ಅಗ್ಗದ ಬೆಲೆಗೆ ಲಭ್ಯ ಇರುವ ಹೊಸ ಫೋನ್‌ಗಳ ಲಿಸ್ಟ್ ಇಲ್ಲಿದೆ!
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಜನರಿಗೆ ಅಗತ್ಯ ಮತ್ತು ಅವಶ್ಯ ಡಿವೈಸ್ ಆಗಿವೆ. ಗ್ರಾಹಕರು ಅವರ ಬಜೆಟ್‌ಗೆ ಅನುಸಾರವಾಗಿ, ಅತ್ಯುತ್ತಮ ಮೊಬೈಲ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಅನೇಕರು ಫೋನ್ ಖರೀದಿಸುವಾಗ ಅಗ್ಗದ ಬೆಲೆಯ ಜೊತೆ ಜೊತೆಗೆ ಮೊಬೈಲ್‌ನ ಕ್ಯಾಮೆರಾ, ಬ್ಯಾಟರಿ ಹಾಗೂ ಕಾರ್ಯ ವೈಖರಿ ಅನ್ನು ನೋಡುತ್ತಾರೆ.
ಹೌದು, ಬಹುತೇಕ ಖರೀದಿದಾರರು ಮೊಬೈಲ್ ಖರೀದಿಸುವಾಗ ಫೋನಿನ ಪ್ರೈಸ್ ಬಗ್ಗೆ ಗಮನ ನೀಡುತ್ತಾರೆ. ಹೆಚ್ಚಿನ ಫೋನ್ ಬಳಕೆ ಇಲ್ಲದ ಗ್ರಾಹಕರು ಅಗ್ಗದ ಬೆಲೆಯ ಅಂದರೆ ಸುಮಾರು 10000ರೂ. ಗಳ ಒಳಗಿನ ಮೊಬೈಲ್‌ಗಳನ್ನು ಇಷ್ಟಪಡುತ್ತಾರೆ. ಅಂದಹಾಗೆ ಇತ್ತೀಚಿನ ಅಗ್ಗದ ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿವೆ. ಹಾಗಾದರೇ ಅಗ್ಗದ ದರದಲ್ಲಿ ಖರೀದಿಗೆ ಲಭ್ಯ ಇರುವ ಕೆಲವು ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪೊಕೊ M6 5G
ಪೊಕೊ ಸಂಸ್ಥೆಯ ಈ ಮೊಬೈಲ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್ ಒದಗಿಸಲಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯ ಮಾಡುತ್ತದೆ
ಅಲ್ಲದೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಈ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದಿದೆ.
ಮೊಟೊ G24 ಪವರ್
ಮೊಟೊ G24 ಪವರ್ ಮೊಬೈಲ್ 6.65 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಆಯ್ಕೆ ಅನ್ನು ಪಡೆದಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಸಪೋರ್ಟ್ ನೊಂದಿಗೆ ರನ್ ಆಗಲಿದೆ.
ಅಲ್ಲದೇ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ.
ರೆಡ್ಮಿ 13C 5G ಫೋನ್
ರೆಡ್ಮಿ ನೋಟ್ 13 5G ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080SoC ಪ್ರೊಸೆಸರ್ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಸಪೋರ್ಟ್ ಜೊತೆಗೆ ಕೆಲಸ ಮಾಡಲಿದೆ.
ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಈ ಫೋನ್ 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಬೆಂಬಲಿಸುತ್ತದೆ.


Click it and Unblock the Notifications








