Fire-Boltt: ಫೈರ್-ಬೋಲ್ಟ್ ನಿಂದ ಹೊಸ ಇಯರ್‌ಬಡ್ಸ್ ಲಾಂಚ್! 36 ಗಂಟೆಯ ಪ್ಲೇಬ್ಯಾಕ್, ಬೆಲೆ ಇಷ್ಟೇ...
ಫೈರ್-ಬೋಲ್ಟ್ (Fire-Boltt) ಕಂಪೆನಿ ಸ್ಪೀಕರ್‌ಗಳು, ಇಯರ್‌ಫೋನ್‌ಗಳು ಹಾಗೂ ಇನ್ನಿತರೆ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಧರಿಸಬಹುದಾದ ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. ಅದರಂತೆ ಈಗ ಮತ್ತೊಂದು ಹೊಸ ಇಯರ್‌ಬಡ್ಸ್ ಅನ್ನು ಲಾಂಚ್ ಮಾಡುವ ಮೂಲಕ ಸದ್ದು ಮಾಡಲು ಮುಂದಾಗಿದೆ.
ಹೌದು, ಫೈರ್-ಬೋಲ್ಟ್ ಇದೀಗ ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಇಯರ್‌ಬಡ್ಸ್ (Fire-Boltt Fire Buds Kawaii ) ಅನ್ನು ಅನಾವರಣ ಮಾಡಿದ್ದು, ಇದು ಬರೋಬ್ಬರಿ 36 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ. ಇದರೊಂದಿಗೆ ಆಕರ್ಷಕ ವಿನ್ಯಾಸ ಹಾಗೂ ಯುವ ಪೀಳಿಗೆಯನ್ನು ಸೆಳೆಯಲಿದ್ದು, ಇದರಲ್ಲಿನ ಇನ್-ಇಯರ್ ಮಾದರಿಯು ಬಳಕೆದಾರರಿಗೆ ಅತ್ಯುತ್ತಮ ಆಡಿಯೋ ಅನುಭವ ನೀಡಲಿದೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಇಯರ್‌ಬಡ್ಸ್ : ಕಂಪನಿಯು ತನ್ನ ಗುಣಮಟ್ಟದ ಉತ್ಪನ್ನಗಳಿಂದಾಗಿ ಮೀಸಲಾದ ಗ್ರಾಹಕರನ್ನು ಪಡೆದುಕೊಂಡಿದೆ. ಅದರಂತೆ ಫೈರ್-ಬೋಲ್ಟ್ ಇಯರ್‌ಬಡ್‌ಗಳ ಸಾಲಿಗೆ ಈ ಡಿವೈಸ್ ಹೊಸ ಸೇರ್ಪಡೆಯಾಗಿದ್ದು, ಈ ಡಿವೈಸ್ ಅನ್ನು ಇತ್ತೀಚೆಗೆ ಲಾಂಚ್ ಮಾಡಲಾದ ಫೈರ್ ಬ್ಯಾಂಡ್ ಹೇರಾ ಬ್ಲೂಟೂತ್ ನೆಕ್‌ಬ್ಯಾಂಡ್ ನಂತರ ಅನಾವರಣ ಮಾಡಲಾಗಿದೆ.
ಈ ಇಯರ್‌ಬಡ್ಸ್ ಇನ್-ಇಯರ್ ಮಾದರಿಯಾಗಿದ್ದು, 8 ಎಂಎಂ ಡೈನಾಮಿಕ್ ಡ್ರೈವರ್‌ನೊಂದಿಗೆ ಪ್ಯಾಕ್ ಆಗಿವೆ. ಇದರೊಂದಿಗೆ, ಇದು ಪರಿಸರದ ಶಬ್ದ ರದ್ದತಿ (ENC) ಫೀಚರ್ಸ್ ಹೊಂದಿದ್ದು, ಈ ಮೂಲಕ ಬಳಕೆದಾರರು ವಾಯ್ಸ್ ಕರೆ ಹಾಗೂ ಇನ್ನಿತರೆ ಸಮಯದಲ್ಲಿ ಹಿನ್ನೆಲೆ ಶಬ್ದವನ್ನು ರದ್ದುಗೊಳಿಸುವ ಮೂಲಕ ಅತ್ಯುತ್ತಮವಾದ ಆಡಿಯೋ ಅನುಭವವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.

ಈ ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಇಯರ್‌ಬಡ್ಸ್ 40ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್, ಬ್ಲೂಟೂತ್ ಆವೃತ್ತಿ v5.3 ಮತ್ತು IPX5 ಸ್ಪ್ಲಾಶ್ ಪ್ರತಿರೋಧವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್ ಟಚ್ ಕಂಟ್ರೋಲ್, ಸೂಪರ್ ಸಿಂಕ್ ತಂತ್ರಜ್ಞಾನ, ಎಐ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದ್ದು, ಈ ಮೂಲಕ ಅತ್ಯಂತ ಸರಳ ರೀತಿಯಲ್ಲಿ ಇದನ್ನು ಎಲ್ಲಾ ಸಮಯದಲ್ಲೂ ಬಳಕೆ ಮಾಡಬಹುದಾಗಿದೆ.
ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಬ್ಯಾಟರಿ ಸಾಮರ್ಥ್ಯ: ಈ ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಇಯರ್‌ಬಡ್ಸ ಫೈರ್‌ಚಾರ್ಜ್ ತಂತ್ರಜ್ಞಾನ ಹೊಂದಿದೆ. ಅಂದರೆ ಕೆಲವೇ ಸಮಯದಲ್ಲಿ ಇದನ್ನು ಚಾರ್ಜ್ ಮಾಡಬಹುದಾಗಿದೆ. ಅದರಂತೆ ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದ್ರೆ ಬರೋಬ್ಬರಿ 36 ಗಂಟೆಗಳವರೆಗೆ ಬಳಕೆ ಮಾಡಬಹುದು ಎಂದು ಕಂಪೆನಿ ಮಾಹಿತಿ ನೀಡಿದೆ.
ಹಾಗೆಯೇ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಈ ಬಡ್ಸ್‌ಗಳು ಏಳು ಗಂಟೆಗಳ ಕಾಲ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ 10 ನಿಮಿಷಗಳ ಚಾರ್ಜ್‌ನಲ್ಲಿ 120 ನಿಮಿಷಗಳ ಕಾಲ ಬ್ಯಾಕಪ್ ಅನ್ನು ನೀಡುವ ಸಾಮರ್ಥ್ಯ ಈ ಇಯರ್‌ಬಡ್ಸ್‌ಗಿದೆ. ಇದಕ್ಕಾಗಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಆಯ್ಕೆ ನೀಡಲಾಗದಿದ್ದು, ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜರ್ ಮೂಲಕವೇ ಇದನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಇದರೊಂದಿಗೆ ಈ ಇಯರ್‌ಬಡ್ಸ್ ಬೋಲ್ಟ್ ಪ್ಲೇ ಆಪ್‌ಗೆ ಬೆಂಬಲ ನೀಡಲಿದೆ.

ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಬೆಲೆ ಹಾಗೂ ಲಭ್ಯತೆ: ಈ ಫೈರ್-ಬೋಲ್ಟ್ ಫೈರ್ ಬಡ್ಸ್ ಕವಾಯಿ ಇಯರ್‌ಬಡ್ಸ್ ಅನ್ನು ನೀವು ಈಗ 799 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಒಂದು ವರ್ಷದ ವಾರಂಟಿ ಸಹ ಲಭ್ಯ ಇದೆ. ಈ ಡಿವೈಸ್ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಲಭ್ಯ ಇದ್ದು, ಡಿಸೆಂಬರ್ 22 ರಿಂದ ಫೈರ್‌ಬೋಲ್ಟ್ ಮತ್ತು ಇತರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಅವಕಾಶ ನೀಡಲಾಗಿದೆ.


Click it and Unblock the Notifications








