೋನ್
ಐಕ್ಯೂ 12 ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,260 x 2,800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಪವರ್ ಒಳಗೊಂಡಿದ್ದು, ಇದು ಆಂಡ್ರಾಯ್ಡ್ 14 ಓಎಸ್ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ.
ಹಾಗೆಯೇ 12GB RAM + 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯ, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೌಲಭ್ಯ ಪಡೆದಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿದ್ದು, 120W ಚಾರ್ಜಿಂಗ್ ಅನ್ನು ಸಪೋರ್ಟ್ ಲಭ್ಯ.


Click it and Unblock the Notifications








