ಕಳುಹಿಸಿದ ವಾಟ್ಸಪ್ ಮೆಸೆಜ್ ಡಿಲೀಟ್ ಮಾಡುವ ಆಯ್ಕೆ ಬಗೆಗಿನ ಕುತೂಹಲಕರ ಸಂಗತಿಗಳು!
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಮೆಸೆಂಜರ್ ಈಗಾಗಲೇ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದ ವಾಟ್ಸಪ್ ಇತ್ತೀಚಿಗೆ, ಕಳುಹಿಸಿದ ಮೆಸೆಜ್ ಅನ್ನು ಡಿಲೀಟ್ ಮಾಡುವ delete for everyone ಆಯ್ಕೆಯನ್ನು ಅಳವಡಿಸಿತ್ತು. ಅಚಾನಕ್ ಆಗಿ ಮೆಸೆಜ್ ಕಳುಹಿಸಿದಾಗ ಅನ್ನು ಡಿಲೀಟ್ ಮಾಡಲು ಬಹುತೇಕ ಬಳಕೆದಾರರು ಈ ಆಯ್ಕೆಯನ್ನು ಬಳಕೆ ಮಾಡುತ್ತಿದ್ದು, ಆದರೆ ಡಿಲೀಟ್ ಆಫ್ ಎವರಿಒನ್ ಆಯ್ಕೆ ವರ್ಕ್ ಆಗುತ್ತಾ?

ಹೌದು, ಬಳಕೆದಾರರು ವಾಟ್ಸಪ್‌ನಲ್ಲಿ ಯಾರಿಗಾದರು ತಪ್ಪಾಗಿ ಅಥವಾ ಆಕಸ್ಮಿಕವಾಗಿ ಮೆಸೆಜ್ ಮಾಡಿದಾಗ ತಕ್ಷಣಕ್ಕೆ delete for everyone ಫೀಚರ್ ನೆರವಿನಿಂದ ಕಳುಹಿಸಿದ ಮೆಸೆಜ್ ಡಿಲೀಟ್ ಮಾಡುತ್ತಾರೆ. ಮೆಸೆಜ್ ಏನೋ ಡಿಲೀಟ್ ಆಗುತ್ತದೆ ಆದರೆ 'ದಿಸ್ ಮೆಸೆಜ್ ವಾಸ್ ಡಿಲೀಡೆಟ್ ಅಂತಾ' (This message was deleted) ಇಬ್ಬರ ವಾಟ್ಸಪ್ ಚಾಟ್‌ನಲ್ಲಿಯೂ ಕಾಣಿಸುತ್ತದೆ. ಹಾಗೂ ಅಷ್ಟರಲ್ಲಿ ಅವರು ಮೆಸೆಜ್ ಓದಿರಲೂಬಹುದು. ಹೀಗಾಗಿ ಈ ಫೀಚರ್ ಬಳಸುವ ಮುನ್ನ ಕೆಲವು ಸಂಗತಿಗಳನ್ನು ಬಳಕೆದಾರರು ತಿಳಿದಿರಲೇಬೇಕೆ. ಅಂತಹ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಫೋಟೊ/ವಿಡಿಯೊ ಸಹ ಡಿಲೀಟ್
ವಾಟ್ಸಪ್ ಚಾಟ್ ಮಾಡುವಾಗ ಅಚಾನಕ್ ಆಗಿ ಕಳುಹಿಸುವ ಮೆಸೆಜ್ ಡಿಲೀಟ್ ಮಾಡಲು delete for everyone ಆಯ್ಕೆ ಸೆಲೆಕ್ಟ್ ಮಾಡಿದರೇ ಆ ಮೆಸೆಜ್ ಇಬ್ಬರಲ್ಲಿಯೂ ಡಿಲೀಟ್ ಆಗುತ್ತದೆ. ಬರೀ ಟೆಕ್ಟ್ಸ್ ಮೆಸೆಜ್ ಅಷ್ಟೇ ಅಲ್ಲ ಫೋಟೊ, ವಿಡಿಯೊ ಸಹ ಡಿಲೀಟ್ ಮಾಡಬಹುದು. ಆಂಡ್ರಾಯ್ಡ್ ಫೋನ್ ಬಳಕೆದಾರರು ವಾಟ್ಸಪ್ ಚಾಟ್ ಲಿಸ್ಟಿನಲ್ಲಿ ಫೋಟೊ/ವಿಡಿಯೊ ಡಿಲೀಟ್ ಮಾಡಿದರೇ, ಸ್ವೀಕರಿಸಿದವರ ಗ್ಯಾಲರಿಯಿಂದಲೂ ಡಿಲೀಟ್ ಆಗುತ್ತದೆ.

ನೋಟಿಫೀಕೇಶನ್ ಬರೊದಿಲ್ಲ
delete for everyone ಆಯ್ಕೆಯಲ್ಲಿ ಡಿಲೀಟ್ ಮಾಡಿರುವ ವಾಟ್ಸಪ್ ಮೆಸೆಜ್ ಯಶಸ್ವಿಯಾಗಿ ಡಿಲೀಟ್ ಆಗಿದೆ ಎಂದು ಬಳಕೆದಾರರಗೆ ಯಾವುದೇ ನೋಟಿಫೀಕೇಶನ್ ಬರುವುದಿಲ್ಲ. ಆದರೆ ಡಿಲೀಟ್ ಮಾಡಿರುವ ಮೆಸೆಜ್ ಸ್ಥಳದಲ್ಲಿ ದಿಸ್ ಮೆಸೆಜ್ ವಾಸ್ ಡಿಲೀಡೆಟ್ ಎಂದು ಕಾಣಿಸುತ್ತದೆ.

ಮೆಸೆಜ್ ವೀಕ್ಷಿಸಿರುವ ಸಾಧ್ಯತೆ
ವಾಟ್ಸಪ್‌ನಲ್ಲಿ delete for everyone ಆಯ್ಕೆ ನಿಜಕ್ಕೂ ಉತ್ತಮ ಆಗಿದೆ. ಆದರೆ ಮೆಸೆಜ್ ಡಿಲೀಟ್ ಮಾಡುವ ಮೊದಲೇ ಮೆಸೆಜ್ ಸ್ವೀಕರಿಸುವ ವ್ಯಕ್ತಿ ಮೆಸೆಜ್ ಓದಬಹುದು. ಅಥವಾ ಡಿಸ್‌ಪ್ಲೇ ನೋಟಿಫೀಕೇಶನ್‌ನಲ್ಲಿಯೇ ಮೆಸೆಜ್ ಓದಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನೀವು ಡಿಲೀಟ್ ಮಾಡಿರುವ ಮೆಸೆಜ್ ಅನ್ನು ಸ್ವೀಕರಿಸುವ ವ್ಯಕ್ತಿ ಮೆಸೆಜ್ ನೋಡಿಲೇ ಇಲ್ಲ ಎನ್ನುವ ತೀರ್ಮಾನಕ್ಕೆ ಬರಬೇಡಿ.

ಡಿಲೀಟ್ ಮಾಡಲು ಕಾಲಮಿತಿ
ವಾಟ್ಸಪನಲಲ್ಲಿ ಲಭ್ಯ ಇರುವ delete for everyone ಫೀಚರ್ ಬಳಸಿ ಕಳುಹಿಸಿದ ಮೆಸೆಜ್ ಅನ್ನು ಡಿಲೀಟ್ ಮಾಡಬಹುದು. ಆದರೆ ಇದಕ್ಕೆ ಒಂದು ಗಂಟೆ ಟೈಮ್ ಮಿತಿ ಇದ್ದು, ಆ ಬಳಿಕ ಡಿಲೀಟ್ ಮಾಡುವ ಆಯ್ಕೆ ಅಲಭ್ಯ.


Click it and Unblock the Notifications








