ಸದ್ಯ ಮಾರುಕಟ್ಟೆಯಲ್ಲಿ ಈ ಮೊಬೈಲ್‌ಗಳದ್ದೇ ಹವಾ; ಲಿಸ್ಟ್ ಇಲ್ಲಿದೆ ನೋಡಿ!
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಡಿವೈಸ್ ಅನೇಕ ಕೆಲಸಗಳಿಗೆ ಆಧಾರವಾಗಿದ್ದು, ಎಲ್ಲರಿಗೂ ಅಗತ್ಯ ಹಾಗೂ ಅವಶ್ಯ ಎನಿಸಿದೆ. ಮಾರುಕಟ್ಟೆಯಲ್ಲಿ ಮೊಬೈಲ್‌ಗಳಲ್ಲಿ ಬೇಡಿಕೆ ಇದ್ದು, ಫೋನ್ ತಯಾರಿಕಾ ಕಂಪನಿಗಳು ಸಹ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತ ಸಾಗಿವೆ. ಇನ್ನು ಹೊಸದಾಗಿ ಲಾಂಚ್ ಆಗುವ ಪ್ರತಿ ಸ್ಮಾರ್ಟ್‌ಫೋನ್‌ಗಳು ಕೂಡಾ ಜನಪ್ರಿಯತೆ ಗಳಿಸುವುದಿಲ್ಲ. ಅವುಗಳ ಪೈಕಿ ಕೆಲವೇ ಕೆಲವು ಮೊಬೈಲ್‌ಗಳು ಬೆಲೆಯಿಂದ ಇಲ್ಲವೇ ಫೀಚರ್ಸ್‌ಗಳಿಂದಾಗಿ ಜನಪ್ರಿಯ ಆಗುತ್ತವೆ.
ಹೌದು, ಫೋನ್ ಮಾರುಕಟ್ಟೆಯಲ್ಲಿ ದಿಗ್ಗಜ ಮೊಬೈಲ್ ಸಂಸ್ಥೆಗಳ ನಡುವೇ ನೇರ ಪೈಪೋಟಿ ಇದೆ. ಈ ನಿಟ್ಟಿನಲ್ಲಿ ಬ್ರ್ಯಾಂಡ್‌ಗಳು ತಮ್ಮ ನೂತನ ಮೊಬೈಲ್‌ಗಳಲ್ಲಿ ಅಪ್‌ಡೇಟ್ ಫೀಚರ್ಸ್ ಹಾಗೂ ನೂತನ ಆಯ್ಕೆಗಳನ್ನು ಪರಿಚಯಿಸುತ್ತವೆ. ಬೆಲೆ ಹಾಗೂ ಫೀಚರ್ಸ್ ಸೇರಿದಂತೆ ಡಿಸೈನ್, ಕ್ಯಾಮೆರಾ ಕ್ವಾಲಿಟಿ ಇಂತಹ ಆಯ್ಕೆಗಳಿಂದ ಗಮನ ಸೆಳೆಯುವ ಫೋನ್‌ಗಳು ದೀರ್ಘಾವಧಿಯ ವರೆಗೂ ಮಾರುಕಟ್ಟೆಯನ್ನು ಆಳುತ್ತವೆ. ಹಾಗಾದರೆ ಪ್ರಸ್ತುತ ಈ ಅಕ್ಟೋಬರ್ ತಿಂಗಳಿನ ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಹವಾ ಉಳಿಸಿಕೊಂಡಿರುವ ಸ್ಯಾಮ್‌ಸಂಗ್ ಫೋನ್‌ಗಳ ಪಟ್ಟಿ ಇಲ್ಲಿದೆ ಮುಂದೆ ಓದಿರಿ.

ಐಫೋನ್ 16
ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಆಪಲ್ ಐಫೋನ್ 16 ಮೊಬೈಲ್ ಅನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಅಲ್ಲದೇ ಐಫೋನ್ 16 ಮೊಬೈಲ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಈ ಚಿಪ್ ಎರಡು ಪಟ್ಟು ವೇಗದ ನ್ಯೂರಲ್ ಎಂಜಿನ್ ಮತ್ತು 17 ಪ್ರತಿಶತ ಹೆಚ್ಚು ಬ್ಯಾಂಡ್‌ವಿಡ್ತ್‌ನೊಂದಿಗೆ ನವೀಕರಿಸಿದ ಮೆಮೊರಿ ಉಪವ್ಯವಸ್ಥೆಯನ್ನು ಪಡೆದಿದೆ.
ಐಫೋನ್ 16 ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಸಹ ಪಡೆದಿದೆ. ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿದೆ.
ಗ್ಯಾಲಕ್ಸಿ S24 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಇತ್ತೀಚಿನ ಈ ದೈತ್ಯ ಮೊಬೈಲ್ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಡಿಸ್‌ಪ್ಲೇ 3120 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಒಳಗೊಂಡಿದೆ. ಅಲ್ಲದೇ ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಜನ್ 3 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಹಾಗೆಯೇ ಇದು ಪ್ರಾಥಮಿಕ ಕ್ಯಾಮೆರಾವು 200 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.
ಗ್ಯಾಲಕ್ಸಿ A55 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 5G (Samsung Galaxy A55) ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಅದೇ ರೀತಿ ಈ ಫೋನ್ ಎಕ್ಸಿನೋಸ್ 1480 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ AMD Xclipse 530 GPU ಸಪೋರ್ಟ್ ಹಾಗೂ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕಾಣಬಹುದಾಗಿದೆ.
ಹಾಗೆಯೇ ಈ ಮೊಬೈಲ್ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.


Click it and Unblock the Notifications








