ChatGPTಯಲ್ಲಿ ದೋಷ ಪತ್ತೆ ಮಾಡಿದರೆ ನಿಮಗೆ 16 ಲಕ್ಷಕ್ಕೂ ಅಧಿಕ ಹಣ: ಯಾರಿಗುಂಟು ಯಾರಿಗಿಲ್ಲ!
ಈ ಹಿಂದೆ ಕೆಲವು ಟೆಕ್ ದೈತ್ಯ ಕಂಪೆನಿಗಳು ತಾವು ಬಳಕೆ ಮಾಡುವ ತಂತ್ರಜ್ಞಾನದಲ್ಲಿ ಏನಾದರೂ ದೋಷ ಪತ್ತೆ ಮಾಡಿದರೆ ಲಕ್ಷಾಂತರ ಹಣವನ್ನು ಬಹುಮಾನವಾಗಿ ನೀಡುವುದಾಗಿ ಘೋಷಣೆ ಮಾಡಿದ್ದವು. ಅದರಂತೆ ಕೆಲವರು ಬಹುಮಾನ ಸಹ ಪಡೆದಿದ್ದರು. ಅದೇ ರೀತಿ ಈಗ ಭಾರೀ ಮುನ್ನೆಲೆಯಲ್ಲಿ ಇರುವ ಚಾಟ್‌ಜಿಪಿಟಿ ಸರದಿ ಬಂದಿದ್ದು, ಇದರಲ್ಲಿ ನೀವೇನಾದರೂ ದೋಷ ಪತ್ತೆ ಮಾಡಿದರೆ ಭಾರೀ ಹಣವನ್ನು ಗಳಿಸಬಹುದು.
ಹೌದು, ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಚಾಟ್‌ಜಿಪಿಟಿಯಲ್ಲಿ (ChatGPT) ದೋಷಗಳನ್ನು ಹುಡುಕಲು ಓಪನ್‌ಎಐ ಬಳಕೆದಾರರಿಗೆ 16 ಲಕ್ಷದ ವರೆಗೂ ಬಹುಮಾನ ನೀಡಲು ಮುಂದಾಗಿದೆ. ಇದಕ್ಕಾಗಿ ಓಪನ್ ಎಐ ಬೌಂಟಿ ಪ್ರೋಗ್ರಾಂ ಅನ್ನು ಘೋಷಿಸಿದ್ದು, ನೀವು ಈ ಮೂಲಕ ಹೆಚ್ಚು ಹೆಚ್ಚು ದೋಷಗಳನ್ನು ಪತ್ತೆ ಮಾಡಿ ಹೆಚ್ಚೆಚ್ಚು ಹಣವನ್ನು ಪಡೆದುಕೊಳ್ಳಬಹುದು. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಓಪನ್ ಎಐನ ಈ ಹೊಸ ಕ್ರಮ ಏನು ಎತ್ತ ಎಂಬ ಬಗ್ಗೆ ತಿಳಿದುಕೊಳ್ಳಿ.

ಬಗ್ ಬೌಂಟಿ ಪ್ರೋಗ್ರಾಂ : ಚಾಟ್‌ಜಿಪಿಟಿಯ ಓಪನ್‌ಎಐ ಹೊಸ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಘೋಷಿಸಿದ್ದು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಿ ದೋಷಗಳನ್ನು ವರದಿ ಮಾಡಲು ಬಳಕೆದಾರರಿಗೆ $ 20,000 ಅಥವಾ 16 ಲಕ್ಷದವರೆಗೆ ಹಣ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಮಂಗಳವಾರ ಈ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಆರಂಭಿಸಲಾಗಿದ್ದು. ನೀವು ಯಾವ ರೀತಿಯ ದೋಷಗಳನ್ನು ಪತ್ತೆ ಮಾಡುತ್ತೀರೋ ಅದರ ಆಧಾರದ ಮೇಲೆ ಹಣವನ್ನು ನೀಡಲಾಗುತ್ತದೆ.
ಪ್ರತಿ ದೋಷಕ್ಕೆ ಕನಿಷ್ಠ $200 ಅನ್ನು ನೀಡಲಾಗುತ್ತದೆ. ಹೀಗಾಗಿ ಇದರಲ್ಲಿ ಹೆಚ್ಚು ದೋಷಗಳನ್ನು ಪತ್ತೆ ಮಾಡಿದೆ ಇನ್ನೂ ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದು. ಹೀಗಾಗಿ ಕೋಡರ್‌ಗಳು ಮತ್ತು ಹ್ಯಾಕರ್‌ಗಳು ತಮ್ಮ ಅತ್ಯುತ್ತಮವಾದ ಕೌಶಲ್ಯಗಳನ್ನು ಪ್ರದರ್ಶಿಸಲು ಇದು ಉತ್ತಮ ಸಮಯವಾಗಿದೆ. ಈ ಮೂಲಕ ಭಾರೀ ಹಣ ಸಂಪಾದನೆ ಮಾಡಿಕೊಳ್ಳಬಹುದಾಗಿದೆ.
ಏನೆಲ್ಲಾ ದೋಷಗಳಿರಬಹುದು: ಇನ್ನು ಪ್ರೋಗ್ರಾಂ ಓಪನ್ ಎಐ ಸಿಸ್ಟಮ್‌ಗಳಿಂದ ಕಂಡುಬರುವ ತಪ್ಪಾದ ಅಥವಾ ದುರುದ್ದೇಶಪೂರಿತ ವಿಷಯವನ್ನು ಒಳಗೊಂಡಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಬಗ್ ಬೌಂಟಿ ಪ್ರೋಗ್ರಾಂ ತನ್ನ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಈ ಮೂಲಕ ಮುಂದಾಗಿದೆ.
ದೋಷ ಪತ್ತೆ ಮಾಡುವ ಉದ್ದೇಶ ಏನು?: ಇಟಲಿಯಲ್ಲಿ ಈ ಚಾಟ್‌ಜಿಪಿಟಿನ್ನು ಅನ್ನು ನಿಷೇಧಿಸಿದ ಕೆಲವೇ ದಿನಗಳ ನಂತರ ಓಪನ್ ಎಐ ತನ್ನ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಆರಂಭಿಸಿದೆ. ಗೌಪ್ಯತೆ ನಿಯಮಗಳ ಶಂಕಿತ ಉಲ್ಲಂಘನೆಗಾಗಿ ಇಟಲಿಯಲ್ಲಿ ಈ ಚಾಟ್‌ಜಿಪಿಟಿನ್ನು ನಿಷೇಧಿಸಲಾಗಿದೆ. ಈ ಮೂಲಕ ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಎಐ ಸೇವೆಗಳನ್ನು ಹೆಚ್ಚಿನ ಮಟ್ಟದಲ್ಲಿ ಪರಿಶೀಲಿಸಲು ಪ್ರೇರೇಪಿಸಿದೆ.

ಏನಿದು ಚಾಟ್‌ಜಿಪಿಟಿ?: ಈ ಚಾಟ್‌ಜಿಪಿಟಿ ಬಗ್ಗೆ ಸಾಮಾನ್ಯವಾಗಿ ಬಹುಪಾಲು ಮಂದಿಗೆ ತಿಳಿದಿರುವ ವಿಷಯವಾಗಿದೆ. ಇದು ಯಾವುದೇ ಪ್ರಶ್ನೆಗಳಿಗೆ ಅದರ ತ್ವರಿತ ಪ್ರತಿಕ್ರಿಯೆಗಳೊಂದಿಗೆ ಬಳಕೆದಾರರನ್ನು ಆಶ್ಚರ್ಯಗೊಳಿಸುತ್ತದೆ. ಅದಾಗ್ಯೂ ಕೆಲವು ಸಂದರ್ಭದಲ್ಲಿ ಅಚಾತುರ್ಯ ಎಸಗಿದೆ ಎನ್ನಲಾಗಿದೆ. ಹೀಗಾಗಿಯೇ ಬಗ್ ಬೌಂಟಿ ಪ್ರೋಗ್ರಾಂ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದೇ ಮೊದಲಲ್ಲ: ತಂತ್ರಜ್ಞಾನ ಉದ್ಯಮದಲ್ಲಿ ಈ ರೀತಿಯ ಕೆಲಸ ಮೊದಲಲ್ಲ. ಈಗಾಗಲೇ ಅನೇಕ ಕಂಪನಿಗಳು ಪ್ರೋಗ್ರಾಮರ್‌ಗಳು ಮತ್ತು ನೈತಿಕ ಹ್ಯಾಕರ್‌ಗಳನ್ನು ತಮ್ಮ ಸಾಫ್ಟ್‌ವೇರ್ ವ್ಯವಸ್ಥೆಗಳಲ್ಲಿ ದೋಷಗಳನ್ನು ವರದಿ ಮಾಡಲು ಪ್ರೋತ್ಸಾಹಿಸಲು ಬಗ್ ಬೌಂಟಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದವು. ಅದರಲ್ಲಿ ಫೇಸ್‌ಬುಕ್, ವಾಟ್ಸಾಪ್ ಮತ್ತು ಇತರ ಪ್ರಮುಖ ಆಪ್‌ಗಳು ಸಹ ಸೇರಿವೆ.


Click it and Unblock the Notifications








