ಫೈರ್ ಬೋಲ್ಟ್‌ನಿಂದ ರಗಡ್ ಲುಕ್‌ನ ಹೊಸ ಸ್ಮಾರ್ಟ್‌ವಾಚ್ ಲಾಂಚ್, ಯುವಕರಿಗಂತೂ ಇಷ್ಟವಾಗದೆ ಇರದು!
ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ಇಂದು ಹಲವಾರು ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ವಾಚ್‌ಗಳು ಒಂದಕ್ಕೊಂದು ಭಿನ್ನ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತವೆ. ಅದರಂತೆ ಫೈರ್ ಬೋಲ್ಟ್‌ನ ಈ ಹೊಸ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ.
ಹೌದು, ಫೈರ್ ಬೋಲ್ಟ್ ಕ್ರುಸೇಡರ್ ಸ್ಮಾರ್ಟ್‌ವಾಚ್ ಅನಾವರಣ ಆಗಿದ್ದು, ಈ ವಾಚ್ ಅಮೋಲೆಡ್ ಡಿಸ್ಪ್ಲೇ, IP68 ವಾಟರ್ ರೆಸಿಸ್ಟೆಂಟ್, ಬ್ಲೂಟೂತ್ ಕಾಲಿಂಗ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ರಗಡ್ ಶೈಲಿ ಮೂಲಕ ಯುವಕರನ್ನು ಆಕರ್ಷಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಫೈರ್ ಬೋಲ್ಟ್ ಕ್ರುಸೇಡರ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 466 x 466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ರಗಡ್ ಆವೃತ್ತಿಯ ಸ್ಮಾರ್ಟ್ ವಾಚ್ ಆಗಿರುವುದರಿಂದ ಇದಕ್ಕೆ ತಕ್ಕಂತೆ ಲೋಹೀಯ ವಿನ್ಯಾಸವನ್ನು ನೀಡಲಾಗಿದೆ. ಹಾಗೆಯೇ ಕಂಟ್ರೋಲ್‌ಗಾಗಿ 2 ಪುಶ್ ಬಟನ್ ಆಯ್ಕೆ ಇದರಲ್ಲಿದೆ.
ಉಳಿದಂತೆ ಈ ಸ್ಮಾರ್ಟ್ ವಾಚ್ ಮಲ್ಟಿ ವಾಚ್ ಫೇಸ್ ಆಯ್ಕೆ ಪಡೆದಿದ್ದು, ಮಲ್ಟಿ ಸ್ಪೋರ್ಟ್ ಮೋಡ್‌ನೊಂದಿಗೆ ಕಾಣಿಸಿಕೊಂಡಿದೆ. ಅದರಲ್ಲೂ ರನ್ನಿಂಗ್, ಈಜು, ಜಾಗಿಂಗ್, ಸೈಕ್ಲಿಂಗ್ ಮುಂತಾದ ಹಲವು ಚಟುವಟಿಕೆ ವಿಧಾನಗಳನ್ನು ಹೊಂದಿದ್ದು, ಬ್ಲೂಟೂತ್ ಕರೆ ಬೆಂಬಲ ಹೊಂದಿದ್ದು, ಇದಕ್ಕಾಗಿ ಇನ್‌ಬಿಲ್ಟ್ ಮೈಕ್ ಮತ್ತು ಸ್ಪೀಕರ್ ಆಯ್ಕೆ ನೀಡಲಾಗಿದೆ.
ಇದರ ಜೊತೆಗೆ ವಾಯ್ಸ್ ಅಸಿಸ್ಟೆಂಟ್ ಬೆಂಬಲದೊಂದಿಗೆ ಪ್ಯಾಕ್ ಆಗಿರುವ ಈ ವಾಚ್‌ನಲ್ಲಿ ಕರೆ ಕಂಟ್ರೋಲ್ ಮತ್ತು ಅಲಾರಾಂ ಸೆಟ್ಟಿಂಗ್ ಅನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಫೈರ್ ಬೋಲ್ಟ್ ಹೆಲ್ತ್ ಸೂಟ್‌ನೊಂದಿಗೆ ಕಾಣಿಸಿಕೊಂಡಿದ್ದು, 4 ಆರೋಗ್ಯ ಮಾನಿಟರ್‌ಗಳನ್ನು ಇದು ಬೆಂಬಲಿಸುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಅಗತ್ಯವಾಗಿ ಬೇಕಾಗಿರುವ ಹೃದಯ ಬಡಿತ ಮಾನಿಟರ್, SpO2 ಮಾನಿಟರ್, ಸ್ಲೀಪ್ ಮಾನಿಟರ್ ಮತ್ತು ಮಹಿಳಾ ಆರೋಗ್ಯ ಮಾನಿಟರ್ ಅನ್ನು ಇದು ಹೊಂದಿದ್ದು, ಈ ಮೂಲಕ ಉತ್ತಮ ಆರೋಗ್ಯಹೊಂದಲು ಸಹಕಾರಿಯಾಗಿದೆ ಈ ಸ್ಮಾರ್ಟ್‌ವಾಚ್. ಪ್ರಮುಖ ವಿಷಯ ಏನೆಂದರೆ ಈ ಫೈರ್ ಬೋಲ್ಟ್ ಕ್ರುಸೇಡರ್ ವಾಚ್ ಪೀಕ್ ಫಿಟ್‌ನೆಸ್ ಪಾಲುದಾರ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ.
ಇದರಿಂದಾಗಿ ಬಳಕೆದಾರರು ಯೋಗ, ಎಲಿಪ್ಟಿಕಲ್ ನಂತಹ ಚಟುವಟಿಕೆಗಳನ್ನು ಸುಲಭವಾಗಿ ಲೆಕ್ಕ ಹಾಕಬಹುದಾಗಿದೆ. ಜೊತೆಗೆ ಯಾವಾಗ ನೀರು ಕುಡಿಯಬೇಕು ಹಾಗೂ ಯಾವಾಗ ರೆಸ್ಟ್ ಮಾಡಬೇಕು ಎಂಬ ಮಾಹಿತಿಯನ್ನು ಆಗಾಗ್ಗೆ ನೀಡಲಿದೆ. ಇದರಿಂದಾಗಿ ಸಂಪೂರ್ಣವಾಗಿ ನಮ್ಮ ದೇಹ ಸದಾ ಆರೋಗ್ಯದಿಂದ ಇರಲು ಸಹಕರಿಸುತ್ತದೆ. ಉಳಿದಂತೆ ಇನ್‌ಬಿಲ್ಟ್ ಗೇಮ್‌ಗಳು . , ಹವಾಮಾನ ನವೀಕರಣ, ಅಲಾರ್ಮ್, ಟೈಮರ್, ಸ್ಟಾಪ್‌ವಾಚ್‌ನಂತಹ ಫೀಚರ್ಸ್ ಆಯ್ಕೆ ಈ ವಾಚ್‌ನಲ್ಲಿದೆ.
ಪ್ರಮುಖವಾಗಿ ಈ ವಾಚ್ ಒಂದು ಫೋನ್‌ನಂತೆ ಕಾರ್ಯನಿರ್ವಹಿಸಲಿದ್ದು, ಕರೆ ಹಾಗೂ ಎಸ್ಎಮ್‌ಎಸ್ ನೋಟಿಫಿಕೇಶನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಫೈರ್‌ಬೋಲ್ಟ್ ಕ್ರುಸೇಡರ್ ವಾಚ್ IP68 ಧೂಳು ಮತ್ತು ನೀರು ನಿರೋಧಕವಾಗಿದ್ದು, ಇದರಿಂದ ವಾಚ್ ಅನ್ನು ಎಲ್ಲಾ ಸಮಯದಲ್ಲೂ ಹಾಗೂ ಎಲ್ಲೆಂದರಲ್ಲಿ ಬಳಕೆ ಮಾಡಬಹುದಾಗಿದೆ.ಈ ಸ್ಮಾರ್ಟ್‌ವಾಚ್ 400mAh ಸಾಮರ್ಥ್ಯ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಈ ಮೂಲಕ ಅತ್ಯುತ್ತಮವಾದ ಬ್ಯಾಕಪ್ ಅನ್ನು ನೀಡಲಿದೆ.

ಫೈರ್ ಬೋಲ್ಟ್ ಕ್ರುಸೇಡರ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ನೀವು ಇಂದಿನಿಂದ ಈ ವಾಚ್ ಅನ್ನು ಫೈರ್ ಬೋಲ್ಟ್ ನ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದು. ಪರಿಚಯಾತ್ಮಕ ಬೆಲೆಯಾಗಿ ಇದಕ್ಕೆ 2,499ರೂ.ಗಳನ್ನು ನಿಗದಿ ಮಾಡಲಾಗಿದೆ. ಅದಾಗ್ಯೂ ಈ ಬೆಲೆ ಶೀಘ್ರದಲ್ಲೇ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಈ ವಾಚ್ ನಿಮಗೆ ಕಪ್ಪು, ಕಿತ್ತಳೆ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications