Home
ಸುದ್ದಿಜಾಲ

ಫೈರ್-ಬೋಲ್ಟ್ ಅಪೊಲೊ 3 ಸ್ಮಾರ್ಟ್‌ವಾಚ್‌ ಲಾಂಚ್‌; ಡಿಸೈನ್‌ಗೆ ಫಿದಾ ಆಗದೇ ಇರರಿ!

ಸ್ಮಾರ್ಟ್‌ವಾಚ್‌ಗಳ (Smartwatch) ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್‌ ಆಯ್ಕೆ ವಾಚ್‌ಗಳನ್ನು ನಾವು ನೋಡಿದ್ದೇವೆ. ಅದಾಗ್ಯೂ ಪ್ರಮುಖ ಕಂಪೆನಿಗಳು ಇನ್ನೂ ಹೆಚ್ಚಿನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಇದೀಗ ಫೈರ್-ಬೋಲ್ಟ್ ಅಪೊಲೊ 3 (Fire-Boltt Apollo 3) ಲಾಂಚ್‌ ಆಗಿದೆ.

ಹೌದು, ಫೈರ್-ಬೋಲ್ಟ್ (Fire-Boltt) ಕಂಪೆನಿಯಿಂದ ಮತ್ತೊಂದು ವಾಚ್‌ ಅನ್ನು ಅನಾವರಣ ಮಾಡಲಾಗಿದೆ. ಈ ಫೈರ್-ಬೋಲ್ಟ್ ಅಪೊಲೊ 3 ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕರೆ ಸೌಲಭ್ಯ ಪಡೆದಿದ್ದು, 466 x 466 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಮೂಲಕ ಉತ್ತಮ ಅನುಭವ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ವಾಚ್‌ನ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಫೈರ್-ಬೋಲ್ಟ್ ಅಪೊಲೊ 3 ಸ್ಮಾರ್ಟ್‌ವಾಚ್‌ ಲಾಂಚ್‌; ಡಿಸೈನ್‌ಗೆ ಫಿದಾ ಆಗದೇ ಇರರಿ!

ಫೈರ್-ಬೋಲ್ಟ್ ಅಪೊಲೊ 3 ಸ್ಮಾರ್ಟ್‌ವಾಚ್‌: ಈ ವಿಶೇಷ ಸ್ಮಾರ್ಟ್‌ವಾಚ್‌ ಅನ್ನು ಅನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದ್ದು, ಈಗಾಗಲೇ ಈ ವಾಚ್ ಖರೀದಿಗೆ ಸಾಕಷ್ಟು ಜನರು ಕಾತುರರರಾಗಿದ್ದಾರೆ. ಕಳೆದ ವಾರ ಘೋಷಿಸಲಾದ ಫೈರ್-ಬೋಲ್ಟ್ ಅವಲಾಂಚೆ ಸ್ಮಾರ್ಟ್‌ವಾಚ್‌ ಲಾಂಚ್‌ ನಂತರ ಈ ವಾಚ್‌ ಅನ್ನು ಲಾಂಚ್‌ ಮಾಡಲಾಗಿದೆ. ಇದು ವೃತ್ತಾಕಾರದ-ಡಯಲ್ ಸ್ಮಾರ್ಟ್ ವಾಚ್ ಆಗಿದ್ದು, ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಹಾಗೂ ಕ್ರೌನ್‌ ಬಟನ್‌ನೊಂದಿಗೆ ಲೋಹದ ಪಟ್ಟಿಯನ್ನು ಹೊಂದಿದೆ.

ಇದರ ಡಿಸ್‌ಪ್ಲ ವಿಷಯಕ್ಕೆ ಬಂದರೆ ಈ ವಾಚ್ 1.43 ಇಂಚಿನ ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 466 x 466 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಬಹು ಗ್ರಾಹಕೀಯಗೊಳಿಸಬಹುದಾದ ವಾಚ್‌ ಫೇಸ್‌ ಆಯ್ಕೆಯನ್ನು ನೀಡಲಾಗಿದ್ದು, ಈ ಮೂಲಕ ಗ್ರಾಹಕರು ವಾಚ್‌ ಡಿಸ್‌ಪ್ಲೇನಲ್ಲಿ ತಮ್ಮಿಷ್ಟದ ವಾಚ್‌ ಫೇಸ್‌ ಬಳಕೆ ಮಾಡುವ ಮೂಲಕ ಭಿನ್ನ ಅನುಭವ ಪಡೆಯಬಹುದಾಗಿದೆ.

ಇದರೊಂದಿಗೆ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಸಹ ಇದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬ್ಲೂಟೂತ್ ಕಾಲ್‌, ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ ಸೇರಿದಂತೆ ಅನೇಕ ಆಕರ್ಷಕ ಹೊಸ ಫೀಚರ್ಸ್‌ ಅನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ಸ್ತ್ರೀ ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ವಿಷಯಗಳನ್ನು ಟ್ರ್ಯಾಕ್‌ ಮಾಡುತ್ತದೆ

ಈ ಸ್ಮಾರ್ಟ್‌ವಾಚ್‌ನಲ್ಲಿ 110+ ಸ್ಪೋರ್ಟ್ಸ್ ಮೋಡ್‌ಗಳಿದ್ದು, ನಿಮ್ಮ ಎಲ್ಲಾ ರೀತಿಯ ಚಟುವಟಿಕೆಗಳನ್ನು ಇದು ಮೇಲ್ವಿಚಾರಣೆ ಮಾಡಲಿದೆ. ಇದರೊಂದಿಗೆ ತ್ವರಿತ ಡಯಲ್ ಪ್ಯಾಡ್, ಕರೆ ಹಿಸ್ಟ್ರಿ, ಸಿಂಕ್ ಸಂಪರ್ಕಗಳು, ಸ್ಮಾರ್ಟ್ ನೋಟಿಫಿಕೇಶನ್, ಕುಳಿತುಕೊಳ್ಳುವ ಜ್ಞಾಪನೆ, ಫೈಂಡ್‌ ಮೈ ಫೋನ್‌ , ಹವಾಮಾನ, ಮ್ಯೂಸಿಕ್ ಕಂಟ್ರೋಲ್ , ಕ್ಯಾಮೆರಾ ಕಂಟ್ರೋಲ್‌, ಟೈಮರ್, ಸ್ಟಾಪ್‌ವಾಚ್, ಅಲಾರಮ್‌ಗಳು ಸೌಲಭ್ಯಗಳು ಈ ವಾಚ್‌ನಲ್ಲಿದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ IP67 ರೇಟಿಂಗ್‌ ಹೊಂದಿದ್ದು, ನೀರು ಹಾಗೂ ಧೂಳಿನಿಂದ ಸಮಸ್ಯೆಗೆ ಒಳಗಾಗುವುದಿಲ್ಲ. ಪರಿಣಾಮ ನೀವು ಹೊರಾಂಗಣ ಹಾಗೂ ಒಳಾಂಗಣದ ಎಲ್ಲಾ ಕಡೆ ಬಳಕೆ ಮಾಡಲು ಯೋಗ್ಯವಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಸ್ಮಾರ್ಟ್‌ವಾಚ್‌ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್‌ ಮಾಡಿದರೆ ಏಳು ದಿನಗಳ ವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ 20 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ನೀಡುತ್ತದೆ ಎಂದೂ ಕಂಪೆನಿ ಹೇಳಿದೆ.

ಫೈರ್-ಬೋಲ್ಟ್ ಅಪೊಲೊ 3 ಸ್ಮಾರ್ಟ್‌ವಾಚ್‌ ಲಾಂಚ್‌; ಡಿಸೈನ್‌ಗೆ ಫಿದಾ ಆಗದೇ ಇರರಿ!

ಫೈರ್-ಬೋಲ್ಟ್ ಅಪೊಲೊ 3 ಸ್ಮಾರ್ಟ್‌ವಾಚ್‌ ಬೆಲೆ ಹಾಗೂ ಲಭ್ಯತೆ: ಈ ವಿಶೇಷ ಸ್ಮಾರ್ಟ್‌ವಾಚ್‌ ಕಪ್ಪು, ಬೂದು, ಷಾಂಪೇನ್ ಗೋಲ್ಡ್ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಕಂಡುಬರುತ್ತದೆ. ಈ ವಾಚ್‌ ಅನ್ನು ನೀವು ಫ್ಲಿಪ್‌ಕಾರ್ಟ್ ಮತ್ತು ಫೈರ್-ಬೋಲ್ಟ್‌ನ ವೆಬ್‌ಸೈಟ್‌ ಮೂಲಕ ಪರಿಚಯಾತ್ಮಕ ಆರಂಭಿಕ ಬೆಲೆ 2,499 ರೂ.ಗಳಿಗೆ ಇಂದಿನಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Another watch has been unveiled by the Fire-boltt company. This Fire-boltt Apollo 3 smartwatch has Bluetooth calling facility and will provide a great experience with a screen resolution of 466 x 466 pixels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+