Home
ಸುದ್ದಿಜಾಲ

ಸ್ಮಾರ್ಟ್‌ವಾಚ್‌ ಖರೀದಿಸುವವರೇ ಗಮನಿಸಿ: ಮಾರ್ಕೆಟ್‌ಗೆ ಎಂಟ್ರಿ ಕೊಡ್ತು ಬೊಂಬಾಟ್‌ ವಾಚ್‌!

ಸ್ಮಾರ್ಟ್‌ವಾಚ್‌ಗಳು ಬಳಕೆದಾರರ ಭಿನ್ನ ಅಗತ್ಯತೆಗಳನ್ನು ಪೂರೈಕೆ ಮಾಡುತ್ತಿದ್ದು, ಈ ಮೂಲಕ ಸಮಯ ವೀಕ್ಷಣೆ ಜೊತೆಗೆ ಆರೋಗ್ಯ ಹಾಗೂ ಇನ್ನಿತರೆ ಸೇವೆ ಪಡೆದುಕೊಳ್ಳಬಹುದು. ಈ ನಡುವೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳು ಅತ್ಯಾಕರ್ಷಕ ಫೀಚರ್ಸ್‌ನೊಂದಿಗೆ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದು, ಈ ಸಾಲಿಗೆ ಹೊಸ ಸ್ಮಾರ್ಟ್‌ವಾಚ್‌‌ವೊಂದು ಸೇರಿದೆ.

ಹೌದು, ಪ್ರಮುಖ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಸಂಸ್ಥೆಯಾದ ಫೈರ್-ಬೋಲ್ಟ್ ಆರ್ಟಿಲರಿ ಸ್ಮಾರ್ಟ್‌ವಾಚ್ (Fire-boltt Artillery smartwatch) ಭಾರತದಲ್ಲಿ ಲಾಂಚ್‌ ಆಗಿದೆ. ಈ ವಾಚ್‌ ಒರಟಾದ ವಿನ್ಯಾಸ, ಎನ್‌ಎಫ್‌ಸಿ ಮೋಷನ್ ಸೆನ್ಸರ್, ಬ್ಲೂಟೂತ್ ಕರೆ ಸೇರಿದಂತೆ ಇನ್ನೂ ಹಲವು ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡು ವಿಶೇಷ ಎನಿಸಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿದುಕೊಳ್ಳಿ.

 ಮಾರ್ಕೆಟ್‌ಗೆ ಎಂಟ್ರಿ ಕೊಡ್ತು ಬೊಂಬಾಟ್‌ ವಾಚ್‌!

ಫೈರ್-ಬೋಲ್ಟ್ ಆರ್ಟಿಲರಿ ಶೈಲಿ: ಈ ವಾಚ್‌ ಅದು ಒರಟಾದ ವಿನ್ಯಾಸ ಮತ್ತು ಕ್ಲೈಮ್ ಶಾಕ್ ಪ್ರೂಫ್ ಬಾಡಿಯೊಂದಿಗೆ ಕಾಣಿಸಿಕೊಂಡಿದ್ದು, ವೃತ್ತಾಕಾರದ ಡಯಲ್ ವಿನ್ಯಾಸ ಹೊಂದಿದೆ. ಅಂದರೆ ಈ ವಾಚ್‌1.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 400 x 400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ವಿವಿಧ ವಾಚ್ ಫೇಸ್‌ ಆಯ್ಕೆ ಇದ್ದು, ಅತ್ಯಂತ ಆಕರ್ಷಕವಾಗಿದೆ.

ಫೈರ್-ಬೋಲ್ಟ್ ಆರ್ಟಿಲರಿ ಫೀಚರ್ಸ್‌: ಈ ವಾಚ್‌ನಲ್ಲಿ ಬಳಕೆದಾರರು ಜ್ಞಾಪನೆಗಳನ್ನು ಹೊಂದಿಸಬಹುದು, ಹವಾಮಾನವನ್ನು ಪರಿಶೀಲಿಸಬಹುದು ಮತ್ತು ವಾಯ್ಸ್‌ ಅಸಿಸ್ಟೆಂಟ್‌ , ಮ್ಯೂಸಿಕ್‌ ಪ್ಲೇ ಬ್ಯಾಕ್‌ ಅನ್ನು ಕಂಟ್ರೋಲ್‌ ಮಾಡಬಹುದಾದ ಆಯ್ಕೆ ನೀಡಲಾಗಿದೆ. ಜೊತೆಗೆ ಸೂಟ್ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ಋತುಚಕ್ರದ ಟ್ರ್ಯಾಕಿಂಗ್‌ನಂತಹ ಫೀಚರ್ಸ್‌ ಆಯ್ಕೆ ಇದ್ದು, ಸಾಕಷ್ಟು ಪ್ರಯೋಜನ ನೀಡಲಿದೆ.

ಇದರೊಂದಿಗೆ ಮೋಷನ್ ಸೆನ್ಸಾರ್ ಅನ್ನು ಒಳಗೊಂಡಿದ್ದು, ಬಳಕೆದಾರರಿಗೆ ವಾಚ್ ಅನ್ನು ವರ್ಚುವಲ್ ರಿಯಾಲಿಟಿ ಗೇಮ್‌ಗಳನ್ನು ಕಂಟ್ರೋಲರ್‌ ಆಗಿಯೂ ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹೊಂದಾಣಿಕೆಯ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಸಂಪರ್ಕಗೊಂಡಾಗ ವರ್ಕ್‌ಔಟ್‌ಗಳನ್ನು ಇದು ಅನುಮತಿಸುತ್ತದೆ. ಇಷ್ಟು ಮಾತ್ರವಲ್ಲದೆ ಎನ್‌ಎಫ್‌ಸಿ ಅನ್ನು ಸಹ ಹೊಂದಿದ್ದು, ಈ ಫೀಚರ್ಸ್‌ ಮೂಲಕ ನೀವು ಪ್ರಯಾಣದಲ್ಲಿರುವಾಗ ಅನುಕೂಲಕರ ಪಾವತಿಗಳನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ.

ಈ ಎಲ್ಲಾ ಫೀಚರ್ಸ್‌ನೊಂದಿಗೆ ಬಳಕೆದಾರರು ಬ್ಲೂಟೂತ್ ಕರೆಗೆ ಬೆಂಬಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಮಲ್ಟಿ ಸ್ಪೋರ್ಟ್‌ ಮೋಡ್‌ಗಳು, ಸ್ಮಾರ್ಟ್ ನೋಟಿಫಿಕೇಶನ್‌, ಹವಾಮಾನ ನವೀಕರಣಗಳು, 7 ಇನ್‌ಬಿಲ್ಟ್ ಗೇಮ್‌, ಮ್ಯೂಸಿಕ್‌ ಮತ್ತು ಕ್ಯಾಮರಾ ಕಂಟ್ರೋಲ್‌ ಫೀಚರ್ಸ್‌ ಅನ್ನು ಇದು ಹೊಂದಿದ್ದು, ಪಾಸ್‌ಕೋಡ್ ಲಾಕ್ ಕಾರ್ಯವನ್ನು ಈ ಮೂಲಕ ಮಾಡಬಹುದಾಗಿದೆ. ಜೊತೆಗೆ ಇದು ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲಿಸಲಿದ್ದು, ಬಳಕೆದಾರರು ಹ್ಯಾಂಡ್ಸ್-ಫ್ರೀ ಕಾರ್ಯಗಳನ್ನು ಮಾಡಬಹುದಾಗಿದೆ

ಫೈರ್-ಬೋಲ್ಟ್ ಆರ್ಟಿಲರಿ ಬ್ಯಾಟರಿ ಸಾಮರ್ಥ್ಯ: ಈ ಆರ್ಟಿಲರಿ ಸ್ಮಾರ್ಟ್‌ವಾಚ್‌ 380mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಕ್ಲಾಸಿಕ್ ಮೋಡ್‌ನಲ್ಲಿ 8 ದಿನಗಳವರೆಗೆ ಬ್ಯಾಕಪ್‌ ನೀಡಲಿದ್ದು, ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 25 ದಿನಗಳವರೆಗೆ ಇದು ಬ್ಯಾಕಪ್‌ ನೀಡಲಿದೆ. ಜೊತೆಗೆ ಬ್ಲೂಟೂತ್ ಕರೆ ಸಕ್ರಿಯವಾಗಿದ್ದಾಗ 5 ದಿನಗಳ ಬ್ಯಾಟರಿ ಬ್ಯಾಕಪ್‌ ಪಡೆದುಕೊಳ್ಳಬಹುದು. ಇದರಿಂದಾಗಿ ನೀವು ವಾಚ್‌ ಅನ್ನು ಪದೇ ಪದೇ ಚಾರ್ಜಿಂಗ್‌ಗೆ ಹಾಕುವ ಅವಶ್ಯಕತೆ ಇರುವುದಿಲ್ಲ.

 ಮಾರ್ಕೆಟ್‌ಗೆ ಎಂಟ್ರಿ ಕೊಡ್ತು ಬೊಂಬಾಟ್‌ ವಾಚ್‌!

ಫೈರ್-ಬೋಲ್ಟ್ ಆರ್ಟಿಲರಿ ಬೆಲೆ ಹಾಗೂ ಲಭ್ಯತೆ: ಈ ವಾಚ್‌ 2,499ರೂ.ಗಳ ಆಫರ್‌ ಬೆಲೆ ಹೊಂದಿದ್ದು, ಈ ಬೆಲೆಗೆ ತಕ್ಕ ಫೀಚರ್ಸ್‌ ಅನ್ನು ಹೊಂದಿರುವುದು ಮತ್ತಷ್ಟು ವಿಶೇಷ. ಇದರೊಂದಿಗೆ ಬಿಳಿ, ಹಸಿರು ಮತ್ತು ಕಪ್ಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಈ ವಾಚ್‌ ಲಭ್ಯ ಇದೆ. ಇದನ್ನು ನೀವು ಅಮೆಜಾನ್ ಮತ್ತು ಫೈರ್-ಬೋಲ್ಟ್‌ನ ವೆಬ್‌ಸೈಟ್‌ನಲ್ಲಿ ಜೂನ್ 21 ರಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Leading smart gadget maker Fire-boltt Artillery smartwatch has been launched in India. This watch has got a rugged design, NFC motion sensor, Bluetooth calling and many other attractive features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+