Home
ಸುದ್ದಿಜಾಲ

ಥ್ರೆಡ್ಸ್‌ ಆಪ್‌ನಲ್ಲಿವೆ ಈ ಅಚ್ಚರಿಯ ಫೀಚರ್ಸ್‌; ನೀವು ಬಳಕೆ ಮಾಡಿದ್ದೀರಾ!?

ಥ್ರೆಡ್‌ ಆಪ್‌ ಪರಿಚಯಿಸುವ ಮೂಲಕ ಎಲಾನ್‌ ಮಸ್ಕ್‌ ಮಾಲೀಕತ್ವದ ಟ್ವಿಟರ್‌ಗೆ ನೇರ ಟಾಂಗ್ ನೀಡಿರುವ ಮೆಟಾ ಈಗಾಗಲೇ ಸೋಶಿಯಲ್‌ ಮೀಡಿಯಾ ವಲಯದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಬಹುತೇಕ ಟ್ವಿಟರ್‌ನಂತೆಯೇ ಆಯ್ಕೆಗಳನ್ನು ಇದು ಹೊಂದಿದ್ದರೂ, ಥ್ರೆಡ್‌ ಆಪ್‌ ಆಕರ್ಷಕ ಮತ್ತು ಬಳಕೆದಾರ ಸ್ನೇಹಿ ಎನಿಸುವಂತೆ ಇದೆ. ಅದಾಗ್ಯೂ, ಮೆಟಾ ಥ್ರೆಡ್ಸ್‌ ಆಪ್‌ನಲ್ಲಿ ಕೆಲವು ಹಿಡೆನ್‌ ಫೀಚರ್ಸ್‌ಗಳು ಇವೆ.

ಹೌದು, ಮೆಟಾ ಸಂಸ್ಥೆಯ ಇತ್ತೀಚಿಗಷ್ಟೆ ಥ್ರೆಡ್‌ ಅಪ್ಲಿಕೇಶನ್ ಬಿಡುಗಡೆ ಮಾಡಿ, ಬಹುಬೇಗನೆ ಹೆಚ್ಚಿನ ಬಳಕೆದಾರರನ್ನು ತನ್ನತ್ತ ಸೆಳೆದಿದೆ. ದಿನದಿಂದ ದಿನಕ್ಕೆ ಮತ್ತಷ್ಟು ಜನಪ್ರಿಯತೆ ಪಡೆಯುತ್ತ ಮುನ್ನಡೆದಿರುವ ಥ್ರೆಡ್‌, ಇನ್‌ಸ್ಟಾಗ್ರಾಮ್‌ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ. ಫೋಟೋ, ವಿಡಿಯೋ ಫೋಸ್ಟ್‌ ಮಾಡುವ ಆಯ್ಕೆಗಳನ್ನು ಒಳಗೊಂಡಿರುವ ಜೊತೆಗೆ ಕೆಲವು ಇತರೆ ಉಪಯುಕ್ತ ಆಯ್ಕೆಗಳು ಇವೆ.

ಥ್ರೆಡ್ಸ್‌ ಆಪ್‌ನಲ್ಲಿವೆ ಈ ಅಚ್ಚರಿಯ ಫೀಚರ್ಸ್‌; ನೀವು ಬಳಕೆ ಮಾಡಿದ್ದೀರಾ!?

ಥ್ರೆಡ್‌ ಆಪ್‌ನಲ್ಲಿ ತ್ವರಿತವಾಗಿ ಫಾಲೋ ಮಾಡುವ ಆಯ್ಕೆ :
ಮೆಟಾ ಥ್ರೆಡ್ಸ್‌ನಲ್ಲಿ ಕ್ವಿಕ್ ಫಾಲೋ ಆಯ್ಕೆ ಇದ್ದು, ಈ ಆಯ್ಕೆಯು ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ನಲ್ಲಿ ಇತರ ಬಳಕೆದಾರರನ್ನು ಬಹುಬೇಗನೆ/ ಕ್ವಿಕ್‌ ಆಗಿ ಫಾಲೋ ಮಾಡಲು ಅನುಕೂಲ ಮಾಡಿಕೊಡುತ್ತದೆ. ಈ ಆಯ್ಕೆಯ ಇನ್ನೊಂದು ಪ್ರಮುಖ ಅಂಶವೆಂದರೆ, ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಓಪೆನ್‌ ಮಾಡದೆ, ಫಾಲೋ ಬಟನ್ ಅನ್ನು ಟ್ಯಾಪ್ ಮಾಡದೆಯೇ ಇತರ ಬಳಕೆದಾರರನ್ನು ಫಾಲೋ ಮಾಡಲು ಅನುಮತಿಸುತ್ತದೆ. ಅದಕ್ಕಾಗಿ ಬಳಕೆದಾರರ ಹ್ಯಾಂಡಲ್‌ನ ಪಕ್ಕದಲ್ಲಿರುವ + ಐಕಾನ್ ಅನ್ನು ಟ್ಯಾಪ್ ಮಾಡಬೇಕಿರುತ್ತದೆ.

ಥ್ರೆಡ್‌ ಆಪ್‌ನಲ್ಲಿ ಹೊಸ ಥ್ರೆಡ್ ಅನ್ನು ಕ್ವಿಕ್‌ ಆಗಿ ತೆರೆಯಬಹುದು :
ಮೆಟಾ ಒಡೆತನದ ಥ್ರೆಡ್‌ ಆಪ್‌ನಲ್ಲಿ ಫೋಟೊ ಶೇರ್ ಮಾಡಲು ಅಥವಾ ಏನಾದರೂ ಫೋಸ್ಟ್‌ ಮಾಡಲು ಹೊಸ ಥ್ರೆಡ್ ಅನ್ನು ಕಣ್ಣ ರೆಪ್ಪೆ ಮಿಟುಕಿಸುವುದರೊಳಗೆ ಬಳಕೆದಾರರು ಹೊಸ ಥ್ರೆಡ್ಸ್‌ ತೆರೆಯಬಹುದು. ಅದಕ್ಕಾಗಿ ಆಪ್‌ನ ಕೆಳಭಾಗದಲ್ಲಿರುವ + ಐಕಾನ್ ಜಸ್ಟ್‌ ಕ್ಲಿಕ್ ಮಾಡಿದರೆ ಸಾಕು. ಆದರೆ ಥ್ರೆಡ್‌ನಲ್ಲಿ (ಮಲ್ಟಿಪಲ್ ಥ್ರೆಡ್‌ಗಳು) ಹೊಸ ಥ್ರೆಡ್ ಅನ್ನು ರಚಿಸಲು ಬಳಕೆದಾರರು ಮೊದಲ ಥ್ರೆಡ್‌ನ ಕೆಳಗೆ, ಎರಡನೇ ಥ್ರೆಡ್ ಅಥವಾ ಅಧಿಕ ಥ್ರೆಡ್‌ಗಳನ್ನು ಸೇರಿಸಲು ಥ್ರೆಡ್‌ಗೆ ಸೇರಿಸು ಬಟನ್ ಅನ್ನು ಕ್ಲಿಕ್‌ ಮಾಡಬೇಕು.

ಥ್ರೆಡ್‌ ಆಪ್‌ನಲ್ಲಿ ಬಳಕೆದಾರರನ್ನು ಮ್ಯೂಟ್ ಮಾಡುವ ಆಯ್ಕೆ ಇದೆ
ಸದ್ಯ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಥ್ರೆಡ್‌ ಆಪ್‌ ಹಲವು ಆಯ್ಕೆ ಪಡೆದಿದೆ. ಇನ್ನು ಇತರೆ ಬಳಕೆದಾರರು ಹೊಸ ಥ್ರೆಡ್ ಅನ್ನು ಪೋಸ್ಟ್ ಮಾಡಿದಾಗಲೆಲ್ಲಾ ನೋಟಿಫಿಕೇಶನ್‌ ಪಡೆಯಲು ಬಳಕೆದಾರರು ಇಷ್ಟಪಡದಿದ್ದರೆ, ವೈಯಕ್ತಿಕ ವ್ಯಕ್ತಿಗಳನ್ನು ಮ್ಯೂಟ್ ಮಾಡುವ ಆಯ್ಕೆ ಅನ್ನು ಹೊಂದಿರುತ್ತವೆ. ಅಧಿಕ ಕಾಳಜಿ ವಹಿಸದ ಅಥವಾ ಇತರೆ ಬಳಕೆದಾರರು ಏನನ್ನಾದರೂ ಪೋಸ್ಟ್ ಮಾಡಿದಾಗಲೆಲ್ಲಾ ತೊಂದರೆಗೊಳಗಾಗುವುದನ್ನು ತಪ್ಪಿಸಲು ಬಯಸುವ ಬಳಕೆದಾರರಿಗೆ ಈ ಆಯ್ಕೆ ಉಪಯುಕ್ತ ಆಗಬಹುದು.

ಥ್ರೆಡ್‌ ಆಪ್‌ನಲ್ಲಿ ಹಿಡೆನ್‌ ವರ್ಡ್ಸ್‌
ಥ್ರೆಡ್‌ಗಳು ಮೀಸಲಾದ ಹಿಡನ್ ವರ್ಡ್ಸ್ ಆಯ್ಕೆ ಅನ್ನು ಸಹ ಪಡೆದಿವೆ. ಇದು ಬಳಕೆದಾರರಿಗೆ ಆಕ್ಷೇಪಾರ್ಹ ಪ್ರತ್ಯುತ್ತರಗಳನ್ನು ಮತ್ತು ನಿರ್ದಿಷ್ಟ ವರ್ಡ್ಸ್‌ ಮತ್ತು ಪದಗುಚ್ಛಗಳೊಂದಿಗೆ ಪ್ರತ್ಯುತ್ತರಗಳನ್ನು ಹೈಡ್‌ ಮಾಡಲು ಸಹ ಅವಕಾಶ ಮಾಡಿಕೊಡುತ್ತದೆ. ಪ್ರೊಫೈಲ್‌ನಿಂದ ಹಿಡೆನ್‌ ಪೇಜ್‌ಗೆ ಹೋಗುವ ಮೂಲಕ ಈ ಆಯ್ಕೆ ಅನ್ನು ಸಕ್ರಿಯ ಮಾಡಬಹುದು ಮತ್ತು ಹೈಡ್‌ ಮಾಡಿದ ಪದಗಳ ಆಯ್ಕೆಯನ್ನು ಸರ್ಚ್ ಮಾಡಬಹುದು.

ಮೆಟಾ ಥ್ರೆಡ್‌ ಆಪ್‌ ಡೌನ್‌ಲೋಡ್‌ :
ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಬಹುದು. ಹಾಗೆಯೇ ಐಓಎಸ್‌ ಬಳಕೆದಾರರು ಆಪಲ್‌ ಸ್ಟೋರ್‌ನಿಂದ ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಬಹುದು.

Best Mobiles in India

English summary
Few hidden features of Meta's Threads you need to know. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+