ಈ ಡಿವೈಸ್‌ಗಳನ್ನು ನೋಡಿದ್ರೆ, ನೀವು ಖಂಡಿತಾ ಹುಬ್ಬೇರಿಸ್ತೀರಾ!..ಬೆಲೆಯೂ ಕಡಿಮೆ!
ದೈತ್ಯ ಇ ಕಾಮರ್ಸ್ ಅಂತಾನೇ ಬಿಂಬಿತವಾಗಿರುವ ಅಮೆಜಾನ್ ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ಆಫರ್ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಇನ್ನು ಅಮೆಜಾನ್ ತಾಣದಲ್ಲಿ ಇಂತಹ ವಸ್ತು ಸಿಗುವುದಿಲ್ಲ ಎನ್ನುವ ಮಾತೇ ಇಲ್ಲ ಎನ್ನುವ ಮಟ್ಟಿಗೆ, ಗ್ರಾಹಕರಿಗೆ ಎಲ್ಲ ವಿಭಾಗಗಳ ಉತ್ಪನ್ನಗಳ ಲಭ್ಯತೆ ಮಾಡಿದೆ. ಹಾಗೆಯೇ ಅಮೆಜಾನ್ ತಾಣದಲ್ಲಿ ಕೆಲವು ಕುತೂಹಲಕಾರಿ ಗ್ಯಾಡ್ಜೆಟ್ ಉತ್ಪನ್ನಗಳು ಲಭ್ಯ ಇದ್ದು, ಅವುಗಳು ಖಂಡಿತಾ ನೀವು ಹುಬ್ಬೇರಿಸುವಂತೆ ಮಾಡುತ್ತವೆ.!

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಸಣ್ಣ-ಪುಆ ಚಿಕ್ಕ-ಪುಟ್ಟ ಗ್ಯಾಡ್ಜೆಟ್ ಉತ್ಪನ್ನಗಳು ಗ್ರಾಹಕರಿಗೆ ಉಪಯುಕ್ತ ಎನಿಸುವುದು ಸುಳ್ಳಲ್ಲ. ಇನ್ನು ಅವುಗಳ ಬೆಲೆಯು ಗ್ರಾಹಕಸ್ನೇಹಿ ದರದಲ್ಲೇ ಇರುವುದು ಮತ್ತೊಂದು ಹೈಲೈಟ್ ಎಂದು ಹೇಳಬಹುದು. ಹಾಗಾದರೇ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯ ಇರುವ ಕೆಲವು ಅಚ್ಚರಿಯ ಗ್ಯಾಡ್ಜೆಟ್ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೋರ್ಟೆಬಲ್ ಯುಎಸ್‌ಬಿ LED
QOCXRRIN IN-876 ಪೋರ್ಟೆಬಲ್ ಯುಎಸ್‌ಬಿ LED ಡಿವೈಸ್ ರಚನೆ ನೋಡಲು ಮಿನಿ ಟ್ಯೂಬ್‌ಲೈಟ್ ತರಹ ಇದ್ದು, ಹೆಚ್ಚಿನ ಬೆಳಕನ್ನು ಒದಗಿಸುತ್ತದೆ. ಈ ಲೈಟ್ ರೂಮ್‌ಗಳಲ್ಲಿ, ಕಾರ ಒಳಗಡೆ, ಚಿಕ್ಕ ಅಂಗಡಿಗಳಂತಹ ಕೆಲವು ಸಂದರ್ಭಗಳಲ್ಲಿ ಗ್ರಾಹಕರಿಗೆ ಉಪಯುಕ್ತ ಎನಿಸುತ್ತದೆ. ಇದು ಒಮದು ಮೀಟರ್ ವಾಯರ್ ಸೌಲಭ್ಯವನ್ನು ಪಡೆದಿದೆ. ಅಂದಹಾಗೆ ಅಮೆಜಾನ್ ತಾಣದಲ್ಲಿ ಈ ಡಿವೈಸ್ ಬೆಲೆಯು 99ರೂ. ಆಗಿದೆ.

USB LED ಬುಕ್ ಲೈಟ್
ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮಿನಿ ಪೋರ್ಟಬಲ್ USB LED ಬುಕ್ ಲೈಟ್ (Mini Portable USB LED Book Light) ಡಿವೈಸ್ ಖರೀದಿಗೆ ಲಭ್ಯ ಇದೆ. ಈ ಡಿವೈಸ್ ಬೆಲೆಯು 89ರೂ. ಆಗಿದೆ.
pTron ಬುಲೆಟ್ ಪ್ರೊ 36w ಚಾರ್ಜರ್
ಅಮೆಜಾನ್ ತಾಣದಲ್ಲಿ ಬೆಸ್ಟ್ ಸೆಲ್ಲರ್ ವರ್ಗದಲ್ಲಿ ಕಾಣಿಸಿಕೊಂಡಿರುವ ವಸ್ತುಗಳ ಪೈಕಿ ಇದು ಒಂದಾಗಿದೆ. pTron ಬುಲೆಟ್ ಪ್ರೊ 36w ಫಾಸ್ಟ್ ಚಾರ್ಜರ್, ಮೂರು ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ. ಇದನ್ನು ಕಾರಿನಲ್ಲಿ ಬಳಕೆ ಮಾಡಬಹುದಾಗಿದ್ದು, ಬಹುತೇಕ ಎಲ್ಲ ಫೋನ್ ಹಾಗೂ ಟ್ಯಾಬ್ ಡಿವೈಸ್‌ಗಳಿಗೆ ಸಪೋರ್ಟ್ ಮಾಡುವುದು. ಅಮೆಜಾನ್ ತಾಣದಲ್ಲಿ ಈ ಡಿವೈಸ್ ಬೆಲೆಯು 299 ಆಗಿದೆ.

ಎಲೆಕ್ಟ್ರಿಕ್ ಏರ್ ಕಂಪ್ರೆಸರ್
ಶಿಯೋಮಿ ಸಂಸ್ಥೆಯು ಎಲೆಕ್ಟ್ರಿಕ್ ಏರ್ ಕಂಪ್ರೆಸರ್ ಸಾಧನವು ಕಾರ ಟೈರ್‌ಗಳಿಗೆ ಗಾಳಿ ತುಂಬಿಸಲು ನೆರವಾಗುತ್ತದೆ. ಈ ಸಾಧನಿಂದ ಕಾರ್ ಟೈರ್‌ಗಳನ್ನು 8 ಬಾರಿ ಟಾಪ್ ಅಪ್ ಮಾಡಬಹುದು. ಇದು ಎಲೆಕ್ಟ್ರಿಕ್ ಏರ್ ಕಂಪ್ರೆಸರ್ ಸಾಧನ ಆಗಿದ್ದು, ಜೊತೆಗೆ ಕೊಂಡೊಯ್ಯಬಹುರು, ತುರ್ತು ಸಂದರ್ಭಗಳಲ್ಲಿ ನೆರವಾಗಿ ಉಪಯುಕ್ತ ಎನಿಸುತ್ತದೆ. ಇನ್ನು ಶಿಯೋಮಿ ಈ ಸಾಧನವು ಅಂತರ್ನಿರ್ಮಿತ 2000 mAh ಲಿಥಿಯಂ ಬ್ಯಾಟರಿಯೊಂದಿಗೆ ಬರುತ್ತದೆ.
ಕಾರ್ ವ್ಯಾಕ್ಯೂಮ್ ಕ್ಲೀನರ್
ಬರ್ಗ್‌ಮನ್ ಸ್ಟನ್ನರ್ ಕಾರ್ ವ್ಯಾಕ್ಯೂಮ್ ಕ್ಲೀನರ್ 5kpa+ ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ 150W ಮೋಟಾರ್‌ನೊಂದಿಗೆ ಬರುತ್ತದೆ. ಇದು ಸ್ಟೇನ್‌ಲೆಸ್ ಸ್ಟೀಲ್ HEPA ಫಿಲ್ಟರ್ ಅನ್ನು ಸಹ ಹೊಂದಿದೆ ಮತ್ತು 75db ಶಬ್ದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ
ಮಿನಿ ಕಾರ್ ಡ್ಯಾಶ್ ಕ್ಯಾಮೆರಾ (DDPAI)
DDPAI ಮಿನಿ ಕಾರ್ ಡ್ಯಾಶ್ ಕ್ಯಾಮೆರಾ ಪೂರ್ಣ ಹೆಚ್‌ಡಿ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು G ಸಂವೇದಕ, Wi-Fi, ಪಾರ್ಕಿಂಗ್ ಮೋಡ್ ಮತ್ತು 128 GB SD ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ. ಇದು 140 ಡಿಗ್ರಿ ಫೀಲ್ಡ್ ಆಫ್ ವ್ಯೂ ನೀಡುತ್ತದೆ.


Click it and Unblock the Notifications








