Home
ಸುದ್ದಿಜಾಲ

Smartwatch: ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಲಾಂಚ್‌! 2GB RAM.. 4G ಸಂಪರ್ಕ.. ಬೆಲೆ ಇಷ್ಟೇ?

ಫೈರ್ ಬೋಲ್ಟ್ (Fire Boltt) ಬದಲಾಗುತ್ತಿರುವ ಸ್ಮಾರ್ಟ್‌ ಗ್ಯಾಜೆಟ್‌ ತಂತ್ರಜ್ಞಾನಗಳೊಂದಿಗೆ ಹೆಜ್ಜೆ ಹಾಕುತ್ತಿದೆ. ಈ ಕಾರಣಕ್ಕೆ ಮೊಬೈಲ್‌ ವಿರುದ್ಧವೇ ಸ್ಪರ್ಧೆ ನೀಡಬಲ್ಲ ಹೊಸ ಸ್ಮಾರ್ಟ್‌ವಾಚ್‌ (Smartwatch) ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ 2GB RAM ಆಯ್ಕೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಹೌದು, ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ (Fire Boltt Dream Smartwatch) ಅನ್ನು ಅನಾವರಣ ಮಾಡಲಾಗಿದ್ದು, ಈ ಮೂಲಕ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಫೈರ್ ಬೋಲ್ಟ್ ಅಗ್ರಸ್ಥಾನ ಪಡೆದಿದೆ. ಅಂದರೆ ಈ ಸ್ಮಾರ್ಟ್‌ವಾಚ್‌ ಕೇವಲ ಆರೋಗ್ಯ ಸಂಬಂಧಿ ಮಾಹಿತಿ ಅಥವಾ ಫಿಟ್‌ನೆಸ್‌ ಮಾಹಿತಿ ನೀಡಲು ಮಾತ್ರವಲ್ಲದೆ ಇರುವ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯ ಇರುವ ಬಹುಪಾಲು ಫೀಚರ್ಸ್‌ ಅನ್ನು ಪಡೆದಿದೆ. ಇದಕ್ಕೆಂದೇ 4G ಸಂಪರ್ಕ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಲಾಂಚ್‌! 2GB RAM.. 4G ಸಂಪರ್ಕ..

ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್: ಈ ವಿಶೇಷ ಸ್ಮಾರ್ಟ್‌ವಾಚ್ 2.02 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಅಂದರೆ 320 x 386 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹಾಗೂ 60Hz ರಿಫ್ರೆಶ್ ರೇಟ್‌ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಕರ್ಷಕ ಕ್ರೌನ್‌ ಬಟನ್‌ನೊಂದಿಗೆ ವಿವಿಧ ಕಾರ್ಯಕ್ಕಾಗಿ ಮತ್ತೊಂದು ವಿಶೇಷ ಬಟನ್‌ ಆಯ್ಕೆ ಪಡೆದಿದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ಕ್ಲೌಡ್ ಆಧಾರಿತ ವಾಚ್ ಫೇಸ್‌ ಆಯ್ಕೆ ಪಡೆದಿದ್ದು, ಕ್ವಾಡ್-ಕೋರ್ ಕಾರ್ಟೆಕ್ಸ್ A7MP ಚಿಪ್‌ಸೆಟ್ ಮತ್ತು ಮಾಲಿ T820 MP1 ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಬರುತ್ತದೆ. ಕಾಣಿಸಿಕೊಂಡಿದೆ. ಅಲ್ಲದೆ ಆಂಡ್ರಾಯ್ಡ್‌ ಓಎಸ್‌ ಅನ್ನು ಇದು ರನ್‌ ಮಾಡಲಿದೆ. ಒಟ್ಟಾರೆ ಒಂದು ಸ್ಮಾರ್ಟ್‌ಫೋನ್‌ ನಲ್ಲಿ ಇರುವ ಎಲ್ಲಾ ರೀತಿಯ ಫೀಚರ್ಸ್ ಅನ್ನು ಇದರಲ್ಲಿ ಕಾಣಬಹುದಾಗಿದೆ.

ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಲಾಂಚ್‌! 2GB RAM.. 4G ಸಂಪರ್ಕ..

ಇದರೊಂದಿಗೆ ಈ ಫೈರ್ ಬೋಲ್ಟ್ ಡ್ರೀಮ್ ವಾಚ್ 4G LTE ಮತ್ತು ನ್ಯಾನೋ ಸಿಮ್ ಕಾರ್ಡ್ (Nano SIM card) ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, ನೀವು ಈ ಮೂಲಕ ಕರೆ ಮಾಡಬಹುದಾಗಿದೆ. ಇದರೊಂದಿಗೆ ಜಿಪಿಎಸ್, ಬ್ಲೂಟೂತ್ ಮತ್ತು ವೈ-ಫೈ ನಂತಹ ಸಂಪರ್ಕ ಫೀಚರ್ಸ್‌ ಅನ್ನು ಹೊಂದಿದ್ದು, ವಿವಿಧ ಕೆಲಸಗಳಿಗೆ ಇದನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಜೊತೆಗೆ ಗೂಗಲ್ ಪ್ಲೇ ಸ್ಟೋರ್ (Google Play Store) ಅನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆ ಮಾಡಬಹುದು. ಅಂದರೆ ನೀವು ಈ ವಾಚ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ (WhatsApp, Facebook, Instagram) ಆಪ್‌ಗಳನ್ನು ಬಳಕೆ ಮಾಡಬಹುದಾಗಿದೆ. ಈ ಮೂಲಕ ಮೊಬೈಲ್‌ ಓಪನ್‌ ಮಾಡದೆಯೇ ನಿಮ್ಮ ಮುಂಗೈ ಮೇಲೆಯೇ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಬಹುದಾಗಿದೆ. ಇದು ಬ್ಲೂಟೂತ್ ಕರೆ ಸೌಲಭ್ಯ ಪಡೆದಿದ್ದು, ಇದಕ್ಕಾಗಿ ಇನ್‌ಬಿಲ್ಟ್ ಮೈಕ್ ಮತ್ತು ಸ್ಪೀಕರ್‌ ಆಯ್ಕೆ ನೀಡಲಾಗಿದೆ.

ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಲಾಂಚ್‌! 2GB RAM.. 4G ಸಂಪರ್ಕ..

ಇವಿಷ್ಟೇ ಫೀಚರ್ಸ್‌ ಅಲ್ಲದೆ ಈ ಸ್ಮಾರ್ಟ್‌ವಾಚ್‌ ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ ಸಹ ಪಡೆದಿದ್ದು, 2 GB RAM + 16 GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಉಳಿದಂತೆ ಈ ವಾಚ್‌ 300+ಸ್ಪೋರ್ಟ್ಸ್‌ ಮೋಡ್‌ಗಳನ್ನು ಈ ವಾಚ್‌ ಹೊಂದಿದೆ. ಜೊತೆಗೆ ಫೈರ್ ಬೋಲ್ಟ್ ಹೆಲ್ತ್ ಸೂಟ್ ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, ಹೃದಯ ಬಡಿತ ಮಾನಿಟರ್, ರಕ್ತದ ಆಮ್ಲಜನಕದ ಮಟ್ಟ ಮಾನಿಟರ್ ಬಗ್ಗೆ ನಿಖರ ಮಾಹಿತಿ ನೀಡುತ್ತದೆ.

ಪ್ರಮುಖವಾಗಿ ಈ ಸ್ಮಾರ್ಟ್‌ವಾಚ್‌ IP67 ರೇಟಿಂಗ್‌ ಹೊಂದಿದ್ದು, ಈ ವಾಚ್‌ ಬಳಕೆದಾರರು ಯಾವುದೇ ನೀರು ಮತ್ತು ಧೂಳಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಅಂದರೆ ಎಲ್ಲಿಬೆಕಾದರೂ ಈ ವಾಚ್‌ ಅನ್ನು ಬಳಕೆ ಮಾಡಬಹುದಾಗಿದೆ. ಉಳಿದಂತೆ ಇದು 800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಮೂಲಕ 36 ಗಂಟೆಗಳ ಬ್ಯಾಕಪ್ ಪಡೆಯಬಹುದಾಗಿದೆ.

ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಲಾಂಚ್‌! 2GB RAM.. 4G ಸಂಪರ್ಕ..

ಫೈರ್ ಬೋಲ್ಟ್ ಡ್ರೀಮ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ ಫ್ಯೂಷನ್ ಫ್ಲಿಕರ್, ಫಾರೆಸ್ಟ್ ಫ್ರಿಂಜ್, ಡೆನಿಮ್ ಡ್ರೀಮ್, ಕೋಕೋ ಕೌಚರ್, ಮಿಡ್‌ನೈಟ್ ಗ್ರೇಸ್, ಚೆರ್ರಿ ಹಗ್, ಶ್ಯಾಡೋ ಗ್ಲೈಡ್ ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಜನವರಿ 10 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದ್ದು, ಇದಕ್ಕೆ 6,299ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಅದಾಗ್ಯೂ ನೀವು ಪರಿಚಯಾತ್ಮಕ ಬೆಲೆ 5,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದು.

Best Mobiles in India

English summary
Fire Boltt Dream Smartwatch has been unveiled, with which Fire Boltt has topped the smartwatch market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+