Home
ಸುದ್ದಿಜಾಲ

UPI ಪಾವತಿ ಮಾಡುವಾಗ ಈ ತಪ್ಪು ಮಾಡಿದ್ರೆ, ನಿಮ್ಮ ಹಣ ಖಾಲಿ!

ಸದ್ಯ ಯುಪಿಐ ಪೇಮೆಂಟ್‌ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಜನರು ಗೂಗಲ್ ಪೇ ಅಥವ ಫೋನ್ ಪೇಯಂತಹ ಆಪ್‌ಗಳನ್ನು ಉಪಯೋಗ ಮಾಡುತ್ತಾರೆ. ಯುಪಿಐ ಪೇಮೆಂಟ್‌ ಸರಳ ಹಾಗೂ ಸುರಕ್ಷಿತವಾಗಿದೆ. ಅದಾಗ್ಯೂ, ಯುಪಿಐ ಪೇಮೆಂಟ್‌ ಮಾಡುವಾಗ ಬಳಕೆದಾರರು ಎಚ್ಚರ ವಹಿಸುವುದು ಅಗತ್ಯ. ಸ್ವಲ್ವವೇ ಯಾಮಾರಿದರೂ ಹಣ ಎಗರಿಸುವ ವಂಚಕರು ಇದ್ದಾರೆ.

ಹೌದು, ಇತ್ತೀಚಿಗೆ ಆನ್‌ಲೈನ್‌ ಪೇಮೆಂಟ್ ಹೆಚ್ಚು ಮುನ್ನಲೆಯಲ್ಲಿದೆ. ಅದರೊಂದಿಗೆ ಆನ್‌ಲೈನ್‌ ಪಾವತಿ ವಂಚನೆಯ ಘಟನೆಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಯುಪಿಐ ಪೇಮೆಂಟ್ ಮಾಡುವಾಗ ಜನರು ಕೆಲವು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಸೂಕ್ತ ಹಾಗೂ ಅವಶ್ಯ ಎನ್ನಬಹುದಾಗಿದೆ. ಹಾಗಾದರೇ ಅಂತಹ ಕೆಲವು ಅಗತ್ಯ ಟಿಪ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

UPI ಪಾವತಿ ಮಾಡುವಾಗ ಈ ತಪ್ಪು ಮಾಡಿದ್ರೆ, ನಿಮ್ಮ ಹಣ ಖಾಲಿ!

ಸಾರ್ವಜನಿಕ ಸ್ಥಳಗಳಲ್ಲಿ UPI ಆಪ್‌ ಬಳಸುವಾಗ ಎಚ್ಚರ: ಸಾರ್ವಜನಿಕ ಸ್ಥಳಗಳಲ್ಲಿ UPI ಆಪ್‌ ಬಳಸುವಾಗ ಎಚ್ಚರ ವಹಿಸಿ. ಜನಸಂದಣಿ ಇರುವ ಸ್ಥಳಗಳಲ್ಲಿ UPI ಅಪ್ಲಿಕೇಶನ್‌ಗಳು ಅಥವಾ ಯಾವುದೇ ಇತರ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವುದು ಸೂಕ್ತವಲ್ಲ. ಏಕೆಂದರೆ ಸೈಬರ್ ವಂಚಕರು ಖಾಸಗಿ ಮಾಹಿತಿಗೆ ಹೊಂಚು ಹಾಕಿರುವ ಸಾಧ್ಯತೆ ಇರುತ್ತವೆ. ಮುಖ್ಯವಾಗಿ, ರೈಲ್ವೆ ನಿಲ್ದಾಣಗಳು, ಕೆಫೆಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಅನ್ನು ಬಳಸುವುದರಿಂದ ಆನ್‌ಲೈನ್ ವಂಚನೆಗಳಿಗೆ ಒಡ್ಡಿಕೊಳ್ಳುವುದನ್ನು ಹೆಚ್ಚಿಸುತ್ತದೆ.

ಯುಪಿಐ ನಂಬರ್ ಶೇರ್ ಮಾಡಬೇಡಿ : ನೀವು ಬಳಸುತ್ತಿರುವ ಬಹುತೇಕ ಮೊಬೈಲ್ ವಾಲೆಟ್ ಆಪ್‌ಗಳೆಲ್ಲವೂ ಯುಪಿಐ ಆಧಾರದಲ್ಲಿ ಕೆಲ ಮಾಡುತ್ತವೆ. ಈ ಆಪ್‌ಗಳ ಜೀವಾಳವೇ ಯುಪಿಐ ನಂಬರ್ (ಪಾಸ್‌ವರ್ಡ್‌) ಎಂದು ಹೇಳಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಯುಪಿಐ ನಂಬರ್ ಅನ್ನು ಮತ್ತೊಬ್ಬರಿಗೆ ಶೇರ್ ಮಾಡಬೇಡಿ. ನಿಮ್ಮ ಯುಪಿಐ ನಂಬರ್ ಸೇಫ್ ಆಗಿರಲಿ. ಆತ್ಮೀಯರೊಂದಿಗೂ ಪಿನ್ ಶೇರ್ ಮಾಡುವುದು ಉತ್ತಮವಲ್ಲ.

UPI ಪಾವತಿ ಮಾಡುವಾಗ ಈ ತಪ್ಪು ಮಾಡಿದ್ರೆ, ನಿಮ್ಮ ಹಣ ಖಾಲಿ!

ರಿಕ್ಷೆಸ್ಟ್ ಮನಿ ಆಯ್ಕೆ ಬಗ್ಗೆ ಎಚ್ಚರವಿರಲಿ : ವಾಲೆಟ್ ಆಪ್‌ಗಳಲ್ಲಿ 'ರಿಕ್ಷೆಸ್ಟ್ ಮನಿ' ಎಂಬ ಆಯ್ಕೆ ಇರುತ್ತದೆ. ಈ 'ರಿಕ್ಷೆಸ್ಟ್ ಮನಿ' ಆಯ್ಕೆಯಲ್ಲಿ ಆಪ್ ಮೂಲಕ ಇತರರಿಗೆ ಹಣಕ್ಕಾಗಿಉ ವಿನಂತಿ ಕಳುಹಿಸಬಹುದು. ಅನಾಮಿಕರು ಕರೆ ಮಾಡಿ, ನಿಮಗೆ ಬಹುಮಾನ ಬಂದಿದೆ. ರಿಕ್ವೆಸ್ಟ್ ಬಂದ ತಕ್ಷಣ ಅಕ್ಸೆಪ್ಟ್ ಅಂತ ಕೊಟ್ಟುಬಿಡಿ ಎಂದು ಹೇಳುತ್ತಾರೆ. ಹಾಗೇ ಒಪ್ಪಿಗೆ ನೀಡಬೇಡಿ. ವಾಸ್ತವವಾಗಿ ನಾವು ಅಕ್ಸೆಪ್ಟ್ ಮಾಡುವುದು ತನ್ನ ಖಾತೆಯಿಂದ ಆ ಅನಾಮಿಕನ ಖಾತೆಗೆ ಹಣ ವರ್ಗಾವಣೆಯನ್ನು ಕೇಳಿರುತ್ತದೆ. ನಂತರ ಪಿನ್ ನಮೂದಿಸಿದರೆ ಖಾತೆಯಲ್ಲಿನ ಹಣ ಕೂಡ ಖಾಲಿಯಾಗುತ್ತದೆ.

ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ : ಬ್ಯಾಂಕಿನ ಲಿಂಕ್‌ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್‌ ಯುಆರ್‌ಎಲ್‌ ಟೈಪ್‌ ಮಾಡಿ ಮುಂದುವರಿಸಿ. ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್‌ ಕೆಫೆಗಳಲ್ಲಿ) ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟು ನಡೆಸಬೇಡಿ. ವಂಚಕರು ತಕ್ಷ ಣಕ್ಕೆ ಸಿಕ್ಕಿ ಬೀಳುವುದರಿಂದ ತಪ್ಪಿಸಲು, ಬ್ಯಾಂಕ್‌ ರಜಾದಿನಗಳಲ್ಲೋ ಅಥವಾ ಬ್ಯಾಂಕ್‌ ತೆರೆಯುವ ಮುನ್ನವೋ ಚಾಕಚಕ್ಯತೆ ಮೆರೆಯುತ್ತಾರೆಂಬುದು ನೆನಪಿರಲಿ. ಈ ಕುರಿತು ನಿಮಗೆ ಸಾಕಷ್ಟು ಎಚ್ಚರವಿರಿ.

ಹೆಚ್ಚು ಯುಪಿಐ ಆಪ್‌ ಬೇಡ : ಆನ್‌ಲೈನ್‌ ಪಾವತಿಗಳಿಗೆ ಕೊಡುಗೆ ಲಭ್ಯ ಎಂದು ಹೆಚ್ಚಿನ ಯುಪಿಐ ಪೇಮೆಂಟ್‌ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಬೇಡಿ. ಬಹು ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ವಂಚನೆಗೊಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಮ್ಮ ಎಲ್ಲಾ ವಹಿವಾಟುಗಳಿಗೆ ಒಂದು ಅಥವಾ ಎರಡು ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವುದು ಸೂಕ್ತವಾಗಿದೆ.

Best Mobiles in India

English summary
Few Tips to Protect Your Money from UPI Frauds. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+