Home
ಸುದ್ದಿಜಾಲ

ಅಗ್ಗದ ಬೆಲೆಗೆ ಸ್ಮಾರ್ಟ್‌ ಬ್ಯಾಂಡ್‌ ಖರೀದಿಸಬೇಕೆ? ಹಾಗಿದ್ರೆ, ಈ ಲಿಸ್ಟ್‌ ಗಮನಿಸಿ!

ಪ್ರಸ್ತುತ ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಬ್ಯಾಂಡ್‌ಗಳು ಅಧಿಕ ಡಿಮ್ಯಾಂಡ್‌ ನಲ್ಲಿ ಕಾಣಿಸಿಕೊಂಡಿವೆ. ಈ ನಿಟ್ಟಿನಲ್ಲಿ ಸಂಸ್ಥೆಗಳು ನೂತನ ಮಾದರಿಯ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಮುನ್ನಡೆದಿವೆ. ಆದರೆ ಬಹುತೇಕ ಗ್ರಾಹಕರು ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯ ಇರುವ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ.

ಹೌದು, ಸದ್ಯ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ ಬ್ಯಾಂಡ್‌ಗಳ ಆಯ್ಕೆ ಲಭ್ಯ ಇದೆ. ಆ ಪೈಕಿ ಶಿಯೋಮಿ, ರಿಯಲ್‌ಮಿ, ಹಾನರ್, ಒಪ್ಪೋ, ಒನ್‌ಪ್ಲಸ್‌ ಸೇರಿದಂತೆ ಇತರೆ ಸಂಸ್ಥೆಗಳ ಸ್ಮಾರ್ಟ್‌ಬ್ಯಾಂಡ್‌ಗಳು ಗ್ರಾಹಕರನ್ನು ಸೆಳೆದಿವೆ. ಬಹುತೇಕ ಸ್ಮಾರ್ಟ್‌ ಬ್ಯಾಂಡ್‌ಗಳಲ್ಲಿ ಹೃದಯ ಬಡಿತ ಮಾನಿಟರ್ ಮಾಡುವ ಆಯ್ಕೆ ಸಾಮಾನ್ಯ ಆಗಿದೆ.

ಅಗ್ಗದ ಬೆಲೆಗೆ ಸ್ಮಾರ್ಟ್‌ ಬ್ಯಾಂಡ್‌ ಖರೀದಿಸಬೇಕೆ? ಹಾಗಿದ್ರೆ, ಈ ಲಿಸ್ಟ್‌ ಗಮನಿಸಿ

ಜೊತೆಗೆ ಇಂದಿನ ಬಹುತೇಕ ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳು ಬಳಕೆದಾರರ ದೈನಂದಿನ ಚಟುವಟಿಕೆಗಳನ್ನು ಟ್ರಾಕ್‌ ಮಾಡುವ ಆಯ್ಕೆಗಳನ್ನು ಪಡೆದುಕೊಂಡಿವೆ. ಜೊತೆಗೆ ಹಾರ್ಟ್‌ ರೇಟ್‌ ಮಾನಿಟರ್‌, ಸ್ಲಿಪ್‌ ಮಾನಿಟರ್ ಗಳಂತಹ ಫೀಚರ್ಸ್‌ಗಳನ್ನು ಒಳಗೊಂಡಿರುತ್ತವೆ. ಹಾಗಾದರೇ ಭಾರತದಲ್ಲಿ 3,000ರೂ. ಪ್ರೈಸ್‌ ಟ್ಯಾಗ್‌ನೊಳಗೆ ಖರೀದಿ ಮಾಡಬಹುದಾದ ಕೆಲವು ಅತ್ಯುತ್ತಮ ಸ್ಮಾರ್ಟ್‌ ಬ್ಯಾಂಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ ಬ್ಯಾಂಡ್ ಫೀಚರ್ಸ್ ಹೀಗಿವೆ : ಒನ್‌ಪ್ಲಸ್ ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ 126 x 294 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.6 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ ಬ್ಯಾಂಡ್‌ ಐಪಿ 68 ಪ್ರಮಾಣೀಕರಣ ಹಾಗೂ 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಸೌಲಭ್ಯ ಅನ್ನು ಹೊಂದಿದೆ.

ಹಾಗೆಯೇ ಈ ಡಿವೈಸ್‌ ಔಟ್‌ಡೋರ್‌ ರನ್, ಇನ್‌ಡೋರ್‌ ರನ್, ಫ್ಯಾಟ್ ಬರ್ನ್ ರನ್, ಔಟ್‌ಡೋರ್‌ ವಾಕ್, ಔಟ್‌ಡೋರ್‌ ಸೈಕ್ಲಿಂಗ್, ಇನ್‌ಡೋರ್‌ ಸೈಕ್ಲಿಂಗ್, ಎಲಿಪ್ಟಿಕಲ್ ಟ್ರೈನರ್, ರೋಯಿಂಗ್ ಮೆಷಿನ್, ಕ್ರಿಕೆಟ್, ಬ್ಯಾಡ್ಮಿಂಟನ್, ಪೂಲ್ ಸ್ವಿಮ್ಮಿಂಗ್‌ ಸೇರಿದಂತೆ 13 ವ್ಯಾಯಾಮ ವಿಧಾನಗಳನ್ನು ಪ್ರೀ-ಲೋಡ್ ಮಾಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 2749ರೂ. ಆಗಿದೆ.

ರಿಯಲ್ ಮಿ 2 ಫೀಚರ್ಸ್‌ ಹೀಗಿವೆ : ರಿಯಲ್ ಮಿ 2 ಬ್ಯಾಂಡ್‌ ಆಯತಾಕಾರದ 1.4 ಇಂಚಿನ ಹೆಚ್‌ಡಿ ಕಲರ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ವರ್ಣರಂಜಿತ ಮತ್ತು ಸ್ಪಂದಿಸುವ ಸ್ಪರ್ಶ ಅನುಭವವನ್ನು ಒದಗಿಸುತ್ತದೆ. ಫಿಟ್ನೆಸ್ ಟ್ರ್ಯಾಕರ್ ಅಂತರ್ನಿರ್ಮಿತ SpO2 ಸೆನ್ಸಾರ್‌ನೊಂದಿಗೆ 24x7 ಹೃದಯ ಬಡಿತ ಮೇಲ್ವಿಚಾರಣೆ ಮತ್ತು ರಕ್ತದ ಶುದ್ಧತ್ವ ಮಟ್ಟವನ್ನು ತಿಳಿಸುವ ಸೌಲಭ್ಯ ಇದೆ.

ಇದರ ಜೊತೆಗೆ ಈ ಡಿವೈಸ್‌ ಸುಮಾರು 90 ಕ್ರೀಡಾ ವಿಧಾನಗಳ ಆಯ್ಕೆ ಪಡೆದಿದೆ. ಅಲ್ಲದೇ ಲಿಥಿಯಂ ಬ್ಯಾಟರಿ ಪಡೆದಿದ್ದು, 12 ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ಮಾಡುತ್ತದೆ. ಭಿನ್ನ ಸಂದರ್ಭಗಳಿಗೆ ಸೆಟ್‌ ಆಗುವಂತೆ 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆ ಲಭ್ಯ. ಇದರ ಜೊತೆಗೆ ಇದು 50 ಮೀಟರ್ ನೀರಿನ ಪ್ರತಿರೋಧವನ್ನು ಸಪೋರ್ಟ್ ಮಾಡುತ್ತದೆ. ಭಾರತದಲ್ಲಿ ಈ ಡಿವೈಸ್‌ ಬೆಲೆ 1549ರೂ. ಆಗಿದೆ.

ಶಿಯೋಮಿ ಮಿ ಬ್ಯಾಂಡ್‌ 4 ಬ್ಯಾಂಡ್‌ ಫೀಚರ್ಸ್‌ ಮಾಹಿತಿ : ಶಿಯೋಮಿ ಸಂಸ್ಥೆಯ ಈ ಬ್ಯಾಂಡ್‌ ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಈ ಮಿ ಬ್ಯಾಂಡ್ 4 ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದ್ದು, ವಿವಿಧ ಬಗೆಯ ಸ್ವೀಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುವ ಆಯ್ಕೆ ಅನ್ನು ಒಳಗೊಂಡಿದೆ.

ಮುಖ್ಯವಾಗಿ ಫ್ರಿಸ್ಟೈಲ್‌, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ ಸೇರಿವೆ. ಇದರ ಜೊತೆಗೆ ರನ್ನಿಂಗ್, ಔಟ್‌ಡೋರ್‌ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಕೂಡಾ ಇದು ಟ್ರಾಕ್‌ ಮಾಡುವ ಆಯ್ಕೆಗಳನ್ನು ಪಡೆದಿದೆ. ಇನ್ನು ಮಿ ಬ್ಯಾಂಡ್ 4 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಒಮ್ಮೆ ಬಾರಿ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಒದಗಿಸಲಿದೆ. ಇದರ ಬೆಲೆ 1999ರೂ. ಆಗಿದೆ.

Best Mobiles in India

English summary
Few Best Fitness Bands Under Rs 3000 in India in 2023. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+