Home
ಸುದ್ದಿಜಾಲ

ಫೈರ್‌-ಬೋಲ್ಟ್‌ನ ಈ ಸ್ಮಾರ್ಟ್‌ವಾಚ್‌ ಖರೀದಿಗೆ ಲಭ್ಯ!..ಇದರ ಲುಕ್‌ಗೆ ನೀವು ಕ್ಲೀನ್‌ ಬೋಲ್ಡ್‌!

ಸದ್ಯ ಸ್ಮಾರ್ಟ್‌ವಾಚ್‌ಗಳು ಪ್ರಮುಖ ಅಗತ್ಯ ಇರುವ ಡಿವೈಸ್‌ಗಳಲ್ಲಿ ಒಂದಾಗಿದೆ. ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಸ್ಮಾರ್ಟ್‌ ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಅದಾಗ್ಯೂ, ಬಜೆಟ್‌ ದರದಲ್ಲಿ ಖರೀದಿ ಮಾಡಬಹುದಾದ ಸ್ಮಾರ್ಟ್‌ ವಾಚ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದಿವೆ. ಆ ಪೈಕಿ ಇತ್ತೀಚಿಗೆ ಜನಪ್ರಿಯತೆ ಪಡೆದಿರುವ ಫೈರ್‌-ಬೋಲ್ಟ್‌ (Fire-Boltt) ಸ್ಮಾರ್ಟ್‌ ವಾಚ್‌ ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ ಹೊಸದಾಗಿ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

ಫೈರ್‌-ಬೋಲ್ಟ್‌ನ ಈ ವಾಚ್‌ ಖರೀದಿಗೆ ಲಭ್ಯ!..ಲುಕ್‌ಗೆ ನೀವು ಕ್ಲೀನ್‌ ಬೋಲ್ಡ್‌!

ಹೌದು, ಫೈರ್‌-ಬೋಲ್ಟ್‌ (Fire-Boltt) ಸ್ಮಾರ್ಟ್‌ ವಾಚ್‌ ಸಂಸ್ಥೆಯು ಅದುವೇ ಕೋಬ್ರಾ (Cobra) ಆಗಿದೆ. ಫೈರ್‌-ಬೋಲ್ಟ್‌ ಕೋಬ್ರಾ ಸ್ಮಾರ್ಟ್‌ವಾಚ್‌ ರಗಡ್‌ ಲುಕ್‌ ಹಾಗೂ ಡಿಸೈನ್‌ ಅನ್ನು ಪಡೆದಿದ್ದು, ರಫ್‌ ಆಂಡ್‌ ಟಫ್‌ ವಿನ್ಯಾಸ ಪಡೆದಿದೆ. ಈ ವಾಚ್‌ 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಧೂಳು, ವಾಟರ್‌ ಸ್ಲ್ಯಾಶ್‌ ರಚನೆಯನ್ನು ಇದು ಒಳಗೊಂಡಿರುವುದು ಪ್ರಮುಖ ಅಂಸಗಳಲ್ಲಿ ಒಂದಾಗಿದೆ.

ಫೈರ್‌-ಬೋಲ್ಟ್‌ ಕೋಬ್ರಾ: ಖರೀದಿಗೆ ಲಭ್ಯ

ಫೈರ್‌-ಬೋಲ್ಟ್‌ (Fire-Boltt) ವಾಚ್‌ ಇದೇ ಜನೆವರಿ 31 ರಿಂದ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ಫೈರ್‌-ಬೋಲ್ಟ್‌ (Fire-Boltt) ಸ್ಮಾರ್ಟ್‌ ವಾಚ್‌ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೈರ್‌-ಬೋಲ್ಟ್‌ನ ಈ ವಾಚ್‌ ಖರೀದಿಗೆ ಲಭ್ಯ!..ಲುಕ್‌ಗೆ ನೀವು ಕ್ಲೀನ್‌ ಬೋಲ್ಡ್‌!

ಫೈರ್‌-ಬೋಲ್ಟ್‌ ಕೋಬ್ರಾ: ರಚನೆ ಹೇಗಿದೆ

ಫೈರ್‌-ಬೋಲ್ಟ್‌ ಕೋಬ್ರಾ ಮೂರು ಪದರದ ಬಾಡಿ ರಚನೆಯನ್ನು ಹೊಂದಿದೆ, ಇದು ಹಗುರವಾದ ಡಿವೈಸ್‌ ಆಗಿದೆ. ಹಾಗೆಯೇ ಈ ವಾಚ್‌ IP68 ರೇಟಿಂಗ್‌ ಅನ್ನು ಪಡೆದಿದೆ. ಇದರೊಂದಿಗೆ 500 ನಿಟ್ಸ್ ಬ್ರೈಟ್‌ನೆಸ್ ಪಡೆದಿದ್ದು, 60Hz ರಿಫ್ರೆಶ್ ರೇಟ್ ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ 1.78-ಇಂಚಿನ AMOLED ಹೊಂದಿದ್ದು, 368 × 448 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಪಡೆದಿದೆ. ಜೊತೆಗೆ ಆಲ್ವೇಸ್‌ ಆನ್‌ ಸ್ಕ್ರೀನ್‌ ಸೌಲಭ್ಯ ಪಡೆದಿದ್ದು, ಮಲ್ಟಿ ಫೇಸ್‌ ವಾಚ್‌ ಹಾಗೂ ಕಸ್ಟಮೈಸೇಶನ್ ಆಯ್ಕೆ ಹೊಂದಿದೆ.

ಫೈರ್‌-ಬೋಲ್ಟ್‌ ಕೋಬ್ರಾ: ಕ್ರೀಡಾ ಮೋಡ್‌ಗಳು

ಅಂದಹಾಗೆ ಫೈರ್‌-ಬೋಲ್ಟ್‌ ಕೋಬ್ರಾ ಸ್ಮಾರ್ಟ್ ವಾಚ್ ಸುಮಾರು 123 ಕ್ರೀಡಾ ಮೋಡ್‌ಗಳ ಆಯ್ಕೆಗಳನ್ನು ಹೊಂದಿದೆ. ದೈಹಿಕ ಚಟುವಟಿಕೆಯ ಸಮಯದಲ್ಲಿ ಚಿಕ್ಕ ವಿವರಗಳನ್ನು ಸಹ ಟ್ರ್ಯಾಕ್ ಮಾಡಲು ಬುದ್ಧಿವಂತ ಕ್ರೀಡಾ ಅಲ್ಗಾರಿದಮ್ ಫೀಚರ್ಸ್‌ಗಳನ್ಉ ಪಡೆದಿರುವುದು ಪ್ರಮುಖ ಅಂಶವಾಗಿ ಕಾಣಿಸುತ್ತದೆ. ಇದರ ಜೊತೆಗೆ 24 × 7 ಡೈನಾಮಿಕ್ ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್, ಸ್ತ್ರೀ ಆರೋಗ್ಯ ರಕ್ಷಣೆ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಆರೋಗ್ಯ ಫೀಚರ್ಸ್‌ಗಳನ್ನು ಸಿಲಭವಾಗಿ ಟ್ರ್ಯಾಕ್‌ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ.

ಫೈರ್‌-ಬೋಲ್ಟ್‌ನ ಈ ವಾಚ್‌ ಖರೀದಿಗೆ ಲಭ್ಯ!..ಲುಕ್‌ಗೆ ನೀವು ಕ್ಲೀನ್‌ ಬೋಲ್ಡ್‌!

ಫೈರ್‌-ಬೋಲ್ಟ್‌ ಕೋಬ್ರಾ: ಫೀಚರ್ಸ್‌

ನೂತನ ಫೈರ್-ಬೋಲ್ಟ್ (Fire-Boltt) ಕೋಬ್ರಾ ಉತ್ತಮ ಗುಣಮಟ್ಟದ ಬ್ಲೂಟೂತ್ ಕರೆಗಾಗಿ ಬಿಲ್ಟ್‌ ಇನ್‌ ಸ್ಪೀಕರ್ ಮತ್ತು ಮೈಕ್‌ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್ ವಾಚ್ ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 15 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಗ್ರಾಹಕರು ಬ್ಯಾಟರಿ-ಸೇವರ್ ಮೋಡ್ ಆನ್ ಮಾಡಿದ್ದರೆ, ಸುಮಾರು 30 ದಿನಗಳವರೆಗೆ ಬ್ಯಾಕ್‌ಅಪ್‌ ಪಡೆಯಬಹುದಾಗಿದೆ.

ಹೊಸ ಫೈರ್-ಬೋಲ್ಟ್ (Fire-Boltt) ಸ್ಮಾರ್ಟ್‌ ವಾಚ್‌ ಡಿವೈಸ್‌ ರಿಮೋಟ್ ಕ್ಯಾಮೆರಾ/ ಮ್ಯೂಸಿಕ್‌ ಕಂಟ್ರೋಲ್‌, ಬಿಲ್ಟ್‌ಇನ್‌ ಗೇಮ್‌ಗಳು, AI ವಾಯಿಸ್‌ ಅಸಿಸ್ಟಂಟ್‌, ನಿಯತಕಾಲಿಕ ಆರೋಗ್ಯ ಜ್ಞಾಪನೆಗಳು, ಹವಾಮಾನ ಮುನ್ಸೂಚನೆ ಗಳು, ಅಲಾರಾಂ ಗಡಿಯಾರ, ಟೈಮರ್, ಫ್ಲ್ಯಾಷ್‌ಲೈಟ್ ಮತ್ತು ಸ್ಟಾಪ್‌ ವಾಚ್ ಸೇರಿದಂತೆ ಇತರೆ ಕೆಲವು ಅಗತ್ಯ ಹೆಚ್ಚುವರಿ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಫೈರ್‌-ಬೋಲ್ಟ್‌ ಕೋಬ್ರಾ: ಬೆಲೆ ಮತ್ತು ಲಭ್ಯತೆ

ಫೈರ್-ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,499 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ ವಾಚ್‌ ಇದೇ ಜನವರಿ 31 ರಿಂದ ಪ್ರಮುಖ ಇ ಕಾಮರ್ಸ್‌ ತಾಣವಾಗಿ ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ (Flipkart) ಮತ್ತು ಸಂಸ್ಥೆಯ ಅಧಿಕೃತ Fireboltt.com ವೆಬ್‌ಸೈಟ್‌ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ ವಾಚ್ ಸಾಲಿಡ್‌ ಗ್ರೀನ್, ಸಾಲಿಡ್‌ ಬ್ಲ್ಯಾಕ್‌, Camouflage ಗ್ರೀನ್‌ ಹಾಗೂ Camouflage ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
The Fire-Bolt Cobra smartwatch has a rugged look and design. available in Solid Green, Solid Black, Camouflage Green, and Camouflage Black.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+