Home
ಸುದ್ದಿಜಾಲ

ಸ್ಮಾರ್ಟ್‌ಫೋನಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವೇ?..ಚೆಕ್ ಮಾಡಿ!

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅತೀ ಅಗತ್ಯ ಡಿವೈಸ್‌ ಆಗಿದ್ದು, ಅನೇಕ ಕಾರಣಗಳಿಗಾಗಿ ಬಳಕೆದಾರರು ಫೋನಿನಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಸ್ಟೋರ್‌ ಮಾಡಿರುತ್ತಾರೆ. ಆನ್‌ಲೈನ್‌ನಲ್ಲಿ ಮತ್ತು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡಾಗ ಎಷ್ಟೂ ಸಲ ವೈಯಕ್ತಿಕ ಮಾಹಿತಿ ನಮೂದಿಸಬೇಕಾಗಿರುತ್ತದೆ. ಆದರೆ ಬಳಕೆದಾರರ ಖಾಸಗಿ ದತ್ತಾಂಶ ಮತ್ತು ವೈಯಕ್ತಿಕ ಮಾಹಿತಿ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಎಂದಾದರೂ ಯೋಚಿಸಿದ್ದಿರಾ?

ಖಾಸಗಿ ಮಾಹಿತಿ

ಹೌದು, ಸದ್ಯ ಸ್ಮಾರ್ಟ್‌ಫೋನ್‌ ಬಳಕೆದಾರರು ಫೋನಿನಲ್ಲಿ ತಮ್ಮ ಖಾಸಗಿ ಮಾಹಿತಿ/ದತ್ತಾಂಶಗಳು ಎಷ್ಟರ ಮಟ್ಟಿಗೆ ಸೇಫ್‌ ಎನ್ನುವ ಬಗ್ಗೆ ಯೋಚಿಸಲೇಬೇಕು. ಏಕೆಂದರೇ ಫೋನಿಗೆ ಆಪ್‌ ಡೌನ್‌ಲೋಡ್‌ ಮಾಡಿಕೊಂಡಾಗ ಅಥವಾ ಆನ್‌ಲೈನ್‌ ಸೇವೆಗಳಲ್ಲಿ ವೈಯಕ್ತಿಕ ಮಾಹಿತಿ ಎಂಟ್ರಿ ಮಾಡಬೇಕಿರುತ್ತದೆ ಮತ್ತು ಕೆಲವೊಂದು ಸೇವೆಗಳಿಗೆ ಅದು ನಿಜಕ್ಕೂ ಅಗತ್ಯ ಇರುತ್ತದೆ. ಆದರೆ ಇನ್ನು ಕೆಲವು ಆಪ್ಸ್‌ಗಳು ಅಗತ್ಯ ಇಲ್ಲದಿದ್ದರೂ ಮಾಹಿತಿ ಬೇಡುತ್ತವೆ ಅಂತಹ ಆಪ್ಸ್‌ಗಳ ಬಗ್ಗೆ ಬಳಕೆದಾರರು ತಿಳಿಯಬೇಕು.

ಆಪ್ಸ್‌ಗಳು

ಕೆಲವು ಆಪ್ಸ್‌ಗಳು ಸ್ಮಾರ್ಟ್‌ಫೋನ್‌ ಬಳಕೆದಾರರ ಮಾಹಿತಿಯನ್ನು ಕೇಳುತ್ತವೆ. ಮತ್ತು ಆ ಆಪ್ಸ್‌ಗಳಿಗೆ ಅದು ಅಗತ್ಯವು ಆಗಿರುತ್ತದೆ. ಉದಾಹರಣೆಗೆ ನ್ಯಾವಿಗೇಶನ್‌ ಆಪ್ಸ್‌ ಬಳಕೆದಾರರ ಸ್ಥಳದ ನಿಖರ ಮಾಹಿತಿ ಬೇಡುತ್ತದೆ. ಅದರಿಂದ ಬಳಕೆದಾರರಿಗೆ ಅಗತ್ಯ ಮಾರ್ಗವನ್ನು ಸೂಚಿಸುತ್ತದೆ. ಆದ್ರೆ ಇನ್ನು ಕೆಲವು ಆಪ್ಸ್‌ಗಳು ಅಪ್ಲಿಕೇಶನ್‌ಗಳು ಅನಗತ್ಯವಾಗಿ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬೇಡುತ್ತವೆ ಹಾಗೂ ರಹಸ್ಯವಾಗಿ ಬಳಕೆದಾರರ ಮಾಹಿತಿ ಪಡೆಯುತ್ತವೆ. ಆ ಮಾಹಿತಿಗಳನ್ನು ಥರ್ಡ್‌ಪಾರ್ಟಿಗಳಿಗೆ ಮಾರಾಟ ಮಾಡುವ ಸಾಧ್ಯತೆಗಳು ಅಧಿಕ ಎಂದು ಸೈಬರ್‌ಸೆಕ್ಯುರಿಟಿ ಸಂಸ್ಥೆ (Kaspersky) ಕಾಸ್ಪರ್ಸ್ಕಿ ತಿಳಿಸಿದೆ.

ಆಪ್‌ಸೆನ್ಸಸ್‌

ಹೀಗಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರೈವೆಸಿ ಕಂಟಕ ಸ್ಥಿತಿಯಲ್ಲಿದ್ದು, ಸದ್ಯ ಮಾಹಿತಿ ಸೋರಿಕೆ ಸಾಮಾನ್ಯ ಎನ್ನುವಂತಾಗಿದೆ. ಆದರೆ ಮಾಹಿತಿ ಕಬಳಿಸುವ ಆಪ್ಸ್‌ಗಳ ಬಗ್ಗೆ ತಿಳಿಯಲು ಸಾಧ್ಯವಿದೆ ಎಂದೆನ್ನುತ್ತಾರೆ ಸಂಶೋಧಕರ. ಯಾವ ಆಪ್‌ ವೈಯಕ್ತಿಕ ಮಾಹಿತಿ ದೋಚುತ್ತದೆ ಮತ್ತು ಆ ಮಾಹಿತಿಗಳನ್ನು ಏನು ಮಾಡುತ್ತದೆ ಎನ್ನುವ ಬಗ್ಗೆ ತಿಳಿಯಲು 'ಆಪ್‌ಸೆನ್ಸಸ್‌' ಸರ್ವೀಸ್‌ (AppCensus) ಮತ್ತು 'ಎಕ್ಸೊಡಸ್‌ ಪ್ರೈವೆಸಿ'(Exodus Privacy) ಸೇವೆಗಳು ನೆರವಾಗಲಿವೆ.

ಎಕ್ಸೊಡಸ್‌ ಪ್ರೈವೆಸಿ

ಆಪ್‌ಸೆನ್ಸಸ್‌ ಸರ್ವೀಸ್‌ ಮತ್ತು ಎಕ್ಸೊಡಸ್‌ ಪ್ರೈವೆಸಿ ಈ ಎರಡು ಸೇವೆಗಳು ಬಳಕೆದಾರರು ಡೌನ್‌ಲೋಡ್‌ ಮಾಡುವ ಆಪ್ಸ್‌ಗಳು ಬೇಡುವ ಆಕ್ಸಸ್‌ಗಳ ಬಗ್ಗೆ ವಿಶ್ಲೇಷಣೆ ಮಾಡಲಿದ್ದು, ಇನ್‌ಬಿಲ್ಟ್‌ ಟ್ರಾಕರ್‌ ಅನ್ನು ಹೊಂದಿರಲಿದೆ. ಆಪ್‌ಗಳ ಆಕ್ಟಿವಿಟಿ ಮೇಲೆ ಈ ಸೇವೆಗಳು ಕಣ್ಣಿಡಲಿದ್ದು, ಬಳಕೆದಾರರ ಮಾಹಿತಿಯನ್ನು ಯಾರಿಗಾದರೂ ಸೆಂಡ್ ಮಾಡುತ್ತವೆಯಾ ಮತ್ತು ಮಾಹಿತಿ ಎನ್‌ಕ್ರಿಪ್ಶನ್ ಮಾದರಿಯಲ್ಲಿದೆಯಾ ಎನ್ನುವ ಅಂಶಗಳ ಬಗ್ಗೆ ನಿಗಾ ಇಡಲಿವೆ.

ಯಾವ ಮಾಹಿತಿ

ಆಪ್‌ಸೆನ್ಸಸ್‌ ಸರ್ವೀಸ್‌ ಮತ್ತು ಎಕ್ಸೊಡಸ್‌ ಪ್ರೈವೆಸಿ ಈ ಎರಡು ಸೇವೆಗಳು ಬಳಕೆಯು ಸರಳವಾಗಿದೆ. ಬಳಕೆದಾರರು ಸರ್ಚ್ ಆಯ್ಕೆಯಲ್ಲಿ ಆಪ್‌ ಹೆಸರನ್ನು ನಮೂದಿಸುವ ಮೂಲಕ ಆಪ್‌ ಯಾವೆಲ್ಲಾ ಆಕ್ಸಸ್‌ ಬೇಡುತ್ತದೆ, ಯಾವ ಮಾಹಿತಿ ಪಡೆಯುತ್ತದೆ ಮತ್ತು ಮಾಹಿತಿ ಎಲ್ಲಿಗೆ ಸೆಂಡ್ ಮಾಡುತ್ತದೆ ಅನ್ನುವ ಕುರಿತು ಚೆಕ್‌ ಮಾಡಬಹುದಾಗಿದೆ.

Best Mobiles in India

English summary
Who want to find out if an app is stealthily collecting their data, there are ways to find out, according to researchers. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+