ಸಂಗಾತಿಗಾಗಿ ಕಾಯುತ್ತಿದ್ದೀರಾ? ಈ ಎಐ ಟೂಲ್ಸ್‌ನಿಂದಾಗಿ ನಿಮ್ಮ ಕನಸಿನ ಕನ್ಯೆ ಕಣ್ಣಮುಂದೆ!
ಎಐ (AI) ಬಳಕೆ ಇಂದು ಎಲ್ಲಾ ಕಡೆ ವ್ಯಾಪಕವಾಗಿ ಬಳಕೆ ಆಗುತ್ತಿದ್ದು, ಈ ಮೂಲಕ ತಂತ್ರಜ್ಞಾನ ವಿಭಾಗದಲ್ಲಿ ಹೊಸ ಕ್ರಾಂತಿಯೇ ಸೃಷ್ಟಿಮಾಡಿದೆ. ಇದರೊಂದಿಗೆ ಇನ್ಮುಂದೆ ನೀವು ಉತ್ತಮ ಸಂಗಾತಿಯನ್ನು ಕಂಡುಕೊಳ್ಳಬಹುದಾಗಿದೆ. ಅದೂ ಸಹ ಆಕೆ ಅಥವಾ ಆತ ಕನಸಿನಲ್ಲಿ ಬರುವ ಅತ್ಯುತ್ತಮ ಸುಂದರ ಅಥವಾ ಸುಂದರಿಯಂತೆಯೇ ಇರಲಿದ್ದಾಳೆ.
ಹೌದು, ಪರಿಪೂರ್ಣ ಸಂಗಾತಿಯನ್ನು (perfect partner) ಹುಡುಕುವುದು ಖಂಡಿತಾ ಸುಲಭದ ಕೆಲಸವಲ್ಲ, ಇದೊಂದು ದೊಡ್ಡ ಸಾಧನೆ. ಈ ನಡುವೆ ನಿಮ್ಮ ಕನಸಿನ ಹಾಗೂ ಮನಸಿನ ರಾಣಿ ನಿಮ್ಮ ಕಣ್ಣ ಮುಂದೆ ಬಂದರೆ ಹೇಗಿರುತ್ತದೆ. ಅದೂ ಸಹ ನೀವಂದುಕೊಡ ರೀತಿಯಲ್ಲೇ. ಹೇ... ಅದೇಗೆ ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಆದರೆ, ಎಐ ಅದನ್ನೂ ಸಾಧ್ಯವಾಗಿಸಲಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಸಂಪೂರ್ಣ ವಿವರ ತಿಳಿದುಬರೋಣ.

ಎಐ ಸಂಗಾತಿ: ಆಂಡ್ರೆಸೆನ್ ಹೊರೊವಿಟ್ಜ್ (Andreessen Horowitz) ಎಂಬ ಕಂಪನಿ ಇದನ್ನು ಸಾಧ್ಯವಾಗಿಸಲು ಮುಂದಾಗಿದೆ. ಈ ಮೂಲಕ ನಿಮ್ಮದೇ ಆದ ಉತ್ತಮ ಸಂಗಾತಿಯನ್ನು ನೀವೇ ಸೃಷ್ಟಿಮಾಡಬಹುದು. ಅಂದರೆ ಎಐ ಸಹಾಯದಿಂದ ನೀವು ನಿರ್ಮಿಸಿಕೊಳ್ಳಬಹುದು. ಹಾಗೆಯೇ ವಿಭಿನ್ನ ವ್ಯಕ್ತಿತ್ವಗಳು ಮತ್ತು ಹಿನ್ನೆಲೆಗಳೊಂದಿಗೆ ಗ್ರಾಹಕೀಯಗೊಳಿಸಬಹುದಾದ ಎಐ ಸಂಗಾತಿಯನ್ನು ಹೇಗೆ ನಿರ್ಮಾಣ ಮಾಡುವುದು ಎಂಬುದನ್ನು ವಿವರಿಸುವ ಮಾರ್ಗದರ್ಶಿಯನ್ನು ಗಿಟ್‌ಹಬ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಸಂಸ್ಥೆಯ ಪ್ರಕಾರ, ಸಂಗಾತಿಯ ಹಿನ್ನೆಲೆಯನ್ನು ರಚಿಸುವ ಮೂಲಕ ಮತ್ತು ಅವರು ಬಳಸಿಕೊಳ್ಳುವ ಎಐ ಮಾದರಿಯನ್ನು ಆಯ್ಕೆ ಮಾಡುವ ಮೂಲಕ ಸಂಗಾತಿ ಹೇಗೆ ಇರಬೇಕೆಂದು ಬಯಸುತ್ತೀರಿ ಎಂಬುದನ್ನು ನೀವೇ ನಿಖರವಾಗಿ ರಚಿಸಬಹುದು. ಯೋಜನೆಯು ಡೆವಲಪರ್‌ಗಳಿಗೆ ಒಂದು ಪ್ರಯೋಗವಾಗಿದ್ದರೂ ಸಹ, ಅನೇಕ ಟೆಕ್ ಅಭಿಮಾನಿಗಳು ತಮ್ಮ ಆದರ್ಶ ಡಿಜಿಟಲ್ ಸಂಗಾತಿಯನ್ನು ಕಂಡುಹಿಡಿಯುವ ನಿರೀಕ್ಷೆಯ ಬಗ್ಗೆ ರೋಮಾಂಚನಗೊಂಡಿದ್ದಾರೆ ಎಂದು ತಿಳಿಸಿದೆ.
ಕೆಲವು ವ್ಯಕ್ತಿಗಳು ಪ್ರಣಯ ಸಂಬಂಧಗಳನ್ನು ತಿಳಿಯಲು ಕೃತಕ ಬುದ್ಧಿಮತ್ತೆಯನ್ನು(Artificial intelligence) ಬಳಸಿಕೊಳ್ಳಲು ಬಯಸುತ್ತಾರೆ ಎಂದು ಆಂಡ್ರೆಸೆನ್ ಹೊರೊವಿಟ್ಜ್ ತಿಳಿಸಲಾಗಿದೆ. ಅದರಲ್ಲೂ ಎವೆಲಿನ್ ಹೆಸರಿನ ಪಾತ್ರವನ್ನು ಈ ಯೋಜನೆಗೆ ಈಗಾಗಲೇ ಸೇರಿಸಲಾಗಿದೆ. ಎವೆಲಿನ್ ಎಐ ಹುಡುಗಿಯಾಗಿದ್ದು, ಸರ್ಕಸ್‌ನಲ್ಲಿ ಕೆಲಸ ಮಾಡುವುದರಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡುವವರೆಗೆ ಆಕೆ ತನ್ನ ಹಿನ್ನೆಲೆಯನ್ನು ಹೊಂದಿದ್ದಾಳೆ.
ಇಷ್ಟು ಮಾತ್ರವಲ್ಲದೆ ಅಲೆಕ್ಸ್, ಸಾಹಸಿ, ಬರಹಗಾರ ಸೆಬಾಸ್ಟಿಯನ್ ಅಥವಾ ಕಾರ್ಗಿ, ಬಾಹ್ಯಾಕಾಶ ನಾಯಿಯಂತಹ ಪೂರ್ವ-ವಿನ್ಯಾಸಗೊಳಿಸಿದ ಎಐ ವ್ಯಕ್ತಿಗಳನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಆಯ್ಕೆಗಳಲ್ಲಿ ಯಾವುದೂ ಸಹ ನಿಮ್ಮ ಇಚ್ಛೆಗೆ ಸರಿಹೊಂದದಿದ್ದರೆ ಅಥವಾ ನಿಮಗೆ ಇಷ್ಟ ಇಲ್ಲದಿದ್ದರೆ ನೀವು ನಿಮ್ಮ ಸ್ವಂತ ಆಲೋಚನೆ ಮತ್ತು ಗುಣಗಳನ್ನು ಆ ಎಐಗೆ ನೀಡಬಹುದು. ಈ ಮೂಲಕ ನಿಮ್ಮ ನಿರೀಕ್ಷೆಗೆ ತಕ್ಕಂತೆ ಅದು ವರ್ತಿಸುವಂತೆ ಮಾಡಬಹುದು.
ಇತರ ಕಂಪನಿಗಳು ಸಹ ಎಐ ಪ್ರಣಯವನ್ನು ಅನ್ವೇಷಿಸಿವೆ. ಒಂದು ಪೂರ್ವ ನಿರ್ಮಿತ ಎಐ ಸ್ನೇಹಿತರನ್ನು ನೀಡಿದರೆ ಇನ್ನೊಂದು ಹೆಚ್ಚು ವಯಸ್ಕ-ಆಧಾರಿತ ಚಾಟ್‌ಬಾಟ್‌ಗಳಿಗಾಗಿ ಸೆನ್ಸಾರ್ ಮಾಡದ ಎಐ ಮಾದರಿಯನ್ನು ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ, ಈ ಎಐ ನಲ್ಲಿನ ತೀವ್ರ ಪ್ರಗತಿಗಳ ಹೊರತಾಗಿಯೂ ನೈಜ ಪ್ರಣಯಕ್ಕಾಗಿ ನಿಜವಾದ ಮಾನವ ಸಂಪರ್ಕಗಳ ಪ್ರಾಮುಖ್ಯತೆಯನ್ನು ತಜ್ಞರು ಒತ್ತಿಹೇಳುತ್ತಾರೆ.
ಅಂದರೆ ನೈಜ ಪ್ರಣಯಕ್ಕೆ ನಿಜವಾದ ಜನರೊಂದಿಗೆ ಭಾವನಾತ್ಮಕ ಸಂವಾದದ ಅಗತ್ಯವಿದೆ ಎಂಬುದನ್ನು ಈ ವೇಳೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಉತ್ತಮ ಹಾಗೂ ನೈಜ ಭಾವನೆಗಳು ಇದರಿಂದ ಸಿಗಲು ಸಾಧ್ಯವಿಲ್ಲ. ಆದರೂ ಇಂದಿನ ದಿನಗಳಲ್ಲಿ ಹಲವು ಜನರು ಉತ್ತಮ ಡಿಜಿಟಲ್ ಪ್ರೇಮಿಯನ್ನು ಕೋಡ್ ಮಾಡಲು ಮುಂದಾಗುತ್ತಾರೆ ಎಂಬುದು ಗಮನಾರ್ಹ ವಿಷಯವಾಗಿದೆ.

ಇನ್ನು ಎಐ ಅಥವಾ ಕೃತಕ ಬುದ್ಧಿಮತ್ತೆ, ಸಮಾಜ ಮತ್ತು ತಂತ್ರಜ್ಞಾನದ ವಿವಿಧ ಅಂಶಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಇದರ ಪರಿಣಾಮಗಳು ದೂರಗಾಮಿ ಮತ್ತು ವಿಕಸನಗೊಳ್ಳುತ್ತಲೇ ಇರುತ್ತವೆ. ಎಐ ಕೈಗಾರಿಕೆಗಳಲ್ಲಿ ಯಾಂತ್ರೀಕೃತಗೊಂಡ ಕ್ರಾಂತಿಯನ್ನು ಮಾಡಿದ್ದು, ಒಮ್ಮೆ ಮಾನವರು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ಈಗ ಎಐ ಚಾಲಿತ ವ್ಯವಸ್ಥೆಗಳೊಂದಿಗೆ ಬಳಕೆ ಮಾಡಬಹುಹುದು.
ಡೇಟಾ ವಿಶ್ಲೇಷಣೆ ಮತ್ತು ನಿರ್ಧಾರ-ಮಾಡುವಿಕೆಗೂ ಈಗ ಎಐಯನ್ನು ಬಳಕೆ ಮಾಡಲಾಗುತ್ತಿದೆ. ಎಐ ಅಲ್ಗಾರಿದಮ್‌ಗಳು ಹೆಚ್ಚಿನ ಪ್ರಮಾಣದ ಡೇಟಾವನ್ನು ತ್ವರಿತವಾಗಿ ಮತ್ತು ನಿಖರವಾಗಿ ಪ್ರಕ್ರಿಯೆಗೊಳಿಸಲು ಉತ್ತಮವಾಗಿದೆ. ಹಣಕಾಸು, ಆರೋಗ್ಯ ರಕ್ಷಣೆ, ಮಾರ್ಕೆಟಿಂಗ್ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸಲು ಈ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿದೆ.


Click it and Unblock the Notifications








