Home
ಸುದ್ದಿಜಾಲ

ಖರೀದಿಸಿದರೆ ಇಂಥಾ ಪವರ್‌ ಬ್ಯಾಂಕ್‌ ಖರೀದಿಸಬೇಕು!..ಖಂಡಿತಾ ಉಪಯುಕ್ತ!

ಇಂದಿನ ಬಹುತೇಕ ಹೊಸ ಮೊಬೈಲ್‌ಗಳು ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುತ್ತವೆ. ಆದಾಗ್ಯೂ, ಕೆಲವು ಸನ್ನಿವೇಶಗಳಲ್ಲಿ ಬಳಕೆದಾರರ ಬ್ಯಾಟರಿ ಬ್ಯಾಕ್‌ಅಪ್‌ ಕಡಿಮೆ ಆಗುವ ಸಾಧ್ಯತೆಗಳಿರುತ್ತವೆ. ಆಗ ಫೋನ್‌ ಚಾರ್ಜ್‌ ಹಾಕಲು ಅನುಕೂಲ ಇಲ್ಲದಿದ್ದರೆ, ಬಳಕೆದಾರರಿಗೆ ಪವರ್‌ ಬ್ಯಾಂಕ್‌ಗಳು ಸಹಾಯಕ ಎನಿಸುತ್ತದೆ.

ಹೌದು, ಕೆಲವು ಅಗತ್ಯ ಸಂದರ್ಭಗಳಲ್ಲಿ ಫೋನ್‌ ಚಾರ್ಜ್ ಮಾಡಲು ಪವರ್‌ ಬ್ಯಾಂಕ್‌ ಡಿವೈಸ್‌ ಸಹ ಅಗತ್ಯ ಸಾಧನ ಎನಿಸಿಕೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ, ತರಹೇವಾರಿ ಪವರ್‌ ಬ್ಯಾಂಕ್‌ಗಳು ಖರೀದಿಗೆ ಲಭ್ಯ. ಅದರಲ್ಲಿಯೂ ಇತ್ತೀಚಿಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಸ ಪವರ್‌ ಬ್ಯಾಂಕ್‌ ಹೆಚ್ಚು ಬೇಡಿಕೆಯಲ್ಲಿವೆ.

ಖರೀದಿಸಿದರೆ ಇಂಥಾ ಪವರ್‌ ಬ್ಯಾಂಕ್‌ ಖರೀದಿಸಬೇಕು!..ಖಂಡಿತಾ ಉಪಯುಕ್ತ!

ಬಳಕೆದಾರರು ಫಾಸ್ಟ್‌ ಚಾರ್ಜಿಂಗ್‌ ಜೊತೆಗೆ ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಪವರ್‌ ಬ್ಯಾಂಕ್‌ ಖರೀದಿಸಲು ಮನಸ್ಸು ಮಾಡುತ್ತಾರೆ. 10,000mAh ಮತ್ತು 20,000mAh ಬ್ಯಾಟರಿ ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಅಧಿಕ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯದ ಟಾಪ್ 5 ಪವರ್‌ ಬ್ಯಾಂಕ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಿ 10,000mAh ಪವರ್‌ ಬ್ಯಾಂಕ್‌ (Mi 10,000mAh Power Bank)
ಮಿ 10,000mAh ಪವರ್‌ ಬ್ಯಾಂಕ್‌ ಡಿವೈಸ್‌ 22.5W ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಸೌಲಭ್ಯವನ್ನು ಪಡೆದಿದೆ. ಈ ಡಿವೈಸ್‌ ಟ್ರಿಪಲ್ ಔಟ್‌ಪುಟ್ (2 USB A ಮತ್ತು 2 Type C) ಪೋರ್ಟ್‌ಗಳ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಡ್ಯುಯಲ್ ಇನ್‌ಪುಟ್ ಪೋರ್ಟ್‌ಗಳ ಆಯ್ಕೆ ಇದ್ದು, ಮೈಕ್ರೋ ಯುಎಸ್‌ಬಿ ಮತ್ತು ಟೈಪ್-ಸಿ ಆಗಿವೆ. ಈ ಡಿವಯಸ್‌ ಪಾಕೆಟ್ ಗಾತ್ರ ಮತ್ತು ಸುಧಾರಿತ 12-ಲೇಯರ್ ಸರ್ಕ್ಯೂಟ್ ರಕ್ಷಣೆಯೊಂದಿಗೆ ಸೂಪರ್ ಹಗುರವಾಗಿದೆ.

ಅಂಬ್ರೇನ್ 40000mAh ಪವರ್ ಬ್ಯಾಂಕ್ (Ambrane 40000mAh Power Bank)
ಅಂಬ್ರೇನ್ 40000 mAh ಪವರ್ ಬ್ಯಾಂಕ್ ಡಿವೈಸ್‌ 65W ಫಾಸ್ಟ್‌ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸಾಧನವು ನೀಲಿ ಮತ್ತು ಕ್ಯಾಮೊ-ಗ್ರೀನ್‌ ಶೇಡ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇದರ ಮೂಲಕ ಲ್ಯಾಪ್‌ಟಾಪ್‌ಗಳು, ಪ್ಯಾಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಬಹುದು. ಪವರ್ ಬ್ಯಾಂಕ್ ಕ್ಲಾಸಿ ಮ್ಯಾಟ್ ಮೆಟಾಲಿಕ್ ಬಾಡಿ, ಕ್ವಿಕ್ ಚಾರ್ಜ್ 3.0 ಮತ್ತು 60W ಚಾರ್ಜಿಂಗ್ ಇನ್‌ಪುಟ್ ಅನ್ನು ಪಡೆದಿದೆ.

ಅರ್ಬನ್ 27,000mAh ಪವರ್ ಬ್ಯಾಂಕ್ (Urban 27,000mAh Power bank)
ಅರ್ಬನ್ 27,000 mAh ಪವರ್ ಬ್ಯಾಂಕ್ ಡಿವೈಸ್‌ 65W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಪವರ್ ಬ್ಯಾಂಕ್ ಬ್ಲೂ ಮತ್ತು ಕ್ಯಾಮೊ ಗ್ರೀನ್‌ ಬಣ್ಣಗಳ ಆಯ್ಕೆ ಪಡೆದಿದೆ. ಒಂದೇ ಚಾರ್ಜ್‌ನಲ್ಲಿ ಡಿವೈಸ್‌ ಅನ್ನು ಸುಮಾರು 6 ಬಾರಿ ರೀಚಾರ್ಜ್ ಮಾಡಬಹುದು. ಇದು ಅಲ್ಟ್ರಾ-ಕಾಂಪ್ಯಾಕ್ಟ್ ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ದ್ವಿಮುಖ ಫಾಸ್ಟ್‌ ಚಾರ್ಜಿಂಗ್, ಟ್ರಿಪಲ್ ಔಟ್‌ಪುಟ್ ಆಯ್ಕೆ ಸಹ ಪಡೆದಿದೆ. ಹಾಗೆಯೇ 12 ಲೇಯರ್ ಸರ್ಕ್ಯೂಟ್ ರಕ್ಷಣೆಯೂ ಇದೆ.

ಶಿಯೋಮಿ 10000mAh ಪವರ್ ಬ್ಯಾಂಕ್ 3i (Mi Power Bank 3i)
ಶಿಯೋಮಿ 10000 mAh ಪವರ್ ಬ್ಯಾಂಕ್ 3i ಡಿವೈಸ್‌ ಪ್ರಮುಖ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಪವರ್‌ ಬ್ಯಾಂಕ್‌ ದ್ವಿಮುಖ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಹಾಗೆಯೇ ಇದು ಡಿವೈಸ್‌ಗಳನ್ನು ತ್ವರಿತವಾಗಿ ಚಾರ್ಜ್ ಆಗುವುದನ್ನು ಖಚಿತಪಡಿಸುತ್ತದೆ ಜೊತೆಗೆ ಈ ಪವರ್‌ ಬ್ಯಾಂಕ್‌ ಸರ್ಕ್ಯೂಟ್ ರಕ್ಷಣೆಯ 9 ಪದರಗಳನ್ನು ಪಡೆದಿದೆ.

Best Mobiles in India

English summary
Few Best Power banks With Fast Charging feature. specification and other details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+