ಮಾರುಕಟ್ಟೆಯಲ್ಲಿ ಲೀಡಿಂಗ್‌ನಲ್ಲಿ ಕಾಣಿಸಿಕೊಂಡ ಟಾಪ್ ಮೊಬೈಲ್‌ಗಳು!
ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಿನ್ನ ಕಂಪನಿಗಳ ಹಲವು ನೂತನ ಮೊಬೈಲ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಅವುಗಳಲ್ಲಿ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ಫೋನ್‌ಗಳ ಆಯ್ಕೆ ಗ್ರಾಹಕರಿಗೆ ಲಭ್ಯ. ಆದರೆ, ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆ ಆಗುವ ಪ್ರತಿ ಫೋನ್ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಕೆಲವೇ ಕೆಲವು ಫೋನ್‌ಗಳು ಸದ್ದು ಮಾಡುತ್ತವೆ.
ಹೌದು, ಟೆಕ್ ಮಾರುಕಟ್ಟೆಯಲ್ಲಿ ಲಾಂಚ್ ಆದ ಫೋನ್‌ಗಳಲ್ಲಿ ಕೆಲವು ಅವುಗಳ ಬೆಲೆಯಿಂದ, ಇನ್ನು ಕೆಲವು ಫೀಚರ್ಸ್‌ಗಳಿಂದ ಹಾಗೂ ಮತ್ತೆ ಕೆಲ ಫೋನ್‌ಗಳು ಡಿಸೈನ್‌ಗಳಿಂದ ಗ್ರಾಹಕರ ಗಮನ ಸೆಳೆಯುತ್ತವೆ. ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G : ಈ ಸ್ಮಾರ್ಟ್‌ಫೋನ್ 6.4 ಇಂಚಿನ ಅಮೋಲೆಡ್ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಎಕ್ಸಿನೋಸ್ 1380SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಒನ್ UI 5.1 ರನ್ ಮಾಡಲಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ 50ಎಂಪಿ ಪ್ರಾಥಮಿಕ ಕ್ಯಾಮೆರಾ, 12ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಆಯ್ಕೆ ಇದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ : ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ QHD+ ಡೈಮಂಡ್ ಅಮೋಲೆಡ್ ಜೊತೆಗೆ 6.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಅನ್ನು ಪಡೆದಿದೆ. ಈ ಫೋನ್ ಕ್ವಾಡ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನಿನ ಬ್ಯಾಟರಿ 5,000mAh ಸಾಮರ್ಥ್ಯದಲ್ಲಿದೆ.
ರೆಡ್ಮಿ ನೋಟ್ 12 ಪ್ರೊ 5G : ಈ ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1080SoC ಪ್ರೊಸೆಸರ್ ಪಡೆದಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G : ಈ ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಅನ್ನು ಒಳಗೊಂಡಿದ್ದು, 8GB + 128 GB ಮತ್ತು 8GB + 256 GB ಸ್ಟೋರೇಜ್ ಆಯ್ಕೆ ಪಡೆದಿದೆ. ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ.
ಐಫೋನ್ 14 ಪ್ರೊ ಮ್ಯಾಕ್ಸ್ : ಈ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಇದು ಸಹ ಆಲ್ವೇಸ್ ಆನ್ ಕಾರ್ಯವನ್ನು ಹೊಂದಿದೆ. ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. ಹಾಗೆಯೇ ಈ ಐಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ನಲ್ಲಿ ಕಾರ್ಯನಿರ್ವಹಿಸುತ್ತದೆ.


Click it and Unblock the Notifications








