Home
ಸುದ್ದಿಜಾಲ

ಉಡುಪಿ ಮಹಿಳೆಗೆ ಉಂಡೆ ನಾಮ; QR code ಮೂಲಕ ಮಾಡಿದ ಮಹಾ ಮೋಸ ಎಂತಹುದು ಗೊತ್ತಾ!?

ಆನ್‌ಲೈನ್‌ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರು ತಿಳಿದೋ ತಿಳಿಯದೋ ಈ ಜಾಲಕ್ಕೆ ಬಿದ್ದು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಈವರೆಗೂ ಮಹಾನಗರಗಳು ಅಥವಾ ಇತರೆ ರಾಜ್ಯಗಳಲ್ಲಿ ನಡೆಯುತ್ತಿದ್ದ ಮೋಸದ ಪ್ರಕರಣ ಈಗ ಕರ್ನಾಟಕದ ಮೂಲೆ ಮೂಲೆಗೂ ವ್ಯಾಪಿಸಿದೆ. ಅದರಂತೆ ಉಡುಪಿಯ ಮಹಿಳೆಯೋರ್ವರು ಭಾರೀ ಹಣ ಕಳೆದುಕೊಂಡಿದ್ದಾರೆ.

ಹೌದು, ಆನ್‌ಲೈನ್ ವಂಚನೆಗಳಲ್ಲಿ ಸಾವಿರಾರು ವಿಧ ಇದೆ. ಇದೇ ರೀತಿಯಲ್ಲಿ ಮೋಸ ಮಾಡಲಾಗುತ್ತದೆ ಎಂದು ಹೇಳಲು ಅಸಾಧ್ಯವಾದ ವಾತಾವರಣ ನಿರ್ಮಾಣ ಆಗಿದೆ. ಅದರಂತೆ ಈಗ ಕ್ಯೂಆರ್‌ ಕೋಡ್‌ (QR code) ಬಳಕೆ ಮಾಡಿಕೊಂಡು ವಂಚನೆ ಮಾಡಲಾಗಿದ್ದು, ಈ ಸಂಬಂಧ ಮಹಿಳೆಯೋರ್ವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಈ ವಂಚನೆ ನಡೆದಿದ್ದು ಹೇಗೆ?, ಈ ರೀತಿಯ ಮೋಸದ ಜಾಲದಿಂದ ಪಾರಾಗುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಉಡುಪಿ ಮಹಿಳೆಗೆ ಉಂಡೆ ನಾಮ; QR code ಮೂಲಕ ಮಾಡಿದ ಮಹಾ ಮೋಸ ಎಂತಹುದು ಗೊತ್ತಾ!?

ಕ್ಯೂಆರ್ ಕೋಡ್ ಮೂಲಕ ವಂಚನೆ: ನಾವು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಯೂ ಸಹ ಕ್ಯೂಆರ್‌ ಕೋಡ್‌ ಬಳಕೆ ಮಾಡಿಕೊಂಡೇ ಪಾವತಿ ಮಾಡುತ್ತೇವೆ. ಇದನ್ನೇ ಆಧಾರವಾಗಿರಿಕೊಂಡು ಅಂದರೆ ಸ್ಕ್ಯಾಮರ್ಸ್‌ ಕ್ಯೂಆರ್‌ ಕೋಡ್‌ ಬಳಕೆ ಮಾಡಿಕೊಂಡು ಗೂಗಲ್ ಪೇ ಮೂಲಕ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಅದೂ ಸಹ ಸೊತ್ತು ಮಾರಾಟದ ವಿಚಾರದಲ್ಲಿ.

ಉಷಾ ಕಿರಣ್ ಎಂಬ ಮಹಿಳೆ ಆ.27 ರಂದು ಸೊತ್ತು ಮಾರಾಟದ ಬಗ್ಗೆ ಓಎಲ್‌ಎಕ್ಸ್‌ನಲ್ಲಿ (OLX) ಒಂದು ಪೋಸ್ಟ್‌ ಹಾಕಿದ್ದಾರೆ. ಈ ಪೋಸ್ಟ್‌ ಅನ್ನು ನೋಡಿದ ಮತ್ತೋರ್ವ ಮಹಿಳೆ ಉಷಾ ಕಿರಣ್ ಅವರಿಗೆ ಕರೆ ಮಾಡಿ ತಾನು ಈ ಸೊತ್ತುಗಳನ್ನು ಖರೀದಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಇದಕ್ಕಾಗಿ ಹಣ ನೀಡಲು ಉಷಾ ಕಿರಣ್ ಅವರಿಂದ ಗೂಗಲ್ ಪೇ ನಂಬರ್‌ ಅನ್ನು ಪಡೆದಿದ್ದಾರೆ.

ಇದಾದ ನಂತರದಲ್ಲಿ ಉಷಾ ಕಿರಣ್ ಅವರ ಮೊಬೈಲ್‌ಗೆ ಹಲವು ಕ್ಯೂಆರ್ ಕೋಡ್‌ಗಳು ಬಂದಿವೆ. ಏನೋ ಇರಬಹುದು ಎಂದು ಮುಂದಾಗುವ ಅನಾಹುತದ ಬಗ್ಗೆ ಅರಿಯದ ಮಹಿಳೆ ಕ್ಯೂಆರ್ ಕೋಡ್ ಅನ್ನು ಓಪನ್‌ ಮಾಡಿದ್ದಾರೆ. ಇದನ್ನು ಓಪನ್‌ ಮಾಡಿದ್ದೇ ತಡ ಆ ಕ್ಯೂಆರ್‌ ಕೋಡ್‌ ಡೈರೆಕ್ಟ್‌ ಆಗಿ ಗೂಗಲ್‌ಪೇ ಆಪ್‌ಗೆ ಕರೆದುಕೊಂಡು ಹೋಗಿದೆ. ಇದಾದ ನಂತರದಲ್ಲಿ ಸೆ.27 ಮತ್ತು 28ರಂದು ಒಟ್ಟಾರೆ ಮೂರು ಬ್ಯಾಂಕ್‌ ಖಾತೆಗಳಿಂದ 1,28,496ರೂ. ಹಣವನ್ನು ಬೇರೆ ಖಾತೆಗೆ ಜಮೆ ಮಾಡಲಾಗಿದೆ.

ಈ ರೀತಿಯ ಪ್ರಕ್ರಿಯೆಗಳಿಂದ ಸದಾ ದೂರ ಇರಿ: ಸಾಮಾನ್ಯವಾಗಿ ಈ ರೀತಿಯ ವಂಚನೆಗಳಿಗೆ ಪ್ರಮುಖ ಕಾರಣ ಏನೆಂದರೆ ಇಂಟರ್ನೆಟ್‌ನೊಂದಿಗೆ ಸ್ಮಾರ್ಟ್‌ಫೋನ್‌ಗಳ ಸ್ಫೋಟ ಮತ್ತು ಆಪ್‌ಗಳ ಮೂಲಕ ಪಾವತಿಯ ಬಹು ವಿಧಾನಗಳು. ಅದಾಗ್ಯೂ ಯುಪಿಐ ಕಾರ್ಡ್ ಪಾವತಿಗಳಲ್ಲಿ ಸಾಕಷ್ಟು ರಕ್ಷಣೆಯನ್ನು ನೀಡಲಾಗಿದೆ. ಆದರೆ, ವಂಚಕರು ಈ ಎಲ್ಲಾ ರಕ್ಷಣೆಯ ಗೋಡೆಗನ್ನು ದಾಟಿ ವಂಚನೆ ಮಾಡುವ ಕುಶಲತೆ ಹೊಂದಿದ್ದಾರೆ.

*ಜೊತೆಗೆ ಈ ಘಟನೆಯಲ್ಲಿ ತಿಳಿಯಬೇಕಾದ ವಿಷಯ ಏನೆಂದರೆ ಹಣವನ್ನು ಸ್ವೀಕಾರ ಮಾಡಲು ಯಾವುದೇ ಪಿನ್‌ ನಮೂದು ಮಾಡುವ ಅಗತ್ಯ ಇರುವುದಿಲ್ಲ. ಆದರೆ, ನೀವು ಯಾರಿಗಾದರೂ ಹಣ ಪಾವತಿ ಮಾಡಬೇಕು ಎಂದರೆ ಕಡ್ಡಾಯವಾಗಿ ಪಿನ್‌ ನಮೂದು ಮಾಡಬೇಕು. ಆದರೆ ವಂಚಕರು ತಮ್ಮ ಖಾತೆಯಲ್ಲಿ ಹಣವನ್ನು ಸ್ವೀಕರಿಸಲು ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ಕೇಳುವ ಕ್ಯೂಆರ್‌ ಕೋಡ್ ಅನ್ನು ವಾಟ್ಸಾಪ್‌ ಹಾಗೂ ಇನ್ನಿತರೆ ಪ್ಲಾಟ್‌ಫಾರ್ಮ್‌ ಮೂಲಕ ಶೇರ್‌ ಮಾಡುತ್ತಾರೆ. ಇವುಗಳನ್ನು ಎಂದಿಗೂ ಓಪನ್‌ ಮಾಡಬೇಡಿ.

*ಈ ಕ್ಯೂಆರ್‌ ಕೋಡ್ ಎಂಬುದು ಯುಪಿಐ ಆಪ್‌ನಲ್ಲಿನ ಫೀಚರ್ಸ್‌ ಆಗಿದೆ. ನೀವು ಪಾವತಿಗಳನ್ನು ಮಾಡಲು ಮಾತ್ರ ಈ ಕ್ಯೂಆರ್‌ ಕೋಡ್‌ ಅನ್ನು ಬಳಕೆ ಮಾಡಬೇಕಾಗುತ್ತದೆ. ಇದರೊಂದಿಗೆ ಯಾವುದೇ ಕಾರಣಕ್ಕೂ ನಿಮ್ಮ ಬಳಿ ಇರುವ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, ಪಿನ್, ಓಟಿಪಿ ಇತ್ಯಾದಿಗಳನ್ನು ಹಂಚಿಕೊಳ್ಳಬೇಡಿ.

*ಇಷ್ಟೇ ಅಲ್ಲದೆ ಸ್ಕ್ರೀನ್‌ ಶೇರ್‌, ಎನಿಡೆಸ್ಕ್‌, ಟೀಮ್‌ ವೀವರ್‌ ನಂತಹ ಸ್ಕ್ರೀನ್ ಶೇರ್‌ ಆಪ್‌ಗಳನ್ನು ಎಂದಿಗೂ ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ. ಬ್ಯಾಂಕ್ ರುಜುವಾತುಗಳಿಗೆ ಪ್ರವೇಶ ಪಡೆಯಲು ಇವುಗಳನ್ನು ವಂಚಕರು ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಈ ಅಪ್ಲಿಕೇಶನ್‌ಗಳು ಮಾಲ್‌ವೇರ್ ಅಲ್ಲ, ಆದರೆ ಅವು ನಿಮ್ಮ ಮೊಬೈಲ್ ಡೇಟಾದ ಪ್ರವೇಶವನ್ನು ಮೂರನೇ ವ್ಯಕ್ತಿಗೆ ನೀಡುತ್ತವೆ.

ಉಡುಪಿ ಮಹಿಳೆಗೆ ಉಂಡೆ ನಾಮ; QR code ಮೂಲಕ ಮಾಡಿದ ಮಹಾ ಮೋಸ ಎಂತಹುದು ಗೊತ್ತಾ!?

*ಇದರೊಂದಿಗೆ ನೀವೇನಾದರೂ ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ದೂರು ದಾಖಲು ಮಾಡಿದ್ದಾರೆ. ಅದರಲ್ಲೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ದೂರಿದ್ದರೆ ಇದನ್ನೇ ದುರುಪಯೋಗ ಮಾಡಿಕೊಂಡು ನಿಮಗೆ ಕರೆ ಮಾಡುತ್ತಾರೆ. ಜೊತೆಗೆ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿ ನಿಮ್ಮ ಡಿವೈಸ್‌ ಅನ್ನು ರಿಮೋಟ್ ಕಂಟ್ರೋಲ್‌ಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪರಿಣಾಮ ಅಧಿಕೃತ ಸೈಟ್‌ನಲ್ಲಿ ಮಾತ್ರ ದೂರು ದಾಖಲು ಮಾಡಿ.

Best Mobiles in India

English summary
There are thousands of types of online scams. In this way, an environment has been created where it is impossible to say that cheating is done. Accordingly, now the Udupi woman has been cheated by using the QR code.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+