Home
ಸುದ್ದಿಜಾಲ

Fire Boltt: ಫೈರ್ ಬೋಲ್ಟ್‌ನಿಂದ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು ಲಾಂಚ್‌: GPS, ಬ್ಲೂಟೂತ್ ಕರೆ ಸೌಲಭ್ಯ!

ಫೈರ್ ಬೋಲ್ಟ್ (Fire Boltt) ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು (Smartwatch) ಲಾಂಚ್ ಮಾಡಿಕೊಂಡು ಬರುತ್ತಲೇ ಇರುತ್ತದೆ. ಈ ನಡುವೆ ಮತ್ತೆರಡು ಹೊಸ ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದ್ದು, ಈ ಸ್ಮಾರ್ಟ್‌ವಾಚ್‌ಗಳು ಒರಟಾದ ಶೈಲಿಯಲ್ಲಿ ಪಡೆದುಕೊಂಡಿದ್ದು, ಯುವ ಪೀಳಿಗೆಗೆ ಇಷ್ಟವಾಗಲಿವೆ.

ಹೌದು, ಫೈರ್ ಬೋಲ್ಟ್ ಎಕ್ಸ್‌ಪೆಡಿಶನ್ ಮತ್ತು ಕ್ವೆಸ್ಟ್ (Fire-Boltt Expedition and Quest) ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ಟ್ರೈಲ್‌ ಬ್ಲೇಜರ್‌ಗಳ ಸರಣಿಗೆ ಸೇರಿದ್ದು, ಬ್ಲೂಟೂತ್ ಕರೆ ಸೌಲಭ್ಯದೊಂದಿಗೆ ವಿಶೇಷ ಎನಿಸಿವೆ. ಇದರೊಂದಿಗೆ ಈ ದೃಢವಾದ ಸ್ಮಾರ್ಟ್‌ವಾಚ್‌ಗಳು ಇತ್ತೀಚಿಗೆ ಬಿಡುಗಡೆಯಾದ ಐಷಾರಾಮಿ ಎಲೈಟ್ ಆವೃತ್ತಿಯ ಸ್ಮಾರ್ಟ್‌ವಾಚ್‌ಗಳನ್ನು ಅನುಸರಿಸುತ್ತವೆ. ಹಾಗಿದ್ರೆ, ಈ ವಾಚ್‌ಗಳ ಫೀಚರ್ಸ್ ಹಾಗೂ ಬೆಲೆ ವಿವರ ಎಷ್ಟು ಮಾಹಿತಿ ಇಲ್ಲಿದೆ ನೋಡಿ.

ಫೈರ್ ಬೋಲ್ಟ್‌ನಿಂದ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು ಲಾಂಚ್‌...

ಫೈರ್ ಬೋಲ್ಟ್ ಎಕ್ಸ್‌ಪೆಡಿಶನ್ ಮತ್ತು ಕ್ವೆಸ್ಟ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ವಾಚ್‌ಗಳು 1.39 ಇಂಚಿನ ಹೆಚ್‌ಡಿ ಟಿಎಫ್‌ಟಿ ಐಪಿಎಸ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಒರಟಾದ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಜೊತೆಗೆ ಈ ಡಿಸ್‌ಪ್ಲೇ 360 x 360 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿವೆ. ಹಾಗೆಯೇ ಒಂದು ಕ್ರೌನ್, 2 ಪುಶ್ ಬಟನ್‌ ಆಯ್ಕೆ ಮೂಲಕ ವಿಶೇಷವಾಗಿ ಕಾಣಿಸಿಕೊಂಡಿವೆ.

ಫೈರ್ ಬೋಲ್ಟ್ ಎಕ್ಸ್‌ಪೆಡಿಶನ್ ಮತ್ತು ಕ್ವೆಸ್ಟ್ ಫೀಚರ್ಸ್: ಈ ಸ್ಮಾರ್ಟ್‌ವಾಚ್‌ಗಳು ಮಲ್ಟಿ ವಾಚ್‌ ಫೇಸ್‌ ಆಯ್ಕೆ ಪಡೆದುಕೊಂಡಿದ್ದು, ಬ್ಲೂಟೂತ್ ಕರೆ, ಕರೆ ಇತಿಹಾಸ, ತ್ವರಿತ ಡಯಲ್ ಪ್ಯಾಡ್, ಸಿಂಕ್ ಸಂಪರ್ಕಗಳು ಸೇರಿದಂತೆ ಅನೇಕ ವಿಶೇಷ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಿವೆ. ಹಾಗೆಯೇ ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್ ಆಯ್ಕೆ ಇದ್ದು, ಇದರಿಂದ ಕರೆ ಹಾಗೂ ಇನ್ನಿತರೆ ಕಾರ್ಯದಲ್ಲಿ ವಿಶೇಷ ಅನುಭವ ಸಿಗಲಿದೆ.

ಫೈರ್ ಬೋಲ್ಟ್‌ನಿಂದ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು ಲಾಂಚ್‌...

ಜೊತೆಗೆ ಈ ಸ್ಮಾರ್ಟ್‌ವಾಚ್‌ಗಳಲ್ಲಿ ಎಕ್ಸ್‌ಪೆಡಿಶನ್‌ 120+ ಸ್ಪೋರ್ಟ್‌ ಮೋಡ್‌ ಆಯ್ಕೆ ಹೊಂದಿದ್ದು, ಕ್ವೆಸ್ಟ್ ಸ್ಮಾರ್ಟ್‌ವಾಚ್ 100 ಸ್ಪೋರ್ಟ್‌ ಮೋಡ್ ಆಯ್ಕೆ ಪಡೆದುಕೊಂಡಿವೆ. ಮತ್ತು ಎರಡೂ ವಾಚ್‌ಗಳು ಸಹ ಎಐ ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ ಪಡೆದಿದ್ದು, ಈ ಮೂಲಕ ಅತ್ಯುತ್ತಮವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಉಳಿದಂತೆ ನಿದ್ರೆ, SpO2 ಮತ್ತು ಹೃದಯ ಬಡಿತ ಟ್ರ್ಯಾಕಿಂಗ್, ಮಹಿಳೆಯರ ಆರೋಗ್ಯ, ಉಸಿರಾಟದ ಮೇಲ್ವಿಚಾರಣೆಯನ್ನೂ ಮಾಡಲಿವೆ.

ಇದರೊಂದಿಗೆ ಇನ್‌ಬಿಲ್ಟ್ ಜಿಪಿಎಸ್‌ ಟ್ರ್ಯಾಕಿಂಗ್ ಸೌಲಭ್ಯ ಹೊಂದಿರುವುದು ಈ ವಾಚ್‌ ಖರೀದಿದಾರರಿಗೆ ಹಲವು ರೀತಿಯಲ್ಲಿ ಅನುಕೂಲ ನೀಡಲಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.0 ನಲ್ಲಿ ಕಾರ್ಯನಿರ್ವಹಿಸಲಿದ್ದು, ಇನ್‌ಬಿಲ್ಟ್‌ ಗೇಮ್‌ಗಳು, ಸ್ಮಾರ್ಟ್ ನೋಟಿಫಿಕೇಶನ್‌, ಕ್ಯಾಲ್ಕುಲೇಟರ್, ಹವಾಮಾನ, ಕ್ಯಾಮೆರಾ ಮತ್ತು ಮ್ಯೂಸಿಕ್‌ ಕಂಟ್ರೋಲ್‌, ಟೈಮರ್, ಅಲಾರ್ಮ್, ಸ್ಟಾಪ್‌ವಾಚ್, ಡ್ರಿಂಕ್ ವಾಟರ್ ರಿಮೈಂಡರ್ ನ ಸೌಲಭ್ಯ ನೀಡಲಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ವಾಚ್‌ IP67 ರೇಟಿಂಗ್‌ ಹೊಂದಿದ್ದು, ನೀರಿನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಖ್ಯವಾಗಿ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 7 ದಿನಗಳವರೆಗೆ ಬ್ಯಾಕಪ್‌ ಸಿಗಲಿದೆ.

ಫೈರ್ ಬೋಲ್ಟ್‌ನಿಂದ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು ಲಾಂಚ್‌...

ಫೈರ್ ಬೋಲ್ಟ್ ಎಕ್ಸ್‌ಪೆಡಿಶನ್ ಮತ್ತು ಕ್ವೆಸ್ಟ್ ಬೆಲೆ ಹಾಗೂ ಲಭ್ಯತೆ: ಫೈರ್ ಬೋಲ್ಟ್ನ ಈ ಸ್ಮಾರ್ಟ್‌ವಾಚ್‌ಗಳು 1,999ರೂ.ಗಳ ಒಂದೇ ರೀತಿಯ ಬೆಲೆ ಹೊಂದಿವೆ. ಇವುಗಳನ್ನು ಇಂದಿನಿಂದ ಫ್ಲಿಪ್‌ಕಾರ್ಟ್ ಹಾಗೂ ಕಂಪೆನಿಯ ಅಧಿಕೃತ ಸೈಟ್‌ನಿಂದ ಖರೀದಿ ಮಾಡಬಹುದಾಗಿದೆ. ಎಕ್ಸ್‌ಪೆಡಿಶನ್ ಸ್ಮಾರ್ಟ್‌ವಾಚ್‌ ಕಪ್ಪು, ಕೆನೆ ಬಿಳಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಕ್ವೆಸ್ಟ್ ಸ್ಮಾರ್ಟ್‌ವಾಚ್‌ ಬಿಳಿ, ಹಸಿರು, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Fire Boltt Expedition and Quest smartwatches have been launched. These smartwatches belong to the Trail Blazers series and are special with Bluetooth calling facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+