Just In
Don't Miss
- News
ಹತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?
- Automobiles
ಕಿಯಾ ಮೋಟಾರ್ಸ್ ಹೊಸ ಕಾರು ಉತ್ಪಾದನಾ ಘಟಕಕ್ಕೆ ಸಿಕ್ತು ಅಧಿಕೃತ ಚಾಲನೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ದೂರ ಸರಿದ ಸೋನಿ!.ಯಾಕೆ ಗೊತ್ತಾ?
ಸೋನಿ ಕಂಪನಿಯು ಸದಾ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿದ್ದರಿಂದಲೇ, ಭಾರತೀಯ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸೋನಿ ಇವತ್ತಿಗೂ ತನ್ನ ಹೆಸರನ್ನು ಉನ್ನತ ಮಟ್ಟದಲ್ಲಿ ಕಾಯ್ದುಕೊಂಡು ಬಂದಿದೆ. ಹಲವು ಡಿವೈಸ್‌ಗಳಿಂದ ಗುರುತಿಸಿಕೊಂಡಿರುವ ಕಂಪನಿಯು ಎಕ್ಸ್‌ಪಿರಿಯಾ ಸ್ಮಾರ್ಟ್‌ಪೋನ್ ಸರಣಿ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲಯ ಮೂಡಿಸಿತ್ತು. ಆದರೆ ಇದೀಗ ಕಂಪನಿಯು ದೇಶಿಯ ಮೊಬೈಲ್ ಪ್ರಿಯರಿಗೆ ಶಾಕ್ ಕೊಟ್ಟಿದೆ.
ಹೌದು, ಜಪಾನ ಮೂಲದ ಸೋನಿ ಕಂಪನಿಯು ಭಾರತೀಯ ಸ್ಮಾರ್ಟ್‌ಪೋನ್ ವಲಯದಿಂದ ದೂರ ಸರಿಯಲು ನಿರ್ಧರಿಸಿದ್ದು, ಇನ್ಮುಂದೆ ದೇಶಿಯ ಮಾರುಕಟ್ಟೆಗೆ ಯಾವುದೇ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಿಲ್ಲ ಎಂದ ಹೇಳಿ ಅಚ್ಚರಿ ಮೂಡಿಸಿದೆ. ಹಾಗಾದ್ರೆ ಸೋನಿ ಕಂಪನಿಯು ಈ ನಿರ್ಧಾರ ತೆಗೆದುಕೊಂಡಿದ್ಯಾಕೆ? ಅಸಲಿಗೆ ಕಾರಣಗಳಾದರೂ ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಓದಿರಿ : ಶಿಯೋಮಿಯ 'ಮಿ 4' ಸ್ಮಾರ್ಟ್ಬ್ಯಾಂಡ್ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?

ಗಂಭೀರ ನಿರ್ಧಾರ
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಸೋನಿ ಕಂಪನಿಯು, ಹಲವು ಶ್ರೇಣಿಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಕ್ಯಾಮೆರಾ ಮತ್ತು ಸೌಂಡ್ ಕ್ವಾಲಿಟಿಯಿಂದ ಮೊಬೈಲ್ ಪ್ರೇಮಿಗಳ ಮನಗೆದ್ದಿದ ಸೋನಿ ಇದೀಗ ದೇಶಿಯ ಮಾರುಕಟ್ಟೆಗೆ ಯಾವುದೇ ಸ್ಮಾರ್ಟ್‌ಫೋನ್ ರಿಲೀಸ್ ಮಾಡದಿರಲು ಗಂಭೀರ ನಿರ್ಧಾರ ತೆಗೆದುಕೊಂಡಿದೆ.

ಮಾರುಕಟ್ಟೆಯಲ್ಲಿ ಸ್ಪರ್ಧೆ
ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಮೊಬೈಲ್ ಕಂಪನಿಗಳು ಲಗ್ಗೆ ಇಡುತ್ತಲೇ ಇದ್ದು, ವಿವಿಧ ಶ್ರೇಣಿಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಗೆ ಪರಿಚಯಿಸುತ್ತಿವೆ. ಬಹುತೇಕ ಗ್ರಾಹಕರು ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ಸ್ ಹೊಂದಿರುವ ಚೀನಾ ಕಂಪನಿಗಳತ್ತ ಆಕರ್ಷಿತರಾಗುತ್ತಿದ್ದಾದೆ. ಹೀಗಾಗಿ ಸ್ಪರ್ಧಿಸುವುದು ಕಷ್ಟ ಎಂದಿದೆ ಸೋನಿ.

ಚೀನಾ ಕಂಪನಿಗಳ ಹಾವಳಿ
ಚೀನಾ ಮೂಲದ ಶಿಯೋಮಿ, ಒಪ್ಪೊ, ವಿವೋ, ಒನ್‌ಪ್ಲಸ್ ಮತ್ತು ರಿಯಲ್ ಮಿ ಸ್ಮಾರ್ಟ್‌ಫೋನ್ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯತ್ತ ಮುನ್ನುಗ್ಗುತ್ತಿವೆ. ಇದರೊಂದಗೆ ದಕ್ಷಿಣ ಕೋರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿಯು ಸಹ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ದೃಡವಾಗಿ ಕಾಯ್ದುಕೊಂಡಿದ್ದು, ಸೋನಿಗೆ ಚೀನಾ ಕಂಪನಿಗಳ ಹಾವಳಿ ಕಷ್ಟ ಎನಿಸಿದೆ.

ಕುಗ್ಗಿದ ಮಾರಾಟ
ಸೋನಿ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತೀಯ ಮಾರುಕಟ್ಟೆಯಲ್ಲಿ ಬಹುತೇಕ ಪೂರ್ಣ ನೆಲಕಚ್ಚಿದೆ. 2019ರ ಕೌಂಟರ್ ಪಾಯಿಂಟ್ ರಿಸರ್ಚ್ ವರದಿ ಪ್ರಕಾರ ದೇಶಿಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸೋನಿ ಕಂಪನಿಯ ಶೇರ್ ಅಗಾಧ ಮಟ್ಟದಲ್ಲಿ ಕುಸಿತ ಕಂಡಿದ್ದು, ಕೇವಲ 0.01ರಷ್ಟು ದಾಖಲಾಗಿದೆ ಎಂದಿದೆ.

ಸೋನಿ ಮಾರುಕಟ್ಟೆ
ಸದ್ಯ ಜಪಾನ್, ಹಾಂಗ್‌ಕಾಂಗ್, ಯೂರೋಪ್ ಮತ್ತು ತೈವಾನ್ ರಾಷ್ಟ್ರಗಳಲ್ಲಿ ಉತ್ತಮ ಮಾರುಕಟ್ಟೆಯನ್ನು ಹೊಂದಿರುವ ಸೋನಿಯು ಈ ರಷ್ಟ್ರಗಳಲ್ಲಿಯೇ ಹೆಚ್ಚಿನ ಗಮನ ನೀಡುವುದಾಗಿ ತಿಳಿಸಿದೆ. ಹಾಗೆಯೇ ಅಲ್ಲಿ ಕಂಪನಿಯ ಮುಂಬರಲಿರುವ 5G ಸ್ಮಾರ್ಟ್‌ಫೋನ್‌ಗಳು ಉತ್ತಮ ಸೇಲ್ ಆಗಲಿವೆ ಎಂಬ ವಿಶ್ವಾಸ ಹೊಂದಿದೆ.

ಲಾಸ್ಟ್ ಸ್ಮಾರ್ಟ್‌ಫೋನ್
ಸೋನಿಯ ಕಂಪನಿಯು ಕಳೆದ ಜುಲೈನಲ್ಲಿ ಬಿಡುಗಡೆ ತನ್ನ ಪ್ಲ್ಯಾಗ್‌ಶಿಪ್ ಮಾದರಿಯ 'Xperia XZ2' ಸ್ಮಾರ್ಟ್‌ಫೋನ್ ಮಾಡಿತ್ತು. ಅದಾದ ಮೇಲೆ ಯಾವುದೇ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿಲ್ಲ ಹೀಗಾಗಿ Xperia XZ2 ಸ್ಮಾರ್ಟ್‌ಫೋನ್ ಬಹುಶಃ ಸೋನಿ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೊನೆಯ ಸ್ಮಾರ್ಟ್‌ಫೋನ್ ಆಗಲಿದೆ.
ಓದಿರಿ : 'ಬ್ಲೂಟೂತ್ ಸ್ಪೀಕರ್' ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090