ಸ್ಮಾರ್ಟ್‌ಫೋನ್ ಬ್ಯಾಟರಿ ಬಹುಬೇಗ ಖಾಲಿ ಆಗುತ್ತಿದ್ದರೇ ಮೊದಲು ಈ ಕ್ರಮ ಅನುಸರಿಸಿ!
ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದೆ. ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನಿನ ಮೂಲಕವೇ ನಡೆಯುವುದರಿಂದ ಸ್ಮಾರ್ಟ್‌ಫೋನ್ ಯಾವಾಗಲೂ ಬಳಕೆಯಲ್ಲಿರುವ ಡಿವೈಸ್ ಆಗಿದೆ. ಹೀಗಾಗಿ ಬಳಕೆದಾರರು ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್ ಮತ್ತು ಸ್ಮಾರ್ಟ್‌ಫೋನ್ ನಿರ್ವಹಣೆಯಲ್ಲಿ ಕಾಳಜಿ ನೀಡಿದರೂ ಎಷ್ಟೋ ಸಲ ನಿರೀಕ್ಷಿಸಿದಷ್ಟು ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್‌ಅಪ್ ಬರುವುದೇ ಇಲ್ಲ. ಬಹುಬೇಗ ಬ್ಯಾಟರಿ ಖಾಲಿಯಾಗುವ ಸಾಧ್ಯತೆಗಳು ಹೆಚ್ಚು.

ಹೌದು, ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿಗೆ ಬ್ಯಾಟರಿ ಬ್ಯಾಕ್‌ಅಪ್ ಪೂರಕ. ಆಂಡ್ರಾಯಡ್ ಮತ್ತು ಐಫೋನ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ನಾನಾ ಕಾರಣಗಳಿಂದಾಗಿ ಡ್ರೈ ಆಗಿರುತ್ತವೆ. ಅವುಗಳಲ್ಲಿ ಕೆಲವೊಮ್ಮೆ ಬಳಕೆದಾರರು ಚಾರ್ಜ್ ಮಾಡುವಾಗ ತಪ್ಪು ಕ್ರಮ ಅನುಸರಿಸಿದಾಗಲೂ ಬೇಗನೆ ಬ್ಯಾಟರಿ ಖಾಲಿ ಆಗುವ ಸಾಧ್ಯತೆಗಳು ಇರುತ್ತವೆ. ಆದರೆ ಫೋನ್‌ಗಳ ಬ್ಯಾಟರಿ ಬಹುಬೇಗ ಖಾಲಿಯಾಗುವುದನ್ನು ತಡೆಯಲು ಕೆಲ ಕ್ರಮ ಅನುಸರಿಸಬಹುದು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ವ್ಯವಸ್ಥಿತವಾಗಿ ಚಾರ್ಜ್ ಮಾಡಿ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಬಹುತೇಕ ಬಳಕೆದಾರರು ಫೋನ್ ಬ್ಯಾಟರಿ ಪೂರ್ಣ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ನಿರ್ಧಾರವಲ್ಲ. ಸ್ಮಾರ್ಟ್‌ಫೋನ್ ಸಂಪೂರ್ಣ 100% ಚಾರ್ಜ್ ಮಾಡಲೇಬಾರದು. ಹೆಚ್ಚೆಂದರೇ ಶೇ.90 ಪರ್ಸೆಂಟ್ ದಾಟಿದ್ದರೇ ಚಾರ್ಜ್ ನಿಲ್ಲಿಸುವುದು ಬೆಸ್ಟ್. ಇದರಿಂದ ಬ್ಯಾಟರಿ ಲೈಫ್‌ಗೂ ಉತ್ತಮ.

ಬ್ಯಾಟರಿ ಪೂರ್ಣ ಖಾಲಿ ಮಾಡಬೇಡಿ
ಸ್ಮಾರ್ಟ್‌ಫೋನಿನ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಇದ್ದಾಗ ಬಳಕೆ ಸಹ ಕಡಿಮೆ ಮಾಡುವುದು ಅತೀ ಉತ್ತಮ. ಸಂಪೂರ್ಣ ಖಾಲಿ ಆಗುವವರೆಗೂ ಫೋನ್ ಬಳಕೆ ಮಾಡುವುದನ್ನು ಮಾಡಲೇಬೇಡಿ. ಇದರಿಂದ ಬ್ಯಾಟರಿ ಲೈಫ್ ಹಾಳಾಗುವ ಸಾಧ್ಯತೆ ಅಧಿಕ. ಶೇ.20%ನಷ್ಟು ಇದ್ದಾಗ ಫೋನ್ ಚಾರ್ಜ್ ಮಾಡುವುದು ಲೇಸು.

ಬ್ರೈಟ್ನೆಸ್ ಕಡಿಮೆ ಇಡಿ
ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಅಧಿಕ ಬ್ರೈಟ್ನೆಸ್ ನಲ್ಲಿ ಬಳಕೆ ಮಾಡುತ್ತಾರೆ ಇದರಿಂದ ಬ್ಯಾಟರಿ ಬಳಕೆ ಸಹ ಅಧಿಕವಾಗುತ್ತದೆ. ಆಟೋ ಬ್ರೈಟ್ನೆಸ್ ಇಡುವುದು ಉತ್ತಮ. ಹಾಗೆಯೇ ವೈಫೈ ಬಳಕೆ ಸಹ ಮಾಡುವುದು ಬ್ಯಾಟರಿ ಕಬಳಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ.

ಡಾರ್ಕ್ ಮೋಡ್ ಬಳಕೆ ಉತ್ತಮ
ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಸಂರಕ್ಷಿಸಲು ಸಹಾಯ ಮಾಡಲು ಅನೇಕ ಅಪ್ಲಿಕೇಶನ್‌ಗಳು ಹೊಸದಾಗಿ ಡಾರ್ಕ್ ಮೋಡ್ ಅನ್ನು ಹೊರತಂದಿವೆ. ನಿಮ್ಮ ಡಿವೈಸ್‌ನಲ್ಲಿ ಡಾರ್ಕ್ ಥೀಮ್ ಅನ್ನು ಅನ್ವಯಿಸುವುದರಿಂದ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳಂತಹ ವೈಶಿಷ್ಟ್ಯಗಳು ಲಭ್ಯವಿರುವ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಿ.

ಬಳಕೆ ಮಾಡದ ಆಪ್ಸ್ ಕ್ಲೋಸ್ ಮಾಡಿ
ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.


Click it and Unblock the Notifications