ಗೇಮಿಂಗ್‌ ಮೊಬೈಲ್‌ ಖರೀದಿ ಮಾಡುವ ಮುನ್ನ ಈ ಅಂಶ ಮರೆಯದೆ ಗಮನಿಸಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಅಗತ್ಯ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯುತ್ತವೆ. ಅದಲ್ಲದೇ, ಗೇಮಿಂಗ್‌ಗೂ ಸ್ಮಾರ್ಟ್‌ಫೋನ್‌ ಪ್ರಮುಖ ಸಾಧನ ಎನಿಸಿಕೊಂಡಿದೆ. ಫೋನಿನಲ್ಲಿ ಗೇಮ್ ಆಡಲು ಅನೇಕ ಗೇಮ್ ಪ್ರಿಯರು ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಕಂಪನಿಗಳು ಗೇಮಿಂಗ್‌ಗಾಗಿಯೇ ಕೆಲವು ವಿಶೇಷ ಫೋನ್‌ಗಳನ್ನು ಪರಿಚಯಿಸಿವೆ.

ಗೇಮಿಂಗ್‌ ಮೊಬೈಲ್‌ ಖರೀದಿ ಮಾಡುವ ಮುನ್ನ ಈ ಅಂಶ ಮರೆಯದೆ ಗಮನಿಸಿ!

ಹೌದು, ಗೇಮಿಂಗ್‌ಗಾಗಿ ವಿಶೇಷ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಗೇಮಿಂಗ್‌ ಉದ್ದೇಶಕ್ಕಾಗಿ ಹೊಸ ಫೋನ್‌ ಖರೀದಿಸುವ ಗ್ರಾಹಕರು ಪ್ರೊಸೆಸರ್, ಕೂಲಿಂಗ್ ಸಿಸ್ಟಮ್, ಡಿಸ್ಪ್ಲೇ, ಮೆಮೊರಿ ಮತ್ತು ಸ್ಟೋರೇಜ್, ಬ್ಯಾಟರಿ ಸೇರಿದಂತೆ ಅಂಶಗಳನ್ನು ಗಮನಿಸುವುದು ಮುಖ್ಯ. ಹಾಗಾದರೇ ಗೇಮಿಂಗ್‌ಗಾಗಿ ಫೋನ್ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಅತ್ಯುತ್ತಮ ಡಿಸ್‌ಪ್ಲೇ
ಮೊಬೈಲ್‌ನಲ್ಲಿ ಗೇಮ್ ಆಡಲು ಅತ್ಯುತ್ತಮ ಡಿಸ್‌ಪ್ಲೇ ಅಗತ್ಯ. ಹೀಗಾಗಿ ಹೆಚ್‌ಡಿ, ಓಎಲ್‌ಇಡಿ ಅಥವಾ AMOLED ಮಾದರಿಯ ಡಿಸ್‌ಪ್ಲೇ ಇರುವುದು ಉತ್ತಮ. ಹಾಗೆಯೇ ಡಿಸ್‌ಪ್ಲೇಯ ಬ್ರೈಟ್ನೆಸ್‌, ವಿಶಾಲ ಬಣ್ಣದ ಶ್ರೇಣಿ ಮತ್ತು ಹೆಚ್ಚಿನ ಕಾಂಟ್ರಾಸ್ಟ್ ಅನುಪಾತಗಳನ್ನು ನೀಡುತ್ತವೆ. IPS LCD ಇನ್ನೂ ಪ್ರಭಾವಶಾಲಿಯಾಗಿದೆ. 1080p ಸಾಕಷ್ಟು ಉತ್ತಮವಾಗಿದೆ. ಆದರೆ ಸ್ಪಷ್ಟತೆಗಾಗಿ ನಿಮಗೆ ಹೆಚ್ಚಿನ ಪಿಕ್ಸೆಲ್‌ಗಳ ಅಗತ್ಯವಿದ್ದರೆ 1440p ಪ್ಯಾನೆಲ್‌ಗಳನ್ನು ಹೊಂದಿರುವ ಫೋನ್‌ಗಳು ಲಭ್ಯವಿದೆ. ಡಿಸ್‌ಪ್ಲೇ ತಂತ್ರಜ್ಞಾನದ ಹೊರತಾಗಿ ರಿಫ್ರೆಶ್ ದರಗಳು ಸಮಾನವಾಗಿ ಮುಖ್ಯವಾಗಿದೆ. 90Hz ಅಥವಾ 120Hz ಉತ್ತಮವಾಗಿದೆ. ಸುಗಮ ಸ್ಕ್ರೋಲಿಂಗ್ ಅನ್ನು ಅನುಭವಿಸಲು ಲಭ್ಯವಿರುವ ಸ್ಮಾರ್ಟ್‌ಫೋನ್‌ ಉತ್ತಮ.

ಗೇಮಿಂಗ್‌ ಮೊಬೈಲ್‌ ಖರೀದಿ ಮಾಡುವ ಮುನ್ನ ಈ ಅಂಶ ಮರೆಯದೆ ಗಮನಿಸಿ!

ವೇಗದ ಪ್ರೊಸೆಸರ್ ಅಗತ್ಯ
ಗೇಮ್‌ ಸುಲಲಿತವಾಗಿ ಆಡಲು ಫೋನಿನ ಪ್ರೊಸೆಸರ್‌ ಪ್ರಮುಖ ಪಾತ್ರವಹಿಸುತ್ತದೆ. ಪ್ರೊಸೆಸರ್ ವಿಷಯಕ್ಕೆ ಬಂದಾಗ ವೇಗವು ಅಗತ್ಯ ಎನಿಸುತ್ತದೆ. ಪ್ರಮುಖ ಸ್ನಾಪ್‌ಡ್ರಾಗನ್ 8 ಸರಣಿ ಅಥವಾ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000 ಶ್ರೇಣಿಯಂತಹ ಉನ್ನತ-ಮಟ್ಟದ ಪ್ರೊಸೆಸರ್‌ಗಳ ಫೋನ್‌ ಉತ್ತಮ ಆಯ್ಕೆ ಆಗಿದೆ. ಸ್ನಾಪ್‌ಡ್ರಾಗನ್ 6 ಮತ್ತು 7 ಸರಣಿಗಳು ಮತ್ತು ಡೈಮೆನ್ಸಿಟಿ 500 ಸರಣಿಗಳಂತಹ ಮಿಡ್‌ರೇಂಜ್ ಪ್ರೊಸೆಸರ್‌ಗಳು ಸಹ ಉತ್ತಮ.

ಮೊಬೈಲ್‌ ಕೂಲಿಂಗ್ ಸಿಸ್ಟಮ್ ಸೌಲಭ್ಯ
ನಿರಂತರ ಫೋನ್ ಬಳಕೆಯಿಂದ ಪ್ರೊಸೆಸರ್‌ಗಳು ಬಿಸಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕೂಲಿಂಗ್ ಸಿಸ್ಟಮ್ ಇರುವುದು ಅಗತ್ಯ. ಈ ಅಂಶ ಗಮನದಲ್ಲಿಟ್ಟುಕೊಂಡು ಮಿಡ್‌ರೇಂಜ್ ಫೋನ್‌ಗಳು ಮತ್ತು ಫ್ಲ್ಯಾಗ್‌ಶಿಪ್ ಫೋನ್‌ಗಳು ಹೆಚ್ಚು ಬಿಸಿಯಾಗದಂತೆ ಹೆಚ್ಚಿನ ಕೆಲಸದ ಹೊರೆಗಳನ್ನು ದೀರ್ಘಕಾಲದವರೆಗೆ ನಿಭಾಯಿಸಬಹುದು. ಆಧುನಿಕ ಸ್ಮಾರ್ಟ್ಫೋನ್ ಸಮರ್ಥ ಕೂಲಿಂಗ್ ಅನ್ನು ಹೊಂದಿವೆ. ಕೇವಲ ಗೇಮಿಂಗ್‌ಗಾಗಿ ಫೋನ್‌ಗಳಾಗಿ ಮಾರಾಟ ಮಾಡಲಾಗುವುದಿಲ್ಲ. ಗೇಮಿಂಗ್-ಕೇಂದ್ರಿತ ಫೋನ್‌ಗಳು ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತವೆ.

Most Read Articles
Best Mobiles in India

English summary
Few Things You Must Consider When Buying a Gaming Mobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X