Home
ಸುದ್ದಿಜಾಲ

UPI ಪೇಮೆಂಟ್‌ ಮಾಡುವಾಗ ಹಣ ಸೆಂಡ್‌ ಆಗದಿದ್ದರೆ, ಏನು ಮಾಡುವುದು?

ಸದ್ಯ ಯುಪಿಐ ಪೇಮೆಂಟ್‌ ವ್ಯವಸ್ಥೆ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಂಡಿದೆ. ಜನರು ತರಕಾರಿ ಖರೀದಿಯಿಂದ ಮಾಲ್‌ನಲ್ಲಿ ಶಾಪಿಂಗ್ ಮಾಡುವವರೆಗೂ ಡಿಜಿಟಲ್‌ ಪಾವತಿ ಬಳಕೆ ಮಾಡುತ್ತಾರೆ. ಯುಪಿಐ ಪೇಮೆಂಟ್‌ ಸರಳವು ಹಾಗೂ ತ್ವರಿತವು ಆಗಿದೆ. ಅದಾಗ್ಯೂ, ಕೆಲವೊಮ್ಮೆ ಪೇಮೆಂಟ್‌ ಮಾಡುವಾಗ ಹಣ ಪಾವತಿ ಆಗದೇ ಇರುವುದು ಅಥವಾ ಸ್ಟ್ರಕ್‌ ಆಗುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡುವುದು?

ಹೌದು, ಯುಪಿಐ ಪೇಮೆಂಟ್‌ ಮಾಡುವಾಗ ಕೆಲವೊಮ್ಮೆ ಹಣ ವರ್ಗಾವಣೆ ವಿಳಂಬ ಎನಿಸುತ್ತದೆ. ಇಲ್ಲವೇ ಹಣ ಹೋಗುವುದಿಲ್ಲ ಅಥವಾ ಸ್ಟ್ರಕ್ (ಹಣ ಸಿಲುಕಿಕೊಳ್ಳುವ) ಆಗುವ ಸಾಧ್ಯತೆಗಳಿರುತ್ತವೆ. ಈ ರೀತಿ UPI ವಹಿವಾಟಿನ ಸಮಯದಲ್ಲಿ ಪಾವತಿ ವಿಫಲಗೊಳ್ಳಲು ಹಲವು ಕಾರಣಗಳಿವೆ. ಆದರೆ ಅವುಗಳನ್ನು ಸರಿ ಮಾಡಬಹುದು. ಯುಪಿಐ ಪಾವತಿಯಲ್ಲಿ ಹಣ ಸೆಂಡ್ ಆಗದಿದ್ದರೆ, ಯಾವೆಲ್ಲಾ ಅಂಶಗಳನ್ನು ಚೆಕ್ ಮಾಡುವುದು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

UPI ಪೇಮೆಂಟ್‌ ಮಾಡುವಾಗ ಹಣ ಸೆಂಡ್‌ ಆಗದಿದ್ದರೆ, ಏನು ಮಾಡುವುದು?

ಇಂಟರ್ನೆಟ್ ಕನೆಕ್ಷನ್‌ ಚೆಕ್ ಮಾಡಿರಿ
UPI ಪಾವತಿಗಳು ವಿಫಲಗೊಳ್ಳಲು ನೆಟ್‌ವರ್ಕ್ ಸಂಪರ್ಕವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಸರಿಯಾದ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ದರೆ, ಹಣ ವರ್ಗಾವಣೆ ವಿಳಂಬವಾಗಿ ಕಾಣಿಸುತ್ತದೆ. ಈ ರೀತಿ ಸಮಸ್ಯೆ ಎದುರಾದಾಗ ನಿಮ್ಮ ಮೊಬೈಲ್‌ನಲ್ಲಿ ಉತ್ತಮ ಪಡೆಯಲು ಏರೋಪ್ಲೇನ್‌ ಮೋಡ್‌ ಆನ್‌ ಮಾಡಿ, ಆ ಬಳಿಕ ಆಫ್ ಮಾಡಿರಿ. ತದ ನಂತರ ಮತ್ತೆ ಯುಪಿಐ ಪಾವತಿ ಪ್ರಯತ್ನಿಸಿ.

ದೈನಂದಿನ UPI ಪಾವತಿ ಮಿತಿ ಚೆಕ್‌ ಮಾಡಿ
ಬಹುತೇಕ ಬ್ಯಾಂಕ್‌ಗಳು ಮತ್ತು ಪಾವತಿ ಗೇಟ್‌ವೇಗಳು UPI ವಹಿವಾಟುಗಳ ದೈನಂದಿನ ಮಿತಿಗೆ ಸೀಮಿತಗೊಳಿಸಿವೆ. ಹೆಚ್ಚುವರಿಯಾಗಿ, NPCI ಮಾರ್ಗಸೂಚಿಗಳ ಪ್ರಕಾರ, ಒಂದು UPI ವಹಿವಾಟಿನಲ್ಲಿ ವರ್ಗಾವಣೆ ಮಾಡಬಹುದಾದ ಗರಿಷ್ಠ ಮೊತ್ತವು ರೂ. 1 ಲಕ್ಷ. ಆದ್ದರಿಂದ ದೈನಂದಿನ ಹಣ ವರ್ಗಾವಣೆ ಮಿತಿಯನ್ನು ದಾಟಿದ್ದರೆ ಅಥವಾ ಸುಮಾರು 10 UPI ವಹಿವಾಟುಗಳನ್ನು ಮಾಡಿದ್ದರೆ, ಮತ್ತೆ ಹಣ ಪಾವತಿ ಆಗದು.

UPI ಪೇಮೆಂಟ್‌ ಮಾಡುವಾಗ ಹಣ ಸೆಂಡ್‌ ಆಗದಿದ್ದರೆ, ಏನು ಮಾಡುವುದು?

ಯುಪಿಐ ಲೈಟ್‌ ಆಪ್‌ ಪ್ರಯತ್ನಿಸಿ
ಬ್ಯಾಂಕ್ ಸರ್ವರ್‌ಗಳು ಮತ್ತು ನೆಟ್‌ವರ್ಕ್ ಸಮಸ್ಯೆಗಳು UPI ಪಾವತಿ ವಿಫಲತೆಗೆ ಪ್ರಮುಖ ಕಾರಣ ಆಗುತ್ತವೆ. ಬಳಕೆದಾರರಿಗೆ ಅನುಕೂಲವಾಗಲೆಂದು, NPCI ಕಳೆದ ವರ್ಷ UPI ಲೈಟ್ ಅನ್ನು ಪರಿಚಯಿಸಿತು. UPI ಲೈಟ್ ಅನ್ನು ಬಳಸಿಕೊಂಡು, ಜನರು ತ್ವರಿತ ಪಾವತಿಗಳನ್ನು ಮಾಡಬಹುದು. ಪ್ರಸ್ತುತ, UPI / ಯುಪಿಐ ಲೈಟ್ ಸೇವೆಯು ಪೇಟಿಎಮ್‌ ಮತ್ತು ಫೋನ್‌ಪೇ ಆಪ್‌ಗಳಲ್ಲಿ ಲಭ್ಯವಿದೆ ಮತ್ತು ಶೀಘ್ರದಲ್ಲೇ ಇತರ ಪಾವತಿ ಅಪ್ಲಿಕೇಶನ್‌ ಗಳಲ್ಲಿ ಇದು ಲಭ್ಯವಾಗಲಿದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಬಹುದು
UPI ವೈಫಲ್ಯಗಳು ಅಥವಾ ಪಾವತಿ ಮಾಡುವಾಗ ಬ್ಯಾಂಕ್ ಸರ್ವರ್ ಸಮಸ್ಯೆಯಿಂದಾಗಿ ಹಣ ವರ್ಗಾವಣೆ ಆಗದಿರುವ ಸಂಭವ ಇರುತ್ತದೆ. ಇಂತಹ ವೇಳೆ ಬೇರೆ ಬ್ಯಾಂಕ್‌ ಅಕೌಂಟ್ ಮೂಲಕ ಹಣ ವರ್ಗಾವಣೆ ಮಾಡಬಹುದು. ಅದಕ್ಕಾಗಿ UPI ಐಡಿಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಉತ್ತಮ ಎನ್ನಬಹುದಾಗಿದೆ.

ಸರಿಯಾದ UPI ಪಿನ್ ನಮೂದಿಸಿ
ಕೆಲವು ವೇಳೆ ಬಳಕೆದಾರರು UPI ಪಿನ್ ಅನ್ನು ಮರೆತುಬಿಡುವ ಸಾಧ್ಯತೆಯಿದೆ. ಹೀಗೆ ನೀವೇನಾದರೂ UPI ಪಿನ್ ಅನ್ನು ಮರೆತಿದ್ದರೆ, 'Forget UPI PIN' ಅನ್ನು ಟ್ಯಾಪ್ ಮಾಡುವ ಮೂಲಕ ಪಿನ್ ಅನ್ನು ಮತ್ತೆ ಸೆಟ್ ಮಾಡಬಹುದು. ಅಂದಹಾಗೆ ನಿಮ್ಮ ಯುಪಿಐ ಪಾಸ್‌ವರ್ಡ್‌/ ಪಿನ್ ಅನ್ನು ಯಾರೊಂದಿಗೆ ಶೇರ್ ಮಾಡದಿರಿ.

Best Mobiles in India

English summary
If your UPI payment stuck or failed. check these things.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+