Home
ಸುದ್ದಿಜಾಲ

ಸ್ಲೋ-ಮೋಷನ್ ವೀಡಿಯೋ ರೆಕಾರ್ಡಿಂಗ್ ಮಾಡಲು ಈ ಫೋನ್‌ ಬೆಸ್ಟ್‌!

ಮೊಬೈಲ್‌ ಕ್ಯಾಮೆರಾಗಳ ಮೂಲಕ ವಿಡಿಯೋ ರೆಕಾರ್ಡಿಂಗ್‌ ಮಾಡಬಹುದು. ಹಾಗೆಯೇ ಕೆಲವು ಫೋನ್‌ಗಳು ಸ್ಲೋ-ಮೋಷನ್ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಒಳಗೊಂಡಿವೆ. ಸ್ಲೋ-ಮೋಷನ್ ವೀಡಿಯೋ ರೆಕಾರ್ಡಿಂಗ್ ಅನೇಕ ಬಳಕೆದಾರರಿಗೆ ಇಷ್ಟವಾಗುತ್ತವೆ. ಹೀಗಾಗಿ ಅನೇಕರು ಕ್ಯಾಮೆರಾ/ವಿಡಿಯೋ ಪ್ರಿಯರು ಸ್ಲೋ-ಮೋಷನ್ ರೆಕಾರ್ಡಿಂಗ್ ಸೌಲಭ್ಯದ ಫೋನ್ ಖರೀದಿಸಲು ಮುಂದಾಗುತ್ತಾರೆ.

ಹೌದು, ಮೊಬೈಲ್‌ ಮಾರುಕಟ್ಟೆಯಲ್ಲಿ ಭಿನ್ನ ಕ್ಯಾಮೆರಾ ಆಯ್ಕೆಗಳ ಫೋನ್‌ಗಳು ಲಭ್ಯ ಇವೆ. ಅವುಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಆಯ್ಕೆ ಜೊತೆಗೆ ಸ್ಲೋ-ಮೋಷನ್ ರೆಕಾರ್ಡಿಂಗ್ ಸೌಲಭ್ಯದ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕ್ಯಾಮೆರಾ ಹಾಗೂ ಸ್ಲೋ-ಮೋಷನ್ ರೆಕಾರ್ಡಿಂಗ್ ಫೀಚರ್‌ ಇರುವ ಕೆಲವು ಟಾಪ್‌ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಲೋ-ಮೋಷನ್ ವೀಡಿಯೋ ರೆಕಾರ್ಡಿಂಗ್ ಮಾಡಲು ಈ ಫೋನ್‌ ಬೆಸ್ಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್‌ನ ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, 85 ಡಿಗ್ರಿ ಫೀಲ್ಡ್ ಆಫ್ ವ್ಯೂ ಅನ್ನು ಪಡೆದಿದೆ. ದ್ವಿತೀಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಹಾಗೂ ನಾಲ್ಕನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದು 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಸ್ಲೋ-ಮೋಷನ್ ವೀಡಿಯೋ ರೆಕಾರ್ಡಿಂಗ್ ಮಾಡಲು ಈ ಫೋನ್‌ ಬೆಸ್ಟ್‌!

ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌

ಈ ಐಫೋನ್ 48 ಮೆಗಾ ಪಿಕ್ಸೆಲ್ ಸೆನ್ಸರ್‌ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಒಳಗೊಂಡಿದೆ. ಇದು LiDAR ಸ್ಕ್ಯಾನಿಂಗ್ ಲೋ ಲೈಟ್‌ ಮತ್ತು ನೈಟ್‌ ಮೋಡ್‌ ಫೋಟೋ ಫೀಚರ್ಸ್‌ ಆಯ್ಕೆಗಳನ್ನು ಕೂಡಾ ಹೊಂದಿದೆ. ಹಾಗೆಯೇ ಈ ಐಫೋನ್‌ ಮುಂಭಾಗದಲ್ಲಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್‌ ಅನ್ನು ಪಡೆದಿದ್ದು, ಇದು ಅತ್ಯುತ್ತಮ ಜೂಮ್, ಅಂದರೆ 5x ಆಪ್ಟಿಕಲ್ ಜೂಮ್ ಸೌಲಭ್ಯ ಪಡೆದುಕೊಂಡಿದೆ.

ಸ್ಲೋ-ಮೋಷನ್ ವೀಡಿಯೋ ರೆಕಾರ್ಡಿಂಗ್ ಮಾಡಲು ಈ ಫೋನ್‌ ಬೆಸ್ಟ್‌!

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 10 ಪ್ರೊ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ತೃತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಅಸುಸ್ ROG ಫೋನ್ 7 ಸ್ಮಾರ್ಟ್‌ಫೋನ್‌

ಆಸುಸ್‌ ಸಂಸ್ಥೆಯ ಈ ಗೇಮಿಂಗ್ ಸ್ಮಾರ್ಟ್‌ಫೋನ್‌ 50 ಮೆಗಾ ಪಿಕ್ಸಲ್‌ ಸೋನಿ IMX766 ಫ್ಲಾಗ್‌ಶಿಪ್ ರಿಯರ್‌ ಕ್ಯಾಮೆರಾ ಪಡೆದಿದ್ದು, ಮಂದ ಬೆಳಕಿನ ಕಾರ್ಯಕ್ಷಮತೆ, 8K ರೆಕಾರ್ಡಿಂಗ್, EIS ಮತ್ತು HDR10 ನಂತಹ ಕೆಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಹಾಗೆಯೇ ಇದು ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದ್ದು, EIS ಜೊತೆಗೆ 4K ಅನ್ನು ಸಹ ಸಪೋರ್ಟ್ ಮಾಡುತ್ತದೆ.

ರೆಡ್ಮಿ ನೋಟ್‌ 12 ಪ್ರೊ+ 5G ಸ್ಮಾರ್ಟ್‌ಫೋನ್‌

ಶಿಯೋಮಿ ರೆಡ್ಮಿ ನೋಟ್‌ 12 ಪ್ರೊ+ 5G ಫೋನ್‌ ಅತ್ಯುತ್ತಮ ಆಲ್‌ರೌಂಡರ್ ಫೋನ್‌ ಎನಿಸಿದ್ದು, ಅತ್ಯುತ್ತಮ ಕ್ಯಾಮೆರಾ ಆಯ್ಕೆಗಳನ್ನು ಕೂಡಾ ಪಡೆದಿದೆ. ಈ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾವು 200 ಮೆಗಾ ಪಿಕ್ಸಲ್‌ ನಲ್ಲಿದೆ. ಹಗಲು ಬೆಳಕಿನಲ್ಲಿ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯುವ ಆಯ್ಕೆಗಳು ಇದ್ದು, ಹಾಗೆಯೇ ಮಂದ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಫೋಟೋ ಸೆರೆಹಿಡಿಯಲಿದೆ.

Best Mobiles in India

English summary
Few Best Slow Motion Video Recording Smartphones in India. check out all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+